ಗದಗದಲ್ಲಿ ಲೋಕಾಯುಕ್ತ ಶಾಕ್: ಅಧಿಕಾರಿಯ ಮನೆಯಲ್ಲಿ ಹಾಸ್ಟೆಲ್ ಸಾಮಗ್ರಿ ಪತ್ತೆ
ಗದಗ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಅಧಿಕಾರಿಯೊಬ್ಬರ ಮನೆಯಲ್ಲಿ ಅಚ್ಚರಿ ಮೂಡಿಸುವ ವಸ್ತುಗಳು ಪತ್ತೆಯಾಗಿವೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಶಿರಹಟ್ಟಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಕೆ. ಸುರಕೋಡ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿಯ ವೇಳೆ ಅಧಿಕಾರಿಯ ಮನೆಯಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಇಲಾಖೆಯಿಂದ ಸರಬರಾಜು ಮಾಡಲಾಗಿದ್ದ ಹಾಸಿಗೆ ಹಾಗೂ ಬೆಡ್‌ಶೀಟ್‌ಗಳು ಪತ್ತೆಯಾಗಿವೆ. ಜೊತೆಗೆ ಹಾಸ್ಟೆಲ್‌ನಲ್ಲಿ ಅಡುಗೆ ಮಾಡಲು ಬಳಸುವ ದೊಡ್ಡ ದೊಡ್ಡ ಪಾತ್ರೆಗಳು ಹಾಗೂ ನೋಟ್‌ಪುಸ್ತಕಗಳು ಕೂಡ ಸಿಕ್ಕಿದ್ದು ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತನಿಖೆಯಲ್ಲಿ ಸುರಕೋಡ ಅವರು ತಮ್ಮ ಆದಾಯಕ್ಕಿಂತ ಶೇ.227 ಹೆಚ್ಚು ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ದಾಳಿಯಲ್ಲಿ ₹13 ಲಕ್ಷ ಮೌಲ್ಯದ ಆರು ನಿವೇಶನಗಳು, ₹45 ಲಕ್ಷ ಮೌಲ್ಯದ ಮನೆ ಹಾಗೂ ₹80.77 ಲಕ್ಷ ಮೌಲ್ಯದ 29 ಎಕರೆ ಜಮೀನು ಸೇರಿದಂತೆ ಒಟ್ಟು ₹1.38 ಕೋಟಿ ಮೌಲ್ಯದ ಸ್ಥಿರಾಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.
ಇದಕ್ಕೂ ಜೊತೆಗೆ ₹89 ಸಾವಿರ ನಗದು, ₹23.21 ಲಕ್ಷ ಮೌಲ್ಯದ 152 ಗ್ರಾಂ ಚಿನ್ನಾಭರಣ, ₹2.05 ಲಕ್ಷ ಮೌಲ್ಯದ ಬೆಳ್ಳಿ ಹಾಗೂ ₹31.40 ಲಕ್ಷ ಮೌಲ್ಯದ ವಾಹನಗಳು ಸೇರಿ ಒಟ್ಟು ಸುಮಾರು ₹1.82 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬೀದರ ರಸ್ತೆಗಳು ಬೆಂಗಳೂರು ಟ್ರಾಫಿಕ್ ನೆನಪಿಸುವ ಹೈರಾಣಿ
ಬೀದರ: ಬೀದರ ನಗರದ ರಸ್ತೆಗಳಿಗೆ ಇಂದು ಅಕ್ಷರಶಃ “ಬೆಂಗಳೂರಿನ ಟ್ರಾ... ಓದನ್ನು ಮುಂದುವರಿಸಿ
ಜಾತಿ ಹೆಸರಿನಲ್ಲಿ ಸಮಾಜ ಒಡೆಯುವವರಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಮೈಸೂರು : ದೇವರೆಂಬ ನಂಬಿಕೆಯು ಜಾತಿ–ಧರ್ಮಗಳನ್ನು ಮೀರಿದಂಥದ್ದು.... ಓದನ್ನು ಮುಂದುವರಿಸಿ
ಮಂಗಳೂರು
ಕಚ್ಚಾ ತೈಲ ಕೊರತೆ ಸುದ್ದಿ ಸುಳ್ಳು: ಸೋಶಿಯಲ್ ಮೀಡಿಯಾ ಸುದ್ದಿ ತಪ್ಪು MRPL ಸ್ಪಷ್ಟನೆ
ಮಂಗಳೂರು: ಕಚ್ಚಾ ತೈಲದ ಕೊರತೆಯಿಂದ ರಿಫೈನರಿಯ ಕೆಲವು ಘಟಕಗಳನ್ನು... ಓದನ್ನು ಮುಂದುವರಿಸಿ
ಹಾಲು ಉತ್ಪಾದಕರಿಗೆ ಹೆಚ್ಚುವರಿ ದರ: ಚಿಮುಲ್‌ನಿಂದ ಲೀಟರ್‌ಗೆ ₹1.50 ಹೆಚ್ಚಳ
ಚಿಕ್ಕಬಳ್ಳಾಪುರ: ಜಿಲ್ಲೆಯ ಹಾಲು ಉತ್ಪಾದಕರಿಗೆ ಮತ್ತೊಂದು ಸಂತಸದ... ಓದನ್ನು ಮುಂದುವರಿಸಿ
ಬಜೆಟ್ ಬಳಿಕ ಡಿಕೆ ಶಿವಕುಮಾರ್ ದೆಹಲಿಗೆ: ರಾಜಕೀಯ ವಲಯದಲ್ಲಿ ಕುತೂಹಲ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ಬೆನ್ನಲ್ಲೇ ಉಪ ಮುಖ್ಯಮಂತ್ರಿ... ಓದನ್ನು ಮುಂದುವರಿಸಿ
ಮತ್ತೆ ಕೇಳಿಬಂದ ದಲಿತ ಸಿಎಂ ಕೂಗು: ಕೆ.ಹೆಚ್. ಮುನಿಯಪ್ಪ CM ಆಗಲಿ ಸ್ವಾಮೀಜಿಯ ಮನವಿ
ದೇವನಹಳ್ಳಿ: ರಾಜ್ಯ ರಾಜಕಾರಣದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕು... ಓದನ್ನು ಮುಂದುವರಿಸಿ
ಕರ್ನಾಟಕ: ವಿಶ್ವದ ಅತ್ಯಂತ ಸುರಕ್ಷಿತ ಡಿಜಿಟಲ್ ರಾಜ್ಯ ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ರಾಜ್ಯವು ವಿಶ್ವ ಮಟ್ಟದ ಸುರಕ್ಷಿತ ಡಿಜಿಟಲ್ ವ್ಯವಸ್ಥೆ ಹೊಂದಿರುವ ರಾಜ್ಯಗಳ... ಓದನ್ನು ಮುಂದುವರಿಸಿ
“ಎಲ್ಲರ ತಲೆ ಮೇಲೆ ಸಾಲ ಖಚಿತ”: ನಾರಾಯಣಸ್ವಾಮಿ ಬಜೆಟ್ ವಿಮರ್ಶೆ
ಬೆಂಗಳೂರು: ನಿನ್ನೆ ಮಂಡಿಸಲಾದ 2026-27ರ ರಾಜ್ಯ ಬಜೆಟ್ ಬಗ್ಗೆ ವಿ... ಓದನ್ನು ಮುಂದುವರಿಸಿ
ದೇವನಹಳ್ಳಿ
ನಿಲ್ಲದ ಕೇರಳ ವಿದ್ಯಾರ್ಥಿಗಳ ಉಪಟಳ: ಕಾಲೇಜಿನಲ್ಲಿ ಕಿತ್ತಾಟ, ಮನೆಗಳ ಬಳಿ ಗ್ಯಾಂಗ್ ರಂಪಾಟ
ದೇವನಹಳ್ಳಿ: ದೇವನಹಳ್ಳಿ ಪಟ್ಟಣದ ಖಾಸಗಿ ಬಡಾವ... ಓದನ್ನು ಮುಂದುವರಿಸಿ
ಪಂಚ ಗ್ಯಾರಂಟಿ ಯೋಜನೆಗಳಿಗೆ ಮತ್ತೆ ದೊಡ್ಡ ಮೊತ್ತ: ₹51,286 ಕೋಟಿ ಹಂಚಿಕೆ
ಬೆಂಗಳೂರು: ಮುಖ್ಯಮಂತ್ರಿ Siddaramaiah ಮಂಡಿಸಿದ 2026–27 ಸಾಲಿ... ಓದನ್ನು ಮುಂದುವರಿಸಿ