ಎಸ್‌ಎಸ್‌ಎಲ್‌ಸಿ ಅಂಕಪದ್ದತಿಯಲ್ಲಿ ದೊಡ್ಡ ಬದಲಾವಣೆ: ಈ ವರ್ಷದಿಂದ SSLC ಪರೀಕ್ಷೆ ಅಂಕ 625 ಅಲ್ಲ 525 ಮಾತ್ರ! ಹಿಂದಿ ಅಂಕಕ್ಕೆ ಕೋಕ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಎಂಬ ಬೇಡಿಕೆಗಳ ಹಿನ್ನೆಲೆ, ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಇನ್ನು ಮುಂದೆ ಎಸ್‌ಎಸ್‌ಎಲ್‌ಸಿ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

 

ಹೊಸ ನಿಯಮದ ಪ್ರಕಾರ, ತೃತೀಯ ಭಾಷೆಗಳಾದ ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ ವಿಷಯಗಳ ಅಂಕಗಳನ್ನು ಒಟ್ಟು ಫಲಿತಾಂಶದಲ್ಲಿ ಪರಿಗಣಿಸಲಾಗುವುದಿಲ್ಲ. ಬದಲಾಗಿ, ಈ ವಿಷಯಗಳಿಗೆ A, B, C, D ಗ್ರೇಡ್ ನೀಡಲಾಗುತ್ತದೆ. ಆದರೆ, ತೃತೀಯ ಭಾಷೆ ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿಯೇ ಮುಂದುವರಿಯಲಿದೆ.

 

ಪ್ರಸ್ತುತ ನಡೆಯುತ್ತಿರುವ ಪರೀಕ್ಷೆಗಳ ನಡುವೆಯೇ ಈ ಬದಲಾವಣೆ ಘೋಷಿಸಲಾಗಿದ್ದು, ಹೊಸ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ತ್ರಿಭಾಷಾ ನೀತಿ ಮುಂದುವರಿದರೂ, ಮೌಲ್ಯಮಾಪನ ವಿಧಾನದಲ್ಲಿ ಈ ಬದಲಾವಣೆ ತರಲಾಗಿದೆ. ಇದುವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ 625 ಅಂಕಗಳಿಗೆ ನಡೆಯುತ್ತಿತ್ತು. ಈಗ ತೃತೀಯ ಭಾಷೆಯ 100 ಅಂಕಗಳನ್ನು ಹೊರಗಿಡಲಾಗುವುದರಿಂದ, ವಿದ್ಯಾರ್ಥಿಗಳ ಅಂತಿಮ ಫಲಿತಾಂಶವನ್ನು 525 ಅಂಕಗಳ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಈ ಕ್ರಮದಿಂದ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡ ಕಡಿಮೆಯಾಗಲಿದೆ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಪಟ್ಟಿದೆ. ಉಳಿದ ತರಗತಿಗಳಲ್ಲಿಯೂ ಇದೇ ಮಾದರಿಯನ್ನು ಜಾರಿಗೆ ತರಬೇಕೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

6 days ago

   
Image 1
Image 1
ಬೆಂಗಳೂರು ನಗರ

ಹೊಸ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ನಿಯಮ: ಸ್ವಂತ ಜಾಗ ಅಥವಾ 15 ವರ್ಷ ಲೀಸ್ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ಹೊಸ ಖಾಸಗಿ ಶಾಲೆಗಳ ಆರಂಭ, ಮಾನ್ಯತೆ ಮತ್... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ಪೋಷಕರಿಗೆ ಗುಡ್ ನ್ಯೂಸ್: ಒಂದನೇ ತರಗತಿಯ ದಾಖಲೆಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ

ಬೆಂಗಳೂರು: ರಾಜ್ಯ ಸರ್ಕಾರವು 2026-27ನೇ ಶೈಕ್ಷಣಿಕ ವರ್ಷದಲ್ಲಿ ಒ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಮುಂದೂಡಿಕೆ – ಮಾರ್ಚ್ 31ಕ್ಕೆ ಮರುನಿಗದಿ

ಬೆಂಗಳೂರು: ಮಾರ್ಚ್ 30ರಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ ತೃತೀಯ ಭ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಪೌಷ್ಟಿಕ ಆಹಾರ ಯೋಜನೆ : ಇನ್ಮುಂದೆ ಶಾಲೆಗಳಲ್ಲಿ ಮೊಟ್ಟೆ ಬೇಯಿಸುವ ಕಾರ್ಯ ಶಿಕ್ಷಕರ ಹೊಣೆ!

ಬೆಂಗಳೂರು, ಮಾರ್ಚ್ 25: ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಶಾಲೆ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಗದಗ

ಮುಂಡರಗಿ

ಕೂಲಿ ಕೆಲಸಕ್ಕೆ ಹೋದ ವಿದ್ಯಾರ್ಥಿನಿ ಮತ್ತೆ ಪರೀಕ್ಷಾ ಹಾಲ್‌ಗೆ - ಬಡತಿ ಮೀರಿ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಅವಕಾಶ ಪಡೆದು ಯಶಸ್ವಿ”

ಗದಗ: ಬಡತನದ ಹೊಡೆತಕ್ಕೆ ಸಿಲುಕಿ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಮನೆ ಮನೆಗೆ ಭೇಟಿ, ಹಳೆಯ ವಿದ್ಯಾರ್ಥಿಗಳ ಸಹಕಾರ: ಮಕ್ಕಳನ್ನು ಶಾಲೆಗೆ ಬರಿಸಲು ಮಧು ಬಂಗಾರಪ್ಪ ನಿರ್ದೇಶನ

ಬೆಂಗಳೂರು: 2026–27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ದಾಖಲಾತಿ ಅ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಕುಷ್ಟಗಿ ಹಾಗೂ ಕೊಪ್ಪಳದಲ್ಲಿ ಹಿಂದುಳಿದ ವರ್ಗ ವಿದ್ಯಾರ್ಥಿನಿಲಯಗಳ ಅಗತ್ಯತೆಯನ್ನು ಹೆಚ್ಚಿಸಲಾಗುವುದು -ಶಾಸಕರ ಪ್ರಶ್ನೆಗೆ ಉತ್ತರ

ಬೆಂಗಳೂರು: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1
ಬೆಂಗಳೂರು ನಗರ

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಮಕ್ಕಳಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 2026ನೇ ಮಾರ್ಚ್ 18ರಿಂದ ಕರ್ನಾಟಕದಲ್ಲಿ ಎಸ್‌ಎಸ್‌ಎಲ್... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1
ಬೆಂಗಳೂರು ನಗರ

SSLC ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿಶೇಷ ಸೌಲಭ್ಯ – ಹಾಲ್‌ಟಿಕೆಟ್ ತೋರಿಸಿ ಉಚಿತ ಪ್ರಯಾಣ

ಬೆಂಗಳೂರು: 2025–26ನೇ ಸಾಲಿನ ಎಸ್‌ಎಸ್‌ಎಲ್‌... ಓದನ್ನು ಮುಂದುವರಿಸಿ


Edited by: ಬಾನು

2 weeks ago

   
Image 1
ಬೆಂಗಳೂರು ನಗರ

ಶಿಕ್ಷಣ ಇಲಾಖೆ: ಸಿಬ್ಬಂದಿ ಹಾಜರಾತಿಗೆ ‘ಕರ್ತವ್ಯ’ ಆ್ಯಪ್ ಕಡ್ಡಾಯ!

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತ... ಓದನ್ನು ಮುಂದುವರಿಸಿ


Edited by: ಬಾನು

3 weeks ago

   
Image 1