ಇರಾನ್ ಡೆಡ್ಲೈನ್ ಮುನ್ನ ಭಾರತ ರಾಯಭಾರಿಗೆ ಟ್ರಂಪ್ ಆಹ್ವಾನ – ಕುತೂಹಲ ತಾರಕಕ್ಕೆ

ವಾಷಿಂಗ್ಟನ್: ಇರಾನ್‌ಗೆ ನೀಡಿದ ಕದನವಿರಾಮ ಗಡುವು ಮುಗಿಯಲು ಕೆಲವೇ ಗಂಟೆಗಳು ಬಾಕಿಯಿರುವ ಸಂದರ್ಭದಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ರಾಯಭಾರಿಯನ್ನು ಶ್ವೇತಭವನಕ್ಕೆ ಆಹ್ವಾನಿಸಿರುವುದು ರಾಜತಾಂತ್ರಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಹಾರ್ಮುಜ್ ಜಲಸಂಧಿ ಮುಕ್ತಗೊಳಿಸುವುದು ಅಥವಾ ಒಪ್ಪಂದಕ್ಕೆ ಸಹಿ ಹಾಕುವಂತೆ ಅಮೆರಿಕ ಇರಾನ್‌ಗೆ ಕಠಿಣ ಗಡುವು ವಿಧಿಸಿದೆ. ಅಮೆರಿಕ ಕಾಲಮಾನ ಪ್ರಕಾರ ಮಂಗಳವಾರ ರಾತ್ರಿ 8 ಗಂಟೆ, ಭಾರತೀಯ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 6:30ರವರೆಗೆ ಡೆಡ್ಲೈನ್ ನಿಗದಿಯಾಗಿದೆ. ಈ ಅವಧಿಯೊಳಗೆ ಒಪ್ಪಂದ ಸಾಧ್ಯವಾಗದಿದ್ದರೆ, ಇರಾನ್‌ನ ಪ್ರಮುಖ ವಿದ್ಯುತ್ ಸ್ಥಾವರಗಳು ಹಾಗೂ ಸೇತುವೆಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆಯನ್ನು ಅಮೆರಿಕ ನೀಡಿದೆ ಎನ್ನಲಾಗಿದೆ.

 

ಇದೇ ವೇಳೆ, ಗಡುವು ಮುಗಿಯುವ ಕೆಲವೇ ಗಂಟೆಗಳ ಮುನ್ನ, ಅಮೆರಿಕದಲ್ಲಿನ ಭಾರತ ರಾಯಭಾರಿ ಸರ್ಜಿೋ ಗೊರ್ ಅವರನ್ನು ಶ್ವೇತಭವನದಲ್ಲಿ ನಡೆಯುವ ವಿಶೇಷ ಭೋಜನಕೂಟಕ್ಕೆ ಟ್ರಂಪ್ ಆಹ್ವಾನಿಸಿರುವುದು ಗಮನ ಸೆಳೆದಿದೆ. ಡೆಡ್ಲೈನ್ ಸಮಯದ ಸನ್ನಿಹಿತದಲ್ಲೇ ಈ ಭೇಟಿ ನಡೆಯುತ್ತಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

 

ಈ ಬೆಳವಣಿಗೆಯ ಬೆನ್ನಲ್ಲೇ, ಇರಾನ್-ಅಮೆರಿಕ ಸಂಘರ್ಷದಲ್ಲಿ ಭಾರತ ಮಧ್ಯಸ್ಥಿಕೆ ವಹಿಸುವ ಸಾಧ್ಯತೆ ಕುರಿತು ಚರ್ಚೆಗಳು ಜೋರಾಗಿವೆ. ಈ ಹಿಂದೆ ಇರಾನ್ ರಾಯಭಾರಿಯೂ ಭಾರತವು ಸಂಘರ್ಷ ಶಮನದಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಇದಾಗ್ಯೂ, ಅಮೆರಿಕದ 45 ದಿನಗಳ ಕದನವಿರಾಮ ಪ್ರಸ್ತಾವನೆಯನ್ನು ಇರಾನ್ ತಿರಸ್ಕರಿಸಿದೆ ಎಂಬ ವರದಿಗಳು ಬಂದಿರುವುದರಿಂದ, ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಜಗತ್ತಿನ ಗಮನ ಕೇಂದ್ರೀಕೃತವಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 hours ago

   
Image 1
Image 1

ಇರಾನ್‌ನಲ್ಲಿ ಆತಂಕಕಾರಿ ಬೆಳವಣಿಗೆ – ಮೊಜ್ತಬಾ ಖಮೇನಿ ಪ್ರಜ್ಞಾಹೀನ?

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡು... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಇರಾನ್‌ಗೆ ಟ್ರಂಪ್ ಅಂತಿಮ ಎಚ್ಚರಿಕೆ – ಕದನವಿರಾಮಕ್ಕೆ ಡೆಡ್‌ಲೈನ್

ವಾಷಿಂಗ್ಟನ್: ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಬಂಧನ

ಢಾಕಾ: ಬಾಂಗ್ಲಾದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯಲ್... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1

ಫೇಶಿಯಲ್ ಮಾಡಿಸಿಕೊಂಡ ಮಹಿಳೆಯರಿಗೆ HIV ಸೋಂಕು!

ಅಮೆರಿಕಾದಲ್ಲಿ ಯೌವನವನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತಿರುವ “ವ್ಯಾಂಪೈರ್ ಫೇಶಿಯಲ್”... ಓದನ್ನು ಮುಂದುವರಿಸಿ


Edited by: ಬಾನು

18 hours ago

   
Image 1

ಪೈಲಟ್ ರಕ್ಷಣೆ ವೇಳೆ 5 ಸಾವು: ಟೆಹ್ರಾನ್‌ನಲ್ಲಿ ತೀವ್ರತೆ

ಟೆಹ್ರಾನ್: ಅಮೆರಿಕದ F-15E Strike Eagle ಯುದ್ಧ ವಿಮಾನ ಪತನಗೊಂ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಅಮೆರಿಕದ F-15E ಯುದ್ಧ ವಿಮಾನ ಪತನ: ಇರಾನ್ ತಂತ್ರಜ್ಞಾನ ಶಾಕ್

ವಾಷಿಂಗ್ಟನ್: ಅಮೆರಿಕದ ಅತ್ಯಾಧುನಿಕ F-15E Strike Eagle ಯುದ್ಧ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಅಮೆರಿಕದ ಮತ್ತೊಂದು F-35 ವಿಮಾನ ಪತನ? ಇರಾನ್ ದಾವೆ

ಟೆಹ್ರಾನ್: ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಯುದ್ಧದ ಬಿಸಿ: ಪಾಕಿಸ್ತಾನದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಅಮೆರಿಕ ಸೇನೆಯಲ್ಲಿ ದೊಡ್ಡ ಬೆಳವಣಿಗೆ: ಮುಖ್ಯಸ್ಥರಿಗೆ ರಾಜೀನಾಮೆ ಸೂಚನೆ

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಅಮೆರಿಕ ಸೇನೆಯಲ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1

ಫಾರ್ಮಾ ಕ್ಷೇತ್ರಕ್ಕೆ ಶಾಕ್ : ಅಮೆರಿಕದ ದೊಡ್ಡ ಕ್ರಮ- ಔಷಧ ಆಮದು ಮೇಲೆ 100% ಸುಂಕ

ವಾಷಿಂಗ್ಟನ್: ಇರಾನ್‌ ಯುದ್ಧದ ನಡುವೆಯೇ ಅಮೆರಿಕ ಮತ್ತೊಂದು ದೊಡ್ಡ... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1