"ಮಿತಿ ಮೀರಿದ ಲಂಚಾವಾತಾರ: ಕುಂಬಳಗೋಡು ಪೊಲೀಸರು ಬೇಡಿಕೆ ಹಾಕಿದ 10 ಲಕ್ಷ, ಕೊಡದಿದ್ರೆ ಕೇಸ್ ಬುಕ್ ಮಾಡುವ ಬೆದರಿಕೆ!"

ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಗಂಭೀರ ಲಂಚ ಮತ್ತು ಬೆದರಿಕೆ ಆರೋಪ ಕೇಳಿಬಂದಿದೆ. ಕಾರ್ತೀಕ್ ಎಂಬ ಯುವಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ, ಮೂರು ಯುವಕರನ್ನು ತಪ್ಪಾಗಿ ಕೇಸ್ ಮಾಡುತ್ತಿದ್ದಂತೆ ತೋರಿಸಿ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದಾರೆ.

 

ಕುಂಬಳಗೋಡು ಠಾಣಾ ವ್ಯಾಪ್ತಿಯ ಎಂ.ಆರ್. ಬಾರ್‌ನಲ್ಲಿ ರಾಕೇಶ್, ಗೋಪಿ ಮತ್ತು ಸ್ವಾಮಿ ಎಂಬ ಮೂವರು ಕುಡಿದ ವೇಳೆ ಕ್ಯಾಶಿಯರ್ ಜೊತೆಗೆ ಗಲಾಟೆ ನಡೆಸಿದರು. ಕ್ಯಾಶಿಯರ್ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಹೊಯ್ಸಳ ಠಾಣಾ ಸಿಬ್ಬಂದಿ ಅವರನ್ನು ಕರೆದುಕೊಂಡು ಹೋಗಿ ಮೂರು ದಿನಗಳ ಕಾಲ ಅಕ್ರಮವಾಗಿ ತಾವನ್ನು ಕಾಯ್ದುಕೊಂಡು, ಹಣ ತರಿಸಲು ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವಕರಿಗೆ ಹಲ್ಲೆ ನಡೆದದ್ದಾಗಿ ದೂರು ದಾಖಲಾಗಿದೆ.

 

ಕಿರುಕುಳ ತಾಳಲಾರದ ರಾಕೇಶ್ ತನ್ನ ಸ್ನೇಹಿತ ಕಾರ್ತೀಕ್‌ಗೆ ಕರೆಮಾಡಿದ್ದು, ಕಾರ್ತೀಕ್ ಸ್ಥಳಕ್ಕೆ ಹೋಗಿ ಇನ್ಸ್‌ಪೆಕ್ಟರ್ ಮಂಜುನಾಥ ಹೂಗಾರ ಅವರನ್ನು ಭೇಟಿಯಾಗಲು ಯತ್ನಿಸಿದರು. ಅಲ್ಲಿಯೇ “ನೀನೇ ಸುಪಾರಿ ಕೊಟ್ಟಿದ್ದೀಯಾ, ನಿನ್ನ ಮೇಲೆ ಕೇಸ್ ಮಾಡ್ತೀವಿ” ಎಂದು ಬೆದರಿಕೆ ಹಾಕಿ, ಕೇಸ್ ಬಾರದಿದ್ದರೆ 10 ಲಕ್ಷ ರೂ. ನೀಡಬೇಕು ಎಂದು ಬೇಡಿಕೆ ಹಾಕಲಾಗಿದೆ.

 

ಕಾರ್ತೀಕ್ ತಕ್ಷಣ ವಕೀಲರನ್ನು ಸಂಪರ್ಕಿಸಿದರು. ವಕೀಲವರ್ಷೀತ್ ರೆಡ್ಡಿ ಸ್ಥಳಕ್ಕೆ ತೆರಳಿ, ಪ್ರಕರಣದ ವಕಾಲತ್ತು ವಹಿಸಲು ಪ್ರಯತ್ನಿಸಿದಾಗ, ತಲಾ 50 ಸಾವಿರ ರೂಪಾಯಿ ಲಂಚ ಕೊಡಬೇಕೆಂಬ ಮನವಿ ನಡೆಸಲಾಗಿದೆ. ಕೊನೆಗೆ ತಲಾ 30,000 ರೂಪಾಯಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ವಕೀಲರು ಲಂಚದ ವಿಡಿಯೋ ಮತ್ತು ಆಡಿಯೋ ದಾಖಲೆಯನ್ನು ದಾಖಲಿಸಿಕೊಂಡು, ಕಾರ್ತೀಕ್ ಅವರಿಗೆ ಸಮರ್ಪಿಸಿದ್ದಾರೆ.

 

ಕಾರ್ತೀಕ್ ಈ ಪ್ರಕರಣವನ್ನು ಆಧಾರವನ್ನಾಗಿ ಮಾಡಿ, ಇನ್ಸ್‌ಪೆಕ್ಟರ್ ಮಂಜುನಾಥ್ ಹೂಗಾರ್ ಸೇರಿದಂತೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

18 hours ago

   
Image 1
Image 1
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ

ದೇವನಹಳ್ಳಿ 5 ನಿಮಿಷ ಶಾಕ್: 1 ಕೆಜಿ ಚಿನ್ನ 20 ಲಕ್ಷಕ್ಕೆ ನಂಬಿದ ಆಂಧ್ರ ವ್ಯಕ್ತಿ ದುರಂತ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ ತಾಲ್ಲೂಕಿನ ವೆಂಕ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ತುಮಕೂರು

3 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತನ ಶವ ಅಡಿಕೆ ತೋಟದಲ್ಲಿ ಪತ್ತೆ!

ತುಮಕೂರು: ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಬಳಿಯ ತೋಟದಲ್ಲಿ ಮ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ತುಮಕೂರು

ಪತಿ ಸಾವು ‘ಹೃದಯಾಘಾತ’ ಎಂದ ಪತ್ನಿ: ಶವ ಹೊರತೆಗೆದಾಗ ಪತ್ನಿ-ಪ್ರಿಯಕರನ ಜೊತೆ ಪ್ರೀ-ಪ್ಲ್ಯಾನ್ ಕೊಲೆ ಬಯಲು

ತುಮಕೂರು: ಹೃದಯಾಘಾತದಿಂದ ಪತಿ ಸಾವಿಗೀಡಾದಂತೆ ಪತ್ನಿ ನಾಟಕ ರಚಿಸಿ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಉತ್ತರಕನ್ನಡ

ಕಾರವಾರ

ಉತ್ತರ ಕನ್ನಡದಲ್ಲಿ ಕೊಲೆ ರಹಸ್ಯ ಬಯಲು: ಚಿನ್ನದ ಆಸೆಗೆ ವೃದ್ಧೆಯ ರುಂಡ ತುಂಡರಿಸಿ ಹತ್ಯೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಕೊಳಗಿ ಅರ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಧಾರವಾಡ

ಸಿಸಿಟಿವಿ ದೃಶ್ಯದಿಂದ ನಿಜ ಹೊರಬಂತು.. ಹಿಟ್ & ರನ್ ಅಲ್ಲ, ಪ್ರೀ-ಪ್ಲ್ಯಾನ್ ಕೊಲೆ! ಪತಿ ಸೇರಿ 4 ಮಂದಿ ಬಂಧನ

ಧಾರವಾಡ: ಸವದತ್ತಿ ರಸ್ತೆಯಲ್ಲಿ ನಡೆದ ಹಿಟ್ & ರನ್ ಪ್ರಕರಣ ಭ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಬೆಂಗಳೂರು ಕಾಲೇಜುಗಳಲ್ಲಿ ಡ್ರಗ್ ಶಾಕ್: ‘ಸನ್ಮಿತ್ರ’ ಕಾರ್ಯಾಚರಣೆಯಲ್ಲಿ 31 ವಿದ್ಯಾರ್ಥಿಗಳ ವರದಿ ಪಾಸಿಟಿವ್

ಬೆಂಗಳೂರು: ಡ್ರಗ್ ರಹಿತ ಸಮಾಜ ನಿರ್ಮಾಣದ ಉದ್ದೇಶದಿಂದ ಕರ್ನಾಟಕ ಪ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ನಗರದಲ್ಲಿ ಡ್ರಗ್ ಮೇಲಿನ ಸಮರ: ಪೊಲೀಸ್ ದಾಳಿ – 6 ಕಾಲೇಜು, 2 ಹಾಸ್ಟೇಲ್ ತಪಾಸಣೆ

ಬೆಂಗಳೂರು: ನಗರದ ಡ್ರಗ್ ವ್ಯಸನ ವಿರುದ್ಧ ಪಶ್ಚಿಮ ವಿಭಾಗದ ಪೊಲೀಸ್... ಓದನ್ನು ಮುಂದುವರಿಸಿ


Edited by: ಬಾನು

14 hours ago

   
Image 1
ಬೀದರ್

ಬಸವಕಲ್ಯಾಣದಲ್ಲಿ ಉದ್ರಿಕ್ತತೆ: ಠಾಣೆ ಎದುರು ಕಲ್ಲು ತೂರಾಟ, 20 ಆರೋಪಿಗಳ ಬಂಧನ

ಬೀದರ್: ಜಿಲ್ಲೆಯ ಬಸವಕಲ್ಯಾಣದಲ್ಲಿ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಕಲ್ಬುರ್ಗಿ

ಹೋಳಿ ವೇಳೆ ಹಿಜಾಬ್ ಧರಿಸಿ ವ್ಯಂಗ್ಯ: ಕಲಬುರಗಿಯಲ್ಲಿ ಹಲವರ ವಿರುದ್ಧ ಎಫ್‌ಐಆರ್

ಕಲಬುರಗಿ: ಜಿಲ್ಲೆಯ ನಿಂಬರ್ಗಾ ಗ್ರಾಮದಲ್ಲಿ ಹೋಳಿ ಹಬ್ಬದ ಸಂದರ್ಭದ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಜೂನಿಯರ್ ಜೊತೆ ಸೀನಿಯರ್ ಯುವತಿ ಎಸ್ಕೇಪ್..! ಪೊಲೀಸರಿಗೆ ಸವಾಲಾದ ಇಬ್ಬರು ವಿದ್ಯಾರ್ಥಿನಿಯರ ಕಾಣೆಯಾದ ಪ್ರಕರಣ

ಬೆಂಗಳೂರು: ನಗರದ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯ... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1