ಜಿಮ್ ವಿವಾದಕ್ಕೆ ಗಲಾಟೆ: ಹಳೆ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಜಿಮ್‌ಗೆ ಸಂಬಂಧಿಸಿದ ವಿವಾದ ಒಂದು ದೊಡ್ಡ ಗಲಾಟೆಗೆ ಕಾರಣವಾಗಿದ್ದು, ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಮ್ ಟ್ರೈನರ್ ವಿರುದ್ಧ ‘ಲವ್ ಜಿಹಾದ್’ ಆರೋಪ ಕೇಳಿಬಂದ ಹಿನ್ನೆಲೆ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿವೆ. ಈ ಪ್ರಕರಣದಲ್ಲಿ ವಿಜಯನಗರ ನಿವಾಸಿ ಸಮೀರ್ ಎಂಬ ಜಿಮ್ ಟ್ರೈನರ್‌ನನ್ನು ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ಬೆಳವಣಿಗೆಯ ನಂತರ ಎರಡು ಕುಟುಂಬಗಳ ನಡುವೆ ಗಲಾಟೆ ಉಂಟಾಗಿದೆ. ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದ ಹಿನ್ನೆಲೆಯಲ್ಲಿ, ಎರಡೂ ಕುಟುಂಬಗಳು ಪರಸ್ಪರ ಮನೆಗಳಿಗೆ ತೆರಳಿ ವಾಗ್ವಾದ ನಡೆಸಿದರೆಂಬ ಆರೋಪ ಕೇಳಿಬಂದಿದೆ. ಗಲಾಟೆಯ ವೇಳೆ ಎರಡೂ ಕಡೆಯವರು ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, “ಇದು ಎರಡು ಕುಟುಂಬಗಳ ನಡುವಿನ ಗಲಾಟೆ. ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ದೂರು ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಆರೋಪಿತ ಸಮೀರ್ ಕುಟುಂಬದವರು, ಯುವತಿ ಮತ್ತು ಸಮೀರ್ ನಡುವೆ ಹಲವು ವರ್ಷಗಳಿಂದ ಪರಿಚಯವಿದ್ದು, ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಒಟ್ಟಿನಲ್ಲಿ, ಈ ಪ್ರಕರಣ ಹಲವು ಆರೋಪ–ಪ್ರತ್ಯಾರೋಪಗಳಿಗೆ ಕಾರಣವಾಗಿದ್ದು, ನಿಜಾಂಶ ಬಹಿರಂಗವಾಗಲು ಅಧಿಕೃತ ತನಿಖೆಯೇ ಸ್ಪಷ್ಟತೆ ನೀಡಬೇಕಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಹುಬ್ಬಳ್ಳಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್: ವೈರಲ್ ವಿಡಿಯೋ ಸಂಚಲನ
ಹುಬ್ಬಳ್ಳಿ: ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಅತ್ಯಾಚಾರ ಆ... ಓದನ್ನು ಮುಂದುವರಿಸಿ
ಡ್ರಿಂಕ್ ಅಂಡ್ ಡ್ರೈವ್ ನಂತರ ದಾರುಣ ಅಂತ್ಯ: ಲಾರಿಯಲ್ಲೇ ಚಾಲಕ ನೇಣಿಗೆ ಶರಣು!
ಬೆಂಗಳೂರು: ನಗರದ ಜೆ.ಪಿ.ನಗರದಲ್ಲಿ ಲಾರಿ ಚಾಲಕ ಷಣ್ಮುಗ ಆತ್ಮಹತ್ಯ... ಓದನ್ನು ಮುಂದುವರಿಸಿ
ಅರಸೀಕೆರೆಯಲ್ಲಿ ದಂಪತಿ ಮೇಲೆ ಹಲ್ಲೆ: ಸುಮೋಟೋ ಪ್ರಕರಣ ದಾಖಲು
ಹಾಸನ: ದಂಪತಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಪ್ರೀತಿ ಹೆಸರಿನಲ್ಲಿ ದೌರ್ಜನ್ಯ: ಯುವಕನಿಗೆ 14 ದಿನಗಳ ನ್ಯಾಯಾಂಗ ಬಂಧನ
ಹುಬ್ಬಳ್ಳಿ: ನಗರದಲ್ಲಿ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು... ಓದನ್ನು ಮುಂದುವರಿಸಿ
ತುಮಕೂರು NH-48 ದುರಂತ: KSRTC–ಖಾಸಗಿ ಬಸ್ ಡಿಕ್ಕಿ, 2 ಸಾವು
ತುಮಕೂರು: ಜಿಲ್ಲೆಯ ಶಿರಾ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4... ಓದನ್ನು ಮುಂದುವರಿಸಿ
ಬೆಂಗಳೂರಿನಲ್ಲಿ ಬೈಕ್ ಸ್ಟಂಟ್ ಹಾವಳಿ: 3 ವರ್ಷದಲ್ಲಿ 27 ಸಾವು
ಬೆಂಗಳೂರು: ರಾಜ್ಯದಾದ್ಯಂತ ಯುವಕರ ಬೈಕ್ ಸ್ಟಂಟ್‌ಗಳು ಮತ್ತು ಅಪಾಯ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಹುಬ್ಬಳ್ಳಿ ಜೈಲಿನಲ್ಲಿ ಮೊಬೈಲ್ ಪತ್ತೆ: ಭದ್ರತೆ ಮೇಲೆ ಗಂಭೀರ ಪ್ರಶ್ನೆ
ಹುಬ್ಬಳ್ಳಿ: ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯಗಳ ಆ... ಓದನ್ನು ಮುಂದುವರಿಸಿ
ಅಕ್ರಮ ವಲಸಿಗರ ಜಾಲ ಭೇದಿಸಿದ ಸಿಸಿಬಿ: ಇಬ್ಬರು ಬ್ರೋಕರ್ ಬಂಧನ
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ... ಓದನ್ನು ಮುಂದುವರಿಸಿ
ಗರ್ಭಿಣಿ ಮಹಿಳೆ ಸಾವು: ಅತ್ತೆ-ಮಾವನ ಕಿರುಕುಳ ಆರೋಪ, ನಾಲ್ವರ ಬಂಧನ
ಶಿವಮೊಗ್ಗ : ಜಿಲ್ಲೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಆತ್ಮಹತ್ಯೆ... ಓದನ್ನು ಮುಂದುವರಿಸಿ
ಬೆಂಗಳೂರು ಪೊಲೀಸರ ತ್ವರಿತ ಕಾರ್ಯಾಚರಣೆ – ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ, ಬಾಲಕ ರಕ್ಷಣೆ!
ಬೆಂಗಳೂರು: ನಗರದಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ತ್ವರಿ... ಓದನ್ನು ಮುಂದುವರಿಸಿ