ಕರ್ನಾಟಕಕ್ಕೆ ಕೇಂದ್ರ ಅನ್ಯಾಯ – ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಾದ ಹಕ್ಕಿನ ಅನುದಾನವನ್ನು ತಡೆದು, ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಸುಮಾರು 2 ಲಕ್ಷ ಕೋಟಿ ರೂ. ಹಕ್ಕಿನ ಹಣ ಬಾಕಿಯಿದೆ ಎಂದು ಹೇಳಿದ ಸುರ್ಜೇವಾಲಾ, ಕೃಷಿ, ನೀರಾವರಿ ಸೇರಿದಂತೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ, ಆಲಮಟ್ಟಿ ಅಣೆಕಟ್ಟು, ಮೇಕೆದಾಟು, ಕಳಸಾ-ಬಂಡೂರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಹಣಕಾಸು ಆಯೋಗದ ಅನುದಾನದಲ್ಲಿಯೂ ರಾಜ್ಯಕ್ಕೆ ನಷ್ಟವಾಗಿದೆ ಎಂದು ಅವರು ತಿಳಿಸಿದರು. 14ನೇ ಮತ್ತು 15ನೇ ಹಣಕಾಸು ಆಯೋಗದಿಂದ ಬರಬೇಕಾದ 79,770 ಕೋಟಿ ರೂ. ನೀಡಲಾಗಿಲ್ಲ. ಜಿಎಸ್‌ಟಿ ಜಾರಿಯಿಂದ 59,274 ಕೋಟಿ ರೂ. ನಷ್ಟವಾಗಿದ್ದು, ಹೊಸ ಪರಿಷ್ಕರಣೆಗಳಿಂದ ಮತ್ತಷ್ಟು 9,000 ಕೋಟಿ ರೂ. ಹಾನಿಯಾಗಿದೆ ಎಂದು ಹೇಳಿದರು.
ಇನ್ನೂ ಜಲಜೀವನ್ ಮಿಷನ್, ನಗರ ಸಾರಿಗೆ ಮತ್ತು ಪ್ರವಾಹ ಪರಿಹಾರ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಅನುದಾನ ಬಾಕಿಯಿದೆ ಎಂದು ಆರೋಪಿಸಿದ ಅವರು, ಇದರ ಪರಿಣಾಮ ರೈತರು, ಗ್ರಾಮೀಣ ಜನತೆ ಮತ್ತು ನಗರ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಹೇಳಿದರು. “ಬಿಜೆಪಿ ಸರ್ಕಾರದ ತಾರತಮ್ಯ ನೀತಿಯಿಂದ ಕನ್ನಡಿಗರ ಅಭಿವೃದ್ಧಿಗೆ ಅಡ್ಡಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉಪಚುನಾವಣೆಯಲ್ಲಿ ಮತ ಕೇಳಲು ಅವರಿಗೆ ನೈತಿಕ ಹಕ್ಕೇ ಇಲ್ಲ,” ಎಂದು ಸುರ್ಜೇವಾಲಾ ತೀವ್ರವಾಗಿ ಟೀಕಿಸಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಜನರ ಪ್ರೀತಿಯೇ ದೊಡ್ಡ ಗೌರವ” – ಡಾಕ್ಟರೇಟ್ ತಿರಸ್ಕರಿಸಿದ ಬೊಮ್ಮಾಯಿ
ಬೆಂಗಳೂರು: ಹಾವೇರಿ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಬಸವರಾ... ಓದನ್ನು ಮುಂದುವರಿಸಿ
“ಒಳ್ಳೆಯ ಕಾರಣಕ್ಕೆ ಸುದ್ದಿಯೇ ಇಲ್ಲ” — ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಟೀಕೆ
ವಿಜಯಪುರ: ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಂದೇ ಒಂದ... ಓದನ್ನು ಮುಂದುವರಿಸಿ
ಐಪಿಎಲ್ ನಿಲ್ಲಿಸಬೇಕು: ರಾಮನಗರದಲ್ಲಿ ವಾಟಾಳ್ ಆಕ್ರೋಶ
ರಾಮನಗರ: ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ರಾಮನ... ಓದನ್ನು ಮುಂದುವರಿಸಿ
“ಭಯದಿಂದ ಬದುಕುತ್ತಿದ್ದಾರೆ ಮಹಿಳೆಯರು” - ಸಿದ್ದರಾಮಯ್ಯ ಸರ್ಕಾರ ವಿರುದ್ಧ ಬೊಮ್ಮಾಯಿ ಆರೋಪ
ಬಾಗಲಕೋಟೆ: ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಪ್ರಶ್ನಾರ್ಥಕವಾಗಿದೆ... ಓದನ್ನು ಮುಂದುವರಿಸಿ
ಅಭಿವೃದ್ಧಿಗಿಂತ ಗ್ಯಾರಂಟಿ? ಸರ್ಕಾರ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ
ದಾವಣಗೆರೆ: ಎಲ್‌ಪಿಜಿ (LPG) ಅಭಾವದ ಹಿನ್ನೆಲೆ ಆಟೋ ಚಾಲಕರಿಗೆ ಸಣ... ಓದನ್ನು ಮುಂದುವರಿಸಿ
ಬಿಜೆಪಿ ಗೆಲ್ಲಬಾರದು: ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಮನವಿ
ಬಾಗಲಕೋಟೆ : ರೈತ-ಕಾರ್ಮಿಕ ವರ್ಗ ಹಾಗೂ ಶೋಷಿತ ಸಮುದಾಯಗಳನ್ನು ಒಟ್... ಓದನ್ನು ಮುಂದುವರಿಸಿ
“ಬಡವರ ಪರ ಕಾಂಗ್ರೆಸ್” — ಉಪ ಚುನಾವಣೆಗೆ ಸಿದ್ದರಾಮಯ್ಯ ಕರೆ
ಬಾಗಲಕೋಟೆ: ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒ... ಓದನ್ನು ಮುಂದುವರಿಸಿ
ಮಡಿಕೇರಿ
ತಡಿಯಂಡಮೋಳ್ ಟ್ರೆಕ್ಕಿಂಗ್ ದುರಂತ: 4ನೇ ದಿನವೂ ಮಹಿಳೆ ನಾಪತ್ತೆ
ಮಡಿಕೇರಿ: ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿದ್ದ ಕ... ಓದನ್ನು ಮುಂದುವರಿಸಿ
ಆಧಾರಿತ RF ಟೆಕ್ : ಬೆಂಗಳೂರಿನ ಸ್ಟಾರ್ಟ್‌ಅಪ್‌ನಿಂದ ‘ಡಾರ್ಕ್ ಶಿಪ್ಪಿಂಗ್’ ಪತ್ತೆ ಮಾಡುವ ಹೊಸ ತಂತ್ರಜ್ಞಾನ
ಬೆಂಗಳೂರು: ಪಶ್ಚಿಮ ಏಷ್ಯಾ ಸಂಕಷ್ಟದ ನಡುವೆ ಕಳ್ಳ ಸಾಗಣೆ, ಅಕ್ರಮ... ಓದನ್ನು ಮುಂದುವರಿಸಿ
IndiGo ವಿಮಾನದಲ್ಲಿ ‘ಬಾಂಬ್’ ಸಂದೇಶ: 183 ಪ್ರಯಾಣಿಕರ ತುರ್ತು ಇಳಿಕೆ
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು... ಓದನ್ನು ಮುಂದುವರಿಸಿ