ಗರ್ಭಿಣಿ ಮಹಿಳೆ ಸಾವು: ಅತ್ತೆ-ಮಾವನ ಕಿರುಕುಳ ಆರೋಪ, ನಾಲ್ವರ ಬಂಧನ

ಶಿವಮೊಗ್ಗ : ಜಿಲ್ಲೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದ ಶ್ವೇತಾ (30) ಎಂಬ ಮಹಿಳೆ ಮಾರ್ಚ್ 29ರಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿದುಬಂದಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಮೊದಲಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಅತ್ತೆ-ಮಾವರಿಂದ ನಡೆಯುತ್ತಿದ್ದ ಕಿರುಕುಳವೇ ಈ ದುರ್ಘಟನೆಗೆ ಕಾರಣ ಎಂದು ಅವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಾವ ಸಣ್ಣಪ್ಪ, ಅತ್ತೆ ಜಾನಕಿ, ಹೇಮಂತ್ ಹಾಗೂ ದಿವ್ಯಾ ಬಂಧಿತರಾಗಿದ್ದಾರೆ.

 

“ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಆಕೆಯನ್ನು ಹಿಂಸೆ ನೀಡಿ ಕೊಲೆ ಮಾಡಿದ್ದಾರೆ” ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬದವರ ಪ್ರಕಾರ, ಜಮೀನು ವಿಚಾರವಾಗಿ ಶ್ವೇತಾಳಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ಈ ಕಾರಣಕ್ಕೆ ಕುಟುಂಬದಲ್ಲಿ ಕಲಹಗಳು ಹೆಚ್ಚಾಗಿದ್ದವು ಎಂದು ಹೇಳಲಾಗಿದೆ. ಮಗಳ ಸಾವಿನಿಂದ ದುಃಖಿತಗೊಂಡ ಪೋಷಕರು ನ್ಯಾಯಕ್ಕಾಗಿ ಆಗ್ರಹಿಸಿದ್ದು, ಪ್ರಕರಣದ ಬಗ್ಗೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1
ಧಾರವಾಡ

ಹುಬ್ಬಳ್ಳಿ

ಹುಬ್ಬಳ್ಳಿ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್: ವೈರಲ್ ವಿಡಿಯೋ ಸಂಚಲನ

ಹುಬ್ಬಳ್ಳಿ: ನಗರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಅತ್ಯಾಚಾರ ಆ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಡ್ರಿಂಕ್ ಅಂಡ್ ಡ್ರೈವ್ ನಂತರ ದಾರುಣ ಅಂತ್ಯ: ಲಾರಿಯಲ್ಲೇ ಚಾಲಕ ನೇಣಿಗೆ ಶರಣು!

ಬೆಂಗಳೂರು: ನಗರದ ಜೆ.ಪಿ.ನಗರದಲ್ಲಿ ಲಾರಿ ಚಾಲಕ ಷಣ್ಮುಗ ಆತ್ಮಹತ್ಯ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಹಾಸನ

ಅರಸೀಕೆರೆಯಲ್ಲಿ ದಂಪತಿ ಮೇಲೆ ಹಲ್ಲೆ: ಸುಮೋಟೋ ಪ್ರಕರಣ ದಾಖಲು

ಹಾಸನ: ದಂಪತಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಧಾರವಾಡ

ಹುಬ್ಬಳ್ಳಿ

ಪ್ರೀತಿ ಹೆಸರಿನಲ್ಲಿ ದೌರ್ಜನ್ಯ: ಯುವಕನಿಗೆ 14 ದಿನಗಳ ನ್ಯಾಯಾಂಗ ಬಂಧನ

ಹುಬ್ಬಳ್ಳಿ: ನಗರದಲ್ಲಿ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ತುಮಕೂರು

ತುಮಕೂರು NH-48 ದುರಂತ: KSRTC–ಖಾಸಗಿ ಬಸ್ ಡಿಕ್ಕಿ, 2 ಸಾವು

ತುಮಕೂರು: ಜಿಲ್ಲೆಯ ಶಿರಾ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಬೆಂಗಳೂರು ನಗರ

ಬೆಂಗಳೂರಿನಲ್ಲಿ ಬೈಕ್ ಸ್ಟಂಟ್ ಹಾವಳಿ: 3 ವರ್ಷದಲ್ಲಿ 27 ಸಾವು

ಬೆಂಗಳೂರು: ರಾಜ್ಯದಾದ್ಯಂತ ಯುವಕರ ಬೈಕ್ ಸ್ಟಂಟ್‌ಗಳು ಮತ್ತು ಅಪಾಯ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1
ಧಾರವಾಡ

ಹುಬ್ಬಳ್ಳಿ

ಹುಬ್ಬಳ್ಳಿ ಜೈಲಿನಲ್ಲಿ ಮೊಬೈಲ್ ಪತ್ತೆ: ಭದ್ರತೆ ಮೇಲೆ ಗಂಭೀರ ಪ್ರಶ್ನೆ

ಹುಬ್ಬಳ್ಳಿ: ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯಗಳ ಆ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1
ಬೆಂಗಳೂರು ನಗರ

ಅಕ್ರಮ ವಲಸಿಗರ ಜಾಲ ಭೇದಿಸಿದ ಸಿಸಿಬಿ: ಇಬ್ಬರು ಬ್ರೋಕರ್ ಬಂಧನ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ... ಓದನ್ನು ಮುಂದುವರಿಸಿ


Edited by: ಬಾನು

19 hours ago

   
Image 1
ಧಾರವಾಡ

ಹುಬ್ಬಳ್ಳಿ

ಜಿಮ್ ವಿವಾದಕ್ಕೆ ಗಲಾಟೆ: ಹಳೆ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಜಿಮ್‌ಗೆ ಸಂಬಂಧಿಸಿದ ವಿವಾದ ಒಂದು... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಬೆಂಗಳೂರು ಪೊಲೀಸರ ತ್ವರಿತ ಕಾರ್ಯಾಚರಣೆ – ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ, ಬಾಲಕ ರಕ್ಷಣೆ!

ಬೆಂಗಳೂರು: ನಗರದಲ್ಲಿ ಎರಡು ವಿಭಿನ್ನ ಘಟನೆಗಳಲ್ಲಿ ಪೊಲೀಸರ ತ್ವರಿ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1