ಐಪಿಎಲ್ ಪಂದ್ಯಕ್ಕೆ ಮೆಟ್ರೋ ಸೌಲಭ್ಯ ವಿಸ್ತರಣೆ: ಮಧ್ಯರಾತ್ರಿ 2ರವರೆಗೆ ಸೇವೆ!

ಬೆಂಗಳೂರು: ಐಪಿಎಲ್–2026 ಪಂದ್ಯಗಳ ಹಿನ್ನೆಲೆ, ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಏಪ್ರಿಲ್ 5ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಮಹತ್ವದ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

 

ಪಂದ್ಯ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿರುವುದರಿಂದ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಬಿಎಂಆರ್‌ಸಿಎಲ್ ಮಾಹಿತಿ ಪ್ರಕಾರ, ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಬೊಮ್ಮಸಂದ್ರ ನಿಲ್ದಾಣಗಳಿಂದ ಕೊನೆಯ ರೈಲುಗಳು ರಾತ್ರಿ 12:30ಕ್ಕೆ ಹೊರಡಲಿವೆ. ಚೆಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ ನಿಲ್ದಾಣಗಳಿಂದ ರಾತ್ರಿ 12:45ಕ್ಕೆ ಸೇವೆ ಲಭ್ಯವಿರಲಿದೆ.

 

ಆರ್.ವಿ. ರಸ್ತೆ ನಿಲ್ದಾಣದಿಂದ ರಾತ್ರಿ 2:00ಕ್ಕೆ ಕೊನೆಯ ರೈಲು ಹೊರಡಲಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್)ದಿಂದ ನಾಲ್ಕು ದಿಕ್ಕುಗಳಿಗೆ ರಾತ್ರಿ 1:30ಕ್ಕೆ ಕೊನೆಯ ರೈಲುಗಳು ಸಂಚರಿಸಲಿವೆ. ಪ್ರೇಕ್ಷಕರ ಅನುಕೂಲಕ್ಕಾಗಿ ಡಿಜಿಟಲ್ ಐಪಿಎಲ್ ಟಿಕೆಟ್‌ಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಬ್ಬನ್ ರಸ್ತೆ ಭಾಗದಿಂದ ಪ್ರವೇಶಿಸುವವರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು, ಲಿಂಕ್ ರಸ್ತೆ ಭಾಗದಿಂದ ಬರುವವರು ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.

 

ಇದಲ್ಲದೆ, ಹಲವು ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಎರಡು ಚಕ್ರ ವಾಹನಗಳಿಗೆ ₹30 ಮತ್ತು ಕಾರುಗಳಿಗೆ ₹60 ಶುಲ್ಕ ನಿಗದಿ ಮಾಡಲಾಗಿದೆ. ಒಟ್ಟಾರೆ, ಐಪಿಎಲ್ ಪಂದ್ಯ ಹಿನ್ನೆಲೆ ನಗರ ಸಂಚಾರ ಸುಗಮಗೊಳಿಸಲು ಮೆಟ್ರೋ ಇಲಾಖೆ ವಿಶೇಷ ವ್ಯವಸ್ಥೆಗಳನ್ನು ಮಾಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 months ago

   
Image 1
Image 1
ಬೆಂಗಳೂರು ನಗರ

ಬೈಕ್ ಮಾರಿದರೂ ಜವಾಬ್ದಾರಿ ನಿಮ್ಮದೇ! ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ವಾಹನವನ್ನು ಮಾರಾಟ ಮಾಡಿದ ಬಳಿಕವೂ ನೋಂದಣಿ ಪ್ರಮಾಣಪತ್... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಒಂದೇ ದಿನದಲ್ಲಿ ಚಿನ್ನ ಬೆಲೆ ಏರಿಕೆ – ಖರೀದಿದಾರರಿಗೆ ತಲೆನೋವು

ಬೆಂಗಳೂರು: ಸತತ ಮೂರು ವಾರಗಳ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಚಿನ್ನದ ದರ ಇಳಿಕೆ – ಗ್ರಾಹಕರಿಗೆ ಸ್ವಲ್ಪ ನಿರಾಳತೆ!

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆಯೂ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಎಲ್‌ಪಿಜಿ ಬಿಕ್ಕಟ್ಟಿಗೆ ಪರಿಹಾರ – ಕೇಂದ್ರದಿಂದ ಮಿನಿ ಗ್ಯಾಸ್ ಸಿಲಿಂಡರ್ ಯೋಜನೆ!

ನವದೆಹಲಿ: ಎಲ್‌ಪಿಜಿ ಬಿಕ್ಕಟ್ಟಿನ ನಡುವೆಯೇ ಸಾರ್ವಜನಿಕರಿಗೆ ನೆರವ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಟೋಲ್ ಪಾವತಿಯಲ್ಲಿ ದೊಡ್ಡ ಬದಲಾವಣೆ – ಏಪ್ರಿಲ್ 10ರಿಂದ ನಗದು ಸಂಪೂರ್ಣ ಬ್ಯಾನ್!

ನವದೆಹಲಿ: ದೇಶದ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಮಹತ್ವದ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಗೋಲ್ಡ್-ಸಿಲ್ವರ್ ರೇಟ್ ಶಾಂತ: ಇಂದಿನ ದರಗಳ ವಿವರ

ಭಾರತ: ಕಳೆದ ಕೆಲ ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನ ಮತ್ತು ಬೆಳ್... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಹಳೆಯ ವಾಹನಗಳಿಗೆ HSRP ಕಡ್ಡಾಯ: ರಾಜ್ಯ ಸಾರಿಗೆ ಇಲಾಖೆಯ ಸ್ಪಷ್ಟನೆ

ಬೆಂಗಳೂರು: 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಾಯಿತವಾಗಿರುವ ಎಲ್... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ಮತ್ತೆ ಏರಿಕೆಯ ಹಾದಿಯಲ್ಲಿ ಚಿನ್ನದ ಬೆಲೆ – ಇಂದು ₹200ರವರೆಗೆ ಜಿಗಿತ!

ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿಗೆ ಮರಳಿದೆ. ನಿನ್ನ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಮತ್ತೆ ಗ್ಯಾಸ್ ದರ ಏರಿಕೆ : ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಮತ್ತೊಂದು ಹೊಡೆತ

ದೆಹಲಿ: ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಕೊರತೆಯ ನಡುವೆ ಬಳಕೆದಾರ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1
ಬೆಂಗಳೂರು ನಗರ

ವಾಹನ ಸವಾರರಿಗೆ ರಿಲೀಫ್ : ಹೊರರಾಜ್ಯದಲ್ಲಿ ಇನ್ಮುಂದೆ ದಂಡ ಇಲ್ಲ!

ಬೆಂಗಳೂರು: ಕರ್ನಾಟಕದ ವಾಹನ ಮಾಲೀಕರಿಗೆ ದೊಡ್ಡ ಸಮಸ್ಯೆಯಾಗಿದ್ದ ಪ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1