ಅತಿವೇಗದ ಎಕ್ಸ್ಯುವಿ ಡಿಕ್ಕಿ: ಬೈಕ್ ಸವಾರ ಸೇರಿ 7 ಮಂದಿ ಸ್ಥಳದಲ್ಲೇ ಸಾವು
ಬೆಂಗಳೂರು: ನಗರದ ಹೊರವಲಯದ ಹೊಸಕೋಟೆ ಬಳಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 22ರಿಂದ 30 ವರ್ಷದೊಳಗಿನ ಏಳು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬದುಕಿನ ಉತ್ಸಾಹದಲ್ಲಿದ್ದ, ಕುಟುಂಬಕ್ಕೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದಲ್ಲಿ ಬೈಕ್ ಸವಾರ 26 ವರ್ಷದ ಗಗನ್ ಮೃತಪಟ್ಟಿದ್ದಾನೆ.
ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿಯ ನಿವಾಸಿಯಾಗಿದ್ದ ಗಗನ್, ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ ಗಗನ್ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದನು. ಕಣ್ಣು ಕಾಣದ ತಾಯಿಗೆ ಅವನೇ ಆಸರೆಯಾಗಿದ್ದ. ಹಾಪ್‌ಕಾಮ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಗಗನ್, ರಾತ್ರಿ ಪಾಳಿಯ ಕೆಲಸ ಮುಗಿಸಿ ವಾಪಸ್ಸಾಗುವ ವೇಳೆ ಅಪಘಾತಕ್ಕೊಳಗಾಗಿದ್ದಾನೆ.
ಇನ್ನೂ ಅಪಘಾತದಲ್ಲಿ ಮೃತಪಟ್ಟ ಅಯಾನ್ ಅಲಿ ಕೂಡ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ. ಇದ್ದೊಬ್ಬ ಮಗನನ್ನು ಕಳೆದುಕೊಂಡ ತಾಯಿ-ತಂದೆಯ ದುಃಖ ಮನಕಲುಕುವಂತಿದೆ. ಬೆಳ್ಳಂಬೆಳಗ್ಗೆ ಕ್ಯಾಂಟರ್, ಬೈಕ್ ಹಾಗೂ ಎಕ್ಸ್ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಯುವಕರು ಹಾಗೂ ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಹೊಸಕೋಟೆಯಿಂದ ದೇವನಹಳ್ಳಿ ಕಡೆ ಅತಿವೇಗವಾಗಿ ಸಾಗುತ್ತಿದ್ದ ಎಕ್ಸ್ಯುವಿ ಕಾರು ಮೊದಲು ಬೈಕ್‌ಗೆ ಡಿಕ್ಕಿ ಹೊಡೆದು, ಬಳಿಕ ಡಿವೈಡರ್‌ಗೆ ಗುದ್ದಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಣಾಮವಾಗಿ ಬೈಕ್ ಸವಾರ ಗಗನ್ ಹಾಗೂ ಕಾರಿನಲ್ಲಿದ್ದ ಅಶ್ವಿನ್, ಅಯಾನ್ ಅಲಿ, ಭರತ್, ಅರ್ಹಾನ್, ಇತನ್ ಜಾರ್ಜ್ ಮೃತಪಟ್ಟಿದ್ದಾರೆ. ಮೃತರು ಆರ್.ವಿ. ಹಾಗೂ ಸಿಎಂಆರ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕೊತ್ತನೂರು ನಿವಾಸಿಗಳೆಂದು ತಿಳಿದುಬಂದಿದೆ. ಘಟನೆ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಹುಬ್ಬಳ್ಳಿ
ಗಿರಣಿ ಚಾಳ ಬಳಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕನಿಗೆ ಗಾಯವಿಲ್ಲ
ಹುಬ್ಬಳ್ಳಿ: ಹುಬ್ಬಳ್ಳಿ ನಗರ ಗಿರಣಿ ಚಾಳ ಪ್ರದೇಶದಲ್ಲಿ ಬೆಳಗಿನ ಜ... ಓದನ್ನು ಮುಂದುವರಿಸಿ
ತುಮಕೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ: ಜ್ಯೋತಿಷ್ಯದ ಮಾತು ನಂಬಿ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದ ಮಗಳು!
ತುಮಕೂರು: ತಾಲ್ಲೂಕಿನ ಅನುಪನಹಳ್ಳಿ ಗ್ರಾಮದಲ್ಲಿ ಶೋಚನೀಯ ಘಟನೆ ನಡ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್, ನಂತರ ಕೋರ್ಟ್ಗೆ ಹಾಜರ್!
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾ... ಓದನ್ನು ಮುಂದುವರಿಸಿ
75 ಕೇಸ್ʼಗಳಲ್ಲಿ 85 ಆರೋಪಿಗಳು: ಬೆಂಗಳೂರು ಪೊಲೀಸ್ ಪ್ರಾಪರ್ಟಿ ಪರೇಡ್‌ನಲ್ಲಿ ಹೈಪರ್ ಡ್ರಾಮಾ!
ಬೆಂಗಳೂರು : ನಗರ ಉತ್ತರ ವಿಭಾಗದ ಪೊಲೀಸ್ ಇಲಾಖೆ ದರೋಡೆ ಮತ್ತು ಕಳ... ಓದನ್ನು ಮುಂದುವರಿಸಿ
ಕೆಜಿಗಟ್ಟಲೇ ಬಂಗಾರ, ಕೈಇಟ್ಟಲ್ಲೆಲ್ಲಾ ನೋಟು: ಸರ್ಕಾರಿ ಅಧಿಕಾರಿಗಳ ಮನೆ ನೋಡಿದ್ರೆ “ಲೋಕಾ” ಶಾಕ್!
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ... ಓದನ್ನು ಮುಂದುವರಿಸಿ
“ಕೈಕಾಲು ತೊಳೆಯಲು ಹೋಗಿ ಕಾಲುವೆಗೆ ಜಾರಿ; ಇಬ್ಬರು ಮಹಿಳೆಯರು ಮೃತರು”
ರಾಯಚೂರು: ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರು ಗ್ರಾಮದಲ್ಲಿ ಭತ್ತ... ಓದನ್ನು ಮುಂದುವರಿಸಿ
ದೇವನಹಳ್ಳಿ
ಕಾಫಿ ಟೋಕನ್ ಕಾರಣಕ್ಕೆ ಕಿರಿಕ್-“ಟೋಕನ್ ಕೇಳಿದ ಹೋಟೇಲ್ ಸಿಬ್ಬಂದಿಗೆ ಪೊಲೀಸ್ ದೌರ್ಜನ್ಯ
ದೇವನಹಳ್ಳಿ: ಕೆಂಪೇಗೌಡ ಏರ್‌ಪೋರ್ಟ್ ಬಳಿ ಸಂಭವಿಸಿದ ಘಟನೆ ಯಾರು ನ... ಓದನ್ನು ಮುಂದುವರಿಸಿ
ಮಂಗಳೂರು
ಮ್ಯಾಟ್ರಿಮೋನಿ ಮನ್ಮಥನ ಮೋಸ ಜಾಲ: 9 ಯುವತಿಯರಿಗೆ ವಂಚನೆ, ನಕಲಿ ಮಾವ ಬಂಧನ
ಮಂಗಳೂರು : ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಿನಲ್ಲಿ... ಓದನ್ನು ಮುಂದುವರಿಸಿ
ಚಿಕ್ಕೋಡಿ
ರಸ್ತೆ ಅಪಘಾತದಲ್ಲಿ 9 ವರ್ಷದ ಬಾಲಕಿ ಸಾವು! ಸ್ಥಳೀಯರಿಗೆ ರಸ್ತೆ ಸುರಕ್ಷತೆಯ ಎಚ್ಚರಿಕೆ
ಚಿಕ್ಕೋಡಿ/ಬೆಳಗಾವಿ:- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಳಗ... ಓದನ್ನು ಮುಂದುವರಿಸಿ
ಆಲೂರು ಬಳಿ ಭೀಕರ ಅಪಘಾತ: ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ
ರಾಯಚೂರು:- ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗ್ರೀನ್ ಲೈ... ಓದನ್ನು ಮುಂದುವರಿಸಿ