ಶ್ರೇಯಾ ಘೋಷಾಲ್ ವಿರಾಮ ಸೂಚನೆ – ಸಂಗೀತ ಲೋಕದಲ್ಲಿ ಚರ್ಚೆ, ಅಭಿಮಾನಿಗಳಲ್ಲಿ ಆತಂಕ
ಮುಂಬೈ: ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಂಗೀತದಿಂದ ಸ್ವಲ್ಪ ವಿರಾಮ ಪಡೆಯುವ ಆಲೋಚನೆ ವ್ಯಕ್ತಪಡಿಸಿದ್ದಾರಂತೆ. ಈ ಹೇಳಿಕೆ ಅಭಿಮಾನಿಗಳಲ್ಲಿ ಚಿಂತೆ ಹುಟ್ಟಿಸಿದೆ. ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರ ಹಿನ್ನೆಲೆ ಗಾಯನದಿಂದ ಹಿಂದಿನ ಹಂತಕ್ಕೆ ಹಿಂದೂ ವರಿಸುವ ನಿರ್ಧಾರಕ್ಕೆ ಶ್ರೇಯಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ವಿಶ್ರಾಂತಿ ಕುರಿತು ಶ್ರೇಯಾ ಘೋಷಾಲ್ ಹೇಳಿಕೆ
‘ಎಬಿಪಿ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಶ್ರೇಯಾ ಘೋಷಾಲ್, ನಿರಂತರ ಕೆಲಸದ ಒತ್ತಡದ ನಡುವೆ ಕೆಲವೊಮ್ಮೆ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಿದ್ದಾರೆ. “ಕೆಲವೊಮ್ಮೆ ನನಗೂ ಸಂಗೀತದಿಂದ ವಿರಾಮ ಪಡೆಯಬೇಕು ಎಂಬ ಅನಿಸಿಕೆ ಬರುತ್ತದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಅರಿಜಿತ್ ಸಿಂಗ್ ಬೆಂಬಲ
ಅರಿಜಿತ್ ಸಿಂಗ್ ಅವರ ನಿರ್ಧಾರವನ್ನು ಶ್ಲಾಘಿಸಿ ಶ್ರೇಯಾ ಹೇಳಿದ್ದು, “ಅವರು ಅತ್ಯಂತ ಧೈರ್ಯದಿಂದ ನಿರ್ಧಾರ ಕೈಗೊಂಡಿದ್ದಾರೆ. ಅವರ ಸಂಗೀತ ಹೃದಯದಿಂದ ಬರುತ್ತದೆ; ಲಾಭಕ್ಕಾಗಿ ಅಲ್ಲ, ತಮ್ಮ ಸಂತೋಷಕ್ಕಾಗಿ ಹಾಡುತ್ತಾರೆ. ಅದಕ್ಕಾಗಿ ಅವರ ಹಾಡುಗಳು ಜನಮನ ಗೆಲ್ಲುತ್ತವೆ,” ಎಂದು ಹೇಳಿದ್ದಾರೆ.
ಲಿಪ್-ಸಿಂಕ್ ಬಗ್ಗೆ ನಿಲುವು
ವೇದಿಕೆಯ ಮೇಲೆ ಲಿಪ್-ಸಿಂಕ್ ಮಾಡುವ ಪರಿಸ್ಥಿತಿಯನ್ನು ತೀವ್ರವಾಗಿ ವಿರೋಧಿಸುತ್ತಾರೆ. “ವೇದಿಕೆಯಲ್ಲಿ ಲಿಪ್-ಸಿಂಕ್ ಮಾಡಬೇಕಾದರೆ, ನಾನು ಅಂದೇ ಹಾಡುವುದನ್ನು ನಿಲ್ಲಿಸುತ್ತೇನೆ,” ಎಂದು ತಮ್ಮ ವೃತ್ತಿಪರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸಂಗೀತ ಪಯಣ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಚಿತ್ರದ ಮೂಲಕ ಶ್ರೇಯಾ ಘೋಷಾಲ್ ಸಿನಿಪಯಣ ಆರಂಭಿಸಿದರು. ಆ ಚಿತ್ರದ ಗಾಯನಕ್ಕಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದರು. ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿದ ಮೂಲಕ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.
ಅರಿಜಿತ್ ಸಿಂಗ್ ನಿವೃತ್ತಿ
ಜನವರಿ 27ರಂದು ಅರಿಜಿತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ “ಇನ್ನು ಮುಂದೆ ಸಿನಿಮಾಗಳಿಗೆ ಹೊಸದಾಗಿ ಹಾಡುವುದಿಲ್ಲ” ಎಂದು ಘೋಷಿಸಿದ್ದರು. ಈ ನಿರ್ಧಾರ ಸಂಗೀತ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದರಿಂದ ಶ್ರೇಯಾ ಘೋಷಾಲ್ ಅವರ ವಿರಾಮದ ಸೂಚನೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಾಲಿವುಡ್ ಹಿರಿಯ ಕಥೆಗಾರ ಸಲೀಮ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಂಬೈ: ಬಾಲಿವುಡ್ ಹಿರಿಯ ಕಥೆಗಾರ ಮತ್ತು ಸಲ್ಮಾನ್ ಖಾನ್ ಅವರ ತಂದ... ಓದನ್ನು ಮುಂದುವರಿಸಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಕೀಲರ ಅರ್ಜಿಯನ್ನು ತಿರಸ್ಕರಿಸಿ ₹5,000 ದಂಡ, ದರ್ಶನ್ ಕುಟುಂಬ ಭೇಟಿ ಅನುಮತಿ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹ... ಓದನ್ನು ಮುಂದುವರಿಸಿ
ಆಸ್ಕರ್ 2026: ‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ, ‘ಸಿನ್ನರ್ಸ್’ 16 ನಾಮಿನೇಷನ್ ದಾಖಲೆ ಸ್ಥಾಪಿಸಿದೆ
ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್ನಲ್ಲಿ... ಓದನ್ನು ಮುಂದುವರಿಸಿ
‘ಬಾಸ್’ ಟೀಸರ್ ರೇಣುಕಾಸ್ವಾಮಿ ಪ್ರಕರಣಕ್ಕೆ ಹೋಲಿಕೆ; ದರ್ಶನ್ ಪರ ವಕೀಲರು ಸೆನ್ಸಾರ್ ನೋಟಿಸ್
ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ... ಓದನ್ನು ಮುಂದುವರಿಸಿ
‘ಕೆಡಿ’ ಚಿತ್ರದ ಐಟಂ ಹಾಡು ‘ಸರ್ಸೆ ನಿನ್ನ ಸೆರಗ ಸರ್ಸೆ’– ಡಬಲ್ ಮೀನಿಂಗ್, ಅಶ್ಲೀಲತೆ ಆರೋಪ, ವಿವಾದಕ್ಕೆ ಕಾರಣ
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ಬಿಡುಗಡೆಯ ಮೊದಲು ವಿವಾದಕ್ಕ... ಓದನ್ನು ಮುಂದುವರಿಸಿ
ವಿಜಯ್ ವೈಯಕ್ತಿಕ ವಿವಾದ, ತಮಿಳುನಾಡು ಚುನಾವಣೆ ನಡುವೆ ಕುತೂಹಲ ಸೃಷ್ಟಿ
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್... ಓದನ್ನು ಮುಂದುವರಿಸಿ
ಕೆಡಿ: ದಿ ಡೆವಿಲ್’ ಐಟಂ ಹಾಡು ‘ಸರ್ಸೆ ಸೆರಗ ಸರ್ಸೆ’– ಅಶ್ಲೀಲತೆ ಆರೋಪ, ಎನ್‌ಎಚ್‌ಆರ್‌ಸಿ ನೋಟಿಸ್
ಬೆಂಗಳೂರು/ದೆಹಲಿ: ‘ಕೆಡಿ: ದಿ ಡೆವಿಲ್’ ಚಿತ್ರದ ಐಟಂ ಹಾಡು ‘ಸರ್ಸ... ಓದನ್ನು ಮುಂದುವರಿಸಿ
ಬಾಲಿವುಡ್ ಅಪ್‌ಡೇಟ್: ಸಲ್ಮಾನ್ ಖಾನ್ ಚಿತ್ರ ‘ಬ್ಯಾಟಲ್ ಆಫ್ ಗಲ್ವಾನ್’ಗೆ ಹೊಸ ಹೆಸರು – ‘ಮಾತೃಭೂಮಿ’!
ಬ್ಯಾಟಲ್ ಆಫ್ ಗಲ್ವಾನ್ ಸಿನಿಮಾದ ಶೀರ್ಷಿಕೆ ಅಕಸ್ಮಾತ್ ಬದಲಿಸಿ ‘ಮಾತೃಭೂಮಿ’ ಎಂದು ಹೆಸ... ಓದನ್ನು ಮುಂದುವರಿಸಿ
ಯುಗಾದಿ ಹಬ್ಬಕ್ಕೆ 'ಧುರಂಧರ್ 2'– ಟಿಕೆಟ್ ದರ ಏರಿಕೆ ಹಿನ್ನೆಲೆಯಲ್ಲಿ ಪ್ರೇಕ್ಷಕರ ಅಸಮಾಧಾನ
ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಮಾರ್ಚ್ 19ರಂದು ಬಿಡುಗಡ... ಓದನ್ನು ಮುಂದುವರಿಸಿ
“ಕೇರಳವನ್ನು ಮೆಚ್ಚಿಕೊಂಡ ಮೊನಾಲಿಸಾ-ಫರ್ಮಾನ್ ಜೋಡಿ: ಪತ್ನಿ ಬಯಸಿದರೆ ಕೇರಳದಲ್ಲೇ ಶಾಶ್ವತ ನೆಲೆಸುವ ಯೋಜನೆ”
ಕೇರಳ: 2025ರ ಮಹಾಕುಂಭಮೇಳದಲ್ಲಿ ಜಪಮಾಲೆ ಮಾರಾಟ ಮೂಲಕ ಸಾಮಾಜಿಕ ಜ... ಓದನ್ನು ಮುಂದುವರಿಸಿ