‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹4.91 ಕೋಟಿ ವಂಚನೆ: ಹಿರಿಯ ಸಂಶೋಧಕ ಬಲಿ
ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಹಿರಿಯ ಸಂಶೋಧಕನನ್ನು ಬೆದರಿಸಿ ₹4.91 ಕೋಟಿ ವಂಚಿಸಿರುವ ಶಾಕಿಂಗ್ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. 94 ವರ್ಷದ ಸಂಶೋಧಕರು ಮಾರ್ಚ್ 8ರಂದು ದೂರು ನೀಡಿದ್ದು, ಕೇಂದ್ರ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಇಂತಹ 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ. ಅಶೋಕ್ ನಗರ ಠಾಣಾ ವ್ಯಾಪ್ತಿಯ ವಿಕ್ಟೋರಿಯಾ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯೊಂದಿಗೆ ವಾಸವಾಗಿದ್ದ ದೂರುದಾರರಿಗೆ ಡಿಸೆಂಬರ್ 2ರಂದು ಲ್ಯಾಂಡ್‌ಲೈನ್ ಕರೆ ಬಂದಿದೆ. ‘ನಿಮ್ಮ ವಿರುದ್ಧ ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿದೆ’ ಎಂದು ಹೇಳಿ ಕರೆ ಕಡಿತಗೊಳಿಸಲಾಗಿದೆ.
ನಂತರ ‘ಸಂದೀಪ್ ರಾವ್’ ಎಂದು ಪರಿಚಯಿಸಿಕೊಂಡ ವ್ಯಕ್ತಿ ‘ನಾನು ಸಿಬಿಐ ಅಧಿಕಾರಿ’ ಎಂದು ಹೇಳಿ, ಆಧಾರ್ ಕಾರ್ಡ್ ಪ್ರತಿಯನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವಂತೆ ಸೂಚಿಸಿದ್ದಾನೆ. ಬಳಿಕ ನಕಲಿ ಎಫ್‌ಐಆರ್ ಪ್ರತಿಯನ್ನು ಕಳುಹಿಸಿ, ವಿವಿಧ ಸಂಖ್ಯೆಗಳ ಮೂಲಕ ವಿಡಿಯೋ ಕರೆ ಮಾಡಿ ದೂರುದಾರರನ್ನು ಭಯಭೀತರನ್ನಾಗಿಸಲಾಗಿದೆ.
2025ರ ಡಿಸೆಂಬರ್ 17ರಿಂದ 2026ರ ಫೆಬ್ರವರಿ 23ರವರೆಗೆ ‘ವಿಚಾರಣೆ’ ನೆಪದಲ್ಲಿ ಹಂತ ಹಂತವಾಗಿ ₹4.91 ಕೋಟಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರವೂ ಮತ್ತಷ್ಟು ಹಣ ಬೇಡಿಕೆ ಇಟ್ಟಾಗ ಅನುಮಾನಗೊಂಡ ದೂರುದಾರರು ಪೊಲೀಸರಿಗೆ ದೂರು ನೀಡಿದ್ದಾರೆ. ಪರಿಶೀಲನೆಯಲ್ಲಿ ದೂರುದಾರರು ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ. ಹಣ ಜಮೆಯಾಗಿರುವ ಖಾತೆಗಳು ‘ಮ್ಯೂಲ್ ಅಕೌಂಟ್’ಗಳಾಗಿರುವುದು ಪತ್ತೆಯಾಗಿದ್ದು, ಅವುಗಳ ಹಿಂದಿರುವ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ‘ಡಿಜಿಟಲ್ ಅರೆಸ್ಟ್’, ಸಿಬಿಐ ಅಥವಾ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಬರುವ ಕರೆಗಳಿಗೆ ತಕ್ಷಣ ಸ್ಪಂದಿಸಬಾರದು ಹಾಗೂ ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಹಣ ವರ್ಗಾವಣೆ ಮಾಡುವ ಮೊದಲು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೊಡ್ಡಬಳ್ಳಾಪುರ ತಾಲೂಕು
“ದಲಿತರ ಕಾಲೋನಿಗೆ ಇಲ್ಲ ಚರಂಡಿ: ಪಂಚಾಯತಿ ಮುಂದೆ ಕೊಳಚೆ ನೀರನ್ನ ಸಿಂಧಿಸಿ ಪ್ರತಿಭಟನೆ!”
ದೊಡ್ಡಬಳ್ಳಾಪುರ: ತಾಲೂಕಿನ ಹಾದ್ರೀಪುರ ಕಾಲೋನಿಯಲ್ಲಿ ಒಳಚರಂಡಿ ಸಮ... ಓದನ್ನು ಮುಂದುವರಿಸಿ
ಹುಳಿಯಾರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು: ಕಾಂತರಾಜು ಪ್ರಕರಣ ಸಿಐಡಿಗೆ ಹಸ್ತಾಂತರ
ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆ... ಓದನ್ನು ಮುಂದುವರಿಸಿ
ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಗಬ್ಬೆದ್ದು ನಾರುತಿರುವ ಚರಂಡಿ
ತುಮಕೂರು : ಜಿಲ್ಲೆ, ತುಮಕೂರು ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅಡವಿಸೋಮಾಪುರ ದನಗಳ ನೀರಿನ ತೊಟ್ಟಿ ಸ್ವಚ್ಛತೆ ಆರಂಭ: ಸುದ್ದಿ ಹಿನ್ನಲೆ ಗ್ರಾಮಸ್ಥರಿಗೆ ಸಿಕ್ಕ ಫಲ.!!
ಶಿಗ್ಗಾಂವಿ : ಕುನ್ನೂರ ಪಂಚಾಯಿತಿ ವ್ಯಾಪ್ತಿಯ ಅಡವಿಸೋಮಾಪುರ ಗ್ರಾ... ಓದನ್ನು ಮುಂದುವರಿಸಿ
ದೇವನಹಳ್ಳಿ
ದುಬೈನಿಂದ 200ಕ್ಕೂ ಹೆಚ್ಚು ಕನ್ನಡಿಗರು ಸುರಕ್ಷಿತವಾಗಿ ದೇವನಹಳ್ಳಿಗೆ ವಾಪಸ್
ಬೆಂಗಳೂರು ಗ್ರಾಮಾಂತರ : ಇತ್ತೀಚೆಗೆ ದುಬೈನಿಂದ 200ಕ್ಕೂ ಹೆಚ್ಚು... ಓದನ್ನು ಮುಂದುವರಿಸಿ
ಕೊಪ್ಪಳ ಪ.ಪಂ ಸಭೆ ಗಲಾಟೆ : ಸದಸ್ಯರ, ಪತ್ರಕರ್ತರ ಮೇಲೆ ಗುಂಪಿನ ಹಲ್ಲೆ ಯತ್ನ
ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅಡವಿಸೋಮಾಪುರದಲ್ಲಿ ದನಗಳ ನೀರಿನ ತೊಟ್ಟಿ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ
ಶಿಗ್ಗಾಂವಿ: ಕುನ್ನೂರ ಪಂಚಾಯತಿಯ ವ್ಯಾಪ್ತಿಯ ಅಡವಿಸೋಮಾಪುರ ಗ್ರಾಮ... ಓದನ್ನು ಮುಂದುವರಿಸಿ
ಮಾಹಿತಿ ತಡಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ₹50,000 ದಂಡ”
ಕಲಬುರಗಿ: ಮಾಹಿತಿ ಹಕ್ಕು ಅಧಿನಿಯಮ, 2005 ರ ಕಲಂ 18(3) ಮತ್ತು 2... ಓದನ್ನು ಮುಂದುವರಿಸಿ
4 ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಗೆಜ್ಜಲಗೆರೆದಿಂದ ವಿಧಾನಸೌಧದವರೆಗೆ ಪಾದಯಾತ್ರೆ – ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ
ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮದ್ದೂರು ನಗರಸಭೆಯ... ಓದನ್ನು ಮುಂದುವರಿಸಿ
ಮುಂಬರುವ ಪಂಚಾಯತ್ ಚುನಾವಣೆಗಳಿಗೆ ತಂತ್ರ: ‘ಯಡಿಯೂರಪ್ಪೋತ್ಸವ’ ಮೂಲಕ ಒಂದೇ ಕಲ್ಲಲ್ಲಿ ಎರಡು ಗುರಿ..!
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ‘ರಾಜಾಹುಲ... ಓದನ್ನು ಮುಂದುವರಿಸಿ