ಮಳೆಯಾರ್ಭಟ ಮುಂದುವರಿಕೆ – 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಮುಂದುವರಿದಿದ್ದು, ಇಂದೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಗಾಳಿ ಸಹಿತ ಮಳೆಯೂ ಬೀಳುವ ನಿರೀಕ್ಷೆಯಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕಲಬುರ್ಗಿ, ಧಾರವಾಡ, ಗದಗ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇದಲ್ಲದೆ, ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜೊತೆಗೆ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ರಾಯಚೂರು ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಸಹ ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಕೋಲಾರ ಭಾಗಗಳಲ್ಲಿ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಜೋರಾದ ಮಳೆಯಾಗುವ ಸೂಚನೆ ನೀಡಲಾಗಿದೆ. ಉಳಿದ ಭಾಗಗಳಲ್ಲಿ ಸಾಮಾನ್ಯವಾಗಿ ಒಣಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಅಬ್ಬರದಿಂದ ಕೆಲ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವ ಅಗತ್ಯವಿದ್ದು, ಯೆಲ್ಲೋ ಅಲರ್ಟ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗ್ರತೆಯಿಂದಿರಲು ಸೂಚಿಸಲಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಸಾಕು ನಾಯಿಯ ದಾಳಿ – ಸೈಕಲ್ ಆಡುತ್ತಿದ್ದ ಬಾಲಕನಿಗೆ ಗಂಭೀರ ಗಾಯ
ಬೆಂಗಳೂರು: ರಾಜಾಜಿನಗರದ 19ನೇ ಮುಖ್ಯರಸ್ತೆಯಲ್ಲಿ ಆಟವಾಡುತ... ಓದನ್ನು ಮುಂದುವರಿಸಿ
ಕರ್ನಾಟಕಕ್ಕೆ ಕೇಂದ್ರ ಅನ್ಯಾಯ – ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾ... ಓದನ್ನು ಮುಂದುವರಿಸಿ
“ಜನರ ಪ್ರೀತಿಯೇ ದೊಡ್ಡ ಗೌರವ” – ಡಾಕ್ಟರೇಟ್ ತಿರಸ್ಕರಿಸಿದ ಬೊಮ್ಮಾಯಿ
ಬೆಂಗಳೂರು: ಹಾವೇರಿ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಬಸವರಾ... ಓದನ್ನು ಮುಂದುವರಿಸಿ
“ಒಳ್ಳೆಯ ಕಾರಣಕ್ಕೆ ಸುದ್ದಿಯೇ ಇಲ್ಲ” — ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಟೀಕೆ
ವಿಜಯಪುರ: ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದ... ಓದನ್ನು ಮುಂದುವರಿಸಿ
ಐಪಿಎಲ್ ನಿಲ್ಲಿಸಬೇಕು: ರಾಮನಗರದಲ್ಲಿ ವಾಟಾಳ್ ಆಕ್ರೋಶ
ರಾಮನಗರ: ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ರಾಮನ... ಓದನ್ನು ಮುಂದುವರಿಸಿ
“ಭಯದಿಂದ ಬದುಕುತ್ತಿದ್ದಾರೆ ಮಹಿಳೆಯರು” - ಸಿದ್ದರಾಮಯ್ಯ ಸರ್ಕಾರ ವಿರುದ್ಧ ಬೊಮ್ಮಾಯಿ ಆರೋಪ
ಬಾಗಲಕೋಟೆ: ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಥಕವಾಗಿದೆ... ಓದನ್ನು ಮುಂದುವರಿಸಿ
ಅಭಿವೃದ್ಧಿಗಿಂತ ಗ್ಯಾರಂಟಿ? ಸರ್ಕಾರ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ
ದಾವಣಗೆರೆ: ಎಲ್‌ಪಿಜಿ (LPG) ಅಭಾವದ ಹಿನ್ನೆಲೆ ಆಟೋ ಚಾಲಕರಿಗೆ ಸಣ... ಓದನ್ನು ಮುಂದುವರಿಸಿ
ಬಿಜೆಪಿ ಗೆಲ್ಲಬಾರದು: ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಮನವಿ
ಬಾಗಲಕೋಟೆ : ರೈತ-ಕಾರ್ಮಿಕ ವರ್ಗ ಹಾಗೂ ಶೋಷಿತ ಸಮುದಾಯಗಳನ್ನು ಒಟ್... ಓದನ್ನು ಮುಂದುವರಿಸಿ
“ಬಡವರ ಪರ ಕಾಂಗ್ರೆಸ್” — ಉಪ ಚುನಾವಣೆಗೆ ಸಿದ್ದರಾಮಯ್ಯ ಕರೆ
ಬಾಗಲಕೋಟೆ: ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒ... ಓದನ್ನು ಮುಂದುವರಿಸಿ
ಮಡಿಕೇರಿ
ತಡಿಯಂಡಮೋಳ್ ಟ್ರೆಕ್ಕಿಂಗ್ ದುರಂತ: 4ನೇ ದಿನವೂ ಮಹಿಳೆ ನಾಪತ್ತೆ
ಮಡಿಕೇರಿ: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಕ... ಓದನ್ನು ಮುಂದುವರಿಸಿ