ಮ್ಯಾಟ್ರಿಮೋನಿ ಮನ್ಮಥನ ಮೋಸ ಜಾಲ: 9 ಯುವತಿಯರಿಗೆ ವಂಚನೆ, ನಕಲಿ ಮಾವ ಬಂಧನ
ಮಂಗಳೂರು : ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಿನಲ್ಲಿ ಯುವತಿಯರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ನಡೆಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯ ಆರೋಪಿ ಸುಶಾಂತ್ ಪೂಜಾರಿ ಹಾಗೂ ಅವನಿಗೆ ಸಾಥ್ ನೀಡಿದ ಮುಲ್ಕಿ ನಿವಾಸಿ ಭಾಸ್ಕರ್ ಬಂಧಿತರಾಗಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ವರ ಹುಡುಕುತ್ತಿದ್ದ ಯುವತಿಯರನ್ನು ಗುರಿಯಾಗಿಸಿಕೊಂಡು ಸುಶಾಂತ್ ಪರಿಚಯ ಬೆಳೆಸುತ್ತಿದ್ದನು. ನಂತರ ಮದುವೆಯಾಗುವುದಾಗಿ ಭರವಸೆ ನೀಡಿ ಹಂತ ಹಂತವಾಗಿ ಹಣ ಪಡೆದು ಪರಾರಿಯಾಗುತ್ತಿದ್ದನು.
ತನಿಖೆಯಲ್ಲಿ ಬಹಿರಂಗವಾದಂತೆ, ಸುಶಾಂತ್ ತನ್ನ ಅಳಿಯ ಎಂದು ಭಾಸ್ಕರ್ ಪರಿಚಯಿಸಿಕೊಂಡು ಸಂತ್ರಸ್ತರ ಕುಟುಂಬದವರ ನಂಬಿಕೆ ಗಳಿಸಲು ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸುತ್ತಿದ್ದನು. ನಕಲಿ ಮಾವ–ಅಳಿಯರ ನಾಟಕವಾಡಿ ಮದುವೆಯ ವಾತಾವರಣ ಸೃಷ್ಟಿಸಿ ಬಳಿಕ ಹಣ ಪಡೆದು ಸಂಪರ್ಕ ಕಡಿತಗೊಳಿಸುತ್ತಿದ್ದುದಾಗಿ ತಿಳಿದುಬಂದಿದೆ. ಒಂದೆರಡು ಅಲ್ಲ, ಬರೋಬ್ಬರಿ 9 ಯುವತಿಯರನ್ನು ಈತನಿಂದ ವಂಚಿಸಲಾಗಿದೆ. ಇವರಲ್ಲಿ ಇಬ್ಬರೊಂದಿಗೆ ಮದುವೆಯಾಗಿ ಬಳಿಕ ಕೈಕೊಟ್ಟಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮುಂಬೈನಲ್ಲಿ ಒಬ್ಬ ಯುವತಿಯನ್ನು ಮದುವೆಯಾಗಿದ್ದ ಸುಶಾಂತ್, ಆಕೆಯಿಂದ ಸುಮಾರು 6.6 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾನೆ. ಅಲ್ಲದೆ ಉಡುಪಿ ಭಾಗದ ಇಬ್ಬರು ಯುವತಿಯರು, ಬೆಂಗಳೂರಿನ ಇಬ್ಬರು ಯುವತಿಯರು, ಕಾರ್ಕಳದ ಒಬ್ಬ ಯುವತಿ ಹಾಗೂ ಮಂಗಳೂರಿನ ಮತ್ತೊಬ್ಬ ಯುವತಿಯನ್ನು ಇದೇ ರೀತಿ ಮದುವೆಯ ನೆಪದಲ್ಲಿ ಮೋಸಗೊಳಿಸಿರುವ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ್ದರು. ದೂರು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳ ಹಿನ್ನಲೆ ಪರಿಶೀಲಿಸಿದಾಗ ವಂಚನೆಯ ಸರಣಿ ಪ್ರಕರಣಗಳು ಬಹಿರಂಗವಾಗಿವೆ. ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
“ಕೈಕಾಲು ತೊಳೆಯಲು ಹೋಗಿ ಕಾಲುವೆಗೆ ಜಾರಿ; ಇಬ್ಬರು ಮಹಿಳೆಯರು ಮೃತರು”
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ಭತ್ತ... ಓದನ್ನು ಮುಂದುವರಿಸಿ
ದೇವನಹಳ್ಳಿ
ಕಾಫಿ ಟೋಕನ್ ಕಾರಣಕ್ಕೆ ಕಿರಿಕ್-“ಟೋಕನ್ ಕೇಳಿದ ಹೋಟೇಲ್ ಸಿಬ್ಬಂದಿಗೆ ಪೊಲೀಸ್ ದೌರ್ಜನ್ಯ
ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್ ಬಳಿ ಸಂಭವಿಸಿದ ಘಟನೆ ಯಾರು ನ... ಓದನ್ನು ಮುಂದುವರಿಸಿ
ಚಿಕ್ಕೋಡಿ
ರಸ್ತೆ ಅಪಘಾತದಲ್ಲಿ 9 ವರ್ಷದ ಬಾಲಕಿ ಸಾವು! ಸ್ಥಳೀಯರಿಗೆ ರಸ್ತೆ ಸುರಕ್ಷತೆಯ ಎಚ್ಚರಿಕೆ
ಚಿಕ್ಕೋಡಿ/ಬೆಳಗಾವಿ:- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಳಗ... ಓದನ್ನು ಮುಂದುವರಿಸಿ
ಆಲೂರು ಬಳಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ
ರಾಯಚೂರು:- ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ರೀನ್ ಲೈ... ಓದನ್ನು ಮುಂದುವರಿಸಿ
ಕಾರವಾರ
ವಸಂತ್ ನಾಯ್ಕ ಹತ್ಯೆ ಪ್ರಕರಣ: ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಇಬ್ಬರಿಗೆ ಫೆ.21ರವರೆಗೆ ನ್ಯಾಯಾಂಗ ಬಂಧನ
ಕಾರವಾರ:- ವಸಂತ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಜ್ಯ... ಓದನ್ನು ಮುಂದುವರಿಸಿ
"ಪಿರಿಯಾಪಟ್ಟಣದಲ್ಲಿ ಅಕ್ರಮ ಕೇರಳ ಲಾಟರಿ ಜಾಲ ಭೇದನೆ: ₹78,130 ಮೌಲ್ಯದ ವಸ್ತು ಜಪ್ತಿ, ಇಬ್ಬರ ಬಂಧನ"
ಮೈಸೂರು:- ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧಿತವಾಗಿದ್ದರೂ ಗಡಿ ಭಾ... ಓದನ್ನು ಮುಂದುವರಿಸಿ
ಹೆತ್ತ ತಂದೆ-ತಾಯಿಯನ್ನೇ ಕೊಂದ ಪಾಪಿ ಮಗ; ಡಬಲ್ ಮರ್ಡರ್ ಗೆ ಬೆಚ್ಚಿದ ಬೆಂಗಳೂರು
ಬೆಂಗಳೂರು: ನಗರದ ವಿಜ್ಞಾನನಗರದಲ್ಲಿರುವ ಆದರ್ಶ ವಿಸ್ತಾ ಅಪಾರ್ಟ್... ಓದನ್ನು ಮುಂದುವರಿಸಿ
ಕೆಐಎಬಿಯಲ್ಲಿ ಕಸ್ಟಮ್ಸ್ ಬಿಗಿ ಬಲೆ: ಬ್ಯಾಂಕಾಕ್ ಪ್ರಯಾಣಿಕನಿಂದ 9.7 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆ
ಬೆಂಗಳೂರು: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ... ಓದನ್ನು ಮುಂದುವರಿಸಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹3.39 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ
ಬೆಂಗಳೂರು: ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್... ಓದನ್ನು ಮುಂದುವರಿಸಿ
ಹೆಚ್‌ಎಎಲ್ ಪ್ರದೇಶದಲ್ಲಿ ರೋಡ್ ರೇಜ್ – ಕಾರಿನ ಬ್ಯಾನೆಟ್ ಮೇಲೆ ಕುಳಿತ ವ್ಯಕ್ತಿಯನ್ನು ಕಿಲೋಮೀಟರ್‌ಗೂ ಹೆಚ್ಚು ಎಳೆದ ಚಾಲಕ
ಬೆಂಗಳೂರು: ನಗರದಲ್ಲಿ ದಿನೇದಿನೇ ರೋಡ್ ರೇಜ್ ಪ್ರಕರಣಗಳು ಹೆಚ್ಚುತ... ಓದನ್ನು ಮುಂದುವರಿಸಿ