ಇನ್ಮುಂದೆ ಆಂಟಿಗಳು ಜಿಮ್ʼಗೆ ಬರಬಾರದು: ಸುಂದರ ಮಹಿಳೆಯರಿಗೆ ಮಾತ್ರ ಪ್ರವೇಶ – ಪೋಸ್ಟರ್ ವೈರಲ್
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಫಿಟ್ ಆಗಿರಲು ಜಿಮ್ ಗೆ ಹೋಗಿ ಬೆವರಿಳಿಸುತ್ತಾರೆ. ಕೆಲವರು ವಯಸ್ಸಾದ್ಮೇಲೂ ಜಿಮ್ ಗೆ ಹೋಗಲು ಆಸಕ್ತಿ ತೋರುತ್ತಾರೆ. ಆದ್ರೆ ದಕ್ಷಿಣ ಕೋರಿಯಾದ ಜಿಮ್ ಒಂದು ವಿಶೇಷ ನಿಯಮ ಶುರು ಮಾಡಿದೆ. ಇದು ವಯಸ್ಸಾದ ಆಂಟಿಯರ ಕಣ್ಣು ಕೆಂಪು ಮಾಡಿದೆ. ಹೌದು ಜಿಮ್ ಗೆ ಬರ್ತಿದ್ದ ಕೆಲ ಮಹಿಳೆಯರ ಅಸಭ್ಯ ವರ್ತನೆಯನ್ನು ನೋಡಿ ಜಿಮ್ ಈ ನಿರ್ಧಾರಕ್ಕೆ ಬಂದಿದೆ. ಜಿಮ್ ಗೆ ಬರುವ ಜನರು ವರ್ಕೌಟ್ ಮಾಡಿ ಫಿಟ್ನೆಸ್ ಕಾಯ್ದುಕೊಳ್ತಾರೆ. ಈಗ ಜಿಮ್ ನಲ್ಲಿ ರೀಲ್ಸ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಇನ್ನು ಫ್ರೆಂಡ್ಸ್ ಜೊತೆ ಜಿಮ್ ಗೆ ಬರೋರು, ವರ್ಕ್ ಔಟ್ ಮಾಡೋ ಬದಲು ಹರಟೆ ಹೊಡೆಯುತ್ತ ಕುಳಿತಿರ್ತಾರೆ.
ಈ ಹರಟೆ, ಗಲಾಟೆಯೇ ದಕ್ಷಿಣ ಕೊರಿಯಾ ಮಹಿಳೆಯರಿಗೆ ಮುಳುವಾಗಿದೆ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಸಮೀಪದ ಇಂಚಿಯಾನ್ ನಗರದ ಜಿಮ್ ಸದ್ಯ ಚರ್ಚೆಯಲ್ಲಿದೆ. ಇಲ್ಲಿ ಅಜುಮ್ಮಾಗೆ ಪ್ರವೇಶ ನಿಷೇಧಿಸಲಾಗಿದೆ ಮತ್ತು ಸುಸಂಸ್ಕೃತ ಮತ್ತು ಸುಂದರ ಮಹಿಳೆಯರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ ಎಂಬ ಫಲಕವನ್ನು ಜಿಮ್ ಮುಂದೆ ನೇತುಹಾಕಲಾಗಿದೆ. ದಕ್ಷಿಣ ಕೋರಿಯಾದಲ್ಲಿ ಅಜುಮ್ಮಾ ಅಂದ್ರೆ ವಯಸ್ಸಾದ ಮಹಿಳೆಯರು ಎಂದರ್ಥ. ಇನ್ನೂ ಜಿಮ್ ಗೆ ಬರುವವರು ವರ್ಕೌಟ್ ಮಾಡಿ ಹೋಗ್ಬೇಕು. ಆದ್ರೆ ಅಲ್ಲಿಗೆ ಬರುವ ಮಹಿಳೆಯರು ವರ್ಕೌಟ್ ಬದಲು ಮೋಜು ಮಾಡಲು ಬರ್ತಿದ್ದರು. ವ್ಯರ್ಥ ಸಮಯ ಹೇಳು ಮಾಡ್ತಿದ್ದರು. ಜಿಮ್ ನಲ್ಲಿರುವ ಬಟ್ಟೆ, ಸೋಪ್, ಟವೆಲ್, ಹೇರ್ ಡ್ರೈಯರ್ ಸೇರಿದಂತೆ ಅನೇಕ ವಸ್ತುಗಳನ್ನು ಕದ್ದೊಯ್ಯುತ್ತಿದ್ದರು. ಮಹಿಳೆಯರ ಈ ಕೆಲಸದಿಂದ ಜಿಮ್ ಗೆ ಭಾರೀ ನಷ್ಟವಾಗಿತ್ತು.
ಅದಲ್ಲದೆ ಇನ್ನೊಂದಿಷ್ಟು ಮಹಿಳೆಯರ ದೇಹದ ಆಕಾರವನ್ನು ಅವರು ಅವಹೇಳನ ಮಾಡುತ್ತಿದ್ದರು. ಇತರರ ಕಾಲೆಳೆಯುವ ಕೆಲಸ ನಡೆಯುತ್ತಿತ್ತು. ಇದ್ರಿಂದಾಗಿ ಉಳಿದವರಿಗೆ ತೊಂದ್ರೆ ಆಗ್ತಿತ್ತು. ಅನೇಕರು ಈ ಮಹಿಳೆಯರ ಕಾಟ ತಾಳಲಾರದೆ ಜಿಮ್ ತೊರೆದಿದ್ದರು ಎಂದು ಜಿಮ್ ಮಾಲೀಕರು ಹೇಳಿದ್ದಾರೆ. ಜಿಮ್ ಮುಂದೆ ಈ ಫಲಕ ಹಾಕಿರೋದಕ್ಕೆ ವಿರೋಧ ಕೇಳಿ ಬರ್ತಿದೆ. ಹಿರಿಯ ಮಹಿಳೆಯರಿಗೆ ಇಲ್ಲಿ ಅವಹೇಳನ ಮಾಡಲಾಗಿದೆ, ದೇಶದಲ್ಲಿ ವಯಸ್ಸಾದ ಮಹಿಳೆಯರ ವಿರುದ್ಧ ತಾರತಮ್ಯವಾಗ್ತಿದೆ ಎನ್ನುವ ಚರ್ಚೆ ಮತ್ತೆ ಚುರುಕು ಪಡೆದಿದೆ.
ಇತ್ತೀಚೆಗಂತೂ ದೇಹ ಬೆಳೆಸಿಕೊಳ್ಳಲು ಜಿಮ್ ಗೆ ಹೋಗಿ ಕಸರತ್ತು ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಬೆಳಗಾದರೆ, ಜಿಮ್ ಗಳು ಭರ್ತಿಯಾಗಿರುತ್ತದೆ. ಬೆಳಗಿನ ಸ್ಲಾಟ್ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲ ಜಿಮ್ ಗಳೂ ಭರ್ತಿ. ಹೆಚ್ಚಿನ ವರ್ಕೌಟ್ ಮಾಡುವುದಕ್ಕೆ ದೇಹಕ್ಕೆ ಶಕ್ತಿ ಬೇಕು ತಾನೇ? ಅದಕ್ಕಾಗಿ, ದಿನಕ್ಕಿಷ್ಟು ಎಂದು ಲೆಕ್ಕವಿಟ್ಟು ಮೊಟ್ಟೆ ಸೇವನೆ ಮಾಡುವುದು, ಮಾಂಸಖಂಡಗಳನ್ನು ಬಲಪಡಿಸಲು ಸ್ಟಿರಾಯ್ಡ್ ಸೇವಿಸುವುದು, ಜಿಮ್ ಗಳಲ್ಲಿ ನೀಡುವ ಶಕ್ತಿವರ್ಧಕ ಜ್ಯೂಸ್ ಕುಡಿಯುವುದು ಇವೆಲ್ಲ ಸಾಮಾನ್ಯ. ಇವು ನಿಧಾನವಾಗಿ ದೇಹಕ್ಕೆ ತೊಂದರೆ ಒಡ್ಡುತ್ತವೆ ಎನ್ನುವುದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದುಬಂದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಅಪಾಯಕ್ಕೆ ಸಿಲುಕಿದ ಹಾಯಿ ದೋಣಿ: 11 ಮಂದಿ ಸಾವು, 66ಕ್ಕೂ ಹೆಚ್ಚು ಜನರ ನಾಪತ್ತೆ
ಇಟಲಿಯ ಕರಾವಳಿಯಲ್ಲಿ ಸೋಮವಾರ ಹಾಯಿ ದೋಣಿಯೊಂದು ಅಪಪಾಯಕ್ಕೆ ಸಿಲುಕಿದ್ದು ಪರಿಣಾಮ ಕನಿಷ... ಓದನ್ನು ಮುಂದುವರಿಸಿ
ಕೆನಡಾ: 20 ಮಿಲಿಯನ್ ಡಾಲರ್ ಚಿನ್ನ ಕಳ್ಳತನ- ಭಾರತೀಯ ಮೂಲದ ಶಂಕಿತ ಆರೋಪಿ ಶರಣು.
ಇಬ್ಬರು ಏರ್ ಕೆನಡಾ ಉದ್ಯೋಗಿಗಳು ಸೇರಿದಂತೆ ಶಂಕಿತರು ಸ್ವಿಟ್ಜರ್ಲೆಂಡ್ನಿಂದ ಆಗಮಿಸುವ... ಓದನ್ನು ಮುಂದುವರಿಸಿ
ಇಸ್ರೇಲ್- ಹಮಾಸ್ ಯುದ್ಧದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 37,296.
ಪ್ಯಾಲೆಸ್ಟೀನ್ ಹಾಗೂ ಇಸ್ರೇಲ್ ನಡುವೆ ಎಂಟು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಿಂದ... ಓದನ್ನು ಮುಂದುವರಿಸಿ
ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ಜಿ7 ಶೃಂಗ ಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಇಟಲಿಗೆ ತೆರಳಿದ್ದರು. ಸಭೆ... ಓದನ್ನು ಮುಂದುವರಿಸಿ
ಕುವೈತ್ ಅಗ್ನಿ ದುರಂತ: ಲುಲು ಗ್ರೂಪ್ ನಿಂದ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ
ಕುವೈತ್ ನ ವಸತಿ ಅಪಾರ್ಟ್ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರು ಸ... ಓದನ್ನು ಮುಂದುವರಿಸಿ
ಕುವೈತ್ ಅಗ್ನಿ ಅವಘಡ : IAF ವಿಮಾನದ ಮೂಲಕ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಮೃತದೇಹಗಳು ರವಾನೆ
ಕುವೈತ್ ಮಂಗಾಫ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ 45 ಮಂದಿ ಭಾರತೀಯರ ಪಾ... ಓದನ್ನು ಮುಂದುವರಿಸಿ
ಸೆಕ್ಸ್ ಗಾಗಿ ಕುದುರೆ ಆಫರ್ ನೀಡಿದ ಎಲಾನ್ ಮಸ್ಕ್: ಮಹಿಳಾ ಸಿಬ್ಬಂದಿ ಆರೋಪ
ಸ್ಪೇಸ್ ಎಕ್ಸ್ ನ ಮಾಜಿ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹ... ಓದನ್ನು ಮುಂದುವರಿಸಿ
ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲು ಇಟಲಿಗೆ ಪ್ರಧಾನಿ ಮೋದಿ: ಮೆಲೋನಿ ಜತೆ ದ್ವಿಪಕ್ಷೀಯ ಸಭೆ
ಪ್ರಧಾನಿ ನೇಂದ್ರ ಮೋದಿ ಇಂದು ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲ... ಓದನ್ನು ಮುಂದುವರಿಸಿ
ಕಾಂಗೋ: ಎರಡು ಹಡಗುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಡಗು ಮಗುಚಿ 80 ಮಂದಿ ಸಾವು
ಕಾಂಗೋ: ಎರಡು ಹಡಗುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಡಗು... ಓದನ್ನು ಮುಂದುವರಿಸಿ
ಕುವೈತ್ ವಸತಿ ಕಟ್ಟಡದಲ್ಲಿ ಅಗ್ನಿದುರಂತದಲ್ಲಿ ಮೃತರಲ್ಲಿ ಹೆಚ್ಚು ಕೇರಳದವರು
ಕುವೈತ್ ನ ವಸತಿ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ... ಓದನ್ನು ಮುಂದುವರಿಸಿ