ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: ಸಂತ್ರಸ್ತೆಗೆ ಜೀವ ಬೆದರಿಕೆ ಆರೋಪ
ಮಂಗಳೂರು: ಮಂಗಳೂರು ಜಿಲ್ಲೆಯ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆದಿದ್ದು, ಸಂತ್ರಸ್ತ ಶಿಕ್ಷಕಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಕರಣ ಬಯಲಾಗುತ್ತಿದ್ದಂತೆಯೇ ಮಾರ್ಚ್ 19ರಂದು ಸ್ಮಿತಾ ಮತ್ತು ಸುನೀತಾ ಲೋಬೋ ಎಂಬ ಇಬ್ಬರು ಮಹಿಳೆಯರ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ದೂರಿದ್ದಾರೆ. “ಈ ವಿಚಾರದ ಬಗ್ಗೆ ಬಾಯಿ ಬಿಡಬಾರದು, ಇಲ್ಲದಿದ್ದರೆ ಕೇಸ್ ಹಾಕುತ್ತೇವೆ, ಜೀವಂತವಾಗಿ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಇದಕ್ಕೂ ಮೊದಲು ವೇಣೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಂದೇಶ್ ವಿರುದ್ಧ ಐಪಿಸಿ ಸೆಕ್ಷನ್ 376(2)(a)(1), 376(2)(n), 384 ಮತ್ತು 506ರಡಿ ಪ್ರಕರಣ ದಾಖಲಾಗಿತ್ತು. 2018ರಿಂದ 2023ರವರೆಗೆ ಬೆದರಿಸಿ ಅತ್ಯಾಚಾರ ನಡೆಸಿದ ಆರೋಪವೂ ಉಲ್ಲೇಖಿಸಲಾಗಿದೆ.
ಇದಲ್ಲದೆ, ಸಂತ್ರಸ್ತೆಯಿಂದ ಸುಮಾರು 16 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವ ಆರೋಪವೂ ಕೇಳಿಬಂದಿದ್ದು, 13 ಲಕ್ಷ ನಗದು ಮತ್ತು 3.62 ಲಕ್ಷ ಬ್ಯಾಂಕ್ ವರ್ಗಾವಣೆಯ ಮೂಲಕ ಪಡೆದಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ, ಸಂದೇಶ್ ವಿರುದ್ಧ ಹಿಂದಿನಿಂದ ಬಂದಿದ್ದ ಕೆಲವು ಲೈಂಗಿಕ ಕಿರುಕುಳ ಆರೋಪಗಳನ್ನು ಪೊಲೀಸ್ ವರದಿ ಸುಳ್ಳು ಎಂದು ಹೇಳಿದ್ದರೂ, ಹೊಸ ಆರೋಪಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವೀಲ್ಹಿಂಗ್ ಪ್ರಕರಣದಲ್ಲಿ ಪ್ರಭಾವಶಾಲಿಗಳಿಗೆ ವಿಶೇಷ ಸೌಲಭ್ಯ? ಜನರ ಕಾನೂನು ಸಮಾನತೆ ಆಗ್ರಹ"
ಬೆಂಗಳೂರು: ರಸ್ತೆ ಮೇಲೆ ವೀಲ್ಹಿಂಗ್ ಅಥವಾ ಅಪಾಯಕಾರಿ ಚಾಲನೆ ಮಾಡಿ... ಓದನ್ನು ಮುಂದುವರಿಸಿ
ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ – ರಿಕ್ಕಿ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಿ
ಬೆಂಗಳೂರು: ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲದಲ್ಲಿ ಮನೆ ಕಳ್ಳತನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಖದೀಮರು
ನೆಲಮಂಗಲ, ಬೆಂಗಳೂರು ಉತ್ತರ : ಮಾಚೋಹಳ್ಳಿ ಗ್ರಾಮದ ನವೀನ್ ಅವರ ಮನ... ಓದನ್ನು ಮುಂದುವರಿಸಿ
ಬೈಲಹೊಂಗಲ
“ದಾಂಪತ್ಯ ಕಲಹ ಭೀಕರ ರೂಪ : ಹೆಂಡತಿಯನ್ನು ಎಳೆದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಹತ್ಯೆ”
ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗೋವನಕೊಪ್ಪ ಗ... ಓದನ್ನು ಮುಂದುವರಿಸಿ
“ಮೊಬೈಲ್ ಪಾಸ್‌ವರ್ಡ್ ಕೊಡೋ ಮುನ್ನ ಎಚ್ಚರ: ಗೆಳೆಯನ ಫೋನ್ ಬಳಸಿ ₹4.5 ಲಕ್ಷ ಶಾಪಿಂಗ್ ಮಾಡಿದ ಪರಾರಿಯಾದ ಭೂಪ”
ಬೆಂಗಳೂರು : ಸ್ನೇಹಿತನಿಗೆ ಮೊಬೈಲ್ ಪಾಸ್‌ವರ್ಡ್ ನೀಡಿದ ಹಿನ್ನೆಲೆ... ಓದನ್ನು ಮುಂದುವರಿಸಿ
ನಕಲಿ ಆರ್ಡರ್-ಆಫರ್ ಲೆಟರ್: ಕೆಲಸದ ಆಮಿಷ ತೋರಿ ಕೋಟಿ-ಕೋಟಿ ವಂಚನೆ; ದಂಪತಿ ಅರೆಸ್ಟ್”
ಬಸವೇಶ್ವರನಗರ: ಕೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ ನಕಲಿ ವಾಗ್ದಾ... ಓದನ್ನು ಮುಂದುವರಿಸಿ
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ನಾಲ್ವರು ಸಾವು , ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಗೆ ಟ್ರಾಫಿಕ್ ಅಡ್ಡಿ
ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ ಬ... ಓದನ್ನು ಮುಂದುವರಿಸಿ
ಕಾಶಿ ಯಾತ್ರೆಗೆ ಹೊರಟ ಮಹಿಳೆಯರಿಗೆ ದುರಂತ: ದೇವನಹಳ್ಳಿ ಬಳಿ ಭೀಕರ ಅಪಘಾತ, ಮೂವರು ಸಾವು
ಚಿಕ್ಕಬಳ್ಳಾಪುರ: ಕಾಶಿ ಯಾತ್ರೆಗೆ ತೆರಳಲು ಹೊರಟಿದ್ದ ಮಹಿಳೆಯರ ಗು... ಓದನ್ನು ಮುಂದುವರಿಸಿ
ಯುಗಾದಿ ಫ್ಲೆಕ್ಸ್ ವಿವಾದ: ಭಾವಚಿತ್ರ ದುರುಪಯೋಗ ಬೇಡ – ಎಸ್‌ಪಿ ಶೋಭಾರಾಣಿ ಎಚ್ಚರಿಕೆ
ಮಂಡ್ಯ: ನಗರದಾದ್ಯಂತ ಯುಗಾದಿ ಶುಭಾಶಯಗಳ ಹೆಸರಿನಲ್ಲಿ ಅಳವಡಿಸಲಾದ... ಓದನ್ನು ಮುಂದುವರಿಸಿ
ಗಾಂಜಾ ಅಮಲಿನಲ್ಲಿ ಸ್ನೇಹಿತನ ಕೊಲೆ: ಶವ ಸುಟ್ಟು ಪರಾರಿ - ಬೆಚ್ಚಿಬೀಳಿಸಿದ ಹಾಸನ
ಹಾಸನ: ಹಾಸನ ತಾಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ತೋಟದ ಮನೆಯಲ್... ಓದನ್ನು ಮುಂದುವರಿಸಿ