ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್, ನಂತರ ಕೋರ್ಟ್ಗೆ ಹಾಜರ್!
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾದ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಅಧಿಕಾರಿಗಳು ಬೌರಿಂಗ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆಗಾಗಿ ಕನಿಷ್ಠ ಐದು ದಿನಗಳ ಪೊಲೀಸ್ ಕಸ್ಟಡಿಗೆ ಮನವಿ ಮಾಡುವ ಸಾಧ್ಯತೆ ಇದೆ. ಕೊಲೆಯಾದ ಬಿಕ್ಲು ಶಿವ ಮತ್ತು ಆರೋಪಿಗಳಾದ ಅಜಿತ್ ಹಾಗೂ ಬೈರತಿ ಬಸವರಾಜ್ ನಡುವಿನ ವ್ಯವಹಾರ ಸಂಬಂಧಿತ ವಿಚಾರಣೆ ನಡೆಸಲು ಅಧಿಕಾರಿಗಳು ಕಸ್ಟಡಿ ಕೇಳಲು ಮುಂದಾಗಿದ್ದಾರೆ.
ಬಿಕ್ಲು ಶಿವನಿಗೆ ಬೈರತಿ ಬಸವರಾಜ್ ಬೆದರಿಕೆ ಹಾಕಿದ್ದಾರ ಎಂಬ ಆರೋಪವೂ ಕೇಳಿಬಂದಿದ್ದು, ಇದಕ್ಕೆ ಪೂರಕವಾಗಿ ಬಿಕ್ಲು ಶಿವನ ಮೊಬೈಲ್‌ನಲ್ಲಿ ಆಡಿಯೋ ದಾಖಲೆ ಪತ್ತೆಯಾಗಿದೆ. ಇನ್ನೂ ಆರೋಪಿ ಜಗದೀಶ್ ಪರಿಚಯವಿಲ್ಲ ಎಂದು ಬೈರತಿ ಬಸವರಾಜ್ ಹೇಳಿದ್ದಾರೆ, ಆದರೆ ಜಗದೀಶ್ ಜೊತೆ ಅವರ ಕಾರ್ಯಕ್ರಮಗಳು, ಜನ್ಮದಿನ ಆಚರಣೆ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದಿನಿಂದಲೂ ಜಮೀನು ವ್ಯವಹಾರಗಳಿಗೆ ಸಂಬಂಧಿಸಿದಂತೆ ಬೈರತಿ ಬಸವರಾಜ್ ಮತ್ತು ಬಿಕ್ಲು ಶಿವ ನಡುವೆ ಗಲಾಟೆಗಳು ನಡೆದಿದ್ದವು. ಈ ಸಂಬಂಧ ಅವಲಹಳ್ಳಿ, ಕೆಆರ್ ಪುರಂ ಹಾಗೂ ಭಾರತೀನಗರ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿದ್ದವು. ಸಿಐಡಿ ಅಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಮುಂದುವರೆಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಗಿರಣಿ ಚಾಳ ಬಳಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕನಿಗೆ ಗಾಯವಿಲ್ಲ
ಹುಬ್ಬಳ್ಳಿ: ಹುಬ್ಬಳ್ಳಿ ನಗರ ಗಿರಣಿ ಚಾಳ ಪ್ರದೇಶದಲ್ಲಿ ಬೆಳಗಿನ ಜ... ಓದನ್ನು ಮುಂದುವರಿಸಿ
ತುಮಕೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ: ಜ್ಯೋತಿಷ್ಯದ ಮಾತು ನಂಬಿ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಮಗಳು!
ತುಮಕೂರು: ತಾಲ್ಲೂಕಿನ ಅನುಪನಹಳ್ಳಿ ಗ್ರಾಮದಲ್ಲಿ ಶೋಚನೀಯ ಘಟನೆ ನಡ... ಓದನ್ನು ಮುಂದುವರಿಸಿ
75 ಕೇಸ್ʼಗಳಲ್ಲಿ 85 ಆರೋಪಿಗಳು: ಬೆಂಗಳೂರು ಪೊಲೀಸ್ ಪ್ರಾಪರ್ಟಿ ಪರೇಡ್‌ನಲ್ಲಿ ಹೈಪರ್ ಡ್ರಾಮಾ!
ಬೆಂಗಳೂರು : ನಗರ ಉತ್ತರ ವಿಭಾಗದ ಪೊಲೀಸ್ ಇಲಾಖೆ ದರೋಡೆ ಮತ್ತು ಕಳ... ಓದನ್ನು ಮುಂದುವರಿಸಿ
ಕೆಜಿಗಟ್ಟಲೇ ಬಂಗಾರ, ಕೈಇಟ್ಟಲ್ಲೆಲ್ಲಾ ನೋಟು: ಸರ್ಕಾರಿ ಅಧಿಕಾರಿಗಳ ಮನೆ ನೋಡಿದ್ರೆ “ಲೋಕಾ” ಶಾಕ್!
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ... ಓದನ್ನು ಮುಂದುವರಿಸಿ
ಅತಿವೇಗದ ಎಕ್ಸ್ಯುವಿ ಡಿಕ್ಕಿ: ಬೈಕ್ ಸವಾರ ಸೇರಿ 7 ಮಂದಿ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಹೊರವಲಯದ ಹೊಸಕೋಟೆ ಬಳಿ ಸಂಭವಿಸಿದ ಭೀಕರ ಸರಣಿ ಅ... ಓದನ್ನು ಮುಂದುವರಿಸಿ
“ಕೈಕಾಲು ತೊಳೆಯಲು ಹೋಗಿ ಕಾಲುವೆಗೆ ಜಾರಿ; ಇಬ್ಬರು ಮಹಿಳೆಯರು ಮೃತರು”
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ಭತ್ತ... ಓದನ್ನು ಮುಂದುವರಿಸಿ
ದೇವನಹಳ್ಳಿ
ಕಾಫಿ ಟೋಕನ್ ಕಾರಣಕ್ಕೆ ಕಿರಿಕ್-“ಟೋಕನ್ ಕೇಳಿದ ಹೋಟೇಲ್ ಸಿಬ್ಬಂದಿಗೆ ಪೊಲೀಸ್ ದೌರ್ಜನ್ಯ
ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್ ಬಳಿ ಸಂಭವಿಸಿದ ಘಟನೆ ಯಾರು ನ... ಓದನ್ನು ಮುಂದುವರಿಸಿ
ಮಂಗಳೂರು
ಮ್ಯಾಟ್ರಿಮೋನಿ ಮನ್ಮಥನ ಮೋಸ ಜಾಲ: 9 ಯುವತಿಯರಿಗೆ ವಂಚನೆ, ನಕಲಿ ಮಾವ ಬಂಧನ
ಮಂಗಳೂರು : ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಿನಲ್ಲಿ... ಓದನ್ನು ಮುಂದುವರಿಸಿ
ಚಿಕ್ಕೋಡಿ
ರಸ್ತೆ ಅಪಘಾತದಲ್ಲಿ 9 ವರ್ಷದ ಬಾಲಕಿ ಸಾವು! ಸ್ಥಳೀಯರಿಗೆ ರಸ್ತೆ ಸುರಕ್ಷತೆಯ ಎಚ್ಚರಿಕೆ
ಚಿಕ್ಕೋಡಿ/ಬೆಳಗಾವಿ:- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಳಗ... ಓದನ್ನು ಮುಂದುವರಿಸಿ
ಆಲೂರು ಬಳಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ
ರಾಯಚೂರು:- ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ರೀನ್ ಲೈ... ಓದನ್ನು ಮುಂದುವರಿಸಿ