ನೆಲಮಂಗಲದಲ್ಲಿ ಮನೆ ಕಳ್ಳತನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಖದೀಮರು
ನೆಲಮಂಗಲ, ಬೆಂಗಳೂರು ಉತ್ತರ : ಮಾಚೋಹಳ್ಳಿ ಗ್ರಾಮದ ನವೀನ್ ಅವರ ಮನೆಯನ್ನು ಗುರಿಯಾಗಿಸಿಕೊಂಡ ಕಳ್ಳರು ₹10 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಈ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನವೀನ್ ತಮ್ಮ ಪತ್ನಿ ಮತ್ತು ತಾಯಿಯೊಂದಿಗೆ ಇದ್ದು, ಎರಡು ದಿನಗಳ ಹಿಂದೆ ಪತ್ನಿಯ ಬಾಣಂತಿಯ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಗಡೆ ಹೋಗಿದ್ದರು. ಈ ಸಮಯವನ್ನು ಉಪಯೋಗಿಸಿಕೊಂಡು ಕಳ್ಳರು ಮನೆ ಬಾಗಿಲು ಮುರಿದು ಒಳನುಗ್ಗಿ, ಸುಮಾರು ₹5 ಲಕ್ಷ ಮೌಲ್ಯದ ಚಿನ್ನಾಭರಣ, ₹5 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ ವಸ್ತುಗಳು ಮತ್ತು ನಗದು ಸೇರಿ ಒಟ್ಟು ₹10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಕದಿದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಮನೆ ಎದುರಿನ ನಿವಾಸಿಯೊಬ್ಬರು ಸಿಸಿಟಿವಿ ಕ್ಯಾಮೆರಾ ಹಾನಿಯ ಬಗ್ಗೆ ನವೀನ್ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ವಿಡಿಯೋಕಾಲ್ ಮೂಲಕ ಪರಿಶೀಲಿಸಿದಾಗ ಕಳ್ಳತನ ಸಂಭವಿಸಿದುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ, ಘಟನೆಗೆ ಮುನ್ನ ಮನೆ ಸುತ್ತ ಅಪರಿಚಿತ ವ್ಯಕ್ತಿಗಳು ಸಂಚರಿಸಿದ್ದರ ಮಾಹಿತಿ ಲಭ್ಯವಾಗಿದೆ. ಬೆಳಿಗ್ಗೆ ಮನೆ ಮುಂದೆ ಮೂವರು ಅನುಮಾನಾಸ್ಪದ ವ್ಯಕ್ತಿಗಳು ಓಡಾಡಿರುವುದು ಕಂಡುಬಂದಿದ್ದು, ಇದೇ ತಂಡ ರಾತ್ರಿ ಕಳ್ಳತನ ನಡೆಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವೀಲ್ಹಿಂಗ್ ಪ್ರಕರಣದಲ್ಲಿ ಪ್ರಭಾವಶಾಲಿಗಳಿಗೆ ವಿಶೇಷ ಸೌಲಭ್ಯ? ಜನರ ಕಾನೂನು ಸಮಾನತೆ ಆಗ್ರಹ"
ಬೆಂಗಳೂರು: ರಸ್ತೆ ಮೇಲೆ ವೀಲ್ಹಿಂಗ್ ಅಥವಾ ಅಪಾಯಕಾರಿ ಚಾಲನೆ ಮಾಡಿ... ಓದನ್ನು ಮುಂದುವರಿಸಿ
ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ – ರಿಕ್ಕಿ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಿ
ಬೆಂಗಳೂರು: ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ಬೈಲಹೊಂಗಲ
“ದಾಂಪತ್ಯ ಕಲಹ ಭೀಕರ ರೂಪ : ಹೆಂಡತಿಯನ್ನು ಎಳೆದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಹತ್ಯೆ”
ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗೋವನಕೊಪ್ಪ ಗ... ಓದನ್ನು ಮುಂದುವರಿಸಿ
“ಮೊಬೈಲ್ ಪಾಸ್‌ವರ್ಡ್ ಕೊಡೋ ಮುನ್ನ ಎಚ್ಚರ: ಗೆಳೆಯನ ಫೋನ್ ಬಳಸಿ ₹4.5 ಲಕ್ಷ ಶಾಪಿಂಗ್ ಮಾಡಿದ ಪರಾರಿಯಾದ ಭೂಪ”
ಬೆಂಗಳೂರು : ಸ್ನೇಹಿತನಿಗೆ ಮೊಬೈಲ್ ಪಾಸ್‌ವರ್ಡ್ ನೀಡಿದ ಹಿನ್ನೆಲೆ... ಓದನ್ನು ಮುಂದುವರಿಸಿ
ನಕಲಿ ಆರ್ಡರ್-ಆಫರ್ ಲೆಟರ್: ಕೆಲಸದ ಆಮಿಷ ತೋರಿ ಕೋಟಿ-ಕೋಟಿ ವಂಚನೆ; ದಂಪತಿ ಅರೆಸ್ಟ್”
ಬಸವೇಶ್ವರನಗರ: ಕೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ ನಕಲಿ ವಾಗ್ದಾ... ಓದನ್ನು ಮುಂದುವರಿಸಿ
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ನಾಲ್ವರು ಸಾವು , ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಗೆ ಟ್ರಾಫಿಕ್ ಅಡ್ಡಿ
ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ ಬ... ಓದನ್ನು ಮುಂದುವರಿಸಿ
ಮಂಗಳೂರು
ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: ಸಂತ್ರಸ್ತೆಗೆ ಜೀವ ಬೆದರಿಕೆ ಆರೋಪ
ಮಂಗಳೂರು: ಮಂಗಳೂರು ಜಿಲ್ಲೆಯ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್... ಓದನ್ನು ಮುಂದುವರಿಸಿ
ಕಾಶಿ ಯಾತ್ರೆಗೆ ಹೊರಟ ಮಹಿಳೆಯರಿಗೆ ದುರಂತ: ದೇವನಹಳ್ಳಿ ಬಳಿ ಭೀಕರ ಅಪಘಾತ, ಮೂವರು ಸಾವು
ಚಿಕ್ಕಬಳ್ಳಾಪುರ: ಕಾಶಿ ಯಾತ್ರೆಗೆ ತೆರಳಲು ಹೊರಟಿದ್ದ ಮಹಿಳೆಯರ ಗು... ಓದನ್ನು ಮುಂದುವರಿಸಿ
ಯುಗಾದಿ ಫ್ಲೆಕ್ಸ್ ವಿವಾದ: ಭಾವಚಿತ್ರ ದುರುಪಯೋಗ ಬೇಡ – ಎಸ್‌ಪಿ ಶೋಭಾರಾಣಿ ಎಚ್ಚರಿಕೆ
ಮಂಡ್ಯ: ನಗರದಾದ್ಯಂತ ಯುಗಾದಿ ಶುಭಾಶಯಗಳ ಹೆಸರಿನಲ್ಲಿ ಅಳವಡಿಸಲಾದ... ಓದನ್ನು ಮುಂದುವರಿಸಿ
ಗಾಂಜಾ ಅಮಲಿನಲ್ಲಿ ಸ್ನೇಹಿತನ ಕೊಲೆ: ಶವ ಸುಟ್ಟು ಪರಾರಿ - ಬೆಚ್ಚಿಬೀಳಿಸಿದ ಹಾಸನ
ಹಾಸನ: ಹಾಸನ ತಾಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ತೋಟದ ಮನೆಯಲ್... ಓದನ್ನು ಮುಂದುವರಿಸಿ