ಸಂಕಷ್ಟದಲ್ಲಿದ್ದ ಪೂಜಾ ಕುಟುಂಬಕ್ಕೆ ಕುಮಾರಸ್ವಾಮಿ ನೆರವು: ಮಾನವೀಯತೆ ಮೆರೆದ ಕೇಂದ್ರ ಸಚಿವ

ಮೈಸೂರು: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾನವೀಯ ನೆರವು ನೀಡಿ ಆಶಾಕಿರಣವಾಗಿದ್ದಾರೆ. ಮಾರಕ ಕಾಯಿಲೆಯಿಂದ ಎರಡೂ ಕಾಲು ಕಳೆದುಕೊಂಡ 24 ವರ್ಷದ ಪೂಜಾ ಅವರ ದುಸ್ಥಿತಿಯನ್ನು ತಿಳಿದು, ಅವರು ನೇರವಾಗಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದರು. ಹಲವು ವರ್ಷಗಳಿಂದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಪೂಜಾ ಈಗಾಗಲೇ 11ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಎದುರಿಸಿದ್ದು, ಕೊನೆಗೆ ಎರಡೂ ಕಾಲುಗಳನ್ನು ಕಳೆದುಕೊಂಡು ಹಾಸಿಗೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ.

 

ಇದಕ್ಕೂ ಸೇರ್ಪಡೆಯಾಗಿ, ಅವರ ಪತಿ ರವಿ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕುಟುಂಬದ ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಿದೆ. ಜೀವನ ನಡೆಸಲು ದಾರಿಯೇ ಇಲ್ಲದಂತಾಗಿದ್ದ ವೇಳೆ ಪೂಜಾ ನೆರವಿಗಾಗಿ ಮನವಿ ಮಾಡಿದ್ದರು. ಈ ಮನವಿ ಅವರಿಗೆ ತಲುಪಿದ ಹಿನ್ನೆಲೆ, ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ನಂತರ ನೇರವಾಗಿ ಪೂಜಾ ಮನೆಗೆ ತೆರಳಿ ಕುಟುಂಬದ ಸಮಸ್ಯೆಗಳನ್ನು ಆಲಿಸಿದರು. ಪೂಜಾ ತಂದೆ ಕುಮಾರ ಮತ್ತು ತಾಯಿ ಶೀಲಾರಿಗೆ ಧೈರ್ಯ ತುಂಬಿದ ಅವರು, ಸ್ಥಳದಲ್ಲೇ ವೈಯಕ್ತಿಕ ಧನಸಹಾಯ ನೀಡಿದರು. ಜೊತೆಗೆ ಮನೆಯ ಲೀಸ್ ಹಣವನ್ನು ತಾವೇ ಪಾವತಿಸುವುದಾಗಿ ಭರವಸೆ ನೀಡಿದರು.

 

ಇನ್ನು ಪತಿ ರವಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು. ಒಟ್ಟಿನಲ್ಲಿ, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ತೋರಿದ ಈ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಪೂಜಾ ಕುಟುಂಬಕ್ಕೆ ಹೊಸ ಬದುಕಿನ ಭರವಸೆ ಮೂಡಿಸಿದೆ.


ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.


Edited by: ಬಾನು

1 month ago

   
Image 1
Image 1
ಬೆಂಗಳೂರು ನಗರ

ಬೆಂಗಳೂರು ಹೆಸರಘಟ್ಟದಲ್ಲಿ Bird Flu ಪತ್ತೆ – H5N1 ಆತಂಕ, ಪೌಲ್ಟ್ರಿ ಫಾರಂ ಸೀಲ್!

ಬೆಂಗಳೂರು: ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಹೆಚ್ಚಾಗಿದೆ. ಬೆಂಗಳ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಧಾರವಾಡ

ಹುಬ್ಬಳ್ಳಿ

ರೈಲಿನಲ್ಲೇ ಗಾಂಜಾ ಸೇವನೆ: ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನಲ್ಲಿ ಯುವಕರ ದೌರ್ಜನ್ಯ ವಿಡಿಯೋ ವೈರಲ್

ಹುಬ್ಬಳ್ಳಿ,: ಹಜರತ್ ನಿಜಾಮುದ್ದೀನ್–ಯಶವಂತಪುರ ನಡುವೆ ಸಂಚರಿಸುವ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬಾಗಲಕೋಟೆ

ಮತದಾನದ ವೇಳೆ ಹಣ ಹಂಚಿಕೆ ಆರೋಪ: ಬಾಗಲಕೋಟೆಯಲ್ಲಿ ವೈರಲ್ ವಿಡಿಯೋ ಸಂಚಲನ

ಬಾಗಲಕೋಟೆ: ಉಪಚುನಾವಣೆಯ ಸಂದರ್ಭದಲ್ಲಿ ವಾಂಬೆ ಕಾಲೋನಿಯಲ್ಲಿ ಮತದಾ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಶಿವಮೊಗ್ಗ

ಹೊಸನಗರ

ಹುಲಿಕಲ್ ಘಾಟ್‌ನಲ್ಲಿ ಗುಡ್ಡ ಕುಸಿತ – ಮೂವರು ಕಾರ್ಮಿಕರ ದುರ್ಮರಣ

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಚಿಕ್ಕಮಗಳೂರು

ಮಾಣಿಕ್ಯಾಧಾರದಲ್ಲಿ 15 ವರ್ಷದ ಬಾಲಕಿ ನಿಗೂಢ ನಾಪತ್ತೆ

ಚಿಕ್ಕಮಗಳೂರು: ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಪ್ರದೇಶದಲ್ಲಿ 1... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಮಂಡ್ಯ

ಮದ್ದೂರು

6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಸಚಿವ ವಿ. ಸೋಮಣ್ಣ ಭರವಸೆ

ಮಂಡ್ಯ: ಮದ್ದೂರು ನಗರದ ಶಿವಪುರ ರೈಲು ನಿಲ್ದಾಣವನ್ನು ಆಧುನೀಕರಿಸಲ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಹಾಸನ

20 ವರ್ಷದ ಕಾಡಾನೆ ಕಾಟಕ್ಕೆ ಪರಿಹಾರ: ಹಾಸನದಲ್ಲಿ ತಡೆಗೋಡೆ ಸಿದ್ಧ

ಹಾಸನ: ಕಳೆದ ಎರಡು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರನ್ನು ಕ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಚಿಕ್ಕಮಗಳೂರು

ಮೂಡಿಗೆರೆ

ಹೃದಯ ಕಲುಕುವ ಘಟನೆ: ಪತಿಯ ಶವದ ಪಕ್ಕದಲ್ಲೇ 10 ದಿನ ಬದುಕಿದ ಪತ್ನಿ

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

ಆದಿಚುಂಚನಗಿರಿ ಮಠಕ್ಕೆ ಕುಮಾರಸ್ವಾಮಿ ಭೇಟಿ: ಆಶೀರ್ವಾದ ಪಡೆದ ಕೇಂದ್ರ ಸಚಿವ

ಬೆಂಗಳೂರು: ಮಾನ್ಯ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1
ಬೆಂಗಳೂರು ನಗರ

“ಸತ್ಯಕ್ಕೆ ಜಯ ಸಿಗಲಿದೆ” – ತೀರ್ಪು ಮುನ್ನ ವಿನಯ್ ಕುಲಕರ್ಣಿ ಮಾತು

ಬೆಂಗಳೂರು: ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್... ಓದನ್ನು ಮುಂದುವರಿಸಿ


Edited by: ಬಾನು

1 month ago

   
Image 1