ಬಿಕ್ಲು ಶಿವ ಹತ್ಯೆ ಪ್ರಕರಣ ತೀವ್ರತೆ: ಬೈರತಿ ಬಸವರಾಜ್ ಸಿಐಡಿ ಕಸ್ಟಡಿಗೆ

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರನ್ನು ನ್ಯಾಯಾಲಯ 7 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ. ಬೈರತಿ ಬಸವರಾಜ್ ಅವರನ್ನು ಕೋರಮಂಗಲದಲ್ಲಿರುವ 42ನೇ ಎಸಿಜೆಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್ ಅವರು ಶಾಸಕರ ಆಂಜಿಯೋಗ್ರಾಮ್ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ವರದಿ ಪರಿಶೀಲನೆ ಮತ್ತು ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.

 

ಫೆಬ್ರವರಿ 12ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಬೈರತಿ ಬಸವರಾಜ್ ಅವರನ್ನು ಪೊಲೀಸರು ಬಂಧಿಸಿದ್ದರು. ಮರುದಿನ ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ, ಅವರನ್ನು **ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ**ಗೆ ದಾಖಲಿಸಿ ಆಂಜಿಯೋಗ್ರಾಮ್ ಮಾಡಲಾಗಿತ್ತು.

 

ಸುಪ್ರೀಂಕೋರ್ಟ್‌ನಲ್ಲೂ ಹಿನ್ನಡೆ

ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ವಜಾಗೊಂಡ ನಂತರ, ಅವರು ಸುಪ್ರೀಂ ಕೋರ್ಟ್ ಮೊರೆ ಹೋದರೂ ಅಲ್ಲಿ ಕೂಡ ಹಿನ್ನಡೆ ಎದುರಾಯಿತು.

 

ಪ್ರಕರಣದ ಹಿನ್ನೆಲೆ

ಕೊಲೆ ಪ್ರಕರಣದಲ್ಲಿ ಸರಣಿ ಘಟನೆಗಳು ಪರಸ್ಪರ ಪೂರಕವಾಗಿ ನಡೆದಿವೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಎರಡು ಗುಂಪುಗಳ ಜಗಳದ ವೇಳೆ ಆರೋಪಿತ ಶಾಸಕ ಸ್ಥಳಕ್ಕೆ ಭೇಟಿ ನೀಡಿ ಆಸ್ತಿಯ ಜಿಪಿಎ ತೋರಿಸಿದ್ದರೆಂದು ಆರೋಪಿಸಲಾಗಿದೆ. ಬಿಕ್ಲು ಶಿವನಿಗೆ ತಾಯಿಯ ಎದುರು ಗನ್ ತೋರಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಕಾಲ್ ರೆಕಾರ್ಡ್ ಪರಿಶೀಲನೆಯಲ್ಲಿ ಗನ್ ಹೊಂದಿದ್ದ ವ್ಯಕ್ತಿ ಜಗದೀಶ್ ಜೊತೆ ಸಂಪರ್ಕ ಹೊಂದಿದ್ದದ್ದು ಪತ್ತೆಯಾಗಿದೆ. ಬಳಿಕ ಕೆಲ ಆರೋಪಿಗಳು ಶ್ರೀಲಂಕಾಕ್ಕೆ ಪಲಾಯನ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಈ ಎಲ್ಲ ಹಿನ್ನೆಲೆಗಳಲ್ಲಿ ಬೈರತಿ ಬಸವರಾಜ್ ತನಿಖೆ ಎದುರಿಸಬೇಕೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ನಿರೀಕ್ಷಣಾ ಜಾಮೀನು ಪಡೆದಾಗ ಪಾಲಿಸಬೇಕಾದ ಷರತ್ತುಗಳ ಕುರಿತು “ಹೇಗೆ ಇರಬೇಕು ಎಂಬುದು ಗೊತ್ತಿಲ್ಲವೇ?” ಎಂದು ಕೋರ್ಟ್ ಗರಂ ಆಗಿ ಪ್ರಶ್ನಿಸಿದ್ದುದೂ ದಾಖಲಾಗಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

8 hours ago

   
Image 1
Image 1
ಬೆಂಗಳೂರು ನಗರ

90ನೇ ವಾರ್ಷಿಕೋತ್ಸವ: ಮಲಬಾರ್ ಮುಸ್ಲಿಂ ಅಸೋಸಿಯೇಷನ್‍ಗೆ ಸಿಎಂ ಸಿದ್ದರಾಮಯ್ಯ ಮತ್ತಿತರ ಗಣ್ಯರ ಸನ್ಮಾನ

ಬೆಂಗಳೂರು: ಸಿದ್ದರಾಮಯ್ಯ ಅವರು ಮಲಬಾರ್ ಮುಸ್ಲಿಂ ಅಸೋಸಿಯೇಷನ್ 90... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಕೋಮುವಾದ ಪರಿಸ್ಥಿತಿ ಕಾರಣವಾಗಿ ಐಟಿ-ಬಿಟಿ ಹೂಡಿಕೆ ತಡೆ — ಖರ್ಗೆ ಎಚ್ಚರಿಕೆ

ಬೆಂಗಳೂರು: ಕೋಮುವಾದದ ವಾತಾವರಣ ಕರಾವಳಿ ಭಾಗದ ಅಭಿವೃದ್ಧಿಗೆ ಅಡ್ಡ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಬೆಂಗಳೂರು ನಗರ

ಸ್ಥಳೀಯ ಚುನಾವಣೆಗೆ ಮೈತ್ರಿ ಸಂಕಟ: ಜೆಡಿಎಸ್ ಪ್ಲ್ಯಾನ್–ಬಿ ಸಿದ್ಧ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1
ಚಾಮರಾಜನಗರ

ಜಲಾಶಯದಲ್ಲಿ ತೇಲುತ್ತಿದ್ದ ಹುಲಿ ಶವ: ಅರಣ್ಯ ಇಲಾಖೆ ತೀವ್ರ ತನಿಖೆ

ಚಾಮರಾಜನಗರ, ಫೆ.15: ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಕೋಲಾರ

ಮಹಾಶಿವರಾತ್ರಿ ಸಂಭ್ರಮದಲ್ಲಿ ಕೋಲಾರ ಮಿಂದೆದ್ದಿತು; ಭಾರತ ಜಯಕ್ಕಾಗಿ ವಿಶೇಷ ಪೂಜೆ

ಕೋಲಾರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಕೋಲಾರ ನಗರ ಭಕ್ತಿಭಾವದಿಂ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ

ಗುಡಿಬಂಡೆ: ತಾಲೂಕಿನ ವಿವಿಧ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜಯ ಕರ್ನಾಟಕ, ಗ್ರೀನ್ ವಾರಿಯರ್ಸ್, ರಾಜಭೀದಿಯಲ್ಲಿ ಗಿಡ ನೆಟ್ಟು ಮಹಾಶಿವರಾತ್ರಿ ಹಬ್ಬ ಆಚರಣೆ

ಗುಡಿಬಂಡೆ : ಇಂದು ಪರಿಸರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಜ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಚಿಕ್ಕಬಳ್ಳಾಪುರ

ಗುಡಿಬಂಡಾ

ಗುಡಿಬಂಡೆಯ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ 'ಸಮಾಜ ದಿನ' ಆಚರಣೆ: ವಿದ್ಯಾರ್ಥಿಗಳಿಂದ ಐತಿಹಾಸಿಕ ಮಾದರಿಗಳ ಪ್ರದರ್ಶನ

 

ಗುಡಿಬಂಡೆ: ಪಟ್ಟಣದ ಶ್ರೀಕರ್ ಪಬ್ಲಿಕ್ ಶಾಲೆಯಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

8 hours ago

   
Image 1
ಬೆಂಗಳೂರು ನಗರ

ದಾಖಲೆ ಬಜೆಟ್‌ ಮಧ್ಯೆ ಆದಾಯ ಒತ್ತಡ: ಸರ್ಕಾರಕ್ಕೆ 15,000 ಕೋಟಿ ರೂ. ಕೊರತೆ ಭೀತಿ

ಬೆಂಗಳೂರು, ಫೆಬ್ರವರಿ 15: ಪ್ರಸಕ್ತ 2025-26ನೇ ಆರ್ಥಿಕ ವರ್ಷಕ್ಕ... ಓದನ್ನು ಮುಂದುವರಿಸಿ


Edited by: ಬಾನು

13 hours ago

   
Image 1
ಬೆಂಗಳೂರು ನಗರ

ನೆಲಮಂಗಲ

ತಾಯಿಯ ಪ್ರೆಗ್ನೆನ್ಸಿ ಫೋಟೋಶೂಟ್ ವೇಳೆ 3 ವರ್ಷದ ಮಗು ನೀರಿನಲ್ಲಿ ಮುಳುಗಿ ದುರಂತ ಸಾವು

ನೆಲಮಂಗಲ: ಗಿಡ್ಡೆನಹಳ್ಳಿಯಲ್ಲಿ ಸಂತೋಷದ ಕ್ಷಣ ದುರಂತಕ್ಕೆ ತಿರುಗಿ... ಓದನ್ನು ಮುಂದುವರಿಸಿ


Edited by: ಬಾನು

15 hours ago

   
Image 1