ಯೂರಿಯಾ ಖರೀದಿಗೆ ಫಾರ್ಮರ್ ಐಡಿ ಕಡ್ಡಾಯ – ಮುಂಗಾರು ಹಂಗಾಮಿನಿಂದ ಹೊಸ ನಿಯಮ ಜಾರಿ

ಬೆಂಗಳೂರು: ರಾಜ್ಯದ ರೈತರು ಇನ್ನು ಮುಂದೆ ಯೂರಿಯಾ ರಸಗೊಬ್ಬರ ಖರೀದಿಸಲು ಫಾರ್ಮರ್ ಐಡಿ (ಎಫ್‌ಐಡಿ) ಹೊಂದಿರುವುದು ಕಡ್ಡಾಯವಾಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. 2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಕಾಳಸಂತೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ‘ಕೆ-ಕಿಸಾನ್’ ತಂತ್ರಾಂಶದ ಮೂಲಕ ರೈತರ ಜಮೀನಿನ ವಿಸ್ತೀರ್ಣ ಹಾಗೂ ಬೆಳೆದ ಬೆಳೆ ಆಧಾರದ ಮೇಲೆ ಅಗತ್ಯ ಪ್ರಮಾಣದ ಗೊಬ್ಬರವನ್ನು ಮಾತ್ರ ವಿತರಿಸಲಾಗುತ್ತದೆ.

 

ಇದುವರೆಗೆ ಫಾರ್ಮರ್ ಐಡಿ ಹೊಂದಿರದ ರೈತರು ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ತಮ್ಮ ಎಲ್ಲಾ ಸರ್ವೆ ನಂಬರ್‌ಗಳನ್ನು ಅದಕ್ಕೆ ಜೋಡಣೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಮುಂದೆ ರಸಗೊಬ್ಬರ ಮಾರಾಟಗಾರರು ‘ಕೆ-ಕಿಸಾನ್’ ತಂತ್ರಾಂಶದಲ್ಲಿ ರೈತರ ಎಫ್‌ಐಡಿ ನಮೂದಿಸಿದ ಬಳಿಕ ಮಾತ್ರ ಗೊಬ್ಬರ ಮಾರಾಟ ಮಾಡಬೇಕು ಎಂದು ಇಲಾಖೆ ಸೂಚಿಸಿದೆ. ನಿಯಮ ಉಲ್ಲಂಘಿಸಿದ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೋಂದಣಿ ಇಲ್ಲದೇ ಮಾರಾಟ, ಅಧಿಕ ದರಕ್ಕೆ ಮಾರಾಟ ಅಥವಾ ಕೃಷಿಯೇತರ ಬಳಕೆಗಾಗಿ ಗೊಬ್ಬರ ನೀಡಿದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

2 days ago

   
Image 1
Image 1

‘ಜನ ನಾಯಗನ್’ ಸೆನ್ಸಾರ್ ವಿವಾದ: ರಾಜಕೀಯ ಷಡ್ಯಂತ್ರ ಆರೋಪ

ತಿರುನಲ್ವೇಲಿ: ತಮಿಳುನಾಡಿನಲ್ಲಿ ಚುನಾವಣೆಯ ಕಾವು ಏರುತ್ತಿರುವ ನಡ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ರೈತರಿಗೆ ಜಮೀನು ದಾಖಲೆ ಅಗತ್ಯ – ಈ ದಾಖಲೆಗಳು ಕಡ್ಡಾಯ!

ಬೆಂಗಳೂರು: ರೈತರಿಗೆ ಜಮೀನು ಜೀವನೋಪಾಯದ ಪ್ರಮುಖ ಆಧಾರವಾಗಿದ್ದು,... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಮಂಡ್ಯ

ಮಂಡ್ಯದಲ್ಲಿ 150 ಕೋಟಿ ನೀರಾವರಿ ಯೋಜನೆ: ರೈತರಿಗೆ ಗುಡ್ ನ್ಯೂಸ್

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ರೈತರ ಬಹುಕಾಲದ ನೀರಾವರಿ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1
ಚಿಕ್ಕಬಳ್ಳಾಪುರ

ಗ್ಯಾಸ್ ಕೊರತೆ ಹೊಡೆತ: ಚಿಕ್ಕಬಳ್ಳಾಪುರದಲ್ಲಿ ಹೋಟೆಲ್‌ಗಳು ಬಂದ್, ರೈತರಿಗೆ ಸಂಕಷ್ಟ-ತರಕಾರಿ ಬೆಲೆ ಭಾರೀ ಕುಸಿತ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಗ್ಯಾಸ್ ಸಿಲಿ... ಓದನ್ನು ಮುಂದುವರಿಸಿ


Edited by: ಬಾನು

6 days ago

   
Image 1

ರೈತರಿಗೆ ಗುಡ್ ನ್ಯೂಸ್: ಸಾಲ ಮನ್ನಾಕ್ಕೆ ಹೊಸ ರೂಲ್ಸ್ – ಫ್ಯಾಮಿಲಿ ಸೆಲ್ಫಿ ಕಡ್ಡಾಯ!

ಹೈದರಾಬಾದ್: ರೈತರ ಸಾಲ ಮನ್ನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

ಟೊಮೆಟೊ ಉತ್ಪಾದನೆಯಲ್ಲಿ ನಂ.1 ದೇಶ ಯಾವುದು ಗೊತ್ತಾ..? ಉತ್ತರ ಕೇಳಿದ್ರೆ ಶಾಕ್!

ನಮ್ಮ ಮನೆಯ ಅಡುಗೆ ಪ್ರಪಂಚದಲ್ಲಿ ಟೊಮ್ಯಾಟೋಗಳ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೀದರ್

ಯುದ್ಧದ ಪರಿಣಾಮ ಬೀದರ್ ರೈತರಿಗೆ ಭಾರೀ ಹೊಡೆತ – ಕಲ್ಲಂಗಡಿ ಬೆಲೆ ₹2ಕ್ಕೆ ಕುಸಿತ

ಬೀದರ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಯ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

100ಕ್ಕೂ ಹೆಚ್ಚು ಹಸುಗಳು, ಲಕ್ಷಾಂತರ ಆದಾಯ – ದೀಸಾ ಮಹಿಳೆಯ ಗೆಲುವು

ಗಾಂಧೀನಗರ: ಗುಜರಾತ್‌ನ ಬನಾಸ್ ಡೈರಿ ಏಷ್ಯಾದಲ್ಲೇ ಅಗ್ರ ಸ್ಥಾನ ಪಡ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1

₹1.5 ಕೋಟಿ ತೆರಿಗೆ ಬಾಕಿ: ಹೈದರಾಬಾದ್ ನಲ್ಲಿರುವ ಜಯಲಲಿತಾ ಮನೆ ಸೀಲ್

ಹೈದರಾಬಾದ್: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಹೈದರ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1
ಬೆಂಗಳೂರು ನಗರ

ಬೆಂಬಲ ಬೆಲೆ ಯೋಜನೆ ಕುರಿತು ಕೇಂದ್ರದ ಜೊತೆ ರಾಜ್ಯದ ಚರ್ಚೆ

ಬೆಂಗಳೂರು: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂ... ಓದನ್ನು ಮುಂದುವರಿಸಿ


Edited by: ಬಾನು

1 week ago

   
Image 1