"KIMS ಆಸ್ಪತ್ರೆಯಲ್ಲಿ ಅನಧಿಕೃತ ಹಣ ವಸೂಲಿ: 3 ಸಿಬ್ಬಂದಿಗೆ ಗೇಟ್ ಪಾಸ್"
ಹುಬ್ಬಳ್ಳಿ:- ಉತ್ತರ ಕರ್ನಾಟಕದ ಬಡಜನರಿಗೆ ಆರೈಕೆ ನೀಡುವ ಹೆಸರಾಂತ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ರೋಗಿಗಳ ಕುಟುಂಬದಿಂದ ಅನಧಿಕೃತವಾಗಿ ಹಣ ವಸೂಲಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಡಿ-ಗ್ರೂಪ್ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. 52 ವರ್ಷದ ಗದ್ದೆಮ್ಮ ಅವರು ಪಿತ್ತಕೋಶ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಯ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಮೃತದೇಹವನ್ನು ಪ್ಯಾಕ್ ಮಾಡಿ ವಾಹನಕ್ಕೆ ಸಾಗಿಸಲು ₹500 ಹಣ ವಸೂಲಿ ಮಾಡಲು ಸಿಬ್ಬಂದಿ ಪ್ರಯತ್ನಿಸಿದ್ದು, ಕೊನೆಗೆ ₹200 ಅನ್ನು ಫೋನ್‌ಪೇ ಮೂಲಕ ಪಡೆದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಘಟನೆ ಬೆಳಕಿಗೆ ಬಂದ ತಕ್ಷಣ ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದ್ದು, ಕಿಮ್ಸ್ ಆಡಳಿತವು ತನಿಖಾ ತಂಡ ರಚಿಸಿತು. ಪರಿಶೀಲನೆ ಬಳಿಕ ಹಣ ವಸೂಲಿ ಮಾಡಿದ ಮೂವರು ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸಂಬಂಧಿತ ಏಜೆನ್ಸಿಗಳಿಗೆ ಕಠಿಣ ಸೂಚನೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕಿಮ್ಸ್ ನಿರ್ದೇಶಕ ಡಾ. ಈಶ್ವರ್ ಹೊಸಮನಿ, “ರೋಗಿಗಳಿಂದ ಯಾವುದೇ ಕಾರಣಕ್ಕೂ ಹಣ ವಸೂಲಿ ಮಾಡುವುದನ್ನು ಸಹಿಸಲಾಗುವುದಿಲ್ಲ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ. ಘಟನೆಯ ಬಳಿಕ ಸಾರ್ವಜನಿಕರು ಆಸ್ಪತ್ರೆಯಲ್ಲಿ ಮೇಲ್ವಿಚಾರಣೆ ಬಲಪಡಿಸುವಂತೆ ಆಗ್ರಹಿಸಿದ್ದು, ಬಡ ರೋಗಿಗಳ ಹಕ್ಕುಗಳು ರಕ್ಷಣೆ ಪಡೆಯಬೇಕೆಂದು ಒತ್ತಾಯಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ರಬಕವಿ ಬನಹಟ್ಟಿ
“ಸಿಎಂ ಅಧಿಕಾರದಲ್ಲಿ ಕಳೆಯುವ ದಿನಗಳಿಗಿಂತ, ಜನರಿಗೆ ನೀಡಿದ ಫಲಿತಾಂಶವೇ ಮುಖ್ಯ: ಬಿವೈ ವಿಜಯೇಂದ್ರ”
ಬಾಗಲಕೋಟೆ: ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬನಹಟ್ಟಿ ನ... ಓದನ್ನು ಮುಂದುವರಿಸಿ
ನಾಳೆ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕ ವಿದ್ಯುತ್ ಕಡಿತ – ಬೆಸ್ಕಾಂ ಎಚ್ಚರಿಕೆ
ಬೆಂಗಳೂರು: ಬೆಸ್ಕಾಂ ನಾಳೆ ಫೆಬ್ರವರಿ 13ರಂದು ತುರ್ತು ನಿರ್ವಹಣಾ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರ ಆರೋಪದ ಅಧಿಕಾರಿಗಳ ಮನೆ-ಕಚೇರಿಗಳ ಮೇಲೆ ಶೋಧ
ಬೆಂಗಳೂರು/ಮೈಸೂರು/ದಾವಣಗೆರೆ:- ರಾಜ್ಯದಲ್ಲಿ ಭ್ರಷ್ಟಾಚಾರ ವಿರುದ್... ಓದನ್ನು ಮುಂದುವರಿಸಿ
‘ವಿಬಿ-ಜಿ ರಾಮ್ ಜಿ’ ಹೊಸ ಕಾಯ್ದೆ ಗ್ರಾಮೀಣಾಭಿವೃದ್ಧಿಗೆ ಸಹಕಾರಿ: ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ್
ಮಂಡ್ಯ:- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ವಿಬಿ-ಜಿ ರಾಮ್ ಜಿ’... ಓದನ್ನು ಮುಂದುವರಿಸಿ
ವಿದ್ಯುತ್ ಖಾಸಗೀಕರಣ ವಿರೋಧಿಸಿ ಮದ್ದೂರಿನಲ್ಲಿ ಚೆಸ್ಕಾಂ ನೌಕರರ ಪ್ರತಿಭಟನೆ
ಮಂಡ್ಯ:- ಇಂಧನ ಇಲಾಖೆಯನ್ನು ಖಾಸಗೀಕರಣ ಹಾಗೂ ಹೊರಗುತ್ತಿಗೆಗೊಳಿಸಲ... ಓದನ್ನು ಮುಂದುವರಿಸಿ
ಸಿದ್ದರಾಮಯ್ಯ 2028ರವರೆಗೆ ಸಿಎಂ; ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧತೆ – ಜಮೀರ್ ಅಹಮ್ಮದ್ ಖಾನ್
ವಿಜಯನಗರ: ರಾಜ್ಯ ರಾಜಕೀಯದ ಚರ್ಚೆಯ ನಡುವೆ, ವಿಜಯನಗರ ಜಿಲ್ಲಾ ಉಸ್... ಓದನ್ನು ಮುಂದುವರಿಸಿ
"ಸಾಕು ನಾಯಿಗಳ ನಿಯಂತ್ರಣಕ್ಕೆ ಜಿಬಿಎ ಹೊಸ ನಿಯಮ; ಉಲ್ಲಂಘಿಸಿದರೆ ಮಾಲೀಕರ ಮೇಲೆ ಕಾನೂನು ಕ್ರಮ"
ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಸಮಸ್ಯೆಯನ್ನ... ಓದನ್ನು ಮುಂದುವರಿಸಿ
ಬಿಕ್ಲು ಶಿವ ಹತ್ಯೆ ಪ್ರಕರಣ: ಜಾಮೀನು ತಿರಸ್ಕಾರ ಬೆನ್ನಲ್ಲೇ ಭೈರತಿ ಬಸವರಾಜ್ ವಿದೇಶ ಪ್ರಯಾಣದ ಸುಳಿವು?
ಬೆಂಗಳೂರು: ಕಳೆದ ವರ್ಷ ಜುಲೈ 15ರಂದು ಭಾರತಿ ನಗರ ಪೊಲೀಸ್ ಠಾಣೆ ವ... ಓದನ್ನು ಮುಂದುವರಿಸಿ
ಪತ್ನಿ ದೂರವಿದ್ದಾಳೆ ಅಂದ್ರೆ ಸಾಕು? ಮಗುವಿನ ಪಿತೃತ್ವಕ್ಕೆ DNA ಪರೀಕ್ಷೆಗೆ ಹೈಕೋರ್ಟ್ ನಿರಾಕರಣೆ
ಬೆಂಗಳೂರು: ಜೀವನಾಂಶಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ,... ಓದನ್ನು ಮುಂದುವರಿಸಿ
ನಾಡದ್ರೋಹಿ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ: ತಮನ್ನಾ ಭಾಟಿಯಾ ನೇಮಕಕ್ಕೆ ಡಾ. ಕೆ. ಸುಧಾಕರ್ ಆಕ್ಷೇಪ
ಬೆಂಗಳೂರು: ಪ್ರಸಿದ್ಧ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಪ್ರತಿನಿಧಿ... ಓದನ್ನು ಮುಂದುವರಿಸಿ