ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಮೇನಲ್ಲಿ ಆರಂಭ: ಡ್ರೈವರ್‌ಲೆಸ್ ರೈಲುಗಳ ಸಂಚಾರ

ಬೆಂಗಳೂರು: ನಗರದ ಮಹತ್ವಾಕಾಂಕ್ಷೆಯ ಪಿಂಕ್ ಲೈನ್ ಮೆಟ್ರೋ ಯೋಜನೆಯ ಮೊದಲ ಹಂತವು ಈ ವರ್ಷದ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ತೆರೆಯುವ ಸಾಧ್ಯತೆ ಇದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗಕ್ಕಾಗಿ ಬಿಎಂಆರ್‌ಸಿಎಲ್ ಭರದ ಸಿದ್ಧತೆ ನಡೆಸುತ್ತಿದೆ.

 

ಈ ಹಿನ್ನೆಲೆಯಲ್ಲಿ ನಾಳೆಯಿಂದ ಏಪ್ರಿಲ್ 5ರವರೆಗೆ 16 ದಿನಗಳ ಕಾಲ ಆರ್‌ಡಿಎಸ್‌ಒ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ತಾಂತ್ರಿಕ ಪರಿಶೀಲನೆಗಳು ನಡೆಯಲಿವೆ. ರೈಲುಗಳ ವೇಗ ಮತ್ತು ಲೋಡ್ ಟೆಸ್ಟ್, ಟ್ರ್ಯಾಕ್ ಪರಿಶೀಲನೆ, ನಿಲ್ದಾಣಗಳ ತಪಾಸಣೆ, ವಿದ್ಯುತ್ ವ್ಯವಸ್ಥೆಗಳ ಪರಿಶೀಲನೆ ಸೇರಿದಂತೆ ಹಲವು ಪರೀಕ್ಷೆಗಳು ಕೈಗೊಳ್ಳಲಾಗುತ್ತದೆ.

 

ಪಿಂಕ್ ಲೈನ್‌ಗೆ ಈಗಾಗಲೇ 4 ಡ್ರೈವರ್‌ಲೆಸ್ ರೈಲುಗಳು ಆಗಮಿಸಿದ್ದು, ತಿಂಗಳ ಕೊನೆಯಲ್ಲಿ ಇನ್ನೊಂದು ರೈಲು ಮತ್ತು ಏಪ್ರಿಲ್ ಮೊದಲ ವಾರದಲ್ಲಿ ಆರನೇ ರೈಲು ಸೇರ್ಪಡೆಯಾಗಲಿದೆ. ಆರಂಭಿಕ ಹಂತದಲ್ಲಿ 6 ಡ್ರೈವರ್‌ಲೆಸ್ ರೈಲುಗಳು ಕಾಳೇನ ಅಗ್ರಹಾರದಿಂದ ನಾಗವಾರವರೆಗೆ ಸಂಚಾರ ನಡೆಸಲಿವೆ.

 

ಒಟ್ಟು 21.25 ಕಿ.ಮೀ ಉದ್ದದ ಈ ಮಾರ್ಗದಲ್ಲಿ 18 ನಿಲ್ದಾಣಗಳಿದ್ದು, 12 ಅಂಡರ್‌ಗ್ರೌಂಡ್ ಮತ್ತು 6 ಎಲಿವೇಟೆಡ್ ಸ್ಟೇಷನ್‌ಗಳಿವೆ. ಮೊದಲ ಹಂತದಲ್ಲಿ 6 ಎಲಿವೇಟೆಡ್ ನಿಲ್ದಾಣಗಳು ಮೇ ತಿಂಗಳಲ್ಲಿ ಆರಂಭವಾಗಲಿದ್ದು, ಉಳಿದ ಅಂಡರ್‌ಗ್ರೌಂಡ್ ನಿಲ್ದಾಣಗಳ ಕಾಮಗಾರಿ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.

 

ಬಿಇಎಂಎಲ್ ಸಂಸ್ಥೆಗೆ ಒಟ್ಟು 23 ರೈಲುಗಳ ಸರಬರಾಜಿಗೆ ಆದೇಶ ನೀಡಲಾಗಿದೆ. ಈ ಮಾರ್ಗ ಆರಂಭವಾದ ಬಳಿಕ ಬನ್ನೇರುಘಟ್ಟ ರಸ್ತೆಯ ಭಾರೀ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

 

ಕೇಂದ್ರ ರೈಲ್ವೆ ಅಧಿಕಾರಿಗಳ ತಪಾಸಣೆ ಮತ್ತು ಕಮಿಷನರ್ ಆಫ್ ಮೆಟ್ರೋ ರೈಲ್ವೇ ಸೇಫ್ಟಿಯ ಅಂತಿಮ ಅನುಮತಿ ದೊರೆತ ನಂತರ ಪಿಂಕ್ ಲೈನ್‌ನಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 days ago

   
Image 1
Image 1

"ಕಾರು, ಬಸ್, ಲಾರಿ ಎಲ್ಲರಿಗೂ ಟೋಲ್ ದರ ಏರಿಕೆ – Bengaluru-Mysuru Expressway ಸೇರಿದಂತೆ 8 ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಪರಿಣಾಮ"

ನವದೆಹಲಿ: ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಸುಮಾರು 4–5% (ಸ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1

ಎಟಿಎಂ ವಹಿವಾಟಿನಲ್ಲಿ ಬೃಹತ್ ಬದಲಾವಣೆ: ಏಪ್ರಿಲ್ 1ರಿಂದ ಹೊಸ ನಿಯಮಗಳು ಜಾರಿ

ದೆಹಲಿ : ಏಪ್ರಿಲ್ 1ರಿಂದ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ಹ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1

ಸಿಲಿಕಾನ್ ವ್ಯಾಲಿ’ ಕೂಡ 5G ಹಿನ್ನಡೆ: ಗ್ರಾಮೀಣ ಹಳ್ಳಿಗಳು ಇನ್ನೂ ಕನೆಕ್ಷನ್ ಇಲ್ಲ

ಭಾರತದ ‘ಸಿಲಿಕಾನ್ ವ್ಯಾಲಿ’ ಎಂದೇ ಕರೆಯಲ್ಪಡುವ ಬೆಂಗಳೂರು ಕೇಂದ್ರದಲ್ಲಿದ್ದರೂ, ಕರ್ನಾ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1

ಭಾರತದಲ್ಲಿ ಹೊಸ ಆದಾಯ ತೆರಿಗೆ ನಿಯಮ : ಕ್ರೆಡಿಟ್ ಕಾರ್ಡ್‌ಗೆ ಹೊಸ ತೆರಿಗೆ ನಿಯಮ ಜಾರಿ!

ದೆಹಲಿ: ಮುಂಬರುವ ಹಣಕಾಸು ವರ್ಷದಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

ಮೆಟ್ರೋಗೆ ಜನರ ಮೆಚ್ಚುಗೆ: ಒಂದೇ ದಿನ 10.73 ಲಕ್ಷ ಪ್ರಯಾಣಿಕರ ದಾಖಲೆ

ಬೆಂಗಳೂರು: ಯುಗಾದಿ ಹಬ್ಬದ ಮುನ್ನದಿನ ನಮ್ಮ ಮೆಟ್ರೋ ಸೇವೆಯಲ್ಲಿ ಐ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಚಿನ್ನ ಮತ್ತೆ ಜಿಗಿತ: 22 ಕ್ಯಾರೆಟ್ ಬೆಲೆ ₹1.38 ಲಕ್ಷ ದಾಟಿತು!

ಬೆಂಗಳೂರು: ಚಿನ್ನದ ಬೆಲೆಯಲ್ಲಿ ನಿನ್ನೆ ಕಂಡುಬಂದ ಭಾರೀ ಇಳಿಕೆಯ ಬ... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1
ಬೆಂಗಳೂರು ನಗರ

ಗ್ಯಾಸ್ ಸಿಲಿಂಡರ್ 14.2 KG ಯಾಕೆ ಫಿಕ್ಸ್? ತೂಕದ ಹಿಂದಿನ ಇತಿಹಾಸ ಮತ್ತು ಬಳಕೆಯ ಲಾಜಿಕ್‌!

ಬೆಂಗಳೂರು: ಅಡುಗೆ ಅನಿಲದ ಬಿಕ್ಕಟ್ಟಿನ ನಡುವೆ, ಗ್ಯಾಸ್ ಸಿಲಿಂಡರ್ ಮೇಲೆ ‘14.2 ಕೆಜಿ’... ಓದನ್ನು ಮುಂದುವರಿಸಿ


Edited by: ಬಾನು

4 days ago

   
Image 1
ಬೆಂಗಳೂರು ನಗರ

ಗ್ಯಾಸ್ ಕೊರತೆ: ಅಗತ್ಯ ಸೇವೆಗಳಿಗೆ ಶೇ.100 ಪೂರೈಕೆ – ಸರ್ಕಾರದ ಹೊಸ ಗೈಡ್‌ಲೈನ್

ಬೆಂಗಳೂರು: ರಾಜ್ಯದಲ್ಲಿ ಉಂಟಾದ ಕಮರ್ಷಿಯಲ್ ಗ್ಯಾಸ್ ಕೊರತೆ ಹಿನ್ನ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1
ಬೆಂಗಳೂರು ನಗರ

ಬ್ಯಾಂಕ್ ಲಾಕರ್‌ನಲ್ಲೇ ಚಿನ್ನ ಕಳವು! 9 ದಿನಗಳಲ್ಲಿ ಆಭರಣ ಮಿಸ್ಸಿಂಗ್

ಬೆಂಗಳೂರು: ನಗರದ ಸದಾಶಿವನಗರದ ಆರ್‌ಎಂವಿ ಎಕ್ಸ್ಟೆಂಶನ್‌ನಲ್ಲಿರುವ... ಓದನ್ನು ಮುಂದುವರಿಸಿ


Edited by: ಬಾನು

5 days ago

   
Image 1
ಬೆಂಗಳೂರು ನಗರ

ಯುಗಾದಿ ಹಬ್ಬಕ್ಕೆ ಬಂಪರ್ : ಚಿನ್ನ-ಬೆಳ್ಳಿ ದರದಲ್ಲಿ ಕುಸಿತ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ, ಚಿನ್ನ ಇಳಿಕೆ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1