ಐಪಿಎಲ್ ಕ್ರಿಕೆಟ್ ಲೋಕದ 'ಮಹಾ ನಾಯಕ' ಮಹೇಂದ್ರ ಸಿಂಗ್ ಧೋನಿ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜು
ಧೋನಿ ಮತ್ತೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಅಂದ್ರೆ ಅದು ಕೇವಲ ಇನ್ನೊಂದು ಸೀಸನ್ ಅಲ್ಲ… ಅದು ಒಂದು ಹಬ್ಬ. ಚೆನ್ನೈಯ ಹಳದಿ ಜೆರ್ಸಿ, ಚೆಪಾಕ್‌ನ ಗರ್ಜನೆ, ಕೊನೆಯ ಓವರ್‌ನ ಮೌನ… ಇವೆಲ್ಲ ಮತ್ತೆ ಜೀವಂತವಾಗೋ ಸಮಯ ಬಂದಿದೆ. ಧೋನಿ ಅಂದ್ರೆ ಕೇವಲ ಆಟಗಾರ ಅಲ್ಲ. ಅವನು ಒಂದು ಭರವಸೆ. ಟೀಮ್ ಕುಸಿದಾಗ ಹಿಡಿದಿಡುವ ಕೈ. ಒತ್ತಡ ಹೆಚ್ಚಾದಾಗ ಶಾಂತವಾಗಿರುವ ಮನಸ್ಸು. ಧೋನಿ ಆಟ ಆಡೋದು ಕಾಲಿನ ವೇಗದಿಂದಲ್ಲ, ತಲೆ ಮತ್ತು ಹೃದಯದಿಂದ. ಐಪಿಎಲ್ ಕ್ರಿಕೆಟ್ ಲೋಕದ 'ಮಹಾ ನಾಯಕ' ಮಹೇಂದ್ರ ಸಿಂಗ್ ಧೋನಿ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಐಪಿಎಲ್ ಸೀಸನ್-19 ಆರಂಭಕ್ಕೆ ಇನ್ನೂ ಕಾಲಾವಕಾಶವಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ನೆಚ್ಚಿನ 'ಮಾಹಿ' ಈಗಲೇ ತಮ್ಮ ಅಭ್ಯಾಸ ಶುರು ಮಾಡಿದ್ದಾರೆ. ಈ ಬಾರಿ ಅಭಿಮಾನಿಗಳಿಗಾಗಿ 'ಒನ್ ಲಾಸ್ಟ್ ಟೈಮ್' (One Last Time) ಅದ್ಭುತ ಪ್ರದರ್ಶನ ನೀಡಲು ಧೋನಿ ವಿಶೇಷ ತಯಾರಿ ನಡೆಸುತ್ತಿದ್ದಾರೆ.
ತವರಿನ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (JSCA) ಮೈದಾನದಲ್ಲಿ ಧೋನಿ ಪ್ರತಿದಿನ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬೆವರಿಳಿಸುತ್ತಿದ್ದಾರೆ. ಸಾಮಾನ್ಯವಾಗಿ ಆಟಗಾರರು ಬೆಳಿಗ್ಗೆ ಅಥವಾ ಸಂಜೆ ಅಭ್ಯಾಸ ನಡೆಸಿದರೆ, ಧೋನಿ ಮಾತ್ರ ಬಿರು ಬಿಸಿಲನ್ನೇ ಆರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಚೆನ್ನೈನ ಅತಿಯಾದ ಉಷ್ಣಾಂಶ. ಚೆನ್ನೈನ ಹವಾಮಾನಕ್ಕೆ ದೇಹವನ್ನು ಹೊಂದಿಸಿಕೊಳ್ಳಲು ಮಾಹಿ ಈ ತಂತ್ರ ಹೂಡಿದ್ದಾರೆ. ಧೋನಿ ಜೆಎಸ್ಸಿಎ ಸ್ಟೇಡಿಯಂನ ಇನ್ಡೋರ್ ಪಿಚ್‌ಗಳಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಅಲ್ಲಿರುವ ಬ್ಲಾಕ್ ಸಾಯಿಲ್ (ಕಪ್ಪು ಮಣ್ಣು) ಮತ್ತು ಮಿಕ್ಸ್ಡ್ ಸಾಯಿಲ್ ಪಿಚ್‌ಗಳಲ್ಲಿ ಸ್ಪಿನ್ನರ್ ಹಾಗೂ ವೇಗಿಗಳ ಎಸೆತಗಳನ್ನು ಎದುರಿಸುತ್ತಿದ್ದಾರೆ. ತಾಂತ್ರಿಕವಾಗಿ ಇನ್ನಷ್ಟು ಬಲಿಷ್ಠರಾಗಲು ಈ ವಿಭಿನ್ನ ಪಿಚ್‌ಗಳು ಅವರಿಗೆ ನೆರವಾಗುತ್ತಿವೆ.
ಫಿಟ್ನೆಸ್ ಮಂತ್ರ: ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್
40ರ ಹರೆಯದಲ್ಲೂ ಯುವಕರಿಗೆ ಮಾದರಿಯಾಗಿರುವ ಧೋನಿ, ಪ್ರತಿದಿನ 2 ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುತ್ತಿದ್ದಾರೆ. ಮಸಲ್ ಮಾಸ್ ಮತ್ತು ಸ್ಟ್ರೆಂತ್ ಹೆಚ್ಚಿಸಿಕೊಳ್ಳಲು ಶೋಲ್ಡರ್ಸ್ ಹಾಗೂ ಲೋವರ್ ಬಾಡಿ ಟ್ರೈನಿಂಗ್‌ಗೆ ಒತ್ತು ನೀಡುತ್ತಿದ್ದಾರೆ. ಜಿಮ್ ಮುಗಿದ ಬಳಿಕ 1 ಗಂಟೆ ಕಾಲ ಸ್ವಿಮ್ಮಿಂಗ್ ಪೂಲ್‌ನಲ್ಲಿ ಫುಲ್ ಬಾಡಿ ಎಕ್ಸಸೈಸ್ ಮಾಡುವ ಮೂಲಕ ದೇಹವನ್ನು ಫಿಟ್ ಆಗಿರಿಸಿಕೊಂಡಿದ್ದಾರೆ.
ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಬ್ಯಾಟಿಂಗ್‌ನಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ 1.300 ಕೆಜಿ ತೂಕದ ಬ್ಯಾಟ್ ಬಳಸಿದ್ದ ಧೋನಿ, ಈ ಬಾರಿ 1.230 ಕೆಜಿ ತೂಕದ ಹಗುರವಾದ ಬ್ಯಾಟ್ ಬಳಸುತ್ತಿದ್ದಾರೆ. SS ಕಂಪನಿಯಿಂದ ವಿಶೇಷವಾಗಿ ತಯಾರಿಸಲ್ಪಟ್ಟ ಈ ಲೈಟ್ ವೇಯ್ಟ್ ಬ್ಯಾಟ್ ಮೂಲಕ ವೇಗವಾಗಿ ಬ್ಯಾಟ್ ಸ್ವಿಂಗ್ ಮಾಡಲು ಮತ್ತು ಉತ್ತಮ ಟೈಮಿಂಗ್ ಸಾಧಿಸಲು ಧೋನಿ ಪ್ಲಾನ್ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ಧೋನಿ ಪ್ರದರ್ಶನ ಅಭಿಮಾನಿಗಳಿಗೆ ಅಷ್ಟಾಗಿ ತೃಪ್ತಿ ನೀಡಿರಲಿಲ್ಲ. ಆದರೆ ಈ ಬಾರಿ ಧೋನಿ ನಡೆಸುತ್ತಿರುವ ಈ ಮಟ್ಟದ ಸಿದ್ಧತೆ ನೋಡಿದರೆ, ಮೈದಾನದಲ್ಲಿ ಮತ್ತೆ ಹಳೆಯ 'ಫಿನಿಶರ್' ಧೋನಿಯನ್ನು ನೋಡಬಹುದು ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ. ಧೋನಿಯ ಈ ಕಮಿಟ್‌ಮೆಂಟ್ ಮತ್ತು ಶ್ರಮವೇ ಅವರನ್ನು ಕ್ರಿಕೆಟ್ ಲೋಕದ ದಂತಕಥೆಯನ್ನಾಗಿ ಮಾಡಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಟಿ20 ವಿಶ್ವಕಪ್: ಸೂರ್ಯಕುಮಾರ್ ಯಾದವ್ ಅಜೇಯ ಅರ್ಧಶತಕ, ಭಾರತ 29 ರನ್‌ಗಳ ಗೆಲುವು; ದಾಖಲೆ ಗಡಿಯಲ್ಲೇ!
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ಮೂರನೇ ಪಂದ್ಯದಲ್ಲಿ ಭಾರತ ಮತ... ಓದನ್ನು ಮುಂದುವರಿಸಿ
ಟೀಮ್ ಇಂಡಿಯಾ ಯುಎಸ್‌ಎ ವಿರುದ್ಧ 29 ರನ್‌ಗಳ ಗೆಲುವು; ಬುಮ್ರಾ–ಅಭಿಷೇಕ್ ಶರ್ಮಾ ಅನಾರೋಗ್ಯದಲ್ಲಿ ಆತಂಕ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಟೀ20 ವಿಶ್ವಕಪ್ ಪ್ರಿಯ ಪಂದ್ಯದಲ್ಲಿ ಭಾರತ ತಂ... ಓದನ್ನು ಮುಂದುವರಿಸಿ
ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ₹7.5 ಕೋಟಿ ಬಹುಮಾನ ಯುವ ಆಟಗಾರರ ಐತಿಹಾಸಿಕ ಸಾಧನೆಗೆ ಬಿಸಿಸಿಐ ಶ್ಲಾಘನೆ
ನವದೆಹಲಿ: ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ... ಓದನ್ನು ಮುಂದುವರಿಸಿ
ಮೂರನೇ ಬಾರಿ ಕಿರೀಟದ ಗುರಿಯೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ 2026 ಇಂದಿನಿಂದ ಆರಂಭವಾಗುತ್ತ... ಓದನ್ನು ಮುಂದುವರಿಸಿ
WPL ಫೈನಲ್ ಕೈ ತಪ್ಪಿದ ಬೆಂಗಳೂರು; IPLಗೂ ಚಿನ್ನಸ್ವಾಮಿ ಅನುಮಾನ – ಮ್ಯಾನೇಜ್‌ಮೆಂಟ್ ಮೌನ
ಬೆಂಗಳೂರು: ವಡೋದರದ ಕ್ರೀಡಾಂಗಣದಲ್ಲಿ ನಡೆದ WPL ಫೈನಲ್ ಪಂದ್ಯದಲ್... ಓದನ್ನು ಮುಂದುವರಿಸಿ
PSL 11ರಿಂದ ಹಿಂದೆ ಸರಿದ ಆಸ್ಟ್ರೇಲಿಯಾ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್
ಆಸ್ಟ್ರೇಲಿಯಾ ತಂಡದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಪಾಕಿಸ್ತಾನ್ ಸೂಪರ್ ಲೀಗ... ಓದನ್ನು ಮುಂದುವರಿಸಿ
ಸ್ಮೃತಿ ನೇತೃತ್ವದ RCB vs ಡೆಲ್ಲಿ ಕ್ಯಾಪಿಟಲ್ಸ್ – ಕಪ್‌ಗೆ ಮಹಾಸಮರ!
ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಆವೃತ್ತಿ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಇಡ... ಓದನ್ನು ಮುಂದುವರಿಸಿ
IPL ಸೀಸನ್ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ದಾಖಲೆ
IPL ಸೀಸನ್ 19ರ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್ ತಂಡ ಹೊಸ ದಾಖಲೆ ಸೃಷ್ಟ... ಓದನ್ನು ಮುಂದುವರಿಸಿ
ದಿನೇ ದಿನೇ ತನ್ನ ಪರ್ಫಾಮೆನ್ಸ್ನಿಂದ ಗಮನ ಸೆಳೆಯುತ್ತಿರುವ ಟೀಮ್ ಇಂಡಿಯಾ ಆಟಗಾರ ಹರ್ಷಿತ್ ರಾಣಾ
ದಿನೇ ದಿನೇ ತನ್ನ ಪರ್ಫಾಮೆನ್ಸ್ನಿಂದ ಗಮನ ಸೆಳೆಯುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರ... ಓದನ್ನು ಮುಂದುವರಿಸಿ
ಹೀನಾಯವಾಗಿ ಸೂತ ಸೂರ್ಯಕುಮಾರ್ ಯಾದವ್ ಪಡೆ.. ಸೋಲಿಗೆ ಕಾರಣವಾಯ್ತು 3 ತಪ್ಪುಗಳು..!
ನಿನ್ನೆ ವಿಶಾಖಪಟ್ಟಣಂನ ACA-VDCA ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್... ಓದನ್ನು ಮುಂದುವರಿಸಿ