ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಇಲ್ಲ: ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ – ಪ್ರಹ್ಲಾದ್ ಜೋಶಿ
ಬೆಂಗಳೂರು: ಅಡುಗೆ ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ದೇಶದಲ್ಲಿ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಸಿಲಿಂಡರ್ ಪೂರೈಕೆ ವಿಷಯದಲ್ಲಿ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ಕುರಿತು ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಉಂಟಾಗುತ್ತದೆ ಎಂಬ ಮಾತುಗಳು ಸಂಪೂರ್ಣ ಸುಳ್ಳು ಎಂದು ಹೇಳಿದರು. ಈಗಲೂ ಹಾಗೂ ಮುಂದೆಯೂ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾಗದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯನ್ನು ಹೆಚ್ಚಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮೊದಲು ಭಾರತವು 20ರಿಂದ 22 ದೇಶಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಆ ಸಂಖ್ಯೆ 40 ದೇಶಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಅಡುಗೆ ಅನಿಲ ಸಿಲಿಂಡರ್ ಕೊರತೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಹುಲ್ ಗಾಂಧಿ ಅಪ್ರಬುದ್ಧ ನಾಯಕ ಎಂದು ಟೀಕಿಸಿದರು. ಸಿಲಿಂಡರ್ ಕೊರತೆ ವಿಚಾರದಲ್ಲಿ ಮುಷ್ಕರಕ್ಕೆ ಕರೆ ನೀಡುವುದು ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿಯ ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ಅವರು ದೂರಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮಂಗಳೂರು
ಕಮರ್ಷಿಯಲ್ ಸಿಲಿಂಡರ್ ತಂದುಕೊಟ್ಟವರಿಗೆ ₹5,500 ಮೌಲ್ಯದ ಉಚಿತ ಆಹಾರ
ಮಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ... ಓದನ್ನು ಮುಂದುವರಿಸಿ
ರಾಜ್ಯಸಭೆ ಅಡ್ಡ ಮತದಾನದ ಭೀತಿ: ಒಡಿಶಾ ಶಾಸಕರು ಬಿಡದಿ ರೆಸಾರ್ಟ್‌ನಿಂದ ಮೈಸೂರಿಗೆ
ರಾಮನಗರ: ಒಡಿಶಾ ರಾಜ್ಯದ ಕಾಂಗ್ರೆಸ್ ಶಾಸಕರು ರಾಮನಗರದ ಬಿಡದಿಯಲ್ಲ... ಓದನ್ನು ಮುಂದುವರಿಸಿ
ಜಿಲ್ಲಾಧಿಕಾರಿ ಡಿಜಿಟಲ್ ಸಹಿ ದುರುಪಯೋಗ ಪ್ರಕರಣದಲ್ಲಿ 6 ಆರೋಪಿಗಳು
ಚಿತ್ರದುರ್ಗ, ಮಾ.14: ಜಿಲ್ಲಾಧಿಕಾರಿ ಮತ್ತು ಎಡಿಸಿ ಅವರ ಡಿಜಿಟಲ್... ಓದನ್ನು ಮುಂದುವರಿಸಿ
ಸಿಲಿಂಡರ್ ಕೊರತೆಗೆ ಪರಿಹಾರ: ಬೆಂಗಳೂರಿನಲ್ಲಿ ಬಯೋಗ್ಯಾಸ್ ಉತ್ಪಾದನೆಗೆ GBA ಮುಂದಾಗಿದೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡ... ಓದನ್ನು ಮುಂದುವರಿಸಿ
ಮಹಿಳಾ ಉದ್ಯಮಿಗಳ ಹೋಟೆಲ್‌ಗಳಿಗೆ ವಾಣಿಜ್ಯ ಎಲ್‌ಪಿಜಿ ಕೊರತೆ: ಪ್ರಧಾನಿ ಮೋದಿಗೆ ಪತ್ರ
ಬೆಂಗಳೂರು: ರಾಜ್ಯದಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಕೊರತೆ ಹೆಚ್... ಓದನ್ನು ಮುಂದುವರಿಸಿ
10–12 ಹಡಗುಗಳ ಮೂಲಕ ಭಾರತಕ್ಕೆ ಗ್ಯಾಸ್ ಸರಬರಾಜು: ಸಚಿವರ ಮಾಹಿತಿ
ದೇವನಹಳ್ಳಿ: ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯ ಸಮಸ್ಯೆ ಇನ್ನೂ... ಓದನ್ನು ಮುಂದುವರಿಸಿ
ಪಾಕಿಸ್ತಾನ–ಬಾಂಗ್ಲಾ ಪ್ರಜೆಗಳು ಮತದಾರರ ಪಟ್ಟಿಗೆ ಸೇರ್ಪಡೆ ಅಪಾಯಕಾರಿ: ಆರ್. ಅಶೋಕ್
ಬೆಂಗಳೂರು: ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮೂಲದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ... ಓದನ್ನು ಮುಂದುವರಿಸಿ
ಯುದ್ಧದ ಪರಿಣಾಮ: ಅಡುಗೆ ಎಣ್ಣೆ ದರ ಏರಿಕೆ, ಮಾರುಕಟ್ಟೆಯಲ್ಲಿ ಕೊರತೆ
ಬೆಂಗಳೂರು:ಇರಾನ್-ಇಸ್ರೇಲ್ ಸಂಘರ್ಷ ಹಿನ್ನೆಲೆ ಗ್ಯಾಸ್ ಸಿಲ... ಓದನ್ನು ಮುಂದುವರಿಸಿ
ಬೆಂಗಳೂರು ನಗರ
ನೆಲಮಂಗಲ ಹೆದ್ದಾರಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಪಲ್ಟಿ ತಪ್ಪಿತು ದೊಡ್ಡ ಅನಾಹುತ
ಬೆಂಗಳೂರು: ಎಲ್‌ಪಿಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾದ ಘಟ... ಓದನ್ನು ಮುಂದುವರಿಸಿ
ಒಂದು ರೂಪಾಯಿಗೆ ಒಂದು ಲೀಟರ್ ಹಾಲು: ಫ್ಲಿಪ್‌ಕಾರ್ಟ್ ವಿರುದ್ಧ ದೂರು, ಪ್ರಧಾನಿಗೆ ಪತ್ರ – ಡಿ.ಕೆ. ಸುರೇಶ್
ಬೆಂಗಳೂರು: “ಒಂದು ರೂಪಾಯಿಗೆ ಒಂದು ಲೀಟರ್ ಹಾಲು ಮಾರಾಟ ಮಾಡುವ ಯೋ... ಓದನ್ನು ಮುಂದುವರಿಸಿ