ಸಕಲೇಶಪುರದಲ್ಲಿ ಬಿರುಗಾಳಿ ಮತ್ತು ಸಿಡಿಲು: ಐವರು ಮಹಿಳೆಯರು ಪ್ರಜ್ಞೆ ತಪ್ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೀನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ಐವರು ಮಹಿಳಾ ಕಾರ್ಮಿಕರು ಗಂಭೀರವಾಗಿ ಗಾಯಗೊಂಡರು. ಕುದರಂಗಿ ಗ್ರಾಮದ ರೂಪಾ, ಲಕ್ಷ್ಮಿ, ಸುಮಿತ್ರಾ ಮತ್ತು ಜಯಮ್ಮ ಸೇರಿದಂತೆ ಐವರು ಮಹಿಳೆಯರು ದೀನಹಳ್ಳಿ ಗ್ರಾಮದಲ್ಲಿನ ಕಾಫಿ ತೋಟದಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಏಕಾಏಕಿ ಗುಡುಗು ಸಹಿತ ಬಿರುಗಾಳಿ ಮಳೆ ಆರಂಭವಾಗಿದ್ದು, ಆಕಸ್ಮಿಕವಾಗಿ ಸಿಡಿಲು ಬಡಿದಿದೆ.
ಸಿಡಿಲಿನ ತೀವ್ರತೆಗೆ ಐವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳೀಯರು ತಕ್ಷಣ ಅವರನ್ನು ಸಕಲೇಶಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಗಾಯಾಳುಗಳಲ್ಲಿ ರೂಪಾ ಎಂಬ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಹೆಚ್ಚಿನ ಪರಿಶೀಲನೆ ಮುಂದುವರಿಸುತ್ತಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಪಾಂಡವಪುರ
ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ: ಲಕ್ಷಾಂತರ ಭಕ್ತರ ಹಾಜರಿ, ಭದ್ರತೆಯಲ್ಲಿ ಆಭರಣಗಳ ರವಾನೆ
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಐತಿಹಾಸಿಕ... ಓದನ್ನು ಮುಂದುವರಿಸಿ
ವಿದ್ಯುತ್ ಶಾಕ್‌ಗೆ ಲೈನ್‌ಮನ್ ಬಲಿ – ಕಂಬದ ಮೇಲೆಯೇ ನೇತಾಡಿದ ಮೃತದೇಹ ವಿದ್ಯುತ್ ಕಂಬ
ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಹೆಬ್ಬಾಡಿ ಗ್ರಾಮದಲ್ಲಿ... ಓದನ್ನು ಮುಂದುವರಿಸಿ
ತಿಕೋಟಾ
ಮದ್ಯನಶೆಯಲ್ಲಿ ವ್ಯಕ್ತಿ ಮೊಬೈಲ್ ಟವರ್ ಹತ್ತಿ ಹೈಡ್ರಾಮಾ ಸೃಷ್ಟಿ “ಒಂದು ಬಾಟಲ್ ಕೊಟ್ಟರೆ ಇಳ್ತಿನಿ!” – ಟವರ್ ಹತ್ತಿದ ಕುಡುಕನ ಡ್ರಾಮಾ
ವಿಜಯಪುರ: ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್... ಓದನ್ನು ಮುಂದುವರಿಸಿ
ಮಡಿಕೇರಿ
ಮಡಿಕೇರಿಯಲ್ಲಿ ಭಾರಿ ಗುಡುಗು-ಸಿಡಿಲು: ತೆಂಗಿನ ಮರ ಹೊತ್ತಿ ಉರಿದಿದ್ದರಿಂದ ಬೆಚ್ಚಿಬಿದ್ದ ಸ್ಥಳೀಯರು
ಮಡಿಕೇರಿ: ಕೊಡಗು ಜಿಲ್ಲೆಯ ಹಲವಾರು ಭಾಗಗಳಲ್ಲಿ ಗುಡುಗು-ಸಿಡಿಲು ಸ... ಓದನ್ನು ಮುಂದುವರಿಸಿ
ಆಲಿಕಲ್ಲು ಮಳೆ ಅಬ್ಬರ: ಧಾರಾವಾಡದಲ್ಲಿ ಮಾವು ಬೆಳೆ ಸಂಪೂರ್ಣ ಹಾನಿ, ರೈತರು ಸಂಕಷ್ಟದಲ್ಲಿ
ಧಾರಾವಾಡ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲೇ... ಓದನ್ನು ಮುಂದುವರಿಸಿ
“ಇನ್ನೆರಡು ವರ್ಷದಲ್ಲಿ ಕಾಂಗ್ರೆಸ್ ಧೂಳಿಪಟ” – ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬಾಗಲಕೋಟೆ: ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಮುಂದಿನ ಎರಡು ವರ... ಓದನ್ನು ಮುಂದುವರಿಸಿ
ಸಿಎಂ ಸಂಧಾನ ಸಕ್ಸಸ್! ಪೈಲ್ವಾನ್ ನಿರ್ಧಾರದಿಂದ ಕಾಂಗ್ರೆಸ್‌ಗೆ ಬಲವರ್ಧನೆ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಕಾವು... ಓದನ್ನು ಮುಂದುವರಿಸಿ
ಮುಸ್ಲಿಂ ವಿದ್ಯಾರ್ಥಿಗೆ “ಭಯೋತ್ಪಾದಕ” ಎಂದು ಪ್ರೊಫೆಸರ್ ಅವಮಾನ: Video ವೈರಲ್
ಬೆಂಗಳೂರು: ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್... ಓದನ್ನು ಮುಂದುವರಿಸಿ
ಮೋದಿ ಇಸ್ರೇಲ್ ಭೇಟಿ ಬಳಿಕ ಮರುದಿನವೇ ಯುದ್ಧ: ಎಂ.ಬಿ. ಪಾಟೀಲ್ ಟೀಕೆ
ಬೆಂಗಳೂರು: ಮಧ್ಯಪ್ರಾಚ್ಯದ ಬಿಕ್ಕಟ್ಟು ಹಿನ್ನೆಲೆ ತೈಲ ಕೊರತೆ ಉಂಟ... ಓದನ್ನು ಮುಂದುವರಿಸಿ
ಕರಗದ ದೇವಿ ಸಾಂಗ್‌ಗೆ ಮಾರಕಾಸ್ತ್ರ ಹಿಡಿದು ಫುಲ್ ಸ್ಟೆಪ್ಸ್: ರೌಡಿಶೀಟರ್ ವೈರಲ್ ಡ್ಯಾನ್ಸ್
ಬೆಂಗಳೂರು, ಮಾರ್ಚ್ 28: ಬೆಂಗಳೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ... ಓದನ್ನು ಮುಂದುವರಿಸಿ