ಕಾರಾಗೃಹದ ಕಠಿಣ ನಿಯಮಾವಳಿ: ದರ್ಶನ್ ಪತ್ನಿ-ಮಗನೊಂದಿಗೆ ಪ್ರತ್ಯೇಕ ಭೇಟಿ ನಿರ್ಬಂಧಿತ

ಬೆಂಗಳೂರು: ನ್ಯಾಯಾಲಯದ ಆದೇಶ ಇದ್ದರೂ, ನಟ ದರ್ಶನ್ ಅವರಿಗೆ ಪತ್ನಿ ಮತ್ತು ಮಗನೊಂದಿಗೆ ಪ್ರತ್ಯೇಕ ‘ಒಳ ಸಂದರ್ಶನ’  ಅವಕಾಶ ಸಿಗುವ ಸಾಧ್ಯತೆ ಅತಿ ಕಡಿಮೆ ಎಂಬುದು ಕಾರಾಗೃಹ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

 

ಕಾರಾಗೃಹ ಮ್ಯಾನುಯೆಲ್ ನಿಯಮಾವಳಿಗಳ ಪ್ರಕಾರ, ಕುಟುಂಬ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಕೂತು ಮಾತನಾಡಲು ಸಾಮಾನ್ಯ ಸೌಲಭ್ಯವಿಲ್ಲ. ಆದ್ದರಿಂದ, ನ್ಯಾಯಾಲಯದ ಸೂಚನೆ ಇದ್ದರೂ ಪ್ರಾಯೋಗಿಕವಾಗಿ ಈ ಅವಕಾಶ ಕಲ್ಪಿಸುವುದು ಕಷ್ಟಕರವಾಗಿದೆ.

 

ನಿಯಮಾವಳಿಗಳಂತೆ, ವಿಶೇಷ ಸಂದರ್ಶನಕ್ಕೆ ಮಾತ್ರ ಕೆಲವು ಪರಿಸ್ಥಿತಿಗಳಲ್ಲಿ ಅವಕಾಶ ನೀಡಲಾಗುತ್ತದೆ

ಕೈದಿಗೆ ಗಂಭೀರ ಅನಾರೋಗ್ಯ ಅಥವಾ ಗಾಯದಿಂದ ಚಲಿಸಲು ಅಸಾಧ್ಯವಾಗಿರುವ ಸಂದರ್ಭ (ತಿಂಗಳಿಗೆ ಒಮ್ಮೆ)

ಕುಟುಂಬದಲ್ಲಿ ಸಾವು ಅಥವಾ ತುರ್ತು ವೈದ್ಯಕೀಯ ಪರಿಸ್ಥಿತಿ

ಬಿಡುಗಡೆ ದಿನಾಂಕದ ಎರಡು ತಿಂಗಳು ಮುಂಚೆ ಪುನರ್ವಸತಿ, ಉದ್ಯೋಗ ಅಥವಾ ವಾಸ ವ್ಯವಸ್ಥೆಗಾಗಿ

ಭೇಟಿ ಮಾಡುವವರು ವಿಕಲಚೇತನರು ಅಥವಾ ಗರ್ಭಿಣಿಯರಾದರೆ

ಇವುಗಳ ಹೊರತಾಗಿ, ಸಾಮಾನ್ಯ ಸಂದರ್ಭಗಳಲ್ಲಿ ಪ್ರತ್ಯೇಕ ‘ಒಳ ಸಂದರ್ಶನ’ ನಿರ್ಬಂಧಿತವಾಗಿದೆ.

ವಿಶೇಷ ಸಂದರ್ಶನಕ್ಕೆ ಹೆಚ್ಚುವರಿ ನಿಯಮಾವಳಿಗಳು:

ಜೈಲು ಮುಖ್ಯಸ್ಥರ ಲಿಖಿತ ಅನುಮತಿ ಕಡ್ಡಾಯ

ಭದ್ರತಾ ತಪಾಸಣೆಗೆ ಸಂಪೂರ್ಣ ಸಹಕಾರ

ನಿಗದಿತ ಸಂದರ್ಶನ ಕೊಠಡಿಯಲ್ಲಿ ಮಾತ್ರ ಭೇಟಿ

ಗರಿಷ್ಠ 30 ನಿಮಿಷಗಳ ಕಾಲಾವಕಾಶ

ಒಂದೇ ವೇಳೆ 5 ಮಂದಿಗಿಂತ ಹೆಚ್ಚು ಭೇಟಿಗೆ ಅವಕಾಶವಿಲ್ಲ

ಕನಿಷ್ಠ 2 ದಿನಗಳ ಮುಂಚಿತ ಅರ್ಜಿ ಸಲ್ಲಿಕೆ

ತುರ್ತು ಸಂದರ್ಭಗಳಲ್ಲಿ ಕಾರಾಗೃಹ ಡಿಜಿಪಿ ಅನುಮತಿ ಅಗತ್ಯ

 

ಈ ಎಲ್ಲಾ ನಿಯಮಾವಳಿಗಳ ಹಿನ್ನೆಲೆ, ದರ್ಶನ್ ಅವರಿಗೆ ಕುಟುಂಬದ ಸದಸ್ಯರೊಂದಿಗೆ ಪ್ರತ್ಯೇಕ ಭೇಟಿ ಸಿಗುವ ಸಾಧ್ಯತೆ ಅತಿ ಕಡಿಮೆ ಎಂದು ಕಾರಾಗೃಹ ಮೂಲಗಳು ಸ್ಪಷ್ಟಪಡಿಸಿದ್ದಾರೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

7 hours ago

   
Image 1
Image 1
ಬೆಂಗಳೂರು ನಗರ

ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ವಿವಾದ : ‘ಕೆಡಿ – ದ ಡೆವಿಲ್’ ಹಾಡಿನ ಮುಂದಿನ ಕ್ರಮಗಳಿಗೆ ಕಾದುನೋಡು

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ‘ಕೆಡಿ – ದ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಧುರಂಧರ್ 2 ಬಿಡುಗಡೆಗೆ ಕ್ಷಣಗಣನೆ: ರಣವೀರ್ ಸಿಂಗ್ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಶುರು

ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಧುರಂಧರ್ 2 ಸಿನಿಮಾದ ಬಿಡ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ಎಲ್‌ಪಿಜಿ ಕೊರತೆ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಅಕ್ಷಯ್ – ಟ್ವಿಂಕಲ್ ಮನೆಯ ವ್ಯವಸ್ಥೆ ‘ವೈರಲ್’

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾ... ಓದನ್ನು ಮುಂದುವರಿಸಿ


Edited by: ಬಾನು

7 hours ago

   
Image 1

ರಶ್ಮಿಕಾ ಮಂದಣ್ಣ ಮದುವೆಯ ಬಳಿಕ ‘ಮೈಸಾ’ ಚಿತ್ರೀಕರಣ ಆರಂಭ

ಬೆಂಗಳೂರು: ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ ಮದುವೆಯ ನಂತರ... ಓದನ್ನು ಮುಂದುವರಿಸಿ


Edited by: ಬಾನು

10 hours ago

   
Image 1

‘ಸರ್ಸೆ ನಿನ್ನ ಸೆರಗ’ ಹಾಡು ವಿವಾದ: ಹಿಂದಿ ಆವೃತ್ತಿ ಯೂಟ್ಯೂಬ್‌ನಿಂದ ತೆಗೆದುಹಾಕಿ, ಚಿತ್ರತಂಡಕ್ಕೆ ನೋಟಿಸ್

ಬೆಂಗಳೂರು: ನಟಿ ನೋರಾ ಫತೇಹಿ ಹಾಗೂ ನಟ ಸಂಜಯ್ ದತ್ ಅಭಿನಯದ ‘ಸರ್ಸ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1

ಸಿ.ವಿ. ಷಣ್ಮುಗಂ ನಯನತಾರಾ ಕುರಿತು ವಿವಾದಾತ್ಮಕ ಹೇಳಿಕೆ: ದಕ್ಷಿಣ ಭಾರತದ ಕಲಾವಿದರು ತೀವ್ರ ಆಕ್ರೋಶ

ಬೆಂಗಳೂರು: ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ ಕುರಿತು ನೀಡಿದ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1

‘ಕೆಡಿ: ದಿ ಡೆವಿಲ್’ ಹಾಡು ವಿವಾದ: ನೋರಾ ಫತೇಹಿ–ಸಂಜಯ್ ದತ್ ಹಾಡಿಗೆ ದೇಶಾದ್ಯಂತ ಟೀಕೆ, ಕಂಗನಾ ರಣಾವತ್ ಆಗ್ರಹ

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ, ನಿರ್ದೇಶಕ ಜೋಗಿ ಪ್ರೇಮ್ ಅ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1
ಬೆಂಗಳೂರು ನಗರ

“‘ಸರ್ಸೆ ಸೆರಗ ಸರ್ಸೆ’ “‘ಕೆಡಿ’ ಹಾಡು ವಿವಾದ : ನಿರ್ದೇಶಕ ಪ್ರೇಮ್‌ಗೆ ಪತ್ನಿ ರಕ್ಷಿತಾ ಬೆಂಬಲ, Trolls ವಿರುದ್ಧ ಸ್ಪಷ್ಟನೆ”

ಬೆಂಗಳೂರು: ನಿರ್ದೇಶಕ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಅಭಿನಯದ ‘ಕ... ಓದನ್ನು ಮುಂದುವರಿಸಿ


Edited by: ಬಾನು

11 hours ago

   
Image 1

ಬಾಲಿವುಡ್ ಹಿರಿಯ ಕಥೆಗಾರ ಸಲೀಮ್ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮುಂಬೈ: ಬಾಲಿವುಡ್ ಹಿರಿಯ ಕಥೆಗಾರ ಮತ್ತು ಸಲ್ಮಾನ್ ಖಾನ್ ಅವರ ತಂದ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1
ಬೆಂಗಳೂರು ನಗರ

ರೇಣುಕಾ ಸ್ವಾಮಿ ಕೊಲೆ ಪ್ರಕರಣ: ವಕೀಲರ ಅರ್ಜಿಯನ್ನು ತಿರಸ್ಕರಿಸಿ ₹5,000 ದಂಡ, ದರ್ಶನ್ ಕುಟುಂಬ ಭೇಟಿ ಅನುಮತಿ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹ... ಓದನ್ನು ಮುಂದುವರಿಸಿ


Edited by: ಬಾನು

1 day ago

   
Image 1