ಕುವೈತ್ ಅಗ್ನಿ ಅವಘಡ : IAF ವಿಮಾನದ ಮೂಲಕ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಮೃತದೇಹಗಳು ರವಾನೆ
ಕುವೈತ್ ಮಂಗಾಫ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ 45 ಮಂದಿ ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ(IAF) ವಿಮಾನ ಇಂದು ಬೆಳಗ್ಗೆ 8:30ಕ್ಕೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿದೆ.
ನಿನ್ನೆ ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಮೃತದೇಹಗಳನ್ನು ತವರೂರಿಗೆ ಕರೆತರಲು ಕ್ರಮ ಕೈಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. 45 ಮಂದಿ ಮೃತರಲ್ಲಿ 31 ಮೃತದೇಹಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದೆ. ನಂತರ ವಿಮಾನವು ಉಳಿದ ಮೃತದೇಹಗಳನ್ನು ದೆಹಲಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿನಿಂದ ಏಳು ಮಂದಿ ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿಗೆ ತರಲಾಗುತ್ತಿದೆ. ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸಚಿವರು ವಿಮಾನ ನಿಲ್ದಾಣದಲ್ಲಿ ಮೃತರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಮೃತದೇಹಗಳನ್ನು ಅವರವರ ಮನೆಗೆ ಸಾಗಿಸಲು ರಾಜ್ಯ ಸರ್ಕಾರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಪಾಯಕ್ಕೆ ಸಿಲುಕಿದ ಹಾಯಿ ದೋಣಿ: 11 ಮಂದಿ ಸಾವು, 66ಕ್ಕೂ ಹೆಚ್ಚು ಜನರ ನಾಪತ್ತೆ
ಇಟಲಿಯ ಕರಾವಳಿಯಲ್ಲಿ ಸೋಮವಾರ ಹಾಯಿ ದೋಣಿಯೊಂದು ಅಪಪಾಯಕ್ಕೆ ಸಿಲುಕಿದ್ದು ಪರಿಣಾಮ ಕನಿಷ... ಓದನ್ನು ಮುಂದುವರಿಸಿ
ಕೆನಡಾ: 20 ಮಿಲಿಯನ್ ಡಾಲರ್ ಚಿನ್ನ ಕಳ್ಳತನ- ಭಾರತೀಯ ಮೂಲದ ಶಂಕಿತ ಆರೋಪಿ ಶರಣು.
ಇಬ್ಬರು ಏರ್ ಕೆನಡಾ ಉದ್ಯೋಗಿಗಳು ಸೇರಿದಂತೆ ಶಂಕಿತರು ಸ್ವಿಟ್ಜರ್ಲೆಂಡ್ನಿಂದ ಆಗಮಿಸುವ... ಓದನ್ನು ಮುಂದುವರಿಸಿ
ಇಸ್ರೇಲ್- ಹಮಾಸ್ ಯುದ್ಧದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 37,296.
ಪ್ಯಾಲೆಸ್ಟೀನ್ ಹಾಗೂ ಇಸ್ರೇಲ್ ನಡುವೆ ಎಂಟು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಿಂದ... ಓದನ್ನು ಮುಂದುವರಿಸಿ
ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ಜಿ7 ಶೃಂಗ ಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಇಟಲಿಗೆ ತೆರಳಿದ್ದರು. ಸಭೆ... ಓದನ್ನು ಮುಂದುವರಿಸಿ
ಇನ್ಮುಂದೆ ಆಂಟಿಗಳು ಜಿಮ್ʼಗೆ ಬರಬಾರದು: ಸುಂದರ ಮಹಿಳೆಯರಿಗೆ ಮಾತ್ರ ಪ್ರವೇಶ – ಪೋಸ್ಟರ್ ವೈರಲ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಫಿಟ್ ಆಗಿರಲು ಜಿಮ್ ಗ... ಓದನ್ನು ಮುಂದುವರಿಸಿ
ಕುವೈತ್ ಅಗ್ನಿ ದುರಂತ: ಲುಲು ಗ್ರೂಪ್ ನಿಂದ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ
ಕುವೈತ್ ನ ವಸತಿ ಅಪಾರ್ಟ್ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರು ಸ... ಓದನ್ನು ಮುಂದುವರಿಸಿ
ಸೆಕ್ಸ್ ಗಾಗಿ ಕುದುರೆ ಆಫರ್ ನೀಡಿದ ಎಲಾನ್ ಮಸ್ಕ್: ಮಹಿಳಾ ಸಿಬ್ಬಂದಿ ಆರೋಪ
ಸ್ಪೇಸ್ ಎಕ್ಸ್ ನ ಮಾಜಿ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹ... ಓದನ್ನು ಮುಂದುವರಿಸಿ
ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲು ಇಟಲಿಗೆ ಪ್ರಧಾನಿ ಮೋದಿ: ಮೆಲೋನಿ ಜತೆ ದ್ವಿಪಕ್ಷೀಯ ಸಭೆ
ಪ್ರಧಾನಿ ನೇಂದ್ರ ಮೋದಿ ಇಂದು ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲ... ಓದನ್ನು ಮುಂದುವರಿಸಿ
ಕಾಂಗೋ: ಎರಡು ಹಡಗುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಡಗು ಮಗುಚಿ 80 ಮಂದಿ ಸಾವು
ಕಾಂಗೋ: ಎರಡು ಹಡಗುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಡಗು... ಓದನ್ನು ಮುಂದುವರಿಸಿ
ಕುವೈತ್ ವಸತಿ ಕಟ್ಟಡದಲ್ಲಿ ಅಗ್ನಿದುರಂತದಲ್ಲಿ ಮೃತರಲ್ಲಿ ಹೆಚ್ಚು ಕೇರಳದವರು
ಕುವೈತ್ ನ ವಸತಿ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ... ಓದನ್ನು ಮುಂದುವರಿಸಿ