ಸ್ಥಳೀಯ ಚುನಾವಣೆಗೆ ಮೈತ್ರಿ ಸಂಕಟ: ಜೆಡಿಎಸ್ ಪ್ಲ್ಯಾನ್–ಬಿ ಸಿದ್ಧ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ಜನತಾ ದಳ (ಸೆಕ್ಯುಲರ್) (ಜೆಡಿಎಸ್) ಮೈತ್ರಿಯಲ್ಲಿ ಗೊಂದಲ ಗಟ್ಟಿಯಾಗುತ್ತಿದೆ. ಸೀಟು ಹಂಚಿಕೆ ವಿಚಾರದಲ್ಲಿ ಸಮನ್ವಯತೆ ಸಾಧ್ಯವಾಗದ ಹಿನ್ನೆಲೆ ಜೆಡಿಎಸ್ ಸ್ವತಂತ್ರ ಸಿದ್ಧತೆ ಆರಂಭಿಸಿದೆ. ಜೆಡಿಎಸ್ 85ರಿಂದ 100 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ಲ್ಯಾನ್–ಎ ಮತ್ತು ಪ್ಲ್ಯಾನ್–ಬಿ ರೂಪಿಸಿಕೊಂಡಿದೆ ಎನ್ನಲಾಗಿದೆ. ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಎರಡು ಸಭೆಗಳನ್ನು ನಡೆಸಿ, ಬಿಜೆಪಿಯ ಬಳಿ ಕನಿಷ್ಠ 70ರಿಂದ 80 ಸೀಟುಗಳ ಬೇಡಿಕೆ ಇಡುವ ತೀರ್ಮಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಮಾಣದ ಸೀಟುಗಳು ಸಿಕ್ಕರೆ ಮೈತ್ರಿಯಾಗಿ ಚುನಾವಣೆ ಎದುರಿಸಲು, ಇಲ್ಲದಿದ್ದರೆ ಪ್ರತ್ಯೇಕವಾಗಿ ಸ್ಪರ್ಧಿಸಲು ಜೆಡಿಎಸ್ ಚಿಂತನೆ ನಡೆಸಿದೆ. 5 ಪಾಲಿಕೆಗಳ 369 ವಾರ್ಡ್‌ಗಳಲ್ಲಿ ಸಿದ್ಧತೆ ಆರಂಭಿಸಲು ಬೆಂಗಳೂರು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಹೆಚ್‌ಡಿಕೆ ಸೂಚನೆ ನೀಡಿದ್ದಾರೆ.

 

2028ರ ಸಿಎಂ ಹುದ್ದೆ ಪೈಪೋಟಿ?

ಇನ್ನೊಂದೆಡೆ, 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಎರಡುವರೆ ವರ್ಷ ಬಾಕಿ ಇರುವಾಗಲೇ ಮುಖ್ಯಮಂತ್ರಿ ಹುದ್ದೆಗಾಗಿ ಮೈತ್ರಿ ಪಡೆಯಲ್ಲಿ ಪೈಪೋಟಿ ಆರಂಭವಾದ ಲಕ್ಷಣಗಳು ಗೋಚರಿಸುತ್ತಿವೆ. ಹಾಸನದಲ್ಲಿ ಮಾತನಾಡಿದ್ದ ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, “113 ಸೀಟು ಯಾರಿಗೆ ಬಂದರೆ ಅವರೇ ಮುಖ್ಯಮಂತ್ರಿ” ಎಂದು ಹೇಳಿದ್ದು, ಜೆಡಿಎಸ್ ಪಾಲಿಗೆ ಹೆಚ್‌ಡಿಕೆ ಸಿಎಂ ಆಗಲು ಅಭ್ಯಂತರವಿಲ್ಲ ಎಂದಿದ್ದರು. ಆದರೆ ಈ ಹೇಳಿಕೆ ಹೆಚ್.ಡಿ. ಕುಮಾರಸ್ವಾಮಿಯ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅದರ ನಡುವೆ ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ, 2028ರಲ್ಲಿ ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ತಿಕ್ಕಾಟ ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿವೆ. ಈಗಾಗಲೇ ಕೆಲ ಬಿಜೆಪಿ ನಾಯಕರು ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಬೇಡ ಎಂದು ಆಗ್ರಹಿಸಿರುವುದೂ ಪಕ್ಷಗಳ ನಡುವಿನ ಅಸಮನ್ವಯತೆಯನ್ನು ಬಹಿರಂಗಪಡಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1
ಬೆಂಗಳೂರು ನಗರ

90ನೇ ವಾರ್ಷಿಕೋತ್ಸವ: ಮಲಬಾರ್ ಮುಸ್ಲಿಂ ಅಸೋಸಿಯೇಷನ್‍ಗೆ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರ ಸನ್ಮಾನ

ಬೆಂಗಳೂರು: ಸಿದ್ದರಾಮಯ್ಯ ಅವರು ಮಲಬಾರ್ ಮುಸ್ಲಿಂ ಅಸೋಸಿಯೇಷನ್ 90... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಕೋಮುವಾದ ಪರಿಸ್ಥಿತಿ ಕಾರಣವಾಗಿ ಐಟಿ-ಬಿಟಿ ಹೂಡಿಕೆ ತಡೆ — ಖರ್ಗೆ ಎಚ್ಚರಿಕೆ

ಬೆಂಗಳೂರು: ಕೋಮುವಾದದ ವಾತಾವರಣ ಕರಾವಳಿ ಭಾಗದ ಅಭಿವೃದ್ಧಿಗೆ ಅಡ್ಡ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಬಿಕ್ಲು ಶಿವ ಹತ್ಯೆ ಪ್ರಕರಣ ತೀವ್ರತೆ: ಬೈರತಿ ಬಸವರಾಜ್ ಸಿಐಡಿ ಕಸ್ಟಡಿಗೆ

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಾಮರಾಜನಗರ

ಜಲಾಶಯದಲ್ಲಿ ತೇಲುತ್ತಿದ್ದ ಹುಲಿ ಶವ: ಅರಣ್ಯ ಇಲಾಖೆ ತೀವ್ರ ತನಿಖೆ

ಚಾಮರಾಜನಗರ, ಫೆ.15: ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಕೋಲಾರ

ಮಹಾಶಿವರಾತ್ರಿ ಸಂಭ್ರಮದಲ್ಲಿ ಕೋಲಾರ ಮಿಂದೆದ್ದಿತು; ಭಾರತ ಜಯಕ್ಕಾಗಿ ವಿಶೇಷ ಪೂಜೆ

ಕೋಲಾರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕೋಲಾರ ನಗರ ಭಕ್ತಿಭಾವದಿಂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ

ಗುಡಿಬಂಡೆ: ತಾಲೂಕಿನ ವಿವಿಧ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಯ ಕರ್ನಾಟಕ, ಗ್ರೀನ್ ವಾರಿಯರ್ಸ್, ರಾಜಭೀದಿಯಲ್ಲಿ ಗಿಡ ನೆಟ್ಟು ಮಹಾಶಿವರಾತ್ರಿ ಹಬ್ಬ ಆಚರಣೆ

ಗುಡಿಬಂಡೆ : ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಗುಡಿಬಂಡೆಯ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ 'ಸಮಾಜ ದಿನ' ಆಚರಣೆ: ವಿದ್ಯಾರ್ಥಿಗಳಿಂದ ಐತಿಹಾಸಿಕ ಮಾದರಿಗಳ ಪ್ರದರ್ಶನ

 

ಗುಡಿಬಂಡೆ: ಪಟ್ಟಣದ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ದಾಖಲೆ ಬಜೆಟ್‌ ಮಧ್ಯೆ ಆದಾಯ ಒತ್ತಡ: ಸರ್ಕಾರಕ್ಕೆ 15,000 ಕೋಟಿ ರೂ. ಕೊರತೆ ಭೀತಿ

ಬೆಂಗಳೂರು, ಫೆಬ್ರವರಿ 15: ಪ್ರಸಕ್ತ 2025-26ನೇ ಆರ್ಥಿಕ ವರ್ಷಕ್ಕ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ನೆಲಮಂಗಲ

ತಾಯಿಯ ಪ್ರೆಗ್ನೆನ್ಸಿ ಫೋಟೋಶೂಟ್ ವೇಳೆ 3 ವರ್ಷದ ಮಗು ನೀರಿನಲ್ಲಿ ಮುಳುಗಿ ದುರಂತ ಸಾವು

ನೆಲಮಂಗಲ: ಗಿಡ್ಡೆನಹಳ್ಳಿಯಲ್ಲಿ ಸಂತೋಷದ ಕ್ಷಣ ದುರಂತಕ್ಕೆ ತಿರುಗಿ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1