‘ಸರ್ಸೆ ನಿನ್ನ ಸೆರಗ’ ಹಾಡು ವಿವಾದ: ಹಿಂದಿ ಆವೃತ್ತಿ ಯೂಟ್ಯೂಬ್‌ನಿಂದ ತೆಗೆದುಹಾಕಿ, ಚಿತ್ರತಂಡಕ್ಕೆ ನೋಟಿಸ್
ಬೆಂಗಳೂರು: ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಅಭಿನಯದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ದೇಶಾದ್ಯಂತ ತೀವ್ರ ವಿವಾದಕ್ಕೆ ಗುರಿಯಾಗಿದೆ. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಮಹಿಳೆಯರಿಗೆ ಅವಮಾನಕಾರಿಯಾಗಿವೆ ಎಂಬ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಇದರ ಹಿಂದಿ ಆವೃತ್ತಿ ‘Sarke Chunar Teri’ ಅನ್ನು ಅಧಿಕೃತ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕಲಾಗಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಯೋಜನೆ ಹಾಗೂ ಗಾಯಕಿ ಮಂಗ್ಲಿ ಅವರ ಧ್ವನಿಯಲ್ಲಿ ಮೂಡಿಬಂದ ಈ ಹಾಡಿನ ಸಾಹಿತ್ಯ ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತದೆ ಎಂಬ ಆರೋಪಗಳು ಕೇಳಿಬಂದಿವೆ. ಹಾಡಿನ ನೃತ್ಯ ಸಂಯೋಜನೆಯ ಮೇಲೂ ಟೀಕೆ ವ್ಯಕ್ತವಾಗಿದ್ದು, ವಿಶೇಷವಾಗಿ ನೋರಾ ಫತೇಹಿ ಅವರ ದೃಶ್ಯಗಳು ಅಸಭ್ಯತೆಯನ್ನು ಉತ್ತೇಜಿಸುತ್ತವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಾದ ಕಾನೂನು ಹಂತಕ್ಕೂ ತಲುಪಿದ್ದು, ವಕೀಲ ವಿನೀತ್ ಜಿಂದಾಲ್ ಅವರು ಸೆನ್ಸಾರ್ ಮಂಡಳಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಜೊತೆಗೆ ದೆಹಲಿ ಪೊಲೀಸ್ ಸೈಬರ್ ಸೆಲ್‌ಗೆ ಪ್ರತ್ಯೇಕ ದೂರು ನೀಡಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಹಾಗೂ POCSO ಕಾಯ್ದೆಯಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಹಾಡಿನ ವಿರುದ್ಧ ಗಾಯಕ ಅರ್ಮಾನ್ ಮಲಿಕ್, ನಟಿ-ಸಂಸದೆ ಕಂಗನಾ ರಣಾವತ್ ಹಾಗೂ ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 17ರಂದು ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿದ್ದರೂ, ಕನ್ನಡ ಸೇರಿದಂತೆ ಇತರ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಹಾಡು ಇನ್ನೂ ಲಭ್ಯವಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಕುತೂಹಲ ವ್ಯಕ್ತವಾಗಿದೆ. ಹಿಂದಿ ಗೀತರಚನೆಕಾರ ರಕೀಬ್ ಆಲಂ ಅವರು “ನಾನು ಮೂಲ ಕನ್ನಡ ಸಾಹಿತ್ಯವನ್ನು ಮಾತ್ರ ಅನುವಾದಿಸಿದ್ದೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಕಾರಾಗೃಹದ ಕಠಿಣ ನಿಯಮಾವಳಿ: ದರ್ಶನ್ ಪತ್ನಿ-ಮಗನೊಂದಿಗೆ ಪ್ರತ್ಯೇಕ ಭೇಟಿ ನಿರ್ಬಂಧಿತ
ಬೆಂಗಳೂರು: ನ್ಯಾಯಾಲಯದ ಆದೇಶ ಇದ್ದರೂ, ನಟ ದರ್ಶನ್ಓದನ್ನು ಮುಂದುವರಿಸಿ
ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ವಿವಾದ : ‘ಕೆಡಿ – ದ ಡೆವಿಲ್’ ಹಾಡಿನ ಮುಂದಿನ ಕ್ರಮಗಳಿಗೆ ಕಾದುನೋಡು
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಕೆಡಿ – ದ... ಓದನ್ನು ಮುಂದುವರಿಸಿ
ಧುರಂಧರ್ 2 ಬಿಡುಗಡೆಗೆ ಕ್ಷಣಗಣನೆ: ರಣವೀರ್ ಸಿಂಗ್ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಶುರು
ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಧುರಂಧರ್ 2 ಸಿನಿಮಾದ ಬಿಡ... ಓದನ್ನು ಮುಂದುವರಿಸಿ
ಎಲ್‌ಪಿಜಿ ಕೊರತೆ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಅಕ್ಷಯ್ – ಟ್ವಿಂಕಲ್ ಮನೆಯ ವ್ಯವಸ್ಥೆ ‘ವೈರಲ್’
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾ... ಓದನ್ನು ಮುಂದುವರಿಸಿ
ರಶ್ಮಿಕಾ ಮಂದಣ್ಣ ಮದುವೆಯ ಬಳಿಕ ‘ಮೈಸಾ’ ಚಿತ್ರೀಕರಣ ಆರಂಭ
ಬೆಂಗಳೂರು: ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರ... ಓದನ್ನು ಮುಂದುವರಿಸಿ
ಸಿ.ವಿ. ಷಣ್ಮುಗಂ ನಯನತಾರಾ ಕುರಿತು ವಿವಾದಾತ್ಮಕ ಹೇಳಿಕೆ: ದಕ್ಷಿಣ ಭಾರತದ ಕಲಾವಿದರು ತೀವ್ರ ಆಕ್ರೋಶ
ಬೆಂಗಳೂರು: ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ ಕುರಿತು ನೀಡಿದ... ಓದನ್ನು ಮುಂದುವರಿಸಿ
‘ಕೆಡಿ: ದಿ ಡೆವಿಲ್’ ಹಾಡು ವಿವಾದ: ನೋರಾ ಫತೇಹಿ–ಸಂಜಯ್ ದತ್ ಹಾಡಿಗೆ ದೇಶಾದ್ಯಂತ ಟೀಕೆ, ಕಂಗನಾ ರಣಾವತ್ ಆಗ್ರಹ
ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ, ನಿರ್ದೇಶಕ ಜೋಗಿ ಪ್ರೇಮ್ ಅ... ಓದನ್ನು ಮುಂದುವರಿಸಿ
“‘ಸರ್ಸೆ ಸೆರಗ ಸರ್ಸೆ’ “‘ಕೆಡಿ’ ಹಾಡು ವಿವಾದ : ನಿರ್ದೇಶಕ ಪ್ರೇಮ್‌ಗೆ ಪತ್ನಿ ರಕ್ಷಿತಾ ಬೆಂಬಲ, Trolls ವಿರುದ್ಧ ಸ್ಪಷ್ಟನೆ”
ಬೆಂಗಳೂರು: ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಅಭಿನಯದ ‘ಕ... ಓದನ್ನು ಮುಂದುವರಿಸಿ
ಬಾಲಿವುಡ್ ಹಿರಿಯ ಕಥೆಗಾರ ಸಲೀಮ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಂಬೈ: ಬಾಲಿವುಡ್ ಹಿರಿಯ ಕಥೆಗಾರ ಮತ್ತು ಸಲ್ಮಾನ್ ಖಾನ್ ಅವರ ತಂದ... ಓದನ್ನು ಮುಂದುವರಿಸಿ
ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಕೀಲರ ಅರ್ಜಿಯನ್ನು ತಿರಸ್ಕರಿಸಿ ₹5,000 ದಂಡ, ದರ್ಶನ್ ಕುಟುಂಬ ಭೇಟಿ ಅನುಮತಿ
ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹ... ಓದನ್ನು ಮುಂದುವರಿಸಿ