ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ.... ಗೆಲುವಿನ ಖಾತೆ ತೆರೆದ ದಕ್ಷಿಣ ಆಫ್ರಿಕಾ!

ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾಗೆ 1 ರನ್​ ರೋಚಕ ಜಯ ದಾಖಲಿಸಿದ್ದು, ಕಿವೀಸ್ ಗೆಲುವಿನ ಖಾತೆ ತೆರೆದಿದೆ.  ದಕ್ಷಿಣ ಆಫ್ರಿಕಾ ಮತ್ತು ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಹರಿಣ ಪಡೆ ರೀಜಾ ಹೆಂಡ್ರಿಕ್ಸ್(43) ಅವರ ಏಕಾಂಗಿ ಹೋರಾಟದ ನೆರವಿನಿಂದ 7 ವಿಕೆಟ್​ಗೆ 115 ರನ್​ ಗಳಿಸಿತು. ಗುರಿ ಬೆನ್ನಟ್ಟಿದ ನೇಪಾಳ ಅಂತಿಮ ಓವರ್​ನ 2 ಎಸೆತದಲ್ಲಿ ಗೆಲುವಿಗೆ 2 ರನ್​ ಬಾರಿಸಲು ಸಾಧ್ಯವಾಗದೆ ವಿರೋಚಿತ 1 ರನ್​ ಅಂತರದ ಸೋಲು ಕಂಡಿತು. 

 

ಅಂತಿಮವಾಗಿ 7 ವಿಕೆಟ್​ಗೆ 114 ರನ್​ ಬಾರಿಸಿತು. ಒಂದು ರನ್​ ಗಳಿಸುತ್ತಿದ್ದರೂ ಕೂಡ ಪಂದ್ಯ ಟೈ ಗೊಂಡು ಸೂಪರ್​ ಓವರ್​ ಕಾಣುತ್ತಿತ್ತು. ಆದರೆ ಗುಲ್ಸನ್ ಝಾ ರನೌಟ್​ ಬಲೆಗೆ ಬಿದ್ದು ತಂಡ ಸೋಲಿಗೆ ತುತ್ತಾಯಿತು. ದಕ್ಷಿಣ ಆಫ್ರಿಕಾ ಪರ ತಬ್ರೈಜ್ ಶಮ್ಸಿ ಸ್ಪಿನ್​ ಮ್ಯಾಚಿಕ್​ ನಡೆಸಿ 4 ವಿಕೆಟ್​ ಕಿತ್ತು ಮಿಂಚಿದರು. ಚೇಸಿಂಗ್​ ಆರಂಭಿಸಿದ ನೇಪಾಳ ಉತ್ತಮ ಆರಂಭ ಗಳಿಸಿದರೂ ಕೂಡ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಆದರೆ ಗೆಲ್ಲುವ ಅವಕಾಶವೂ ಇತ್ತು. ಅಂತಿಮ ಓವರ್​ನಲ್ಲಿ ಗೆಲುವಿಗೆ 8 ರನ್​ ಬೇಕಿತ್ತು. 

 

ಈ ಓವರ್​ ಎಸೆದ ಒಟ್ನೀಲ್ ಬಾರ್ಟ್ಮನ್ ಮೊದಲ 2 ಎಸೆತವನ್ನು ಡಾಟ್​ ಮಾಡಿದರು. ಮೂರನೇ ಎಸೆತದಲ್ಲಿ ಗುಲ್ಸನ್ ಝಾ ಬೌಂಡರಿ ಬಾರಿಸಿದ ಪರಿಣಾಮ ಪಂದ್ಯ ಮತ್ತಷ್ಟು ರೋಚಕತೆ ಸೃಷ್ಟಿಸಿತು. ಮುಂದಿನ ಎಸೆತದಲ್ಲಿ ಗುಲ್ಸನ್ 2 ರನ್ ಕಸಿದರು. ಅಂತಿಮವಾಗಿ 2 ಎಸೆತದ ಮುಂದೆ 2 ರನ್​ ತೆಗೆಯುವ ಸವಾಲು ಎದುರಾಯಿತು. 5ನೇ ಎಸೆತವನ್ನು ಗುಲ್ಸನ್ ಡಾಟ್​ ಮಾಡಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 2 ರನ್​ ಬೇಕಿದ್ದಾಗ ಗುಲ್ಸನ್ ರನೌಟ್​ ಆದರು. ದಕ್ಷಿಣ ಆಫ್ರಿಕಾ 1 ರನ್ ಅಂತರದ​ ರೋಚಕ ಗೆಲುವು ಸಾಧಿಸಿತು. 

 

ಮೊದಲು ಬ್ಯಾಟಿಂಗ್​ ನಡೆಸಿದ ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಹೊರತುಪಡಿಸಿ ಉಳಿದೆಲ್ಲರೂ ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಕಂಡರು. ಯಾರು ಕೂಡ ಕನಿಷ್ಠ 20ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಟ್ರಿಸ್ಟಾನ್ ಸ್ಟಬ್ಸ್ 18 ಎಸೆತಗಳಿಂದ ಅಜೇಯ 27 ರನ್​ ಬಾರಿಸಿದರು. ಹೆಂಡ್ರಿಕ್ಸ್ 43 ರನ್​ ಬಾರಿಸಿದರು. ನಾಯಕ ಐಡೆನ್​ ಮಾರ್ಕ್ರಮ್​(15) ಅವರ ಬ್ಯಾಟಿಂಗ್​ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿಯಿತು. ದಿನದ ಮತ್ತೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಉಗಾಂಡ 18.4 ಓವರ್​ಗಳಲ್ಲಿ 40 ರನ್​ಗೆ ಆಲೌಟ್​ ಆಯಿತು. ನ್ಯೂಜಿಲ್ಯಾಂಡ್​ ಈ ಮೊತ್ತವನ್ನು ಕೇವಲ 1 ವಿಕೆಟ್​ನಷ್ಟಕ್ಕೆ 41 ರನ್​ ಬಾರಿಸಿ 9 ವಿಕೆಟ್​ಗಳ ಗೆಲುವು ಸಾಧಿಸಿತು.

 

 


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

3 months ago

   
Image 1
Image 1

ಬಾರಿಯ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಿದ್ದ 20 ತಂಡಗಳಲ್ಲಿ ಸೂಪರ್-8 ಸುತ್ತಿಗೆ 8 ಎಂಟ್ರಿ ಕೊಟ್ಟ ತಂಡಗಳು ಯಾವುವು ಗೊತ್ತಾ..?

ಫ್ಲೋರಿಡಾ: ಬಾರಿಯ ಟಿ20 ವಿಶ್ವಕಪ್‍ನಲ್ಲಿ ಭಾಗವಹಿಸಿದ್ದ 20 ತಂಡಗ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

4 ಓವರ್‌, 3 ವಿಕೆಟ್‌ ಕಿತ್ತು ನೂತನ ದಾಖಲೆ ಬರೆದ ಲಾಕಿ ಫರ್ಗ್ಯೂಸನ್‌!

ಟ್ರಿನಿಡಾಡ್: ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್‌ ಮೇಡನ್‌ ಮಾಡುವುದು ಅಪರೂಪ. ಹೀಗಿರು... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಕೊಹ್ಲಿ ಹಾಗೂ ರೋಹಿತ್ ಅನುಭವ ಭಾರತ ತಂಡಕ್ಕೆ ನಿಜಕ್ಕೂ ಅಗತ್ಯವಿದೆ : ಸಂಜಯ್ ಮಾಂಜ್ರೇಕರ್

ನವದೆಹಲಿ: ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಭವ ತಂಡಕ್ಕೆ ನಿಜಕ್ಕೂ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಟಿ20 ವಿಶ್ವಕಪ್​ನಲ್ಲಿ ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿ ಪಾಕಿಸ್ತಾನ ತಂಡ 19ನೇ ಓವರ್​​ನಲ್ಲಿ ಗೆಲುವು

ಟಿ20 ವಿಶ್ವಕಪ್​ನಲ್ಲಿ  ತನ್ನ ಲೀಗ್ ಸುತ್ತಿನ ಕೊನೆಯ ಪಂದ್ಯವನ್ನಾಡಿದ ಪಾಕಿಸ್ತಾ... ಓದನ್ನು ಮುಂದುವರಿಸಿ


Edited by: ಬಾನು

2 months ago

   
Image 1

ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್!?.. ಪದಗ್ರಹಣಕ್ಕೆ ಡೇಟ್ ಫಿಕ್ಸ್!

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪ್ರಯಾಣದ ಆಧಾರದ ಮೇಲೆ ಗಂಭೀರ್ ಪದಗ್ರಹಣವಾಗಲಿದೆ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ರೋಹಿತ್ ಶರ್ಮಾರನ್ನು ಅನ್ ಫಾಲೋ ಮಾಡಿದ ಶುಭ್ಮನ್ ಗಿಲ್! ಯಾಕೆ ಗೊತ್ತಾ..?

ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಲೀಗ್‌ ಸುತ್ತಿನ ಪಂದ್ಯಗಳು ಮ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಟೀಂ ಇಂಡಿಯಾದಲ್ಲಿ ಮೂಡಿತೇ ಬಿರುಕು.!? ಇಬ್ಬರು ಆಟಗಾರರು ಭಾರತಕ್ಕೆ ವಾಪಸ್..!

ಫ್ಲೋರಿಡಾ: ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಲೀಗ್‌ ಸ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಟಿ20 ವಿಶ್ವಕಪ್‌ʼಗೆ ವಿದಾಯ ಹೇಳಿದ ನ್ಯೂಜಿಲೆಂಡ್ ಸ್ಟಾರ್ ವೇಗಿ!

ವೆಸ್ಟ್ ಇಂಡೀಸ್​​: ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿದೆ. ಇನ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಇಂದಿನ ಭಾರತ vs ಕೆನಡಾ ವಿಶ್ವಕಪ್ ಪಂದ್ಯ ನಡೆಯೋದು ಡೌಟ್‌..!

ಭಾರತ vs ಕೆನಡಾ ಪಂದ್ಯ ನಡೆಯುವುದು ಡೌಟ್ ಎನ್ನಲಾಗಿದೆ. ಫ್ಲೋರಿಡಾದ ಸೆಂಟ್ರಲ್ ಸೆಂಟ್ರ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1

ಟಿ20 ವಿಶ್ವಕಪ್​ನಿಂದ ಗಂಟು ಮೂಟೆ ಕಟ್ಟಿದ ಪಾಕಿಸ್ತಾನ..! ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಸೋತ ಪಾಕಿಸ್ತಾನ್

ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಗಂಟು ಮೂಟೆ ಕಟ್ಟಿದೆ. ಯುಎಸ್​​ಎ ಮತ್ತು ಐರ... ಓದನ್ನು ಮುಂದುವರಿಸಿ


Edited by: ಬಾನು

3 months ago

   
Image 1