ಬೆಂಗಳೂರಿನಲ್ಲಿ ಬೈಕ್ ಸ್ಟಂಟ್ ಹಾವಳಿ: 3 ವರ್ಷದಲ್ಲಿ 27 ಸಾವು

ಬೆಂಗಳೂರು: ರಾಜ್ಯದಾದ್ಯಂತ ಯುವಕರ ಬೈಕ್ ಸ್ಟಂಟ್‌ಗಳು ಮತ್ತು ಅಪಾಯಕಾರಿ ವಾಹನ ಚಾಲನೆ ಪ್ರಕರಣಗಳು ಹೆಚ್ಚುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ. ಈ ರೀತಿಯ ನಿರ್ಲಕ್ಷ್ಯ ಚಾಲನೆಗಳು ಸಾವು-ನೋವುಗಳಿಗೆ ದಾರಿ ಮಾಡಿಕೊಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿವೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ವಾಹನ ಅಪಘಾತಗಳಿಂದ 27 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪ್ರಾಪ್ತರು ಹಾಗೂ ಅವರ ಪೋಷಕರ ವಿರುದ್ಧ ಒಟ್ಟು 1,805 ಪ್ರಕರಣಗಳು ದಾಖಲಾಗಿದ್ದು, ₹1.77 ಕೋಟಿ ದಂಡ ವಸೂಲಾಗಿರುವುದು ಪರಿಸ್ಥಿತಿಯ ತೀವ್ರತೆಯನ್ನು ತೋರಿಸುತ್ತದೆ. ಬೆಂಗಳೂರು ನಗರ ಈ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದ್ದು, ಮೈಸೂರು, ತುಮಕೂರು, ಕೊಡಗು ಜಿಲ್ಲೆಗಳು ನಂತರ ಸ್ಥಾನಗಳಲ್ಲಿ ಬರುತ್ತವೆ.

 

ಅಂಕಿ-ಅಂಶಗಳ ವಿವರ

ಬೆಂಗಳೂರು

  • 2023: 240 ಪ್ರಕರಣ – ₹18.31 ಲಕ್ಷ ದಂಡ
  • 2024: 378 ಪ್ರಕರಣ – ₹16.99 ಲಕ್ಷ ದಂಡ
  • 2025: 632 ಪ್ರಕರಣ – ₹15.65 ಲಕ್ಷ ದಂಡ

ಮೈಸೂರು

  • 2023: ಅಪ್ರಾಪ್ತರು 21, ಪೋಷಕರು 15 – ₹13.55 ಲಕ್ಷ
  • 2024: ಅಪ್ರಾಪ್ತರು 27, ಪೋಷಕರು 33 – ₹1.21 ಲಕ್ಷ
  • 2025: ಅಪ್ರಾಪ್ತರು 19, ಪೋಷಕರು 34 – ₹1.37 ಲಕ್ಷ

ತುಮಕೂರು

  • 2023: 21 ಪ್ರಕರಣ (ಪೋಷಕರು 8) – ₹78,000
  • 2024: 35 ಪ್ರಕರಣ (ಪೋಷಕರು 13) – ₹95,500
  • 2025: 21 ಪ್ರಕರಣ (ಪೋಷಕರು 6) – ₹1.50 ಲಕ್ಷ

 

ಅಪ್ರಾಪ್ತ ಚಾಲನೆ ತಡೆಯಲು ಮೋಟಾರ್ ವಾಹನ ಕಾಯ್ದೆ ಹಾಗೂ ಭಾರತೀಯ ನ್ಯಾಯಸಂಹಿತೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಸಂಬಂಧಿತ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಗೆ ಪ್ರಸ್ತಾಪ ಕಳುಹಿಸಿ ನೋಂದಣಿಗಳನ್ನು ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಪ್ರತಿವರ್ಷ ಜನವರಿಯಲ್ಲಿ ರಸ್ತೆ ಸುರಕ್ಷತಾ ತಿಂಗಳು ಆಚರಿಸಿ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಬೆಂಗಳೂರು ನಗರದಲ್ಲಿ ವೀಲಿ ಸ್ಟಂಟ್‌ಗಳನ್ನು ತಡೆಯಲು 37 ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಕಠಿಣ ನಿಗಾ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಚಾಲನೆ ಪಾಲಿಸಬೇಕು, ಅಪಾಯಕಾರಿ ಸ್ಟಂಟ್‌ಗಳಿಂದ ದೂರವಿರಬೇಕು ಹಾಗೂ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

12 hours ago

   
Image 1
Image 1
ಧಾರವಾಡ

ಹುಬ್ಬಳ್ಳಿ

ಹುಬ್ಬಳ್ಳಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್: ವೈರಲ್ ವಿಡಿಯೋ ಸಂಚಲನ

ಹುಬ್ಬಳ್ಳಿ: ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಅತ್ಯಾಚಾರ ಆ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಡ್ರಿಂಕ್ ಅಂಡ್ ಡ್ರೈವ್ ನಂತರ ದಾರುಣ ಅಂತ್ಯ: ಲಾರಿಯಲ್ಲೇ ಚಾಲಕ ನೇಣಿಗೆ ಶರಣು!

ಬೆಂಗಳೂರು: ನಗರದ ಜೆ.ಪಿ.ನಗರದಲ್ಲಿ ಲಾರಿ ಚಾಲಕ ಷಣ್ಮುಗ ಆತ್ಮಹತ್ಯ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಹಾಸನ

ಅರಸೀಕೆರೆಯಲ್ಲಿ ದಂಪತಿ ಮೇಲೆ ಹಲ್ಲೆ: ಸುಮೋಟೋ ಪ್ರಕರಣ ದಾಖಲು

ಹಾಸನ: ದಂಪತಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಧಾರವಾಡ

ಹುಬ್ಬಳ್ಳಿ

ಪ್ರೀತಿ ಹೆಸರಿನಲ್ಲಿ ದೌರ್ಜನ್ಯ: ಯುವಕನಿಗೆ 14 ದಿನಗಳ ನ್ಯಾಯಾಂಗ ಬಂಧನ

ಹುಬ್ಬಳ್ಳಿ: ನಗರದಲ್ಲಿ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ತುಮಕೂರು

ತುಮಕೂರು NH-48 ದುರಂತ: KSRTC–ಖಾಸಗಿ ಬಸ್ ಡಿಕ್ಕಿ, 2 ಸಾವು

ತುಮಕೂರು: ಜಿಲ್ಲೆಯ ಶಿರಾ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಧಾರವಾಡ

ಹುಬ್ಬಳ್ಳಿ

ಹುಬ್ಬಳ್ಳಿ ಜೈಲಿನಲ್ಲಿ ಮೊಬೈಲ್ ಪತ್ತೆ: ಭದ್ರತೆ ಮೇಲೆ ಗಂಭೀರ ಪ್ರಶ್ನೆ

ಹುಬ್ಬಳ್ಳಿ: ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯಗಳ ಆ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಅಕ್ರಮ ವಲಸಿಗರ ಜಾಲ ಭೇದಿಸಿದ ಸಿಸಿಬಿ: ಇಬ್ಬರು ಬ್ರೋಕರ್ ಬಂಧನ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1
ಧಾರವಾಡ

ಹುಬ್ಬಳ್ಳಿ

ಜಿಮ್ ವಿವಾದಕ್ಕೆ ಗಲಾಟೆ: ಹಳೆ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಜಿಮ್‌ಗೆ ಸಂಬಂಧಿಸಿದ ವಿವಾದ ಒಂದು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಶಿವಮೊಗ್ಗ

ಗರ್ಭಿಣಿ ಮಹಿಳೆ ಸಾವು: ಅತ್ತೆ-ಮಾವನ ಕಿರುಕುಳ ಆರೋಪ, ನಾಲ್ವರ ಬಂಧನ

ಶಿವಮೊಗ್ಗ : ಜಿಲ್ಲೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಆತ್ಮಹತ್ಯೆ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಬೆಂಗಳೂರು ಪೊಲೀಸರ ತ್ವರಿತ ಕಾರ್ಯಾಚರಣೆ – ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ, ಬಾಲಕ ರಕ್ಷಣೆ!

ಬೆಂಗಳೂರು: ನಗರದಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ತ್ವರಿ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1