ವಿಜಯ್ ಅವರ ಟಿವಿಕೆ ಪಕ್ಷ 30 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಹೊಸ ಕುತೂಹಲ ಮೂಡಿಸಿದ ವಿಜಯ್
ಪುದುಚೇರಿ: ನಟ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದು, ಎಲ್ಲಾ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಭಾನುವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಮಂಗಳಂ ಮತ್ತು ಕದಿರ್ಕಾಮಂ ಕ್ಷೇತ್ರಗಳಿಂದ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ.
ಬಿಜೆಪಿ ಟಿಕೆಟ್ ನಿರಾಕರಣೆಯ ಹಿನ್ನೆಲೆ, ಪಕ್ಷವನ್ನು ತೊರೆದ ಸರವಣನ್ ಕುಮಾರ್ ಟಿವಿಕೆ ತಿರುಭುವನೈ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಎಐಎಡಿಎಂಕೆಯ ಮಾಜಿ ಶಾಸಕರಾದ ಕೆ.ಎ.ಯು. ಆಸನ ಮತ್ತು ಎಲ್. ಪೆರಿಯಸಾಮಿ ಕ್ರಮವಾಗಿ ಕಾರೈಕಲ್ (ದಕ್ಷಿಣ) ಹಾಗೂ ನೆಟ್ಟಪಕ್ಕಂ (ಮೀಸಲು) ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ, ಪುದುಚೇರಿ ಮಾಜಿ ಪೊಲೀಸ್ ಉಪ ಮಹಾನಿರೀಕ್ಷಕ ವಿ.ಜೆ. ಚಂದ್ರನ್ ಮತ್ತು ಕಾಂಗ್ರೆಸ್‌ನ ಮಾಜಿ ಶಾಸಕ ಎನ್. ಧನವೇಲು ಕೂಡ ಸ್ಪರ್ಧೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಇನ್ನೊಂದೆಡೆ, ಕಳೆದ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಿದ್ದ ಎನ್‌ಆರ್ ಕಾಂಗ್ರೆಸ್ (ಎಐಎನ್‌ಆರ್‌ಸಿ) ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಿಎಂ ಎನ್. ರಂಗಸಾಮಿ ಮತ್ತು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ಸೀಟು ಹಂಚಿಕೆ ಅಂತಿಮಗೊಂಡಿದ್ದು, 30 ಕ್ಷೇತ್ರಗಳಲ್ಲಿ ಬಿಜೆಪಿಗೆ 10, ಎನ್‌ಆರ್ ಕಾಂಗ್ರೆಸ್‌ಗೆ 16, ಹಾಗೂ ಉಳಿದ ಸ್ಥಾನಗಳನ್ನು ಎಐಎಡಿಎಂಕೆ ಮತ್ತು ಎಲ್‌ಜೆಕೆ ನಡುವೆ ಹಂಚಿಕೆ ಮಾಡಲಾಗಿದೆ.
ರಾಜ್ಯದಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ, ಸೀಟು ಹಂಚಿಕೆ ಕುರಿತು ಮಾತುಕತೆ ಇನ್ನೂ ಮುಂದುವರಿದಿದೆ. ಈ ನಡುವೆ ಟಿವಿಕೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವುದು ಚುನಾವಣಾ ರಣರಂಗದಲ್ಲಿ ಹೊಸ ಕುತೂಹಲ ಮೂಡಿಸಿದೆ. ಟಿವಿಕೆ ತಮಿಳುನಾಡಿನಲ್ಲೂ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡದೇ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ಈ ನಿಲುವಿನಿಂದ ಹಿಂದೆ ಸರಿಯುವ ಉದ್ದೇಶ ಇಲ್ಲ ಎಂದು ಪಕ್ಷ ಸ್ಪಷ್ಟಪಡಿಸಿದೆ. ಪುದುಚೇರಿ ವಿಧಾನಸಭಾ ಚುನಾವಣೆಯು ಏಪ್ರಿಲ್ 9ರಂದು ನಡೆಯುವಂತೆ, ಮೇ 4ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
"ಖರ್ಗೆಯ ಟೀಕೆಗೆ H.ಡಿ. ದೇವೇಗೌಡರ ಖಡಕ್ ಪ್ರತಿಕ್ರಿಯೆ: ಕಾಂಗ್ರೆಸ್ ದ್ರೋಹದ ನಿಜಾಸತ್ಯ ಹೇಳಿಕೆ"
ನವದೆಹಲಿ: ಮಾಜಿ ಪ್ರಧಾನಿಯರಾದ ಎಚ್.ಡಿ. ದೇವೇಗೌಡ ಸೋಮವಾರ ರಾಜ್ಯಸ... ಓದನ್ನು ಮುಂದುವರಿಸಿ
ಭಾರತ 41 ದೇಶಗಳಿಂದ ಇಂಧನ ಆಮದು, ಗಲ್ಫ್ ಭಾರತೀಯರ ಸುರಕ್ಷತೆಗೆ ತಯಾರಿ-ಪ್ರಧಾನ ನರೇಂದ್ರ ಮೋದಿ
ನವದೆಹಲಿ: ಭಾರತವು ಈಗ 41 ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳ... ಓದನ್ನು ಮುಂದುವರಿಸಿ
ಎಲ್‌ಪಿಜಿ ಬಿಕ್ಕಟ್ಟು: 14 ಕೆಜಿಯ ಬದಲು 10 ಕೆಜಿ ಪೂರೈಕೆಗೆ ಕೇಂದ್ರ ಚಿಂತನೆ
ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸದ್ಯದ ಬಿಕ್ಕಟ್ಟಿನ ಪರ... ಓದನ್ನು ಮುಂದುವರಿಸಿ
ಯುದ್ಧ ಪರಿಣಾಮ : ಏ.1ರಿಂದ ವಿಮಾನ ಟಿಕೆಟ್ ದರ ಹೆಚ್ಚಳ; ಪ್ರಯಾಣಿಕರ ಜೇಬಿಗೆ ಕತ್ತರಿ?
ಇರಾನ್ ಯುದ್ಧದ ಪರಿಣಾಮದಿಂದ ವಿಮಾನಯಾನ ಕ್ಷೇತ್ರ ಮೇಲೆ ತೀವ್ರ ಪ್ರಭಾವ ಬಂದಿದೆ. ಮುಂಬರ... ಓದನ್ನು ಮುಂದುವರಿಸಿ
ಮೋದಿ ಐತಿಹಾಸಿಕ ದಾಖಲೆ: ಭಾರತದ ದೀರ್ಘಾವಧಿ ಸೇವೆ ಮುಖ್ಯಸ್ಥರಾಗಿ ದಾಖಲೆ
ನವದೆಹಲಿ: ದೇಶದಲ್ಲಿ ಚುನಾವಣೆಯಿಂದ ಆಯ್ಕೆಯಾದ ಪ್ರಧಾನಿ ನರೇಂದ್ರ... ಓದನ್ನು ಮುಂದುವರಿಸಿ
ಹಿಮಾಚಲದಲ್ಲಿ ಭಾರಿ ಮಳೆಯಿಂದ ಭೂಕುಸಿತ – ಕೋಟ್ಲಿ ಹಳ್ಳಿಯಲ್ಲಿ ರಸ್ತೆ ಸಂಚಾರ ತಾತ್ಕಾಲಿಕ ಅಡ್ಡಿ
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತ... ಓದನ್ನು ಮುಂದುವರಿಸಿ
ಕ್ಷುಲ್ಲಕ ಕಲಹದ ಕಾರಣ 23 ವರ್ಷದ ವೈದ್ಯೆ ಆತ್ಮಹತ್ಯೆ – “ಬೆಕ್ಕು ಸಾಕ್ಬೇಡ” ವಿಚಾರವೇ ದುರ್ಘಟನೆಯ ಕಾರಣ?
ಹೈದರಾಬಾದ್: 23 ವರ್ಷದ ವೈದ್ಯೆ ಟಿ. ಪ್ರಿನ್ಸಿ ಅಲಿಯಾಸ್ ಶ್ರೇಷ್ಠ... ಓದನ್ನು ಮುಂದುವರಿಸಿ
ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಅವಳಿ ಸಹೋದರರಲ್ಲಿ ಓರ್ವ ಸೂಸೈಡ್!
ಕಾಮರೆಡ್ಡಿ: ತೆಲಂಗಾಣದ ಕಾಮರೆಡ್ಡಿ ತಾಲ್ಲೂಕಿನ ಘನಪುರ ಗ್ರಾಮದಲ್ಲ... ಓದನ್ನು ಮುಂದುವರಿಸಿ
ಹೋಟೆಲ್, ರೆಸ್ಟೋರೆಂಟ್ ಗಳಿಗೆ ಗುಡ್ ನ್ಯೂಸ್ - ಎಲ್‌ಪಿಜಿ ಕೊರತೆಗೆ ಪರಿಹಾರ – ರಾಜ್ಯಗಳಿಗೆ 20% ಹೆಚ್ಚುವರಿ ಅನಿಲ ಹಂಚಿಕೆ
ನವದೆಹಲಿ: ಎಲ್‌ಪಿಜಿ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್... ಓದನ್ನು ಮುಂದುವರಿಸಿ
ಪ್ರಧಾನಿ ಮೋದಿ ಇರಾನ್ ಅಧ್ಯಕ್ಷರೊಂದಿಗೆ ದೂರವಾಣಿ ಸಂಭಾಷಣೆ: ಮೂಲಸೌಕರ್ಯ ದಾಳಿಗೆ ತೀವ್ರ ಖಂಡನೆ
ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಇರಾನ್ ಅಧ್ಯಕ್ಷ ಮಸೌ... ಓದನ್ನು ಮುಂದುವರಿಸಿ