ಜಿಲ್ಲಾಧಿಕಾರಿ ಡಿಜಿಟಲ್ ಸಹಿ ದುರುಪಯೋಗ ಪ್ರಕರಣದಲ್ಲಿ 6 ಆರೋಪಿಗಳು
ಚಿತ್ರದುರ್ಗ, ಮಾ.14: ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್ ಸಹಿ ದುರುಪಯೋಗ ಪ್ರಕರಣದಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜಿಲ್ಲೆಯ ಸಿಟಿ ಲೆವಲ್ ಟೆಕ್ನಿಕಲ್ ಸೆಲ್ (CLTC) ಸಿಬ್ಬಂದಿಗಳ ವೇತನದ ಹೆಸರಿನಲ್ಲಿ ಸುಮಾರು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸಲ್ಲಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ.
ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಆಧಾರದ ಮೇಲೆ ಹೊರಗುತ್ತಿಗೆ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮೆಹಬೂಬ್ ಭಾಷಾ ಮತ್ತು VMH ಎಂಟರ್‌ಪ್ರೈಸಸ್‌ನ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾರೆ.
ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್ ಸಿಗ್ನೇಚರ್ ಸೆರ್ಟಿಫಿಕೆಟ್ (DSC) ಕೀ ಕಳವು ಮಾಡಲಾಗಿದ್ದು, ದುರುಪಯೋಗಕ್ಕೆ ಬಳಸಲಾಗಿದೆ ಎನ್ನಲಾಗುತ್ತಿದೆ. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾಹಿತಿ ನೀಡಿದ್ದು, ಸಂಬಂಧಪಟ್ಟವರ ವಿರುದ್ಧ ಸಮಗ್ರ ತನಿಖೆ ನಡೆಯುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳೂರು
ಕಮರ್ಷಿಯಲ್ ಸಿಲಿಂಡರ್ ತಂದುಕೊಟ್ಟವರಿಗೆ ₹5,500 ಮೌಲ್ಯದ ಉಚಿತ ಆಹಾರ
ಮಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ
ರಾಜ್ಯಸಭೆ ಅಡ್ಡ ಮತದಾನದ ಭೀತಿ: ಒಡಿಶಾ ಶಾಸಕರು ಬಿಡದಿ ರೆಸಾರ್ಟ್‌ನಿಂದ ಮೈಸೂರಿಗೆ
ರಾಮನಗರ: ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರು ರಾಮನಗರದ ಬಿಡದಿಯಲ್ಲ... ಓದನ್ನು ಮುಂದುವರಿಸಿ
ಸಿಲಿಂಡರ್ ಕೊರತೆಗೆ ಪರಿಹಾರ: ಬೆಂಗಳೂರಿನಲ್ಲಿ ಬಯೋಗ್ಯಾಸ್ ಉತ್ಪಾದನೆಗೆ GBA ಮುಂದಾಗಿದೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡ... ಓದನ್ನು ಮುಂದುವರಿಸಿ
ಮಹಿಳಾ ಉದ್ಯಮಿಗಳ ಹೋಟೆಲ್‌ಗಳಿಗೆ ವಾಣಿಜ್ಯ ಎಲ್‌ಪಿಜಿ ಕೊರತೆ: ಪ್ರಧಾನಿ ಮೋದಿಗೆ ಪತ್ರ
ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಕೊರತೆ ಹೆಚ್... ಓದನ್ನು ಮುಂದುವರಿಸಿ
ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲ: ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ – ಪ್ರಹ್ಲಾದ್ ಜೋಶಿ
ಬೆಂಗಳೂರು: ಅಡುಗೆ ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ದೇ... ಓದನ್ನು ಮುಂದುವರಿಸಿ
10–12 ಹಡಗುಗಳ ಮೂಲಕ ಭಾರತಕ್ಕೆ ಗ್ಯಾಸ್ ಸರಬರಾಜು: ಸಚಿವರ ಮಾಹಿತಿ
ದೇವನಹಳ್ಳಿ: ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯ ಸಮಸ್ಯೆ ಇನ್ನೂ... ಓದನ್ನು ಮುಂದುವರಿಸಿ
ಪಾಕಿಸ್ತಾನ–ಬಾಂಗ್ಲಾ ಪ್ರಜೆಗಳು ಮತದಾರರ ಪಟ್ಟಿಗೆ ಸೇರ್ಪಡೆ ಅಪಾಯಕಾರಿ: ಆರ್. ಅಶೋಕ್
ಬೆಂಗಳೂರು: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂಲದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ... ಓದನ್ನು ಮುಂದುವರಿಸಿ
ಯುದ್ಧದ ಪರಿಣಾಮ: ಅಡುಗೆ ಎಣ್ಣೆ ದರ ಏರಿಕೆ, ಮಾರುಕಟ್ಟೆಯಲ್ಲಿ ಕೊರತೆ
ಬೆಂಗಳೂರು:ಇರಾನ್-ಇಸ್ರೇಲ್ ಸಂಘರ್ಷ ಹಿನ್ನೆಲೆ ಗ್ಯಾಸ್ ಸಿಲ... ಓದನ್ನು ಮುಂದುವರಿಸಿ
ಬೆಂಗಳೂರು ನಗರ
ನೆಲಮಂಗಲ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ ತಪ್ಪಿತು ದೊಡ್ಡ ಅನಾಹುತ
ಬೆಂಗಳೂರು: ಎಲ್‌ಪಿಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟ... ಓದನ್ನು ಮುಂದುವರಿಸಿ
ಒಂದು ರೂಪಾಯಿಗೆ ಒಂದು ಲೀಟರ್ ಹಾಲು: ಫ್ಲಿಪ್‌ಕಾರ್ಟ್ ವಿರುದ್ಧ ದೂರು, ಪ್ರಧಾನಿಗೆ ಪತ್ರ – ಡಿ.ಕೆ. ಸುರೇಶ್
ಬೆಂಗಳೂರು: “ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಾಟ ಮಾಡುವ ಯೋ... ಓದನ್ನು ಮುಂದುವರಿಸಿ