ಸೂಪರ್‌ಸ್ಟಾರ್ ಮೌನಕ್ಕೆ ಕಾರಣವೇನು? ‘ಜನ ನಾಯಗನ್’ ಪ್ರಶ್ನೆಗೆ ಉತ್ತರ ಇಲ್ಲ

ಚೆನ್ನೈ: ಕಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಸದ್ಯ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ‘ಜೈಲರ್ 2’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿರುವುದಾಗಿ ತಿಳಿಸಿದ್ದಾರೆ. ಇನ್ನೂ ಕೇವಲ 2ರಿಂದ 3 ದಿನಗಳ ಚಿತ್ರೀಕರಣ ಬಾಕಿ ಇದ್ದು, ಶೀಘ್ರದಲ್ಲೇ ಶೂಟಿಂಗ್ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಈ ಸಿನಿಮಾದಲ್ಲಿ ರಜನಿಕಾಂತ್ ಮತ್ತೆ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವೇಳೆ, ಹಲವು ವರ್ಷಗಳ ನಂತರ ಕಮಲ್ ಹಾಸನ್ ಜೊತೆಗಿನ ಹೊಸ ಪ್ರಾಜೆಕ್ಟ್ ಕುರಿತು ಅವರು ಮಾಹಿತಿ ನೀಡಿದ್ದಾರೆ. 

 

‘KHxRK’ ಹೆಸರಿನಲ್ಲಿ ಚರ್ಚೆಯಾಗುತ್ತಿರುವ ಈ ಚಿತ್ರದ ಕಥೆ ಈಗಾಗಲೇ ಅಂತಿಮಗೊಂಡಿದ್ದು, ಆಗಸ್ಟ್ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಅಧಿಕೃತವಾಗಿ ಘೋಷಿಸಲಿದ್ದಾರೆ. ಇನ್ನೊಂದೆಡೆ, ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ವಿಳಂಬದ ಬಗ್ಗೆ ಕೇಳಿದ ಪ್ರಶ್ನೆಗೆ ರಜನಿಕಾಂತ್ ಪ್ರತಿಕ್ರಿಯಿಸಲು ನಿರಾಕರಿಸಿದರು. ‘ಕ್ಷಮಿಸಿ, ಈ ಪ್ರಶ್ನೆಗೆ ಉತ್ತರಿಸಲು ಇಷ್ಟಪಡುವುದಿಲ್ಲ’ ಎಂದು ಗಂಭೀರವಾಗಿ ಹೇಳಿ ಅಲ್ಲಿಂದ ತೆರಳಿದರು. ‘ಜನ ನಾಯಗನ್’ ಸಿನಿಮಾ ಸಂಕ್ರಾಂತಿ ವೇಳೆ ಬಿಡುಗಡೆಯಾಗಬೇಕಾಗಿತ್ತು. ಆದರೆ ಸೆನ್ಸಾರ್ ಪ್ರಮಾಣಪತ್ರದ ವಿಳಂಬದಿಂದ ಸಿನಿಮಾ ಮುಂದೂಡಲ್ಪಟ್ಟಿದ್ದು, ಇದೀಗ ಜೂನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ವಿಳಂಬದ ಹಿಂದೆ ರಾಜಕೀಯ ಕಾರಣಗಳಿರುವುದಾಗಿ ಕೆಲ ಆರೋಪಗಳು ಕೇಳಿಬರುತ್ತಿವೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

9 hours ago

   
Image 1
Image 1

ಸಾನ್ಯಾ ಮಲ್ಹೋತ್ರ ಲವ್ ಟು ಬ್ರೇಕಪ್? ಸೋಶಿಯಲ್ ಮೀಡಿಯಾ ಸುಳಿವು

ಮುಂಬೈ: ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರ ತಮ್ಮ ವೈಯಕ್ತಿಕ ಬದುಕಿ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಪುನೀತ್ ಮೇಲಿನ ಪ್ರೀತಿ ಪ್ರಶ್ನೆ? ಅನುಶ್ರೀ ಗಿಲ್ಲಿ ಸ್ಟೈಲ್ ರಿಪ್ಲೈ

ಬೆಂಗಳೂರು: ಆ್ಯಂಕರ್ ಅನುಶ್ರೀ ಅವರು ಪುನೀತ್ ರಾಜ್ಕುಮಾರ್ ಅವರ ಅತ... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1

ಸ್ಟೈಲಿಶ್ ಸ್ಟಾರ್ ಬರ್ತ್‌ಡೇ ಸಂಭ್ರಮಕ್ಕೆ ಗದ್ದಲ – ಪೊಲೀಸರ ಲಘು ಲಾಠಿ ಪ್ರಹಾರ

ಹೈದರಾಬಾದ್: ತೆಲುಗು ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜು... ಓದನ್ನು ಮುಂದುವರಿಸಿ


Edited by: ಬಾನು

9 hours ago

   
Image 1
ಬೆಂಗಳೂರು ನಗರ

ಹೊಸ ಜಾಂಬಿ ಡ್ರಗ್ ಅಲರ್ಟ್: ದುನಿಯಾ ವಿಜಯ್ ಎಚ್ಚರಿಕೆ

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವಿಡಿಯೋಗಳು... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಬೆಂಗಳೂರು ನಗರ

ಡಾನ್ಸ್ ಕರ್ನಾಟಕ ಡಾನ್ಸ್ ಗ್ರಾಂಡ್ ಫಿನಾಲೆ ಈ ವಾರಾಂತ್ಯ

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಡಾನ್ಸ್... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1

ಪ್ಯಾನ್ ಇಂಡಿಯಾ ‘ರಾಮಾಯಣ’ ಚಿತ್ರ: ರಾವಣ ಪಾತ್ರದಲ್ಲಿ ಯಶ್ ಕುತೂಹಲ

ಮುಂಬೈ: ಭಾರತೀಯ ಸಿನಿರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿರುವ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1

ಪತಿಯ ಸಿನಿಮಾಗಿಗೂ ಹಣ ಕೇಳಿದ್ರಾ ನಯನತಾರಾ? ಎಲ್ಐಕೆ’ ಪ್ರೀ-ರಿಲೀಸ್‌ನಲ್ಲಿ ಹುಟ್ಟಿದ ವಿವಾದ

ಚೆನ್ನೈ: ಸಿನಿಮಾ ರಂಗದಲ್ಲಿ ಹಣದ ಪ್ರಭಾವದ ಬಗ್ಗೆ ಮತ್ತೆ ಚರ್ಚೆ ಹ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1

ಶಾಂತ್ ನೀಲ್–ಜೂನಿಯರ್ ಎನ್‌ಟಿಆರ್ ಪ್ರಾಜೆಕ್ಟ್ ಬಗ್ಗೆ ವದಂತಿಗೆ ಬ್ರೇಕ್

ಸ್ಯಾಂಡಲ್‌ವುಡ್‌ನ ಪ್ಯಾನ್-ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಟಾಲಿವುಡ್ ಸ್ಟಾ... ಓದನ್ನು ಮುಂದುವರಿಸಿ


Edited by: ಬಾನು

20 hours ago

   
Image 1
ಕೊಡಗು

ನ್ಯಾಷನಲ್ ಕ್ರಶ್ ರಶ್ಮಿಕಾ ತವರಿನಲ್ಲಿ ವಿಜಯ್ ಜೋಡಿ – ಕೊಡಗಿನಲ್ಲಿ ಸಂಭ್ರಮ

ಕೊಡಗು: ಸ್ಯಾಂಡಲ್‌ವುಡ್‌ನಿಂದ ಸಿನಿ ಪಯಣ ಆರಂಭಿಸಿ ನ್ಯಾಷನಲ್ ಕ್ರ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1
ಬೆಂಗಳೂರು ನಗರ

‘ಕೆಡಿ’ ಹಾಡು ವಿವಾದ – ನೋರಾ ಫತೇಹಿಗೆ ಮತ್ತೆ ನೋಟಿಸ್

ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ‘ಕೆಡಿ’ ಚಿತ್ರದ ‘ಸೆರಗ ಸರ್ಸೆ... ಓದನ್ನು ಮುಂದುವರಿಸಿ


Edited by: ಬಾನು

2 days ago

   
Image 1