ಮಾಣಿಕ್ಯಾಧಾರದಲ್ಲಿ 15 ವರ್ಷದ ಬಾಲಕಿ ನಿಗೂಢ ನಾಪತ್ತೆ
ಚಿಕ್ಕಮಗಳೂರು: ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಪ್ರದೇಶದಲ್ಲಿ 15 ವರ್ಷದ ಬಾಲಕಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಆತಂಕ ಸೃಷ್ಟಿಸಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾಗಿರುವ ಶ್ರೀನಂದ, ಶಾಲಾ ರಜೆಯ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಕರ್ನಾಟಕ ಪ್ರವಾಸಕ್ಕೆ ಬಂದಿದ್ದಳು. ಉತ್ತರ ಕರ್ನಾಟಕ ಪ್ರವಾಸ ಮುಗಿಸಿ ಕಾಫಿನಾಡಿಗೆ ಬಂದಿದ್ದ ವೇಳೆ ಮಾಣಿಕ್ಯಾಧಾರ ಜಲಪಾತದ ಬಳಿ ಈ ಘಟನೆ ನಡೆದಿದೆ. ಘಟನೆಯ ವೇಳೆ ಕುಟುಂಬಸ್ಥರು ಮುಂದೆ ಸಾಗುತ್ತಿದ್ದರೆ, ಹಿಂಬದಿಯಲ್ಲಿ ಬರುತ್ತಿದ್ದ ಶ್ರೀನಂದ ಅಚಾನಕವಾಗಿ ಕಾಣೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ತಕ್ಷಣ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಧ್ಯರಾತ್ರಿ 1 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದರೂ ಫಲಕಾರಿಯಾಗಲಿಲ್ಲ. ಪ್ರದೇಶ ದಟ್ಟ ಕಾಡು, ಇಳಿಜಾರು ಮತ್ತು ಕಗ್ಗತ್ತಲು ಇರುವುದರಿಂದ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಮರುದಿನ ಬೆಳಿಗ್ಗೆ ಮತ್ತೆ ಆರಂಭಿಸಲಾಗಿದೆ. ಈಗ ಎಸ್‌ಡಿಆರ್‌ಎಫ್ ತಂಡವೂ ಕಾರ್ಯಾಚರಣೆಗೆ ಸೇರ್ಪಡೆಯಾಗಿದ್ದು, ಬೆಳಿಗ್ಗೆ 5 ಗಂಟೆಯಿಂದಲೇ ಥರ್ಮಲ್ ಡ್ರೋನ್ ಸಹಾಯದಿಂದ ಶೋಧ ಕಾರ್ಯ ಮುಂದುವರಿದಿದೆ.
ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಐದು ತಂಡಗಳಾಗಿ ವಿಭಜನೆಗೊಂಡು ವಿವಿಧ ಮಾರ್ಗಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ನಾಪತ್ತೆಯಾದ ಪ್ರದೇಶ ಕಡಿದಾದ ಭಾಗವಾಗಿದ್ದು, ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ಪ್ರಕರಣ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದ್ದು, ಬಾಲಕಿ ಪತ್ತೆಗೆ ಅಧಿಕಾರಿಗಳು ನಿರಂತರ ಶ್ರಮ ಮುಂದುವರಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಮದ್ದೂರು
6 ತಿಂಗಳಲ್ಲಿ ಮದ್ದೂರು ರೈಲು ನಿಲ್ದಾಣ ಆಧುನೀಕರಣ: ಸಚಿವ ವಿ. ಸೋಮಣ್ಣ ಭರವಸೆ
ಮಂಡ್ಯ: ಮದ್ದೂರು ನಗರದ ಶಿವಪುರ ರೈಲು ನಿಲ್ದಾಣವನ್ನು ಆಧುನೀಕರಿಸಲ... ಓದನ್ನು ಮುಂದುವರಿಸಿ
20 ವರ್ಷದ ಕಾಡಾನೆ ಕಾಟಕ್ಕೆ ಪರಿಹಾರ: ಹಾಸನದಲ್ಲಿ ತಡೆಗೋಡೆ ಸಿದ್ಧ
ಹಾಸನ: ಕಳೆದ ಎರಡು ದಶಕಗಳಿಂದ ಜಿಲ್ಲೆಯ ಮಲೆನಾಡು ಭಾಗದ ಜನರನ್ನು ಕ... ಓದನ್ನು ಮುಂದುವರಿಸಿ
ಮೂಡಿಗೆರೆ
ಹೃದಯ ಕಲುಕುವ ಘಟನೆ: ಪತಿಯ ಶವದ ಪಕ್ಕದಲ್ಲೇ 10 ದಿನ ಬದುಕಿದ ಪತ್ನಿ
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲ... ಓದನ್ನು ಮುಂದುವರಿಸಿ
ಆದಿಚುಂಚನಗಿರಿ ಮಠಕ್ಕೆ ಕುಮಾರಸ್ವಾಮಿ ಭೇಟಿ: ಆಶೀರ್ವಾದ ಪಡೆದ ಕೇಂದ್ರ ಸಚಿವ
ಬೆಂಗಳೂರು: ಮಾನ್ಯ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ... ಓದನ್ನು ಮುಂದುವರಿಸಿ
“ಸತ್ಯಕ್ಕೆ ಜಯ ಸಿಗಲಿದೆ” – ತೀರ್ಪು ಮುನ್ನ ವಿನಯ್ ಕುಲಕರ್ಣಿ ಮಾತು
ಬೆಂಗಳೂರು: ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್... ಓದನ್ನು ಮುಂದುವರಿಸಿ
ತಿಕೋಟಾ
ತಿಕೋಟಾ ತಾಲ್ಲೂಕಿನಲ್ಲಿ ಭೂಕಂಪನ ಅನುಭವ – ಜನರು ಮನೆಬಿಟ್ಟು ಹೊರಗೆ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲ್ಲೂಕು ಸೇರಿದಂತೆ ಹಲವು ಭಾಗಗಳಲ್ಲ... ಓದನ್ನು ಮುಂದುವರಿಸಿ
ಜನತಾ ದರ್ಶನದಲ್ಲಿ ಗದ್ದಲ: ಮನವಿ ನೀಡಲು ಬಂದ ಮುಖಂಡನನ್ನು ಎಳೆದೊಯ್ದ ಪೊಲೀಸರು
ತುಮಕೂರು: ಜನತಾ ದರ್ಶನ ಕಾರ್ಯಕ್ರಮದ ವೇಳೆ ಗೃಹ ಸಚಿವ ಜಿ. ಪರಮೇಶ್... ಓದನ್ನು ಮುಂದುವರಿಸಿ
ಬಾಗಲಕೋಟೆ ಉಪಚುನಾವಣೆ: ಬೆಳಿಗ್ಗೆಯಿಂದಲೇ ಭರ್ಜರಿ ಮತದಾನ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬ... ಓದನ್ನು ಮುಂದುವರಿಸಿ
ಗುಡಿಬಂಡಾ
ಗುಡಿಬಂಡೆಯಲ್ಲಿ ಅತಿಥಿ ಶಿಕ್ಷಕರ ಬೀಳ್ಕೊಡುಗೆ: ಶಿಕ್ಷಣ ಸೇವೆಗೆ ಕೃತಜ್ಞತೆ
ಗುಡಿಬಂಡೆ: ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ನೀಡಿ, ಅವರನ್ನು ಸುಶಿಕ... ಓದನ್ನು ಮುಂದುವರಿಸಿ
ಗೃಹಲಕ್ಷ್ಮಿ ಬೇಡ, ಮನೆ ಬೇಕು”: ಹಾಡಿನ ಮೂಲಕ ಸಿಎಂಗೆ ಮುಸ್ಲಿಂ ಮಹಿಳೆಯ ಮನವಿ
ಬೆಂಗಳೂರು: “ಗೃಹಲಕ್ಷ್ಮಿ ಬೇಡ, ಮನೆ ಬೇಕು” ಎಂಬ ಭಾವನಾತ್ಮಕ ಮನವಿ... ಓದನ್ನು ಮುಂದುವರಿಸಿ