ಅಪಾಯಕ್ಕೆ ಸಿಲುಕಿದ ಹಾಯಿ ದೋಣಿ: 11 ಮಂದಿ ಸಾವು, 66ಕ್ಕೂ ಹೆಚ್ಚು ಜನರ ನಾಪತ್ತೆ

ಇಟಲಿಯ ಕರಾವಳಿಯಲ್ಲಿ ಸೋಮವಾರ ಹಾಯಿ ದೋಣಿಯೊಂದು ಅಪಪಾಯಕ್ಕೆ ಸಿಲುಕಿದ್ದು ಪರಿಣಾಮ ಕನಿಷ್ಠ 11 ವಲಸಿಗರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ 66 ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಇಟಾಲಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿಯ ಕರಾವಳಿಯ ಬಳಿ ಎರಡು ವಲಸಿಗ ದೋಣಿಗಳು ಸಮಸ್ಯೆ ಸಿಲುಕಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಮೆಡಿಟರೇನಿಯನ್‌ನಲ್ಲಿ ಇಟಲಿಯ ಕರಾವಳಿ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 

 

ದಕ್ಷಿಣ ಇಟಲಿಯ ಕ್ಯಾಲಬ್ರಿಯಾದ ಕರಾವಳಿಯಿಂದ ಸುಮಾರು 120 ಮೈಲಿಗಳು ದೂರದಲ್ಲಿ ಹಾಯಿದೋಣಿಯೊಂದು ಸಂಕಷ್ಟಕ್ಕೆ ಸಿಲುಕಿರುವುದು ಗೊತ್ತಾಗಿದೆ. ಆ ಪ್ರದೇಶದಲ್ಲಿ ವ್ಯಾಪಾರಿ ಹಡಗು ಈ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು. ಆ ಬಳಿಕ ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ವ್ಯಾಪಾರಿ ಹಡಗು 12 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಇಟಾಲಿಯನ್ ಕರಾವಳಿ ರಕ್ಷಣಾ ಹಡಗು, ಅಪಘಾತದ ಸ್ಥಳಕ್ಕೆ ಬರುವವರೆಗೂ ಅವರಿಗೆ ಸಹಾಯ ಮಾಡಿತು. ಅಪಘಾತಕ್ಕೀಡಾಗಿ ಬದುಕುಳಿದವರಿಗಾಗಿ ಹುಡುಕಾಟ ಮುಂದುವರೆಸಿದೆ ಎಂದು ಕೋಸ್ಟ್ ಗಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ. ಕೋಸ್ಟ್ ಗಾರ್ಡ್ ಎರಡು ಇಟಾಲಿಯನ್ ಗಸ್ತು ದೋಣಿಗಳು ಮತ್ತು ATR42 ವಿಮಾನವು ಪ್ರಸ್ತುತ ಹುಡುಕಾಟದಲ್ಲಿ ನಿರತವಾಗಿದೆ. 

 

ವೈದ್ಯಕೀಯ ಸಿಬ್ಬಂದಿ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳ ಪ್ರಕಾರ ನಾಪತ್ತೆಯಾಗಿರುವ 66 ಜನರಲ್ಲಿ 26 ಅಪ್ರಾಪ್ತರು ಎಂದು ತಿಳಿದು ಬಂದಿದೆ. ಈ ಮೊದಲು ಜರ್ಮನ್ ರೆಸ್ಕ್ಯೂ ಟೀಮ್​ 10 ವಲಸಿಗರು ಸತ್ತಿರುವುದನ್ನು ಕಂಡುಹಿಡಿದಿತ್ತು. ಇಟಲಿಯ ದಕ್ಷಿಣದ ದ್ವೀಪವಾದ ಲ್ಯಾಂಪೆಡುಸಾದಿಂದ ದೂರದಲ್ಲಿರುವ ಮಾಲ್ಟಾದ ನೀರಿನಲ್ಲಿ ತೊಂದರೆಯಲ್ಲಿದ್ದ ದೋಣಿಯಲ್ಲಿ ಇತರ 51 ಜನರನ್ನು ರಕ್ಷಿಸುವಲ್ಲಿ ಈ ತಂಡ ಯಶಸ್ವಿ ಕೂಡಾ ಆಗಿತ್ತು. ಬದುಕುಳಿದವರು ಮುಖ್ಯವಾಗಿ ಬಾಂಗ್ಲಾದೇಶ, ಪಾಕಿಸ್ತಾನ, ಈಜಿಪ್ಟ್ ಮತ್ತು ಸಿರಿಯಾದಿಂದ ಬಂದವರಾಗಿದ್ದಾರೆ. 

 

ಮೆಡಿಟರೇನಿಯನ್ ಸಮುದ್ರದ ಮೂಲಕ ದೋಣಿಯಲ್ಲಿ ಪ್ರಯಾಣಿಸುವ ವಲಸಿಗರು ಆಗಾಗ ಇಂತಹ ಸಂಕಷ್ಟಗಳಿಗೆ ಸಿಲುಕುತ್ತಿರುತ್ತಾರೆ. ಸುರಕ್ಷಿತವಲ್ಲದ ಹಡಗುಗಳಿಂದ ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗುತ್ತಿವೆ. ಈ ವರ್ಷ ಇಲ್ಲಿಯವರೆಗೆ ಮೆಡಿಟರೇನಿಯನ್ ದಾಟಲು ಹೋಗಿ ಸುಮಾರು ಒಂದು ಸಾವಿರ ಜನರು ಸಾವನ್ನಪ್ಪಿದ್ದಾರೆ ಅಥವಾ ಕಣ್ಮರೆಯಾಗಿದ್ದಾರೆ ಎಂದು ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಅಂದಾಜಿಸಿದೆ. 

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 year ago

   
Image 1
Image 1

ಕೆನಡಾ: 20 ಮಿಲಿಯನ್ ಡಾಲರ್ ಚಿನ್ನ ಕಳ್ಳತನ- ಭಾರತೀಯ ಮೂಲದ ಶಂಕಿತ ಆರೋಪಿ ಶರಣು.

ಇಬ್ಬರು ಏರ್ ಕೆನಡಾ ಉದ್ಯೋಗಿಗಳು ಸೇರಿದಂತೆ ಶಂಕಿತರು ಸ್ವಿಟ್ಜರ್ಲೆಂಡ್ನಿಂದ ಆಗಮಿಸುವ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಇಸ್ರೇಲ್- ಹಮಾಸ್ ಯುದ್ಧದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 37,296.

ಪ್ಯಾಲೆಸ್ಟೀನ್‌ ಹಾಗೂ ಇಸ್ರೇಲ್‌ ನಡುವೆ ಎಂಟು ತಿಂಗಳಿನಿಂದ ನಡೆಯುತ್ತಿರುವ ಯುದ್ಧದಿಂದ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ Melodi ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ

ಜಿ7 ಶೃಂಗ ಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಇಟಲಿಗೆ ತೆರಳಿದ್ದರು. ಸಭೆ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಇನ್ಮುಂದೆ ಆಂಟಿಗಳು ಜಿಮ್‌ʼಗೆ ಬರಬಾರದು: ಸುಂದರ ಮಹಿಳೆಯರಿಗೆ ಮಾತ್ರ ಪ್ರವೇಶ – ಪೋಸ್ಟರ್‌ ವೈರಲ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಫಿಟ್ ಆಗಿರಲು ಜಿಮ್‌ ಗ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಕುವೈತ್ ಅಗ್ನಿ ದುರಂತ: ಲುಲು ಗ್ರೂಪ್ ನಿಂದ ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ

ಕುವೈತ್ ನ ವಸತಿ ಅಪಾರ್ಟ್ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರು ಸ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಕುವೈತ್ ಅಗ್ನಿ ಅವಘಡ : IAF ವಿಮಾನದ ಮೂಲಕ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಮೃತದೇಹಗಳು ರವಾನೆ

ಕುವೈತ್‌ ಮಂಗಾಫ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟ 45 ಮಂದಿ ಭಾರತೀಯರ ಪಾ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಸೆಕ್ಸ್ ಗಾಗಿ ಕುದುರೆ ಆಫರ್ ನೀಡಿದ ಎಲಾನ್ ಮಸ್ಕ್: ಮಹಿಳಾ ಸಿಬ್ಬಂದಿ ಆರೋಪ

ಸ್ಪೇಸ್ ಎಕ್ಸ್ ನ ಮಾಜಿ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲು ಇಟಲಿಗೆ ಪ್ರಧಾನಿ ಮೋದಿ: ಮೆಲೋನಿ ಜತೆ ದ್ವಿಪಕ್ಷೀಯ ಸಭೆ

ಪ್ರಧಾನಿ ನೇಂದ್ರ ಮೋದಿ ಇಂದು ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಳ್ಗೊಳ್ಳಲ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಕಾಂಗೋ: ಎರಡು ಹಡಗುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಡಗು ಮಗುಚಿ 80 ಮಂದಿ ಸಾವು

ಕಾಂಗೋ: ಎರಡು ಹಡಗುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಹಡಗು... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಕುವೈತ್ ವಸತಿ ಕಟ್ಟಡದಲ್ಲಿ ಅಗ್ನಿದುರಂತದಲ್ಲಿ ಮೃತರಲ್ಲಿ ಹೆಚ್ಚು ಕೇರಳದವರು

ಕುವೈತ್‌ ನ ವಸತಿ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1