ಗರ್ಭಿಣಿ ಮಹಿಳೆಯರಿಗೆ ಗುಡ್‌ ನ್ಯೂಸ್‌ .... ಕೇಂದ್ರ ಸರ್ಕಾರದಿಂದ ಈ ಮಹಿಳೆಯರಿಗೆ ಸಿಗುತ್ತೆ 11,000 ರೂ, ಹಣ..! ಈಗ್ಲೇ ಅಪ್ಲೈ ಮಾಡಿ.

ಬೆಂಗಳೂರು: ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆಗಳೂ ಸೇರಿವೆ. ಈ ಪೈಕಿ ಗರ್ಣಿಯರಿಗಾಗಿಯೇ ವಿಶೇಷ ಯೋಜನೆ ಲಭ್ಯವಿದೆ ಎಂಬುದು ಗಮನಾರ್ಹ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಎಂದು ಕರೆಯಲಾಗುತ್ತದೆ. 

 

ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಈ ಲಾಭವನ್ನು ಪಡೆಯಬಹುದಾಗಿದೆ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ. ಗರ್ಭಿಣಿ ಆದಾಗ ಮತ್ತು ಜನ್ಮ ನೀಡಿದ ನಂತರ ಬೇರೆ ಬೇರೆ ಕಂತುಗಳಲ್ಲಿ ಒಟ್ಟು 11,000 ಆರ್ಥಿಕ ನೆರವು ನೀಡಲಾಗುತ್ತದೆ. ಮಾತೃತ್ವ ವಂದನಾ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 2017 ರ ಬಜೆಟ್ ನಲ್ಲಿ ಘೋಷಣೆ ಮಾಡಿದರು. ಬೇರೆ ಬೇರೆ ಮೂರು ಕಂತುಗಳಲ್ಲಿ 11 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುವುದು ಜೊತೆಗೆ ಮಹಿಳೆಯರ ಖಾತೆಗೆ ನೇರವಾಗಿ ಈ ಹಣವನ್ನ ವರ್ಗಾವಣೆ ಮಾಡಲಾಗುತ್ತದೆ. 

 

ಮಾತೃತ್ವ ವಂದನಾ ಯೋಜನೆಯ ಅಡಿಯಲ್ಲಿ ಹಣಕಾಸಿನ ನೆರವಿನ ಜೊತೆಗೆ ಗರ್ಭಿಣಿ ಸ್ತ್ರೀಗೆ ಉಚಿತ ಔಷಧಿ ಗರ್ಭಧಾರಣೆಯ ಪೂರ್ವ ಮತ್ತು ನಂತರದ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಕೂಡ ಉಚಿತವಾಗಿ ಒದಗಿಸಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ಹಣವನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುವುದು. ಮಹಿಳೆ ಮೊದಲ ಬಾರಿಗೆ ತಾಯಿಯಾದರೆ 5000 ಹಾಗೂ ಎರಡನೇ ಬಾರಿಗೆ ಹೆಣ್ಣು ಮಗುವಿಗೆ ಜನರ ನೀಡಿದರೆ 6,000 ಗಳನ್ನು ನೀಡಲಾಗುವುದು. ಇನ್ನು 5,000 ಗಳನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲನೆಯದಾಗಿ anc ಮಾಡಿದ ನಂತರ 3000 ಹಾಗೂ ಜನನ ನೋಂದಣಿ ಆಗಿ ಮಗುವಿಗೆ ಮೊದಲ ಲಸಿಕೆ ಕೊಟ್ಟ ನಂತರ 2000 ಕೊಡಲಾಗುವುದು. ಆದರೆ ಎರಡನೇ ಹೆಣ್ಣು ಮಗುವಿಗೆ ಜನನ ನೀಡಿದರೆ ಜನನ ಆದ ಬಳಿಕ 6,000 ಗಳನ್ನು ಒಂದೇ ಬಾರಿಗೆ ಖಾತೆಗೆ ವರ್ಗಾವಣೆ ಮಾಡಲಾಗುವುದು.

 

ಹಾಗಾದರೆ ಯಾರಿಗೆ ಸಿಗುತ್ತೆ ಆರ್ಥಿಕ ನೆರವು?  

ಭಾರತೀಯ ನಾಗರಿಕರಾಗಿರಬೇಕು 

19 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳಿಗೆ ಸಿಗುತ್ತದೆ  

ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಮಾತ್ರ ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆಯಬಹುದು 

ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಸಹಾಯಕಿಯರು ಆಶಾ ಕಾರ್ಯಕರ್ತೆಯರು ಕೂಡ ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುತ್ತಾರೆ. 

 

ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಅಥವಾ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಗರ್ಭಿಣಿ ಆಗಿರುವುದರ ಬಗ್ಗೆ ಮೆಡಿಕಲ್ ಸರ್ಟಿಫಿಕೇಟ್ ಒದಗಿಸಿದರೆ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ಹಣವನ್ನು ಖಾತೆಗೆ ಬರುವಂತೆ ಮಾಡಬಹುದು. ಇನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ https://pmmvy.wcd.gov.in/Account/Loginಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 

 

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಯಾವುದು?

ಆಧಾರ್ ಕಾರ್ಡ್ 

ಜನನ ಪ್ರಮಾಣ ಪತ್ರ  

ಆದಾಯ ಪ್ರಮಾಣ ಪತ್ರ 

ಪಾನ್ ಕಾರ್ಡ್ 

ಬ್ಯಾಂಕ್ ಖಾತೆಯ ವಿವರ 

ಪಾಸ್ ಪೋರ್ಟ್ ಅಳತೆಯ ಫೋಟೋ

 

ಇವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ 

ಮಾತೃ ವಂದನಾ ಯೋಜನೆ ಕೆಲವು ಜನರಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಗಮನಿಸಬೇಕು. ಈ ಯೋಜನೆಯು ಎರಡನೇ ಪರಿಕಲ್ಪನೆಗೆ ಅನ್ವಯಿಸುವುದಿಲ್ಲ. ಹಾಗಾಗಿ ಹಣ ಬರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗ ಮಾಡುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಅಂದರೆ ಮಹಿಳೆಯರು ಸರ್ಕಾರಿ ಕೆಲಸ ಮಾಡುತ್ತಿದ್ದರೆ ಯೋಜನೆಗೆ ಸೇರಲು ಸಾಧ್ಯವಾಗುವುದಿಲ್ಲ. 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 months ago

   
Image 1
Image 1

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

ಪ್ರಧಾನಮಂತ್ರಿ ಆವಾಸ್ ಯೋಜನೆ ಎಂದು ಕರೆಯಲ್ಪಡುವ ಉಚಿತ ವಸತಿ ಯೋಜನೆಯಡಿ ನೀವು ಮನ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಮಹಿಳೆಯರಿಗೆ ಖುಷ್.... ಖಾತೆಗೆ ಬಂತು 11 ನೇ ಕಂತಿನ ಗೃಹಲಕ್ಷ್ಮಿ ಹಣ.. ಅಕೌಂಟ್ ಚೆಕ್ ಮಾಡಿದ್ರಾ!?

ಬೆಂಗಳೂರು: ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಖಾತೆಗೆ 11... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ರೈತ ಮಹಿಳೆಯರಿಗೆ ಸಹಾಯಕವಾಗಲಿದೆ ನಮೋ ಡ್ರೋನ್ ದೀದಿ ಯೋಜನೆ !

ಕೇಂದ್ರ ಸರಕಾರ ಮಹಿಳೆಯರಿಗಾಗಿ ಹಲವು ಸರಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಮಹಿಳ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1
ಬೆಂಗಳೂರು ನಗರ

ಮನೆ ಇಲ್ಲದವರಿಗೆ ಗುಡ್ ನ್ಯೂಸ್..! ಬಡವರಿಗೆ ಮನೆ ಭಾಗ್ಯ..! ಇಲ್ಲಿದೆ ಸಂಪೂರ್ಣ ಮಾಹಿತಿ..!

ಬೆಂಗಳೂರು:- ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ. ವಸತಿ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಬಿತ್ತನೆ ಬೀಜ ಖರೀದಿಸಲು ಸರ್ಕಾರದಿಂದ ಸಿಗಲಿದೆ ಸಬ್ಸಿಡಿ !

ಬಿತ್ತನೆ ಬೀಜ ಖರೀದಿಸಲು ರೈತರಿಗೆ ಸರ್ಕಾರವು 50 ಪ್ರತಿಶತ ಸಬ್ಸಿಡಿಯನ್ನು ನೀಡುತ... ಓದನ್ನು ಮುಂದುವರಿಸಿ


Edited by: ಪ್ರವೀಣ್

3 months ago

   
Image 1

ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಕಾಂಗ್ರೆಸ್​​ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1
ಬೆಂಗಳೂರು ನಗರ

ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್..... ಇನ್ನು ಮುಂದೆ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ..!

ಬೆಂಗಳೂರು: ಮಹಿಳೆಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಗ್... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1
ಬೆಂಗಳೂರು ನಗರ

ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್.. ಸರ್ಕಾರದಿಂದ ಬಂತು ಉಚಿತ ಮನೆ.. ಇಂತವರು ಅರ್ಜಿ ಸಲ್ಲಿಸಿ..!

ಬೆಂಗಳೂರು: ಸೂರು ಇಲ್ಲದವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1
ಬೆಂಗಳೂರು ನಗರ

ಸರ್ಕಾರದಿಂದ ಉಚಿತ ಗ್ಯಾಸ್ ಪಡೆಯಬೇಕೆ!?.. ಹಾಗಿದ್ರೆ ಈ ರೀತಿ ಅರ್ಜಿ ಸಲ್ಲಿಸಿ..!

ಬೆಂಗಳೂರು: ಸರ್ಕಾರದಿಂದ ಯಾರೆಲ್ಲಾ ಉಚಿತ ಗ್ಯಾಸ್ ಗಳನ್ನು ಪಡೆಯಲು... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1
ಬೆಂಗಳೂರು ನಗರ

ಬಿಗ್ ಶಾಕಿಂಗ್ ನ್ಯೂಸ್.. ಇನ್ನೂ ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬರಲ್ಲ!

ಬೆಂಗಳೂರು: ಬಿಗ್ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದ್ದು, ಇನ್ನ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1