ಜಾತಿ ಹೆಸರಿನಲ್ಲಿ ಸಮಾಜ ಒಡೆಯುವವರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಮೈಸೂರು : ದೇವರೆಂಬ ನಂಬಿಕೆಯು ಜಾತಿ–ಧರ್ಮಗಳನ್ನು ಮೀರಿದಂಥದ್ದು. ಜಾತಿ–ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
H. D. Kote ತಾಲೂಕಿನ ಶಿರಮಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ಅಮ್ಮನವರ ನೂತನ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವರು ಎಲ್ಲೆಡೆಯೂ ಹಾಗೂ ಎಲ್ಲರಲ್ಲಿಯೂ ಇದ್ದಾನೆ ಎಂದು ಬಸವಾದಿ ಶರಣರು ಹೇಳಿರುವುದನ್ನು ಉಲ್ಲೇಖಿಸಿದರು.
ಶಿರಮಹಳ್ಳಿಯ ಜನರು ದೈವಭಕ್ತರಾಗಿದ್ದು, ದೇವಾಲಯದಲ್ಲಿ ಸ್ಥಾಪಿಸಿರುವ ಪ್ರತಿಮೆಯಲ್ಲಿ ದೇವರನ್ನು ಕಾಣುವುದು ನಮ್ಮ ನಂಬಿಕೆ. ನಮ್ಮ ಪ್ರಾರ್ಥನೆಯಲ್ಲಿ ನಮ್ಮ ಒಳಿತಿನ ಜೊತೆಗೆ ಇತರರ ಒಳಿತನ್ನೂ ಕೇಳಬೇಕು ಎಂದು ಹೇಳಿದರು. ಯಾವ ಧರ್ಮವೂ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆಂದೇ ಬೋಧಿಸುತ್ತದೆ ಎಂದು ತಿಳಿಸಿದರು.
ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಾತಿವ್ಯವಸ್ಥೆ ಮತ್ತು ಅಸಮಾನತೆಗಳನ್ನು ಬೆಂಬಲಿಸುತ್ತಿದ್ದು, ಜಾತಿ–ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕುಶಕ್ತಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಎಚ್ಚರಿಸಿದರು.
ಶಿರಮಹಳ್ಳಿಯಲ್ಲಿ ಲಕ್ಷ್ಮೀ ದೇವಿ ದೇವಾಲಯದ ಉದ್ಘಾಟನೆಯನ್ನು ಜಾತ್ರೆಯ ರೀತಿಯಲ್ಲಿ ಆಯೋಜಿಸಿರುವುದು ಸಂತಸದ ವಿಚಾರ. ಜಾತಿ–ಧರ್ಮಗಳ ಬೇಧ ಮರೆತು ಜನರು ಒಗ್ಗಟ್ಟಾಗುವ ಅಗತ್ಯ ಹಿಂದಿನಿಗಿಂತ ಹೆಚ್ಚಾಗಿದೆ ಎಂದು ಹೇಳಿದರು.
ರಾಜ್ಯದ ಜನರ ಆಶೀರ್ವಾದದಿಂದ ಕರ್ನಾಟಕದ ಇತಿಹಾಸದಲ್ಲೇ ಹೆಚ್ಚು ಆಯವ್ಯಯವನ್ನು ಮಂಡಿಸುವ ಅವಕಾಶ ದೊರೆತಿದೆ. ಶಿರಮಹಳ್ಳಿ ಗ್ರಾಮ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಶ್ರೀ ಲಕ್ಷ್ಮೀ ದೇವಿ ಅಮ್ಮನವರು ರಾಜ್ಯದ ಜನರಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಹೇಳಿದರು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬೀದರ ರಸ್ತೆಗಳು ಬೆಂಗಳೂರು ಟ್ರಾಫಿಕ್ ನೆನಪಿಸುವ ಹೈರಾಣಿ
ಬೀದರ: ಬೀದರ ನಗರದ ರಸ್ತೆಗಳಿಗೆ ಇಂದು ಅಕ್ಷರಶಃ “ಬೆಂಗಳೂರಿನ ಟ್ರಾ... ಓದನ್ನು ಮುಂದುವರಿಸಿ
ಮಂಗಳೂರು
ಕಚ್ಚಾ ತೈಲ ಕೊರತೆ ಸುದ್ದಿ ಸುಳ್ಳು: ಸೋಶಿಯಲ್ ಮೀಡಿಯಾ ಸುದ್ದಿ ತಪ್ಪು MRPL ಸ್ಪಷ್ಟನೆ
ಮಂಗಳೂರು: ಕಚ್ಚಾ ತೈಲದ ಕೊರತೆಯಿಂದ ರಿಫೈನರಿಯ ಕೆಲವು ಘಟಕಗಳನ್ನು... ಓದನ್ನು ಮುಂದುವರಿಸಿ
ಗದಗದಲ್ಲಿ ಲೋಕಾಯುಕ್ತ ಶಾಕ್: ಅಧಿಕಾರಿಯ ಮನೆಯಲ್ಲಿ ಹಾಸ್ಟೆಲ್ ಸಾಮಗ್ರಿ ಪತ್ತೆ
ಗದಗ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅ... ಓದನ್ನು ಮುಂದುವರಿಸಿ
ಹಾಲು ಉತ್ಪಾದಕರಿಗೆ ಹೆಚ್ಚುವರಿ ದರ: ಚಿಮುಲ್‌ನಿಂದ ಲೀಟರ್‌ಗೆ ₹1.50 ಹೆಚ್ಚಳ
ಚಿಕ್ಕಬಳ್ಳಾಪುರ: ಜಿಲ್ಲೆಯ ಹಾಲು ಉತ್ಪಾದಕರಿಗೆ ಮತ್ತೊಂದು ಸಂತಸದ... ಓದನ್ನು ಮುಂದುವರಿಸಿ
ಬಜೆಟ್ ಬಳಿಕ ಡಿಕೆ ಶಿವಕುಮಾರ್ ದೆಹಲಿಗೆ: ರಾಜಕೀಯ ವಲಯದಲ್ಲಿ ಕುತೂಹಲ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ಬೆನ್ನಲ್ಲೇ ಉಪ ಮುಖ್ಯಮಂತ್ರಿ... ಓದನ್ನು ಮುಂದುವರಿಸಿ
ಮತ್ತೆ ಕೇಳಿಬಂದ ದಲಿತ ಸಿಎಂ ಕೂಗು: ಕೆ.ಹೆಚ್. ಮುನಿಯಪ್ಪ CM ಆಗಲಿ ಸ್ವಾಮೀಜಿಯ ಮನವಿ
ದೇವನಹಳ್ಳಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕು... ಓದನ್ನು ಮುಂದುವರಿಸಿ
ಕರ್ನಾಟಕ: ವಿಶ್ವದ ಅತ್ಯಂತ ಸುರಕ್ಷಿತ ಡಿಜಿಟಲ್ ರಾಜ್ಯ ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ರಾಜ್ಯವು ವಿಶ್ವ ಮಟ್ಟದ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ರಾಜ್ಯಗಳ... ಓದನ್ನು ಮುಂದುವರಿಸಿ
“ಎಲ್ಲರ ತಲೆ ಮೇಲೆ ಸಾಲ ಖಚಿತ”: ನಾರಾಯಣಸ್ವಾಮಿ ಬಜೆಟ್ ವಿಮರ್ಶೆ
ಬೆಂಗಳೂರು: ನಿನ್ನೆ ಮಂಡಿಸಲಾದ 2026-27ರ ರಾಜ್ಯ ಬಜೆಟ್ ಬಗ್ಗೆ ವಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ನಿಲ್ಲದ ಕೇರಳ ವಿದ್ಯಾರ್ಥಿಗಳ ಉಪಟಳ: ಕಾಲೇಜಿನಲ್ಲಿ ಕಿತ್ತಾಟ, ಮನೆಗಳ ಬಳಿ ಗ್ಯಾಂಗ್ ರಂಪಾಟ
ದೇವನಹಳ್ಳಿ: ದೇವನಹಳ್ಳಿ ಪಟ್ಟಣದ ಖಾಸಗಿ ಬಡಾವ... ಓದನ್ನು ಮುಂದುವರಿಸಿ
ಪಂಚ ಗ್ಯಾರಂಟಿ ಯೋಜನೆಗಳಿಗೆ ಮತ್ತೆ ದೊಡ್ಡ ಮೊತ್ತ: ₹51,286 ಕೋಟಿ ಹಂಚಿಕೆ
ಬೆಂಗಳೂರು: ಮುಖ್ಯಮಂತ್ರಿ Siddaramaiah ಮಂಡಿಸಿದ 2026–27 ಸಾಲಿ... ಓದನ್ನು ಮುಂದುವರಿಸಿ