ಹಳೆಯ ವಾಹನಗಳಿಗೆ HSRP ಕಡ್ಡಾಯ: ರಾಜ್ಯ ಸಾರಿಗೆ ಇಲಾಖೆಯ ಸ್ಪಷ್ಟನೆ
ಬೆಂಗಳೂರು: 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ (HSRP) ಅಳವಡಿಕೆ ಕಡ್ಡಾಯವಾಗಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಹಳೆಯ ವಾಹನಗಳಿಗೆ HSRP ಅಗತ್ಯವಿಲ್ಲ” ಎಂಬ ಸುಳ್ಳು ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಇಲಾಖೆ ಅಧಿಕೃತ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ.
ಸಾರಿಗೆ ಇಲಾಖೆಯ ಪ್ರಕಾರ, 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಾಯಿತ ಎಲ್ಲಾ ವಾಹನಗಳಿಗೆ HSRP ಅಳವಡಿಕೆ ಅನಿವಾರ್ಯವಾಗಿದೆ. ಯಾವುದೇ ವಿನಾಯಿತಿ ನೀಡಲಾಗಿಲ್ಲ. ಆದ್ದರಿಂದ ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳಿಗೆ ತಕ್ಷಣವೇ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಕೇಂದ್ರ ಸರ್ಕಾರವು 1989ರ ಕೇಂದ್ರ ಮೋಟಾರು ವಾಹನ ನಿಯಮಗಳ 50ನೇ ವಿಧಿಯಡಿ ಈ ನಿಯಮವನ್ನು 2018ರಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿಯೂ ಅದೇ ನಿಯಮ ಜಾರಿಯಲ್ಲಿದೆ. ಅಲ್ಲದೇ, 2023ರಲ್ಲಿ ರಾಜ್ಯ ಸಾರಿಗೆ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿಯೂ ಈ ನಿಯಮವನ್ನು ಪುನರುಚ್ಚರಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವೂ ಸರ್ಕಾರದ ಕ್ರಮಕ್ಕೆ ಅವಕಾಶ ನೀಡಿದ್ದು, HSRP ಅಳವಡಿಕೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದೆ. ಒಟ್ಟಿನಲ್ಲಿ, ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದ್ದು, ಯಾವುದೇ ಬದಲಾವಣೆ ಇಲ್ಲ. ಗಾಳಿ ಸುದ್ದಿಗಳಿಗೆ ಕಿವಿಗೊಡದೇ, ನಿಯಮ ಪಾಲಿಸುವಂತೆ ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬೈಕ್ ಮಾರಿದರೂ ಜವಾಬ್ದಾರಿ ನಿಮ್ಮದೇ! ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ವಾಹನವನ್ನು ಮಾರಾಟ ಮಾಡಿದ ಬಳಿಕವೂ ನೋಂದಣಿ ಪ್ರಮಾಣಪತ್... ಓದನ್ನು ಮುಂದುವರಿಸಿ
ಒಂದೇ ದಿನದಲ್ಲಿ ಚಿನ್ನ ಬೆಲೆ ಏರಿಕೆ – ಖರೀದಿದಾರರಿಗೆ ತಲೆನೋವು
ಬೆಂಗಳೂರು: ಸತತ ಮೂರು ವಾರಗಳ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ... ಓದನ್ನು ಮುಂದುವರಿಸಿ
ಚಿನ್ನದ ದರ ಇಳಿಕೆ – ಗ್ರಾಹಕರಿಗೆ ಸ್ವಲ್ಪ ನಿರಾಳತೆ!
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ
ಎಲ್‌ಪಿಜಿ ಬಿಕ್ಕಟ್ಟಿಗೆ ಪರಿಹಾರ – ಕೇಂದ್ರದಿಂದ ಮಿನಿ ಗ್ಯಾಸ್ ಸಿಲಿಂಡರ್ ಯೋಜನೆ!
ನವದೆಹಲಿ: ಎಲ್‌ಪಿಜಿ ಬಿಕ್ಕಟ್ಟಿನ ನಡುವೆಯೇ ಸಾರ್ವಜನಿಕರಿಗೆ ನೆರವ... ಓದನ್ನು ಮುಂದುವರಿಸಿ
ಟೋಲ್ ಪಾವತಿಯಲ್ಲಿ ದೊಡ್ಡ ಬದಲಾವಣೆ – ಏಪ್ರಿಲ್ 10ರಿಂದ ನಗದು ಸಂಪೂರ್ಣ ಬ್ಯಾನ್!
ನವದೆಹಲಿ: ದೇಶದ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಮಹತ್ವದ... ಓದನ್ನು ಮುಂದುವರಿಸಿ
ಗೋಲ್ಡ್-ಸಿಲ್ವರ್ ರೇಟ್ ಶಾಂತ: ಇಂದಿನ ದರಗಳ ವಿವರ
ಭಾರತ: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನ ಮತ್ತು ಬೆಳ್... ಓದನ್ನು ಮುಂದುವರಿಸಿ
ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ – ಇಂದು ₹200ರವರೆಗೆ ಜಿಗಿತ!
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ನಿನ್ನ... ಓದನ್ನು ಮುಂದುವರಿಸಿ
ಐಪಿಎಲ್ ಪಂದ್ಯಕ್ಕೆ ಮೆಟ್ರೋ ಸೌಲಭ್ಯ ವಿಸ್ತರಣೆ: ಮಧ್ಯರಾತ್ರಿ 2ರವರೆಗೆ ಸೇವೆ!
ಬೆಂಗಳೂರು: ಐಪಿಎಲ್–2026 ಪಂದ್ಯಗಳ ಹಿನ್ನೆಲೆ, ಬಿಎಂಆರ್‌ಸಿಎಲ್ ನ... ಓದನ್ನು ಮುಂದುವರಿಸಿ
ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಮತ್ತೊಂದು ಹೊಡೆತ
ದೆಹಲಿ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ
ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!
ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ