“ನನ್ನನ್ನು ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ” – ಸಿಎಂ ಸಿದ್ದರಾಮಯ್ಯ ಕಿಡಿ
ದಾವಣಗೆರೆ: ನಾವು ಮಾಡಿದ ಅಭಿವೃದ್ಧಿ ಮತ್ತು ಜನಪರ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಆದರೆ, ನನಗೆ ಬೈದು ಮತ ಕೇಳುವ ಸ್ಥಿತಿ ಬಿಜೆಪಿಗೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಾಮನೂರು ಶಿವಶಂಕರಪ್ಪ ಅವರು ಹಲವು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲು ಸಮರ್ಥ್ ಶಾಮನೂರು ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಒಂಬತ್ತು ವರ್ಷ ಆಡಳಿತ ನಡೆಸಿದ ಬಿಜೆಪಿ ಯಾವುದೇ ಗಮನಾರ್ಹ ಅಭಿವೃದ್ಧಿ ಮಾಡಿಲ್ಲ. ಅದರಿಂದಲೇ ಅವರು ತಮ್ಮ ಕೆಲಸಗಳ ಆಧಾರದಲ್ಲಿ ಮತ ಕೇಳಲು ಸಾಧ್ಯವಾಗದೆ, ನನ್ನನ್ನು ಟೀಕಿಸಿ ಮತ ಕೇಳುತ್ತಿದ್ದಾರೆ ಎಂದು ಹೇಳಿದರು. ಬಡವರು ಮತ್ತು ದುರ್ಬಲ ವರ್ಗಗಳ ಪರವಾಗಿ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದಲೇ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದರು. ಕಾಂಗ್ರೆಸ್ ಎಲ್ಲಾ ಜಾತಿ ಮತ್ತು ಧರ್ಮದವರನ್ನು ಒಟ್ಟಿಗೆ ಕೊಂಡೊಯ್ಯುವ ಪಕ್ಷ. ಜಾತಿ–ಧರ್ಮ ಆಧಾರಿತ ವಿಭಜನೆ ಮಾಡಿ ಮತ ಕೇಳುವ ರಾಜಕಾರಣವನ್ನು ನಾವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಅವರದೇ ಪಕ್ಷದ ನಾಯಕರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಅಂತಹವರು ಈಗ ನನ್ನ ಮೇಲೆ ಆರೋಪ ಮಾಡುತ್ತಿರುವುದು ವಿಪರ್ಯಾಸ ಎಂದು ಹೇಳಿದರು. ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಇಬ್ಬರೂ ಪ್ರಾಮಾಣಿಕ ನಾಯಕರು. ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿದೆ. ಐದು ಗ್ಯಾರಂಟಿಗಳನ್ನು ಜಾರಿ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮುಡಾ ಹಗರಣಕ್ಕೆ ಹೊಸ ತಿರುವು – ಹೈಕೋರ್ಟ್‌ಗೆ ಅರ್ಜಿ, ಮರುತನಿಖೆ ಬೇಡಿಕೆ!
ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ಮತ್ತೆ ಮುಖ್ಯಮಂತ್ರಿ ಸಿದ್ದರಾ... ಓದನ್ನು ಮುಂದುವರಿಸಿ
ನರಸಿಂಹರಾಜಪುರ
ಹೊಳೆಗೆ ಹಾರಿ ನರ್ಸ್ ಆತ್ಮಹತ್ಯೆ – ಕಾರಣ ತಿಳಿಯದ ದುರ್ಘಟನೆ
ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಮುತ್ತಿನಕೊಪ್... ಓದನ್ನು ಮುಂದುವರಿಸಿ
ಹಸುಗಳ ಶೆಡ್‌ಗೆ ಬೆಂಕಿ – 6 ಹಸುಗಳ ದಾರುಣ ಸಾವು, ವಾಹನಗಳಿಗೂ ಬೆಂಕಿ ಹಾನಿ
ಬೆಂಗಳೂರು: ನಗರದ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ... ಓದನ್ನು ಮುಂದುವರಿಸಿ
ಹೆಲ್ಮೆಟ್ ಧರಿಸಿದ ಕಳ್ಳನ ದಾಳಿ – ಮನೆಗೆ ನುಗ್ಗಿ ಗ್ಯಾಸ್ ಸಿಲಿಂಡರ್ ಕಳವು!
ಬೆಂಗಳೂರು: ನಗರದ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ... ಓದನ್ನು ಮುಂದುವರಿಸಿ
ಕೂಡ್ಲಿಗಿ
ಬೀದಿ ನಾಯಿಯ ಅಟ್ಟಹಾಸ – 3 ವರ್ಷದ ಬಾಲಕಿ ಸೇರಿ ಐವರಿಗೆ ಗಾಯ, ಆತಂಕದಲ್ಲಿ ನಾಗರೀಕರು
ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಬೀದಿ ನಾಯಿ... ಓದನ್ನು ಮುಂದುವರಿಸಿ
ಉಪಚುನಾವಣೆ ಕಾವು ತಾರಕ್ಕೇರಿತು – ಇಂದು ಪ್ರಚಾರಕ್ಕೆ ತೆರೆ, ಅಂತಿಮ ಕಸರತ್ತು ಜೋರಾಗಿ!
ದಾವಣಗೆರೆ/ಬಾಗಲಕೋಟೆ: ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್... ಓದನ್ನು ಮುಂದುವರಿಸಿ
ಎಲ್‌ಪಿಜಿ ಅಭಾವದ ಹೊಡೆತ – ಸಂಕಷ್ಟದಲ್ಲಿ ಆಟೋ ಚಾಲಕರು, ಸರ್ಕಾರಕ್ಕೆ ಬಂದ್ ಎಚ್ಚರಿಕೆ
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್–ಇಸ್ರೇಲ್ ಸ... ಓದನ್ನು ಮುಂದುವರಿಸಿ
ವೇಗದ ಕಾರಿನ ಡಿಕ್ಕಿ: 9 ವರ್ಷದ ಬಾಲಕ ಸ್ಥಳದಲ್ಲೇ ಸಾವು
ಬೀದರ್: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕ... ಓದನ್ನು ಮುಂದುವರಿಸಿ
“ಅರಳು ಮರಳು ಆರೋಪ ಬೇಡ” –“ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದೆ?” – ಯಡಿಯೂರಪ್ಪಗೆ ಸಿಎಂ ಸವಾಲು
ಬಾಗಲಕೋಟೆ: ಯಡಿಯೂರಪ್ಪ ಅವರ ಆರೋಪಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ... ಓದನ್ನು ಮುಂದುವರಿಸಿ
ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ಮೇಲೆ ಟ್ರ್ಯಾಕ್ಟರ್ ಹರಿದು ಸಾವು
ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ... ಓದನ್ನು ಮುಂದುವರಿಸಿ