ದಿನೇ ದಿನೇ ತನ್ನ ಪರ್ಫಾಮೆನ್ಸ್​ನಿಂದ ಗಮನ ಸೆಳೆಯುತ್ತಿರುವ ಟೀಮ್ ಇಂಡಿಯಾ ಆಟಗಾರ ಹರ್ಷಿತ್ ರಾಣಾ

ದಿನೇ ದಿನೇ ತನ್ನ ಪರ್ಫಾಮೆನ್ಸ್​ನಿಂದ ಗಮನ ಸೆಳೆಯುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರ ಹರ್ಷಿತ್ ರಾಣಾ,   ರಾಣಾ ರೈಸಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ಬೌಲಿಂಗ್, ಬ್ಯಾಟಿಂಗ್​​ನಿಂದ ಕಾಂಟ್ರಿಬ್ಯೂಟ್ , ಮಾಡ್ತಿರುವ ರಾಣಾ ರೈಸಿಂಗ್  ಒಂದೇ ವರ್ಷದಲ್ಲಿ ರಾಣಾ, ಸ್ಟಾರ್​​ ಆಟಗಾರರನ್ನೂ ಸೈಡ್ ಹೊಡೆದಿದ್ದಾರೆ. ಹರ್ಷಿತ್ ರಾಣಾ ಕುರಿತ ಇಂಟ್ರೆಸ್ಟಿಂಗ್  ವಿಷಯ ಇಲ್ಲಿದೆ ಬನ್ನಿ ನೋಡೋಣ... ಬ್ಯಾಟಿಂಗ್ ಮಾಡೋಕೂ ಜೈ.. ಬೌಲಿಂಗ್ ಮಾಡೋಕೂ ಸೈ..  ಕೋಚ್ ಮತ್ತು ಕ್ಯಾಪ್ಟನ್ ಏನೇ ರೋಲ್ ಕೊಟ್ರೂ, ಜವಾಬ್ದಾರಿಯಿಂದ ನಿಭಾಯಿಸೋದನ್ನ ಈ ಯುವ ಕ್ರಿಕೆಟಿಗ ಕರಗತ ಮಾಡಿಕೊಂಡಿದ್ದಾನೆ. ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಈ ಆಟಗಾರ, ಸೆಲೆಕ್ಟರ್ಸ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ಗಮನ ಸೆಳೆದಿದ್ದಾರೆ.  ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತ ಲೇಬಲ್ ಒತ್ತಿಸಿಕೊಂಡಿದ್ದಾರೆ.

 

ಡೆಲ್ಲಿ ಮೂಲದ ಹರ್ಷಿತ್ ರಾಣಾ ಸದ್ಯ ಮೂರೂ ಫಾರ್ಮೆಟ್​ ಪ್ಲೇಯರ್. ಟೆಸ್ಟ್, ODI ಮತ್ತು T20 ಕ್ರಿಕೆಟ್​​​ನಲ್ಲಿ ರಾಣಾ ರೈಸಿಂಗ್,  ದರ್ಬಾರ್ ನಡೆಸುತ್ತಿದ್ದಾರೆ.  ಒಂದೆಡೆ ಬೌಲಿಂಗ್​ನಲ್ಲಿ ರಾಣಾ   ರೈಸಿಂಗ್  ವಿಕೆಟ್ ಬೇಟೆಯಾಡುತ್ತಿದ್ರೆ  ಮತ್ತೊಂದೆಡೆ ಬ್ಯಾಟ್​​ನಿಂದ ರಾಣಾ ರನ್​​​​ ಕಾಣಿಕೆ ನೀಡುತ್ತಿದ್ದಾರೆ.  ಕೆಳ ಕ್ರಮಾಂಕದಲ್ಲಿ ರಾಣಾ ಉಪಸ್ಥಿತಿ, ತಂಡದ ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಿದೆ. ಸದ್ಯ ಆಲ್​ರೌಂಡರ್ ಲಿಸ್ಟ್​ನಲ್ಲಿ ಕಾಣಿಸಿಕೊಳ್ತಿರುವ ರಾಣಾ ರೈಸಿಂಗ್  ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಟೆಸ್ಟ್, ODI ಮತ್ತು T20.. ಮೂರೂ ಫಾರ್ಮೆಟ್​​​ಗಳ ಡೆಬ್ಯೂ ಪಂದ್ಯಗಳಲ್ಲೇ ಹರ್ಷಿತ್ ಮಿಂಚಿನ ಆಟ ಪ್ರದರ್ಶಿಸಿದ್ದಾರೆ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ನ್ಯೂಜಿಲೆಂಡ್ ಜೊತೆಗೆ ಇಂಡಿಯಾ ‘ಎ’ ಪರವೂ ರಾಣಾ, ಜಬರ್​ದಸ್ತ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಇಂದೋರ್ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿದ ರಾಣಾ, ಬೌಲಿಂಗ್​​ನಲ್ಲಿ 3 ಪ್ರಮುಖ ವಿಕೆಟ್ ಕಬಳಿಸಿ, ಕ್ವಾಲಿಟಿ ಆಲ್​ರೌಂಡರ್ ಎನಿಸಿಕೊಂಡ್ರು.

24 ವರ್ಷದ ಯಂಗ್ ಌಂಡ್ ಡ್ಯಾಶಿಂಗ್ ಆಲ್​ರೌಂಡರ್ ರಾಣಾ ಸದ್ಯ ಮೂರೂ ಫಾರ್ಮೆಟ್​​ಗಳಲ್ಲಿ ಟೀಮ್ ಇಂಡಿಯಾಕ್ಕೆ ಬೇಕಾಗಿರೋ ಆಲ್​ರೌಂಡರ್. ಈಗಾಗಲೇ ರಾಣಾ, ಮೊಹಮ್ಮದ್ ಸಿರಾಜ್, ಆರ್ಷ್​​ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣರಂತಹ ಬೌಲರ್​ಗಳನ್ನೇ ಹಿಂದಿಕ್ಕಿದ್ದಾರೆ. ಮೂರೂ ಫಾರ್ಮೆಟ್​ಗಳಲ್ಲೂ ಪ್ಲೇಯಿಂಗ್ ಇಲೆವೆನ್​​ಗೆ ಫಿಟ್ ಆಗೋ ಆಟಗಾರ ಅದು ಹರ್ಷಿತ್ ರಾಣಾ. ಮುಂದಿನ ತಿಂಗಳು ಭಾರತದಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ.  ಈಗಾಗಲೇ ವಿಶ್ವಕಪ್ ತಂಡದಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದಾರೆ. ರಾಣಾ ಪ್ಲೇಯಿಂಗ್​ನಲ್ಲಿ ಸ್ಥಾನ ಪಡೆಯೋದು ಬಹುತೇಕ ಖಚಿತ. ಟಿ-20 ಕ್ರಿಕೆಟ್​​​ಗೆ ಆಲ್​ರೌಂಡರ್​​ಗಳ ಅವಶ್ಯಕತೆ ಹೆಚ್ಚು ಇದೆ. ಹಾಗಾಗಿ ರಾಣಾ, ಶಿವಂ ದುಬೆಯನ್ನ ಓವರ್​ಟೇಕ್ ಮಾಡಿ ಹಾರ್ದಿಕ್ ಪಾಂಡ್ಯ ಜೊತೆ ಆಲ್​ರೌಂಡರ್​ ಖೋಟಾದಲ್ಲಿ ಅವಕಾಶ ಪಡೆಯೋದು ಕನ್ಫರ್ಮ್ ಆಗಿದೆ.

 

ಇತ್ತೀಚಿಗಷ್ಟೆ ಹರ್ಷಿತ್ ರಾಣಾ ವಿರುದ್ಧ ಭಾರೀ ಟೀಕೆಗಳು ಕೇಳಿಬರುತ್ತಾ ಇತ್ತು.    ರಾಣಾ, ಕೋಚ್ ಗೌತಮ್ ಗಂಭೀರ್​​ರ ಚೇಲಾ. ಹಾಗಾಗಿ ತಂಡದಲ್ಲಿ ಅವಕಾಶ ಪಡೆಯುತ್ತಿದ್ದಾರೆ ಅಂತ ಹೇಳಲಾಗುತ್ತಿತ್ತು.  ಮತ್ತೊಂದೆಡೆ ಭಾರತ ತಂಡದ ಮಾಜಿ ನಾಯಕ ಹಾಗೆ ಮಾಜಿ ಚೀಫ್ ಸೆಲೆಕ್ಟರ್ ಕ್ರಿಸ್ ಶ್ರೀಕಾಂತ್, ರಾಣಾ ವಿರುದ್ಧ ಒಂದೆಜ್ಜೆ ಮುಂದೆ ಹೋಗಿ ಟೀಕಿಸಿದ್ರು. ರಾಣಾ, ಕೋಚ್ ಗಂಭೀರ್​ರ YES MAN ಆಗಿದ್ದಾರೆ. ಅದಕ್ಕೆ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಅಂತ ಬಹಿರಂಗವಾಗಿ ಟೀಕಿಸಿದರು.  ಅದೇ ಶ್ರೀಕಾಂತ್, ರಾಣಾ ವಿಚಾರದಲ್ಲಿ ಯು-ಟರ್ನ್ ಹೊಡೆದಿದ್ದಾರೆ. ಹರ್ಷಿತ್ ರಾಣಾ, ದಿನೇ ದಿನೇ ಮೆಚ್ಯೂರ್ಡ್ ಪ್ಲೇಯರ್ ಆಗುತ್ತಿದ್ದಾರೆ. ಬಾಲ್, ಬ್ಯಾಟ್​ನಿಂದ ಕಾಣಿಕೆ ನೀಡಿ ತಂಡದ ಪ್ರಮುಖ ಆಲ್​ರೌಂಡರ್​ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ರಾಣಾ, ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್ ಅಂತೆಲ್ಲಾ ಹಾಡಿ ಹೊಗಳಿದ್ರು. ಏನೇ ಇರಲಿ.. ಅನುಭವದಿಂದ ಪ್ರತಿಯೊಬ್ಬರೂ ಪಾಠ ಕಲಿಯುತ್ತಾರೆ. ಇದು ರಾಣಾಗೂ ಅನ್ವಯವಾಗುತ್ತದೆ. ರಾಣಾ, ಎಲ್ಲಾ ಫಾರ್ಮೆಟ್​ಗಳಲ್ಲೂ ಟೀಮ್ ಇಂಡಿಯಾಕ್ಕೆ ಕಾಂಟ್ರಿಬ್ಯೂಟ್ ಮಾಡಿ ಗ್ರೇಟ್ ಆಲ್​ರೌಂಡರ್ ಆಗಲಿ ಅನ್ನೋದೇ, ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.

   


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 day ago

   
Image 1
Image 1

ಹೀನಾಯವಾಗಿ ಸೂತ ಸೂರ್ಯಕುಮಾರ್ ಯಾದವ್ ಪಡೆ.. ಸೋಲಿಗೆ ಕಾರಣವಾಯ್ತು 3 ತಪ್ಪುಗಳು..!

ನಿನ್ನೆ  ವಿಶಾಖಪಟ್ಟಣಂನ ACA-VDCA ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್... ಓದನ್ನು ಮುಂದುವರಿಸಿ


Edited by: ಬಾನು

3 days ago

   
Image 1

ಬಾರಿಯ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಿದ್ದ 20 ತಂಡಗಳಲ್ಲಿ ಸೂಪರ್-8 ಸುತ್ತಿಗೆ 8 ಎಂಟ್ರಿ ಕೊಟ್ಟ ತಂಡಗಳು ಯಾವುವು ಗೊತ್ತಾ..?

ಫ್ಲೋರಿಡಾ: ಬಾರಿಯ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಿದ್ದ 20 ತಂಡಗ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

4 ಓವರ್‌, 3 ವಿಕೆಟ್‌ ಕಿತ್ತು ನೂತನ ದಾಖಲೆ ಬರೆದ ಲಾಕಿ ಫರ್ಗ್ಯೂಸನ್‌!

ಟ್ರಿನಿಡಾಡ್: ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ ಮೇಡನ್‌ ಮಾಡುವುದು ಅಪರೂಪ. ಹೀಗಿರು... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಕೊಹ್ಲಿ ಹಾಗೂ ರೋಹಿತ್ ಅನುಭವ ಭಾರತ ತಂಡಕ್ಕೆ ನಿಜಕ್ಕೂ ಅಗತ್ಯವಿದೆ : ಸಂಜಯ್ ಮಾಂಜ್ರೇಕರ್

ನವದೆಹಲಿ: ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಭವ ತಂಡಕ್ಕೆ ನಿಜಕ್ಕೂ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಟಿ20 ವಿಶ್ವಕಪ್​ನಲ್ಲಿ ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿ ಪಾಕಿಸ್ತಾನ ತಂಡ 19ನೇ ಓವರ್​​ನಲ್ಲಿ ಗೆಲುವು

ಟಿ20 ವಿಶ್ವಕಪ್​ನಲ್ಲಿ  ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಪಾಕಿಸ್ತಾ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್!?.. ಪದಗ್ರಹಣಕ್ಕೆ ಡೇಟ್ ಫಿಕ್ಸ್!

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರಯಾಣದ ಆಧಾರದ ಮೇಲೆ ಗಂಭೀರ್ ಪದಗ್ರಹಣವಾಗಲಿದೆ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ರೋಹಿತ್ ಶರ್ಮಾರನ್ನು ಅನ್ ಫಾಲೋ ಮಾಡಿದ ಶುಭ್ಮನ್ ಗಿಲ್! ಯಾಕೆ ಗೊತ್ತಾ..?

ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಲೀಗ್‌ ಸುತ್ತಿನ ಪಂದ್ಯಗಳು ಮ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಟೀಂ ಇಂಡಿಯಾದಲ್ಲಿ ಮೂಡಿತೇ ಬಿರುಕು.!? ಇಬ್ಬರು ಆಟಗಾರರು ಭಾರತಕ್ಕೆ ವಾಪಸ್..!

ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಲೀಗ್‌ ಸ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ಟಿ20 ವಿಶ್ವಕಪ್‌ʼಗೆ ವಿದಾಯ ಹೇಳಿದ ನ್ಯೂಜಿಲೆಂಡ್ ಸ್ಟಾರ್ ವೇಗಿ!

ವೆಸ್ಟ್ ಇಂಡೀಸ್​​: ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿದೆ. ಇನ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1

ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ.... ಗೆಲುವಿನ ಖಾತೆ ತೆರೆದ ದಕ್ಷಿಣ ಆಫ್ರಿಕಾ!

ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ ದಾಖಲಿಸಿದ್ದು, ಕಿವೀಸ್ ಗೆಲುವಿ... ಓದನ್ನು ಮುಂದುವರಿಸಿ


Edited by: ಬಾನು

1 year ago

   
Image 1