ಸಿಎಂ ಸಂಧಾನ ಸಕ್ಸಸ್! ಪೈಲ್ವಾನ್ ನಿರ್ಧಾರದಿಂದ ಕಾಂಗ್ರೆಸ್‌ಗೆ ಬಲವರ್ಧನೆ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಕಾವು ಹೆಚ್ಚುತ್ತಿರುವ ಹಿನ್ನೆಲೆ, ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಮತಗಳ ಬಗ್ಗೆ ಆತಂಕ ಎದುರಾಗಿದೆ. ಸಮುದಾಯಕ್ಕೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಮುಸ್ಲಿಂ ಮುಖಂಡರು ಸ್ವತಂತ್ರವಾಗಿ ಸ್ಪರ್ಧೆಗೆ ಇಳಿದಿದ್ದು, ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

 

ಇದರಲ್ಲೂ ಪ್ರಮುಖರಾಗಿರುವ ಸಾಧಿಕ್ ಪೈಲ್ವಾನ್ ಅವರ ಸ್ಪರ್ಧೆ ಕಾಂಗ್ರೆಸ್ ಮತ ಬ್ಯಾಂಕ್ ಮೇಲೆ ಪರಿಣಾಮ ಬೀರುವ ಭೀತಿ ಉಂಟುಮಾಡಿತ್ತು. ಆದರೆ, ಮುಖ್ಯಮಂತ್ರಿ Siddaramaiah ಅವರ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಫಲವತ್ತಾಗಿದ್ದು, ಪೈಲ್ವಾನ್ ಬಂಡಾಯ ಶಮನಗೊಳಿಸುವಲ್ಲಿ ಯಶಸ್ಸು ಕಂಡಿದೆ. ಆದಾಗ್ಯೂ, ಅವರ ಹೆಸರು ಮಾತ್ರ ಕಣದಲ್ಲಿ ಮುಂದುವರಿಯುವ ಸಾಧ್ಯತೆ ಇದೆ.

 

ಇದಕ್ಕೂ ಮುನ್ನ, ಶಾಸಕರಾದ Rizwan Arshad ಮತ್ತು Salim Ahmed ದಾವಣಗೆರೆಯಲ್ಲಿ ಸಾಧಿಕ್ ಪೈಲ್ವಾನ್ ಅವರನ್ನು ಭೇಟಿ ಮಾಡಿ ನಾಮಪತ್ರ ಹಿಂಪಡೆಯಲು ಮನವಿ ಮಾಡಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ಅವರನ್ನು ಸಿಎಂ ಮುಂದೆ ಕರೆತಂದು ಮಾತುಕತೆ ನಡೆಸಲಾಗಿದ್ದು, ಸಾಧಿಕ್ ಪೈಲ್ವಾನ್ ಅವರು ಕಣದಿಂದ ಹಿಂದೆ ಸರಿಯುವ ಸಾಧ್ಯತೆ ಹೆಚ್ಚಾಗಿದೆ. ಅವರು ಸಮರ್ಥ್ ಶಾಮನೂರು ಅವರನ್ನು ಬೆಂಬಲ ನೀಡುವ ಭರವಸೆ ನೀಡುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸುತ್ತಿವೆ.

 

ಸಂಧಾನ ಸಭೆಯ ನಂತರ ಮಾಧ್ಯಮಗಳಿಗೆ ಮಾತನಾಡಿದ ರಿಜ್ವಾನ್ ಅರ್ಷದ್, “ಸಾಧಿಕ್ ಪೈಲ್ವಾನ್ ಸಿಎಂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಜೊತೆ ಸಂಬಂಧ ಹೊಂದಿರುವ ಅವರು, ಯಾವುದೇ ಕಾರಣಕ್ಕೂ ಬಿಜೆಪಿ ಲಾಭ ಪಡೆಯಬಾರದು ಎಂಬ ನಿಲುವಿನಲ್ಲಿ ಮಾತುಕತೆ ನಡೆಸಿದ್ದಾರೆ. ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಗೆ ತೆರಳಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ” ಎಂದು ತಿಳಿಸಿದ್ದಾರೆ. ಸಾಧಿಕ್ ಪೈಲ್ವಾನ್ ತಕ್ಷಣ ಪ್ರತಿಕ್ರಿಯೆ ನೀಡದೇ, ಸಂಜೆ ಮಾತನಾಡುವುದಾಗಿ ತಿಳಿಸಿ ತೆರಳಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

5 hours ago

   
Image 1
Image 1
ಮಂಡ್ಯ

ಪಾಂಡವಪುರ

ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ: ಲಕ್ಷಾಂತರ ಭಕ್ತರ ಹಾಜರಿ, ಭದ್ರತೆಯಲ್ಲಿ ಆಭರಣಗಳ ರವಾನೆ

ಮಂಡ್ಯ:  ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಮಂಡ್ಯ

ವಿದ್ಯುತ್ ಶಾಕ್‌ಗೆ ಲೈನ್‌ಮನ್ ಬಲಿ – ಕಂಬದ ಮೇಲೆಯೇ ನೇತಾಡಿದ ಮೃತದೇಹ ವಿದ್ಯುತ್ ಕಂಬ

ಮಂಡ್ಯ:  ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ವಿಜಯಪುರ

ತಿಕೋಟಾ

ಮದ್ಯನಶೆಯಲ್ಲಿ ವ್ಯಕ್ತಿ ಮೊಬೈಲ್ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿ “ಒಂದು ಬಾಟಲ್ ಕೊಟ್ಟರೆ ಇಳ್ತಿನಿ!” – ಟವರ್ ಹತ್ತಿದ ಕುಡುಕನ ಡ್ರಾಮಾ

ವಿಜಯಪುರ:  ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್... ಓದನ್ನು ಮುಂದುವರಿಸಿ


Edited by: ಬಾನು

3 hours ago

   
Image 1
ಹಾಸನ

ಸಕಲೇಶಪುರ

ಸಕಲೇಶಪುರದಲ್ಲಿ ಬಿರುಗಾಳಿ ಮತ್ತು ಸಿಡಿಲು: ಐವರು ಮಹಿಳೆಯರು ಪ್ರಜ್ಞೆ ತಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೀನಹಳ್ಳಿ ಗ್ರಾ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಕೊಡಗು

ಮಡಿಕೇರಿ

ಮಡಿಕೇರಿಯಲ್ಲಿ ಭಾರಿ ಗುಡುಗು-ಸಿಡಿಲು: ತೆಂಗಿನ ಮರ ಹೊತ್ತಿ ಉರಿದಿದ್ದರಿಂದ ಬೆಚ್ಚಿಬಿದ್ದ ಸ್ಥಳೀಯರು

ಮಡಿಕೇರಿ: ಕೊಡಗು ಜಿಲ್ಲೆಯ ಹಲವಾರು ಭಾಗಗಳಲ್ಲಿ ಗುಡುಗು-ಸಿಡಿಲು ಸ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಧಾರವಾಡ

ಆಲಿಕಲ್ಲು ಮಳೆ ಅಬ್ಬರ: ಧಾರಾವಾಡದಲ್ಲಿ ಮಾವು ಬೆಳೆ ಸಂಪೂರ್ಣ ಹಾನಿ, ರೈತರು ಸಂಕಷ್ಟದಲ್ಲಿ

ಧಾರಾವಾಡ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲೇ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬಾಗಲಕೋಟೆ

“ಇನ್ನೆರಡು ವರ್ಷದಲ್ಲಿ ಕಾಂಗ್ರೆಸ್ ಧೂಳಿಪಟ” – ಬಸವರಾಜ ಬೊಮ್ಮಾಯಿ ಎಚ್ಚರಿಕೆ

ಬಾಗಲಕೋಟೆ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಮುಂದಿನ ಎರಡು ವರ... ಓದನ್ನು ಮುಂದುವರಿಸಿ


Edited by: ಬಾನು

4 hours ago

   
Image 1
ಬೆಂಗಳೂರು ನಗರ

ಮುಸ್ಲಿಂ ವಿದ್ಯಾರ್ಥಿಗೆ “ಭಯೋತ್ಪಾದಕ” ಎಂದು ಪ್ರೊಫೆಸರ್ ಅವಮಾನ: Video ವೈರಲ್

ಬೆಂಗಳೂರು: ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಮೋದಿ ಇಸ್ರೇಲ್ ಭೇಟಿ ಬಳಿಕ ಮರುದಿನವೇ ಯುದ್ಧ: ಎಂ.ಬಿ. ಪಾಟೀಲ್ ಟೀಕೆ

ಬೆಂಗಳೂರು: ಮಧ್ಯಪ್ರಾಚ್ಯದ ಬಿಕ್ಕಟ್ಟು ಹಿನ್ನೆಲೆ ತೈಲ ಕೊರತೆ ಉಂಟ... ಓದನ್ನು ಮುಂದುವರಿಸಿ


Edited by: ಬಾನು

5 hours ago

   
Image 1
ಬೆಂಗಳೂರು ನಗರ

ಕರಗದ ದೇವಿ ಸಾಂಗ್‌ಗೆ ಮಾರಕಾಸ್ತ್ರ ಹಿಡಿದು ಫುಲ್ ಸ್ಟೆಪ್ಸ್: ರೌಡಿಶೀಟರ್ ವೈರಲ್ ಡ್ಯಾನ್ಸ್

ಬೆಂಗಳೂರು, ಮಾರ್ಚ್ 28: ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ... ಓದನ್ನು ಮುಂದುವರಿಸಿ


Edited by: ಬಾನು

12 hours ago

   
Image 1