ಆಸ್ಕರ್ 2026: ‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ, ‘ಸಿನ್ನರ್ಸ್’ 16 ನಾಮಿನೇಷನ್ ದಾಖಲೆ ಸ್ಥಾಪಿಸಿದೆ
ಅಮೆರಿಕದ ಲಾಸ್ ಏಂಜಲೀಸ್ ನಗರದಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್ನಲ್ಲಿ 98ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಭುತವಾಗಿ ನಡೆಯಿತು. ಹಾಲಿವುಡ್ ಮತ್ತು ಜಾಗತಿಕ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಸಹ ಈ ಸಮಾರಂಭದಲ್ಲಿ ಹಾಜರಿದ್ದರು.
ಈ ಬಾರಿ ‘ಸಿನ್ನರ್ಸ್’ ಚಿತ್ರವು ಆಸ್ಕರ್ ಇತಿಹಾಸದಲ್ಲಿ ವಿಶೇಷ ಸಾಧನೆ ಮಾಡಿದ್ದು, ಬರೋಬ್ಬರಿ 16 ವಿಭಾಗಗಳಲ್ಲಿ ನಾಮಿನೇಷನ್ ಪಡೆದಿದೆ. ಇದಕ್ಕೂ ಮುಂಚೆ ‘ಆಲ್ ಅಬೌಟ್ ಈವ್’ ಚಿತ್ರವು 14 ವಿಭಾಗಗಳಲ್ಲಿ ನಾಮಿನೇಷನ್ ಪಡೆದಿತ್ತು. ‘ಸಿನ್ನರ್ಸ್’ ಚಿತ್ರವು ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದೆ.
‘ಒನ್ ಬ್ಯಾಟಲ್ ಆಫ್ಟರ್ ಅನದರ್’ ಚಿತ್ರವು ಈ ವರ್ಷದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದಿದ್ದು, ಟೈಟಾನಿಕ್ ಖ್ಯಾತಿಯ ಲಿಯೊನಾರ್ಡೋ ಡಿಕ್ಯಾಪ್ರಿಯೋ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ ಪೌಲ್ ಥಾಮಸ್ ಆಂಡರ್ಸನ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರಕಿದೆ. ಈ ಚಿತ್ರ ಒಟ್ಟು ಆರು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದು, ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ನಟನಾ ವಿಭಾಗದಲ್ಲಿ ‘ಹ್ಯಾಮ್ನೆಟ್’ ಚಿತ್ರಕ್ಕಾಗಿ ಜೆಸ್ಸಿ ಬಕ್ಲಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ, ‘ಸಿನ್ನರ್ಸ್’ ಚಿತ್ರಕ್ಕಾಗಿ ಮೈಕಲ್ ಬಿ. ಜೋರ್ಡನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
ಪ್ರಮುಖ ಪ್ರಶಸ್ತಿಗಳ ಪಟ್ಟಿ
ಅತ್ಯುತ್ತಮ ಸಿನಿಮಾ – ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ನಟಿ – ಜೆಸ್ಸಿ ಬಕ್ಲಿ (ಹ್ಯಾಮ್ನೆಟ್)
ಅತ್ಯುತ್ತಮ ನಟ – ಮೈಕಲ್ ಬಿ. ಜೋರ್ಡನ್ (ಸಿನ್ನರ್ಸ್)
ಅತ್ಯುತ್ತಮ ಒರಿಜಿನಲ್ ಸಾಂಗ್ – ಗೋಲ್ಡನ್
ಅತ್ಯುತ್ತಮ ಛಾಯಾಗ್ರಹಣ – ಸಿನ್ನರ್ಸ್
ಅತ್ಯುತ್ತಮ ಸಿನಿಮಾ ಎಡಿಟಿಂಗ್ – ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಸೌಂಡ್ – ಎಫ್1
ಅತ್ಯುತ್ತಮ ಸಂಗೀತ ಸಂಯೋಜನೆ – ಸಿನ್ನರ್ಸ್
ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ – ಆಲ್ ದಿ ಎಂಪ್ಟಿ ರೂಂ
ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್ಸ್ – ಅವತಾರ್: ಫೈಯರ್ ಆ್ಯಂಡ್ ಆ್ಯಶ್
ಅಮೆರಿಕದ ಕಾಲಮಾನದ ಪ್ರಕಾರ ಭಾನುವಾರ ಸಂಜೆ ನಡೆದ ಈ ಕಾರ್ಯಕ್ರಮ, ಭಾರತದ ಕಾಲಮಾನದ ಪ್ರಕಾರ ಸೋಮವಾರ ಬೆಳಿಗ್ಗೆ 5.30ಕ್ಕೆ ಪ್ರಸಾರವಾಗಿತು.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಬಾಲಿವುಡ್ ಹಿರಿಯ ಕಥೆಗಾರ ಸಲೀಮ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಂಬೈ: ಬಾಲಿವುಡ್ ಹಿರಿಯ ಕಥೆಗಾರ ಮತ್ತು ಸಲ್ಮಾನ್ ಖಾನ್ ಅವರ ತಂದ... ಓದನ್ನು ಮುಂದುವರಿಸಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಕೀಲರ ಅರ್ಜಿಯನ್ನು ತಿರಸ್ಕರಿಸಿ ₹5,000 ದಂಡ, ದರ್ಶನ್ ಕುಟುಂಬ ಭೇಟಿ ಅನುಮತಿ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹ... ಓದನ್ನು ಮುಂದುವರಿಸಿ
ಶ್ರೇಯಾ ಘೋಷಾಲ್ ವಿರಾಮ ಸೂಚನೆ – ಸಂಗೀತ ಲೋಕದಲ್ಲಿ ಚರ್ಚೆ, ಅಭಿಮಾನಿಗಳಲ್ಲಿ ಆತಂಕ
ಮುಂಬೈ: ಜನಪ್ರಿಯ ಗಾಯಕಿ ಶ್ರೇಯಾ ಘೋಷಾಲ್ ಇತ್ತೀಚೆಗೆ ನೀಡಿದ ಸಂದರ... ಓದನ್ನು ಮುಂದುವರಿಸಿ
‘ಬಾಸ್’ ಟೀಸರ್ ರೇಣುಕಾಸ್ವಾಮಿ ಪ್ರಕರಣಕ್ಕೆ ಹೋಲಿಕೆ; ದರ್ಶನ್ ಪರ ವಕೀಲರು ಸೆನ್ಸಾರ್ ನೋಟಿಸ್
ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ... ಓದನ್ನು ಮುಂದುವರಿಸಿ
‘ಕೆಡಿ’ ಚಿತ್ರದ ಐಟಂ ಹಾಡು ‘ಸರ್ಸೆ ನಿನ್ನ ಸೆರಗ ಸರ್ಸೆ’– ಡಬಲ್ ಮೀನಿಂಗ್, ಅಶ್ಲೀಲತೆ ಆರೋಪ, ವಿವಾದಕ್ಕೆ ಕಾರಣ
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ಬಿಡುಗಡೆಯ ಮೊದಲು ವಿವಾದಕ್ಕ... ಓದನ್ನು ಮುಂದುವರಿಸಿ
ವಿಜಯ್ ವೈಯಕ್ತಿಕ ವಿವಾದ, ತಮಿಳುನಾಡು ಚುನಾವಣೆ ನಡುವೆ ಕುತೂಹಲ ಸೃಷ್ಟಿ
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್... ಓದನ್ನು ಮುಂದುವರಿಸಿ
ಕೆಡಿ: ದಿ ಡೆವಿಲ್’ ಐಟಂ ಹಾಡು ‘ಸರ್ಸೆ ಸೆರಗ ಸರ್ಸೆ’– ಅಶ್ಲೀಲತೆ ಆರೋಪ, ಎನ್‌ಎಚ್‌ಆರ್‌ಸಿ ನೋಟಿಸ್
ಬೆಂಗಳೂರು/ದೆಹಲಿ: ‘ಕೆಡಿ: ದಿ ಡೆವಿಲ್’ ಚಿತ್ರದ ಐಟಂ ಹಾಡು ‘ಸರ್ಸ... ಓದನ್ನು ಮುಂದುವರಿಸಿ
ಬಾಲಿವುಡ್ ಅಪ್‌ಡೇಟ್: ಸಲ್ಮಾನ್ ಖಾನ್ ಚಿತ್ರ ‘ಬ್ಯಾಟಲ್ ಆಫ್ ಗಲ್ವಾನ್’ಗೆ ಹೊಸ ಹೆಸರು – ‘ಮಾತೃಭೂಮಿ’!
ಬ್ಯಾಟಲ್ ಆಫ್ ಗಲ್ವಾನ್ ಸಿನಿಮಾದ ಶೀರ್ಷಿಕೆ ಅಕಸ್ಮಾತ್ ಬದಲಿಸಿ ‘ಮಾತೃಭೂಮಿ’ ಎಂದು ಹೆಸ... ಓದನ್ನು ಮುಂದುವರಿಸಿ
ಯುಗಾದಿ ಹಬ್ಬಕ್ಕೆ 'ಧುರಂಧರ್ 2'– ಟಿಕೆಟ್ ದರ ಏರಿಕೆ ಹಿನ್ನೆಲೆಯಲ್ಲಿ ಪ್ರೇಕ್ಷಕರ ಅಸಮಾಧಾನ
ಬೆಂಗಳೂರು: ಯುಗಾದಿ ಹಬ್ಬದ ಸಂದರ್ಭದಲ್ಲಿ ಮಾರ್ಚ್ 19ರಂದು ಬಿಡುಗಡ... ಓದನ್ನು ಮುಂದುವರಿಸಿ
“ಕೇರಳವನ್ನು ಮೆಚ್ಚಿಕೊಂಡ ಮೊನಾಲಿಸಾ-ಫರ್ಮಾನ್ ಜೋಡಿ: ಪತ್ನಿ ಬಯಸಿದರೆ ಕೇರಳದಲ್ಲೇ ಶಾಶ್ವತ ನೆಲೆಸುವ ಯೋಜನೆ”
ಕೇರಳ: 2025ರ ಮಹಾಕುಂಭಮೇಳದಲ್ಲಿ ಜಪಮಾಲೆ ಮಾರಾಟ ಮೂಲಕ ಸಾಮಾಜಿಕ ಜ... ಓದನ್ನು ಮುಂದುವರಿಸಿ