ಸಿದ್ದರಾಮಯ್ಯ 2028ರವರೆಗೆ ಸಿಎಂ; ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧತೆ – ಜಮೀರ್ ಅಹಮ್ಮದ್ ಖಾನ್
ವಿಜಯನಗರ: ರಾಜ್ಯ ರಾಜಕೀಯದ ಚರ್ಚೆಯ ನಡುವೆ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಹಂಪಿಯಲ್ಲಿ ಸ್ಪಷ್ಟ ಮತ್ತು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಅವರು 2028ರವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ ಮತ್ತು 2028ರ ವಿಧಾನಸಭೆ ಚುನಾವಣೆಯೂ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಒಂದು ಹೈಕಮಾಂಡ್ ಪಕ್ಷವಾಗಿದ್ದು, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧರಾಗಿರುವುದು ನಮ್ಮ ನಂಬಿಕೆ ಎಂದರು. “ಬೀದಿಯಲ್ಲಿ ಹೋಗುವ ದಾಸಯ್ಯನನ್ನೇ ಸಿಎಂ ಮಾಡಿದರೂ ನಾವು ಒಪ್ಪಿಕೊಳ್ಳುತ್ತೇವೆ” ಎಂದು ಪುನರುಚ್ಚರಿಸಿದ್ದಾರೆ. ಜಮೀರ್ ಅಹಮ್ಮದ್ ಖಾನ್ ಡಿಕೆ ಶಿವಕುಮಾರ್ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲೂ ಪ್ರತಿಕ್ರಿಯಿಸಿದ್ದಾರೆ. “ಜನಾರ್ದನ ರೆಡ್ಡಿ ಯಾವಾಗ, ಯಾವ ಕಡೆ ವಾಲುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ; ಅವರು ಸಮಯ ಮತ್ತು ಸಂದರ್ಭಕ್ಕೆ ತಕ್ಕಂತೆ ವರ್ತಿಸುತ್ತಾರೆ. ಅವರ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ” ಎಂದು ಅವರು ವ್ಯಂಗ್ಯವಾಡಿದರು.
ಅದೇ ಸಂದರ್ಭದಲ್ಲಿ, ಸಚಿವ ಸಂತೋಷ್ ಲಾಡ್ ಕುರಿತು ಮಾತನಾಡಿದ ಅವರು, “ಅವರು ಹೇಗೆ ಬೇಕೋ ಹಾಗೆ ಮಾತನಾಡುತ್ತಿದ್ದಾರೆ, ಪಕ್ಷದ ಬದ್ಧತೆ ಇಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಮೀರ್ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂಬುದು ಸ್ಪಷ್ಟವಾಗಿದೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ರಬಕವಿ ಬನಹಟ್ಟಿ
“ಸಿಎಂ ಅಧಿಕಾರದಲ್ಲಿ ಕಳೆಯುವ ದಿನಗಳಿಗಿಂತ, ಜನರಿಗೆ ನೀಡಿದ ಫಲಿತಾಂಶವೇ ಮುಖ್ಯ: ಬಿವೈ ವಿಜಯೇಂದ್ರ”
ಬಾಗಲಕೋಟೆ: ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬನಹಟ್ಟಿ ನ... ಓದನ್ನು ಮುಂದುವರಿಸಿ
ನಾಳೆ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ಕಡಿತ – ಬೆಸ್ಕಾಂ ಎಚ್ಚರಿಕೆ
ಬೆಂಗಳೂರು: ಬೆಸ್ಕಾಂ ನಾಳೆ ಫೆಬ್ರವರಿ 13ರಂದು ತುರ್ತು ನಿರ್ವಹಣಾ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪದ ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ಶೋಧ
ಬೆಂಗಳೂರು/ಮೈಸೂರು/ದಾವಣಗೆರೆ:- ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್... ಓದನ್ನು ಮುಂದುವರಿಸಿ
ಹುಬ್ಬಳ್ಳಿ
"KIMS ಆಸ್ಪತ್ರೆಯಲ್ಲಿ ಅನಧಿಕೃತ ಹಣ ವಸೂಲಿ: 3 ಸಿಬ್ಬಂದಿಗೆ ಗೇಟ್ ಪಾಸ್"
ಹುಬ್ಬಳ್ಳಿ:- ಉತ್ತರ ಕರ್ನಾಟಕದ ಬಡಜನರಿಗೆ ಆರೈಕೆ ನೀಡುವ ಹೆಸರಾಂತ... ಓದನ್ನು ಮುಂದುವರಿಸಿ
‘ವಿಬಿ-ಜಿ ರಾಮ್ ಜಿ’ ಹೊಸ ಕಾಯ್ದೆ ಗ್ರಾಮೀಣಾಭಿವೃದ್ಧಿಗೆ ಸಹಕಾರಿ: ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ್
ಮಂಡ್ಯ:- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ವಿಬಿ-ಜಿ ರಾಮ್ ಜಿ’... ಓದನ್ನು ಮುಂದುವರಿಸಿ
ವಿದ್ಯುತ್ ಖಾಸಗೀಕರಣ ವಿರೋಧಿಸಿ ಮದ್ದೂರಿನಲ್ಲಿ ಚೆಸ್ಕಾಂ ನೌಕರರ ಪ್ರತಿಭಟನೆ
ಮಂಡ್ಯ:- ಇಂಧನ ಇಲಾಖೆಯನ್ನು ಖಾಸಗೀಕರಣ ಹಾಗೂ ಹೊರಗುತ್ತಿಗೆಗೊಳಿಸಲ... ಓದನ್ನು ಮುಂದುವರಿಸಿ
"ಸಾಕು ನಾಯಿಗಳ ನಿಯಂತ್ರಣಕ್ಕೆ ಜಿಬಿಎ ಹೊಸ ನಿಯಮ; ಉಲ್ಲಂಘಿಸಿದರೆ ಮಾಲೀಕರ ಮೇಲೆ ಕಾನೂನು ಕ್ರಮ"
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಮಸ್ಯೆಯನ್ನ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಹತ್ಯೆ ಪ್ರಕರಣ: ಜಾಮೀನು ತಿರಸ್ಕಾರ ಬೆನ್ನಲ್ಲೇ ಭೈರತಿ ಬಸವರಾಜ್ ವಿದೇಶ ಪ್ರಯಾಣದ ಸುಳಿವು?
ಬೆಂಗಳೂರು: ಕಳೆದ ವರ್ಷ ಜುಲೈ 15ರಂದು ಭಾರತಿ ನಗರ ಪೊಲೀಸ್ ಠಾಣೆ ವ... ಓದನ್ನು ಮುಂದುವರಿಸಿ
ಪತ್ನಿ ದೂರವಿದ್ದಾಳೆ ಅಂದ್ರೆ ಸಾಕು? ಮಗುವಿನ ಪಿತೃತ್ವಕ್ಕೆ DNA ಪರೀಕ್ಷೆಗೆ ಹೈಕೋರ್ಟ್ ನಿರಾಕರಣೆ
ಬೆಂಗಳೂರು: ಜೀವನಾಂಶಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ,... ಓದನ್ನು ಮುಂದುವರಿಸಿ
ನಾಡದ್ರೋಹಿ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ: ತಮನ್ನಾ ಭಾಟಿಯಾ ನೇಮಕಕ್ಕೆ ಡಾ. ಕೆ. ಸುಧಾಕರ್ ಆಕ್ಷೇಪ
ಬೆಂಗಳೂರು: ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಪ್ರತಿನಿಧಿ... ಓದನ್ನು ಮುಂದುವರಿಸಿ