“ಒಳ್ಳೆಯ ಕಾರಣಕ್ಕೆ ಸುದ್ದಿಯೇ ಇಲ್ಲ” — ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಟೀಕೆ

ವಿಜಯಪುರ: ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದು ದಿನವೂ ಒಳ್ಳೆಯ ಕಾರಣಕ್ಕೆ ಸುದ್ದಿಯಾಗಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ವಾಗ್ದಾಳಿ ನಡೆಸಿದರು. ನಗರದಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಸುನೀಲ್ ಕುಮಾರ್ ಜೊತೆಯಾಗಿ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಮುಡಾ, ಡ್ರಗ್ಸ್ ಪ್ರಕರಣ, ವಾಲ್ಮೀಕಿ ಹಗರಣ, ರೈತರ ಹಾಗೂ ಸರ್ಕಾರಿ ನೌಕರರ ಆತ್ಮಹತ್ಯೆ ಸೇರಿದಂತೆ ಹಲವು ನಕಾರಾತ್ಮಕ ವಿಚಾರಗಳ ಕಾರಣದಿಂದಲೇ ಸರ್ಕಾರ ಸುದ್ದಿಯಲ್ಲಿದೆ ಎಂದು ಆರೋಪಿಸಿದರು.

 

“ಒಂದು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಸಿಎಂ ಹಾಗೂ ಸಚಿವರು ಹೇಳಲಿ” ಎಂದು ಸವಾಲು ಹಾಕಿದ ಅವರು, ಸರ್ಕಾರದ ಸಾಧನೆಗಳ ಬಗ್ಗೆ ಪ್ರಶ್ನೆ ಎತ್ತಿದರು. ಉಪಚುನಾವಣೆ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಿರುವುದನ್ನೂ ಪ್ರಶ್ನಿಸಿದ ಅವರು, “ಚುನಾವಣೆ ಬಳಿಕ ಅದನ್ನು ಮುಂದುವರಿಸುತ್ತಾರೆಯೇ ಎಂಬುದು ಅನುಮಾನ” ಎಂದು ವ್ಯಂಗ್ಯವಾಡಿದರು.

 

ಬೆಲೆ ಏರಿಕೆ ವಿಷಯದಲ್ಲಿಯೂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಅಬಕಾರಿ ಸುಂಕ, ಸ್ಟಾಂಪ್ ಡ್ಯೂಟಿ ಹಾಗೂ ನೋಂದಣಿ ಶುಲ್ಕ ಹೆಚ್ಚಿಸಿರುವುದನ್ನು “ಹಗಲುದರೋಡೆ” ಎಂದು ಟೀಕಿಸಿದರು. ಡ್ರಗ್ಸ್ ಸಮಸ್ಯೆಯ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಡ್ರಗ್ ಪೆಡ್ಲರ್‌ಗಳು ಹೆಚ್ಚುತ್ತಿರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1
ಬೆಂಗಳೂರು ನಗರ

ಹಸುಗಳ ಶೆಡ್‌ಗೆ ಬೆಂಕಿ – 6 ಹಸುಗಳ ದಾರುಣ ಸಾವು, ವಾಹನಗಳಿಗೂ ಬೆಂಕಿ ಹಾನಿ

ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬೆಂಗಳೂರು ನಗರ

ಹೆಲ್ಮೆಟ್ ಧರಿಸಿದ ಕಳ್ಳನ ದಾಳಿ – ಮನೆಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಕಳವು!

ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ವಿಜಯನಗರ

ಕೂಡ್ಲಿಗಿ

ಬೀದಿ ನಾಯಿಯ ಅಟ್ಟಹಾಸ – 3 ವರ್ಷದ ಬಾಲಕಿ ಸೇರಿ ಐವರಿಗೆ ಗಾಯ, ಆತಂಕದಲ್ಲಿ ನಾಗರೀಕರು

ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಬೀದಿ ನಾಯಿ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಬಾಗಲಕೋಟೆ

ಉಪಚುನಾವಣೆ ಕಾವು ತಾರಕ್ಕೇರಿತು – ಇಂದು ಪ್ರಚಾರಕ್ಕೆ ತೆರೆ, ಅಂತಿಮ ಕಸರತ್ತು ಜೋರಾಗಿ!

ದಾವಣಗೆರೆ/ಬಾಗಲಕೋಟೆ: ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೆಂಗಳೂರು ನಗರ

ಎಲ್‌ಪಿಜಿ ಅಭಾವದ ಹೊಡೆತ – ಸಂಕಷ್ಟದಲ್ಲಿ ಆಟೋ ಚಾಲಕರು, ಸರ್ಕಾರಕ್ಕೆ ಬಂದ್ ಎಚ್ಚರಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸ... ಓದನ್ನು ಮುಂದುವರಿಸಿ


Edited by: ಬಾನು

6 hours ago

   
Image 1
ಬೀದರ್

ವೇಗದ ಕಾರಿನ ಡಿಕ್ಕಿ: 9 ವರ್ಷದ ಬಾಲಕ ಸ್ಥಳದಲ್ಲೇ ಸಾವು

ಬೀದರ್: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ದಾವಣಗೆರೆ

“ನನ್ನನ್ನು ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ” – ಸಿಎಂ ಸಿದ್ದರಾಮಯ್ಯ ಕಿಡಿ

ದಾವಣಗೆರೆ: ನಾವು ಮಾಡಿದ ಅಭಿವೃದ್ಧಿ ಮತ್ತು ಜನಪರ ಕೆಲಸಗಳ ಆಧಾರದಲ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಬಾಗಲಕೋಟೆ

“ಅರಳು ಮರಳು ಆರೋಪ ಬೇಡ” –“ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದೆ?” – ಯಡಿಯೂರಪ್ಪಗೆ ಸಿಎಂ ಸವಾಲು

ಬಾಗಲಕೋಟೆ: ಯಡಿಯೂರಪ್ಪ ಅವರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ... ಓದನ್ನು ಮುಂದುವರಿಸಿ


Edited by: ಬಾನು

16 hours ago

   
Image 1
ಹಾವೇರಿ

ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ಮೇಲೆ ಟ್ರ್ಯಾಕ್ಟರ್ ಹರಿದು ಸಾವು

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

17 hours ago

   
Image 1
ಬಾಗಲಕೋಟೆ

ಯಡಿಯೂರಪ್ಪ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು – ‘ಆಧಾರವಿದ್ದರೆ ಹೇಳಲಿ’

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಪಗಳಿಗೆ ಮುಖ್... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1