ಒಂದು ರೂಪಾಯಿಗೆ ಒಂದು ಲೀಟರ್ ಹಾಲು: ಫ್ಲಿಪ್‌ಕಾರ್ಟ್ ವಿರುದ್ಧ ದೂರು, ಪ್ರಧಾನಿಗೆ ಪತ್ರ – ಡಿ.ಕೆ. ಸುರೇಶ್

ಬೆಂಗಳೂರು: “ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಾಟ ಮಾಡುವ ಯೋಜನೆಗೆ ಮುಂದಾಗಿರುವ ಫ್ಲಿಪ್‌ಕಾರ್ಟ್ ಸಂಸ್ಥೆಯ ವಿರುದ್ಧ ಕಾಂಪಿಟಿಷನ್ ಕಮಿಷನ್ ಆಫ್ ಇಂಡಿಯಾ, ನವದೆಹಲಿ ಅವರಿಗೆ ಸೆಕ್ಷನ್ 19(1)(ಎ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗುತ್ತಿದೆ. ಜೊತೆಗೆ ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇ-ಮೇಲ್ ಮೂಲಕ ತಿಳಿಸುತ್ತಿದ್ದೇನೆ” ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

 

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಲಾಭದ ಹಂಬಲದಲ್ಲಿ ಫ್ಲಿಪ್‌ಕಾರ್ಟ್ ಸಂಸ್ಥೆ ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡಲು ಮುಂದಾಗಿದ್ದು, ಇದು ರೈತ ಸಮುದಾಯಕ್ಕೆ ಹಾನಿ ಮಾಡುವ ಕ್ರಮವಾಗಿದೆ. ಮಾರುಕಟ್ಟೆಯನ್ನು ಸಂಪೂರ್ಣವಾಗಿ ಹಿಡಿಯುವ ಉದ್ದೇಶದಿಂದ ಈ ರೀತಿಯ ಸ್ಪರ್ಧೆ ನಡೆಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೇಶದಾದ್ಯಂತ ಹೋರಾಟ ನಡೆಯುವ ಪರಿಸ್ಥಿತಿ ಉಂಟಾಗಬಹುದು” ಎಂದು ಎಚ್ಚರಿಸಿದರು.

 

“ಈ ಯೋಜನೆಗಾಗಿ ಸುಮಾರು 2 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸಾರ್ವಜನಿಕರ ಶೇರು ಹಣವನ್ನು ಬಳಸಿ ಈ ರೀತಿಯಾಗಿ ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ಪ್ರಯತ್ನ ಸೂಕ್ತವಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿರುವ ಹಾಲು ಒಕ್ಕೂಟಗಳನ್ನು ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಆರೋಪಿಸಿದರು.

 

ಇದಲ್ಲದೆ, “ಈಗಾಗಲೇ ಸುಮಾರು 14.5 ಲಕ್ಷ ಲೀಟರ್ ಹಾಲು ಮಾರಾಟವಾಗಿದೆ ಎಂಬ ಮಾಹಿತಿ ದೊರೆತಿದೆ. ಎಷ್ಟು ದಿನ ಈ ದರದಲ್ಲಿ ಹಾಲು ನೀಡಲಾಗುತ್ತದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಬೇಕು” ಎಂದು ಅವರು ಒತ್ತಾಯಿಸಿದರು.

 

ನಂದಿನಿ ಹಾಲಿನ ಮಾರಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಮಾರುಕಟ್ಟೆಯಲ್ಲಿ ಅನೇಕ ಕಂಪನಿಗಳಿವೆ. ಬಮುಲ್ ಒಕ್ಕೂಟಕ್ಕೆ ಸುಮಾರು 40ರಿಂದ 50 ಸಾವಿರ ಲೀಟರ್ ಹಾಲಿನ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಇದರ ನಿಖರ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ” ಎಂದರು.

 

ಇದಕ್ಕೂ ಮುನ್ನ ಮಾತನಾಡಿದ ಅವರು, “ರೈತರಿಗೆ ನಾವು ಲೀಟರ್‌ಗೆ 38ರಿಂದ 40 ರೂಪಾಯಿ ವರೆಗೆ ಪಾವತಿಸುತ್ತಿದ್ದೇವೆ. ಒಂದು ರೂಪಾಯಿಗೆ ಹಾಲು ನೀಡುವುದು ಹೇಗೆ ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಹಾಲಿನ ಮಾದರಿಯನ್ನು ತರಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಸೂಚಿಸಲಾಗಿದೆ” ಎಂದು ಹೇಳಿದರು.

 

ಇದೇ ವೇಳೆ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಮಾತನಾಡಿದ ಅವರು, “ಸಂಸದರು ಲೋಕಸಭೆಯಲ್ಲಿ ಮೇಕೆದಾಟು, ಕಳಸಾ-ಬಂಡೂರಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳ ಬಗ್ಗೆ ಧ್ವನಿ ಎತ್ತಬೇಕು. ರಾಜ್ಯಕ್ಕೆ ನ್ಯಾಯ ಸಿಗುವಂತೆ ಪ್ರಯತ್ನಿಸಬೇಕು” ಎಂದು ಹೇಳಿದರು.

 

ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, “ಕೇಂದ್ರ ಸರ್ಕಾರ ವಿದೇಶಾಂಗ ಸಂಬಂಧಗಳನ್ನು ಉತ್ತಮವಾಗಿ ಬಳಸಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಕ್ರಮ ತೆಗೆದುಕೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 hours ago

   
Image 1
Image 1
ದಕ್ಷಿಣಕನ್ನಡ

ಮಂಗಳೂರು

ಕಮರ್ಷಿಯಲ್ ಸಿಲಿಂಡರ್ ತಂದುಕೊಟ್ಟವರಿಗೆ ₹5,500 ಮೌಲ್ಯದ ಉಚಿತ ಆಹಾರ

ಮಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ರಾಮನಗರ

ರಾಜ್ಯಸಭೆ ಅಡ್ಡ ಮತದಾನದ ಭೀತಿ: ಒಡಿಶಾ ಶಾಸಕರು ಬಿಡದಿ ರೆಸಾರ್ಟ್‌ನಿಂದ ಮೈಸೂರಿಗೆ

ರಾಮನಗರ: ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರು ರಾಮನಗರದ ಬಿಡದಿಯಲ್ಲ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಚಿತ್ರದುರ್ಗ

ಜಿಲ್ಲಾಧಿಕಾರಿ ಡಿಜಿಟಲ್ ಸಹಿ ದುರುಪಯೋಗ ಪ್ರಕರಣದಲ್ಲಿ 6 ಆರೋಪಿಗಳು

ಚಿತ್ರದುರ್ಗ, ಮಾ.14: ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಸಿಲಿಂಡರ್ ಕೊರತೆಗೆ ಪರಿಹಾರ: ಬೆಂಗಳೂರಿನಲ್ಲಿ ಬಯೋಗ್ಯಾಸ್ ಉತ್ಪಾದನೆಗೆ GBA ಮುಂದಾಗಿದೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಮಹಿಳಾ ಉದ್ಯಮಿಗಳ ಹೋಟೆಲ್‌ಗಳಿಗೆ ವಾಣಿಜ್ಯ ಎಲ್‌ಪಿಜಿ ಕೊರತೆ: ಪ್ರಧಾನಿ ಮೋದಿಗೆ ಪತ್ರ

ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಕೊರತೆ ಹೆಚ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲ: ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ – ಪ್ರಹ್ಲಾದ್ ಜೋಶಿ

ಬೆಂಗಳೂರು: ಅಡುಗೆ ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ದೇ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

10–12 ಹಡಗುಗಳ ಮೂಲಕ ಭಾರತಕ್ಕೆ ಗ್ಯಾಸ್ ಸರಬರಾಜು: ಸಚಿವರ ಮಾಹಿತಿ

ದೇವನಹಳ್ಳಿ: ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯ ಸಮಸ್ಯೆ ಇನ್ನೂ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಪಾಕಿಸ್ತಾನ–ಬಾಂಗ್ಲಾ ಪ್ರಜೆಗಳು ಮತದಾರರ ಪಟ್ಟಿಗೆ ಸೇರ್ಪಡೆ ಅಪಾಯಕಾರಿ: ಆರ್. ಅಶೋಕ್

ಬೆಂಗಳೂರು: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂಲದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಯುದ್ಧದ ಪರಿಣಾಮ: ಅಡುಗೆ ಎಣ್ಣೆ ದರ ಏರಿಕೆ, ಮಾರುಕಟ್ಟೆಯಲ್ಲಿ ಕೊರತೆ

ಬೆಂಗಳೂರು:ಇರಾನ್-ಇಸ್ರೇಲ್ ಸಂಘರ್ಷ ಹಿನ್ನೆಲೆ  ಗ್ಯಾಸ್ ಸಿಲ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಬೆಂಗಳೂರು ನಗರ

ನೆಲಮಂಗಲ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ ತಪ್ಪಿತು ದೊಡ್ಡ ಅನಾಹುತ

ಬೆಂಗಳೂರು: ಎಲ್‌ಪಿಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1