ಅಡವಿಸೋಮಾಪುರದಲ್ಲಿ ದನಗಳ ನೀರಿನ ತೊಟ್ಟಿ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ
ಶಿಗ್ಗಾಂವಿ: ಕುನ್ನೂರ ಪಂಚಾಯತಿಯ ವ್ಯಾಪ್ತಿಯ ಅಡವಿಸೋಮಾಪುರ ಗ್ರಾಮದಲ್ಲಿ ಪಶುಸಂಗೋಪನೆಗೆ ಅನುಕೂಲವಾಗಲೆಂದು ನಿರ್ಮಿಸಲಾದ ದನಗಳ ನೀರಿನ ತೊಟ್ಟಿ ಇದೀಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಸಾಕಷ್ಟು ಮನೆಗಳು ಹಸು, ಎಮ್ಮೆ ಸೇರಿದಂತೆ ವಿವಿಧ ದನಗಳನ್ನು ಸಾಕುತ್ತಿದ್ದು, ಅವುಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಪಂಚಾಯಿತಿ ವತಿಯಿಂದ ಈ ನೀರಿನ ತೊಟ್ಟಿಯನ್ನು ನಿರ್ಮಿಸಲಾಗಿತ್ತು.
ಆದರೆ, ನಿರ್ಮಾಣವಾದ ಕೆಲವೇ ದಿನಗಳಲ್ಲೇ ತೊಟ್ಟಿಯ ಸ್ವಚ್ಛತೆಗೆ ಯಾರು ಗಮನ ಹರಿಸದ ಕಾರಣ ಅದು ಕಸ, ಹೂಳು ಮತ್ತು ಪಾಚಿಯಿಂದ ತುಂಬಿ ಹೋಗಿದೆ. ನೀರು ನಿಲ್ಲುವ ಸ್ಥಿತಿಯಲ್ಲಿ ದುರ್ವಾಸನೆ ಉಂಟಾಗುತ್ತಿದ್ದು, ದನಗಳು ಆ ನೀರನ್ನು ಕುಡಿಯಲು ಹಿಂಜರಿಯುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಪಶುಗಳಿಗೆ ಆರೋಗ್ಯ ಸಮಸ್ಯೆಗಳು ಎದುರಾಗುವ ಭೀತಿ ವ್ಯಕ್ತವಾಗಿದೆ.
ಗ್ರಾಮಸ್ಥರು ಹಲವು ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ಗಮನಕ್ಕೆ ಈ ಸಮಸ್ಯೆಯನ್ನು ತಂದಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ದೂರಿದ್ದಾರೆ.
“ದನಗಳ ಉಪಯೋಗಕ್ಕಾಗಿ ನಿರ್ಮಿಸಿದ ತೊಟ್ಟಿ ಇದೀಗ ಕೇವಲ ಪ್ರದರ್ಶನ ವಸ್ತುವಾಗಿ ಉಳಿದಿದೆ. ಸ್ವಚ್ಛತೆ ಇಲ್ಲದ ಕಾರಣ ದನಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೊಟ್ಟಿಯ ಸ್ವಚ್ಛತೆ ಮಾಡಿಸಿ, ನಿಯಮಿತವಾಗಿ ನೀರು ತುಂಬಿಸುವ ವ್ಯವಸ್ಥೆ ಹಾಗೂ ನಿರ್ವಹಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಹಣದಿಂದ ನಿರ್ಮಿಸಲಾದ ಸೌಲಭ್ಯಗಳು ಸರಿಯಾಗಿ ಬಳಸಿಕೊಳ್ಳುವಂತೆ ನೋಡಿಕೊಳ್ಳುವುದು ಪಂಚಾಯಿತಿಯ ಜವಾಬ್ದಾರಿಯಾಗಿದೆ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ.
ವರದಿ: ಸೋಮಶೇಖರ ಲಮಾಣಿ
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ದೊಡ್ಡಬಳ್ಳಾಪುರ ತಾಲೂಕು
“ದಲಿತರ ಕಾಲೋನಿಗೆ ಇಲ್ಲ ಚರಂಡಿ: ಪಂಚಾಯತಿ ಮುಂದೆ ಕೊಳಚೆ ನೀರನ್ನ ಸಿಂಧಿಸಿ ಪ್ರತಿಭಟನೆ!”
ದೊಡ್ಡಬಳ್ಳಾಪುರ: ತಾಲೂಕಿನ ಹಾದ್ರೀಪುರ ಕಾಲೋನಿಯಲ್ಲಿ ಒಳಚರಂಡಿ ಸಮ... ಓದನ್ನು ಮುಂದುವರಿಸಿ
‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ₹4.91 ಕೋಟಿ ವಂಚನೆ: ಹಿರಿಯ ಸಂಶೋಧಕ ಬಲಿ
ಬೆಂಗಳೂರು: ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಹಿರಿಯ ಸಂಶೋಧಕನನ್ನ... ಓದನ್ನು ಮುಂದುವರಿಸಿ
ಹುಳಿಯಾರು ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ತಿರುವು: ಕಾಂತರಾಜು ಪ್ರಕರಣ ಸಿಐಡಿಗೆ ಹಸ್ತಾಂತರ
ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆ... ಓದನ್ನು ಮುಂದುವರಿಸಿ
ಚಿಕ್ಕತೊಟ್ಲುಕೆರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಗಬ್ಬೆದ್ದು ನಾರುತಿರುವ ಚರಂಡಿ
ತುಮಕೂರು : ಜಿಲ್ಲೆ, ತುಮಕೂರು ತಾಲೂಕಿನ ಕೋರ ಹೋಬಳಿಯ ಚಿಕ್ಕತೊಟ್ಲ... ಓದನ್ನು ಮುಂದುವರಿಸಿ
ಶಿಗ್ಗಾಂವ
ಅಡವಿಸೋಮಾಪುರ ದನಗಳ ನೀರಿನ ತೊಟ್ಟಿ ಸ್ವಚ್ಛತೆ ಆರಂಭ: ಸುದ್ದಿ ಹಿನ್ನಲೆ ಗ್ರಾಮಸ್ಥರಿಗೆ ಸಿಕ್ಕ ಫಲ.!!
ಶಿಗ್ಗಾಂವಿ : ಕುನ್ನೂರ ಪಂಚಾಯಿತಿ ವ್ಯಾಪ್ತಿಯ ಅಡವಿಸೋಮಾಪುರ ಗ್ರಾ... ಓದನ್ನು ಮುಂದುವರಿಸಿ
ದೇವನಹಳ್ಳಿ
ದುಬೈನಿಂದ 200ಕ್ಕೂ ಹೆಚ್ಚು ಕನ್ನಡಿಗರು ಸುರಕ್ಷಿತವಾಗಿ ದೇವನಹಳ್ಳಿಗೆ ವಾಪಸ್
ಬೆಂಗಳೂರು ಗ್ರಾಮಾಂತರ : ಇತ್ತೀಚೆಗೆ ದುಬೈನಿಂದ 200ಕ್ಕೂ ಹೆಚ್ಚು... ಓದನ್ನು ಮುಂದುವರಿಸಿ
ಕೊಪ್ಪಳ ಪ.ಪಂ ಸಭೆ ಗಲಾಟೆ : ಸದಸ್ಯರ, ಪತ್ರಕರ್ತರ ಮೇಲೆ ಗುಂಪಿನ ಹಲ್ಲೆ ಯತ್ನ
ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆಯಲ್ಲಿ... ಓದನ್ನು ಮುಂದುವರಿಸಿ
ಮಾಹಿತಿ ತಡಕ್ಕೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ₹50,000 ದಂಡ”
ಕಲಬುರಗಿ: ಮಾಹಿತಿ ಹಕ್ಕು ಅಧಿನಿಯಮ, 2005 ರ ಕಲಂ 18(3) ಮತ್ತು 2... ಓದನ್ನು ಮುಂದುವರಿಸಿ
4 ಗ್ರಾಮ ಪಂಚಾಯಿತಿಗಳನ್ನು ಕೈ ಬಿಡದಿದ್ದರೆ ಗೆಜ್ಜಲಗೆರೆದಿಂದ ವಿಧಾನಸೌಧದವರೆಗೆ ಪಾದಯಾತ್ರೆ – ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ
ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮದ್ದೂರು ನಗರಸಭೆಯ... ಓದನ್ನು ಮುಂದುವರಿಸಿ
ಮುಂಬರುವ ಪಂಚಾಯತ್ ಚುನಾವಣೆಗಳಿಗೆ ತಂತ್ರ: ‘ಯಡಿಯೂರಪ್ಪೋತ್ಸವ’ ಮೂಲಕ ಒಂದೇ ಕಲ್ಲಲ್ಲಿ ಎರಡು ಗುರಿ..!
ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ‘ರಾಜಾಹುಲ... ಓದನ್ನು ಮುಂದುವರಿಸಿ