ಹೊಸ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ನಿಯಮ: ಸ್ವಂತ ಜಾಗ ಅಥವಾ 15 ವರ್ಷ ಲೀಸ್ ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ಹೊಸ ಖಾಸಗಿ ಶಾಲೆಗಳ ಆರಂಭ, ಮಾನ್ಯತೆ ಮತ್ತು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ. ಇದರ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣವನ್ನು ಮತ್ತಷ್ಟು ಕಠಿಣಗೊಳಿಸಲು ಸರ್ಕಾರ ಮುಂದಾಗಿದೆ.
‘ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ) (ತಿದ್ದುಪಡಿ) ನಿಯಮಗಳು 2026’ ಕರಡು ಪ್ರಕಾರ, ಪೂರ್ವ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಹೊಸ ಖಾಸಗಿ ಶಾಲೆ ಆರಂಭಿಸಲು ಆಡಳಿತ ಮಂಡಳಿಗೆ ಸ್ವಂತ ಜಾಗ ಹೊಂದಿರುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಕನಿಷ್ಠ 15 ವರ್ಷಗಳ ಲೀಸ್ ಆಧಾರಿತ ಜಾಗ ಹೊಂದಿರಬೇಕು.
ಜಾಗದ ಮಾಲೀಕತ್ವ ದೃಢೀಕರಣಕ್ಕಾಗಿ ಪಹಣಿ, ಇ-ಖಾತಾ ಅಥವಾ ಖಾತಾ ದಾಖಲೆಗಳನ್ನು ಸಲ್ಲಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ಇನ್ನೊಂದು ಪ್ರಮುಖ ಅಂಶವೆಂದರೆ, ಹಾಲಿ ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೆ, ಸುರಕ್ಷಿತವಾದ ಸ್ವಂತ, ಬಾಡಿಗೆ ಅಥವಾ ಲೀಸ್ ಜಾಗದ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲು ಅವಕಾಶ ನೀಡಲಾಗಿದೆ.
ಮಾನ್ಯತೆಗಾಗಿ ಅರ್ಜಿ ಸಲ್ಲಿಸುವಾಗ ಇನ್ನುಮುಂದೆ ‘ಇ-ಬ್ಯಾಂಕ್ ಗ್ಯಾರಂಟಿ’ ರೂಪದಲ್ಲಿ ಭದ್ರತಾ ಠೇವಣಿ ನೀಡುವುದು ಕಡ್ಡಾಯವಾಗಲಿದೆ. ಈ ಕರಡು ನಿಯಮಗಳ ಕುರಿತು ಸಾರ್ವಜನಿಕರು ಹಾಗೂ ಸಂಬಂಧಿತರು ತಮ್ಮ ಆಕ್ಷೇಪಣೆಗಳನ್ನು ಮುಂದಿನ 15 ದಿನಗಳೊಳಗೆ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎಂ.ಎಸ್. ಕಟ್ಟಡ, ಬೆಂಗಳೂರು ಅವರಿಗೆ ಸಲ್ಲಿಸಬಹುದು. ಒಟ್ಟಿನಲ್ಲಿ, ಈ ಹೊಸ ನಿಯಮಗಳು ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶ ಹೊಂದಿವೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಎಸ್ಎಸ್ಎಲ್ಸಿ ಅಂಕಪದ್ದತಿಯಲ್ಲಿ ದೊಡ್ಡ ಬದಲಾವಣೆ: ಈ ವರ್ಷದಿಂದ SSLC ಪರೀಕ್ಷೆ ಅಂಕ 625 ಅಲ್ಲ 525 ಮಾತ್ರ! ಹಿಂದಿ ಅಂಕಕ್ಕೆ ಕೋಕ್
ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕ... ಓದನ್ನು ಮುಂದುವರಿಸಿ
ಪೋಷಕರಿಗೆ ಗುಡ್ ನ್ಯೂಸ್: ಒಂದನೇ ತರಗತಿಯ ದಾಖಲೆಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ
ಬೆಂಗಳೂರು: ರಾಜ್ಯ ಸರ್ಕಾರವು 2026-27ನೇ ಶೈಕ್ಷಣಿಕ ವರ್ಷದಲ್ಲಿ ಒ... ಓದನ್ನು ಮುಂದುವರಿಸಿ
ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಮುಂದೂಡಿಕೆ – ಮಾರ್ಚ್ 31ಕ್ಕೆ ಮರುನಿಗದಿ
ಬೆಂಗಳೂರು: ಮಾರ್ಚ್ 30ರಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ ತೃತೀಯ ಭ... ಓದನ್ನು ಮುಂದುವರಿಸಿ
ಪೌಷ್ಟಿಕ ಆಹಾರ ಯೋಜನೆ : ಇನ್ಮುಂದೆ ಶಾಲೆಗಳಲ್ಲಿ ಮೊಟ್ಟೆ ಬೇಯಿಸುವ ಕಾರ್ಯ ಶಿಕ್ಷಕರ ಹೊಣೆ!
ಬೆಂಗಳೂರು, ಮಾರ್ಚ್ 25: ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಶಾಲೆ... ಓದನ್ನು ಮುಂದುವರಿಸಿ
ಮುಂಡರಗಿ
ಕೂಲಿ ಕೆಲಸಕ್ಕೆ ಹೋದ ವಿದ್ಯಾರ್ಥಿನಿ ಮತ್ತೆ ಪರೀಕ್ಷಾ ಹಾಲ್‌ಗೆ - ಬಡತಿ ಮೀರಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಅವಕಾಶ ಪಡೆದು ಯಶಸ್ವಿ”
ಗದಗ: ಬಡತನದ ಹೊಡೆತಕ್ಕೆ ಸಿಲುಕಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿ... ಓದನ್ನು ಮುಂದುವರಿಸಿ
ಮನೆ ಮನೆಗೆ ಭೇಟಿ, ಹಳೆಯ ವಿದ್ಯಾರ್ಥಿಗಳ ಸಹಕಾರ: ಮಕ್ಕಳನ್ನು ಶಾಲೆಗೆ ಬರಿಸಲು ಮಧು ಬಂಗಾರಪ್ಪ ನಿರ್ದೇಶನ
ಬೆಂಗಳೂರು: 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ದಾಖಲಾತಿ ಅ... ಓದನ್ನು ಮುಂದುವರಿಸಿ
ಕುಷ್ಟಗಿ ಹಾಗೂ ಕೊಪ್ಪಳದಲ್ಲಿ ಹಿಂದುಳಿದ ವರ್ಗ ವಿದ್ಯಾರ್ಥಿನಿಲಯಗಳ ಅಗತ್ಯತೆಯನ್ನು ಹೆಚ್ಚಿಸಲಾಗುವುದು -ಶಾಸಕರ ಪ್ರಶ್ನೆಗೆ ಉತ್ತರ
ಬೆಂಗಳೂರು: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ... ಓದನ್ನು ಮುಂದುವರಿಸಿ
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: 2026ನೇ ಮಾರ್ಚ್ 18ರಿಂದ ಕರ್ನಾಟಕದಲ್ಲಿ ಎಸ್‌ಎಸ್‌ಎಲ್... ಓದನ್ನು ಮುಂದುವರಿಸಿ
SSLC ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ – ಹಾಲ್‌ಟಿಕೆಟ್ ತೋರಿಸಿ ಉಚಿತ ಪ್ರಯಾಣ
ಬೆಂಗಳೂರು: 2025–26ನೇ ಸಾಲಿನ ಎಸ್‌ಎಸ್‌ಎಲ್... ಓದನ್ನು ಮುಂದುವರಿಸಿ
ಶಿಕ್ಷಣ ಇಲಾಖೆ: ಸಿಬ್ಬಂದಿ ಹಾಜರಾತಿಗೆ ‘ಕರ್ತವ್ಯ’ ಆ್ಯಪ್ ಕಡ್ಡಾಯ!
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತ... ಓದನ್ನು ಮುಂದುವರಿಸಿ