ಕಾಶಿ ಯಾತ್ರೆಗೆ ಹೊರಟ ಮಹಿಳೆಯರಿಗೆ ದುರಂತ: ದೇವನಹಳ್ಳಿ ಬಳಿ ಭೀಕರ ಅಪಘಾತ, ಮೂವರು ಸಾವು
ಚಿಕ್ಕಬಳ್ಳಾಪುರ: ಕಾಶಿ ಯಾತ್ರೆಗೆ ತೆರಳಲು ಹೊರಟಿದ್ದ ಮಹಿಳೆಯರ ಗುಂಪಿಗೆ ದುರಂತ ಸಂಭವಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಸಮೀಪ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತರನ್ನು ತುಮಕೂರು ಜಿಲ್ಲೆಯ ತಿಪಟೂರು ಮೂಲದ ಜಯಮ್ಮ (65), ಯಶೋಧಮ್ಮ (60) ಹಾಗೂ ಗಂಗಾ (38) ಎಂದು ಗುರುತಿಸಲಾಗಿದೆ.
ತಿಪಟೂರು ಮೂಲದ 12 ಮಂದಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಕಾಶಿ ಯಾತ್ರೆಗೆ ತೆರಳಲು ಟಿಟಿ ವಾಹನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ ವಿಮಾನದ ಮೂಲಕ ಕಾಶಿಗೆ ತೆರಳಲು ಅವರು ಸಿದ್ಧರಾಗಿದ್ದರು.
ಆದರೆ, ಮಧ್ಯರಾತ್ರಿ ಸುಮಾರು 12 ಗಂಟೆಯ ವೇಳೆ ರಾಣಿ ಕ್ರಾಸ್ ಬಳಿ ಸರ್ವಿಸ್ ರಸ್ತೆಗೆ ವಾಹನ ತಿರುಗಿಸುವಾಗ, ಟಿಟಿ ವಾಹನವು ಓಪನ್ ಟ್ರಕ್ ಲಾರಿಯ ಹಿಂಭಾಗಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟಿಟಿ ವಾಹನದ ಎಡಭಾಗ ಸಂಪೂರ್ಣವಾಗಿ ಹಾನಿಗೊಂಡಿದ್ದು, ಅಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಇತರ ಪ್ರಯಾಣಿಕರು ಗಾಯಗೊಂಡಿದ್ದು, ನಾಲ್ವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ವೀಲ್ಹಿಂಗ್ ಪ್ರಕರಣದಲ್ಲಿ ಪ್ರಭಾವಶಾಲಿಗಳಿಗೆ ವಿಶೇಷ ಸೌಲಭ್ಯ? ಜನರ ಕಾನೂನು ಸಮಾನತೆ ಆಗ್ರಹ"
ಬೆಂಗಳೂರು: ರಸ್ತೆ ಮೇಲೆ ವೀಲ್ಹಿಂಗ್ ಅಥವಾ ಅಪಾಯಕಾರಿ ಚಾಲನೆ ಮಾಡಿ... ಓದನ್ನು ಮುಂದುವರಿಸಿ
ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣ – ರಿಕ್ಕಿ ರೈ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಿ
ಬೆಂಗಳೂರು: ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ... ಓದನ್ನು ಮುಂದುವರಿಸಿ
ನೆಲಮಂಗಲ
ನೆಲಮಂಗಲದಲ್ಲಿ ಮನೆ ಕಳ್ಳತನ: ₹10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಖದೀಮರು
ನೆಲಮಂಗಲ, ಬೆಂಗಳೂರು ಉತ್ತರ : ಮಾಚೋಹಳ್ಳಿ ಗ್ರಾಮದ ನವೀನ್ ಅವರ ಮನ... ಓದನ್ನು ಮುಂದುವರಿಸಿ
ಬೈಲಹೊಂಗಲ
“ದಾಂಪತ್ಯ ಕಲಹ ಭೀಕರ ರೂಪ : ಹೆಂಡತಿಯನ್ನು ಎಳೆದು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಹತ್ಯೆ”
ಬೆಳಗಾವಿ: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗೋವನಕೊಪ್ಪ ಗ... ಓದನ್ನು ಮುಂದುವರಿಸಿ
“ಮೊಬೈಲ್ ಪಾಸ್‌ವರ್ಡ್ ಕೊಡೋ ಮುನ್ನ ಎಚ್ಚರ: ಗೆಳೆಯನ ಫೋನ್ ಬಳಸಿ ₹4.5 ಲಕ್ಷ ಶಾಪಿಂಗ್ ಮಾಡಿದ ಪರಾರಿಯಾದ ಭೂಪ”
ಬೆಂಗಳೂರು : ಸ್ನೇಹಿತನಿಗೆ ಮೊಬೈಲ್ ಪಾಸ್‌ವರ್ಡ್ ನೀಡಿದ ಹಿನ್ನೆಲೆ... ಓದನ್ನು ಮುಂದುವರಿಸಿ
ನಕಲಿ ಆರ್ಡರ್-ಆಫರ್ ಲೆಟರ್: ಕೆಲಸದ ಆಮಿಷ ತೋರಿ ಕೋಟಿ-ಕೋಟಿ ವಂಚನೆ; ದಂಪತಿ ಅರೆಸ್ಟ್”
ಬಸವೇಶ್ವರನಗರ: ಕೋರ್ಟ್‌ನಲ್ಲಿ ಉದ್ಯೋಗ ನೀಡುವುದಾಗಿ ನಕಲಿ ವಾಗ್ದಾ... ಓದನ್ನು ಮುಂದುವರಿಸಿ
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ನಾಲ್ವರು ಸಾವು , ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ವೇಗೆ ಟ್ರಾಫಿಕ್ ಅಡ್ಡಿ
ರಾಮನಗರ : ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ವ್ಯಾಪ್ತಿಯಲ್ಲಿ ಬ... ಓದನ್ನು ಮುಂದುವರಿಸಿ
ಮಂಗಳೂರು
ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಹೊಸ ತಿರುವು: ಸಂತ್ರಸ್ತೆಗೆ ಜೀವ ಬೆದರಿಕೆ ಆರೋಪ
ಮಂಗಳೂರು: ಮಂಗಳೂರು ಜಿಲ್ಲೆಯ ಮೂಡಬಿದ್ರೆ ಇನ್ಸ್ಪೆಕ್ಟರ್ ಸಂದೇಶ್... ಓದನ್ನು ಮುಂದುವರಿಸಿ
ಯುಗಾದಿ ಫ್ಲೆಕ್ಸ್ ವಿವಾದ: ಭಾವಚಿತ್ರ ದುರುಪಯೋಗ ಬೇಡ – ಎಸ್‌ಪಿ ಶೋಭಾರಾಣಿ ಎಚ್ಚರಿಕೆ
ಮಂಡ್ಯ: ನಗರದಾದ್ಯಂತ ಯುಗಾದಿ ಶುಭಾಶಯಗಳ ಹೆಸರಿನಲ್ಲಿ ಅಳವಡಿಸಲಾದ... ಓದನ್ನು ಮುಂದುವರಿಸಿ
ಗಾಂಜಾ ಅಮಲಿನಲ್ಲಿ ಸ್ನೇಹಿತನ ಕೊಲೆ: ಶವ ಸುಟ್ಟು ಪರಾರಿ - ಬೆಚ್ಚಿಬೀಳಿಸಿದ ಹಾಸನ
ಹಾಸನ: ಹಾಸನ ತಾಲೂಕಿನ ನಿಟ್ಟೂರು ಸಮೀಪದ ಹಂಗರಹಳ್ಳಿ ತೋಟದ ಮನೆಯಲ್... ಓದನ್ನು ಮುಂದುವರಿಸಿ