ಸೈಬರ್ ವಂಚನೆಗೆ ದೊಡ್ಡ ಹೊಡೆತ: 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆಗಳ ಜಾಲ ಪತ್ತೆ 13 ಮಂದಿ ಬಂಧನ, 29 ಜಿಲ್ಲೆಗಳಲ್ಲಿ ಸಿಐಡಿ ಸೈಬರ್ ಕಮಾಂಡ್ ದಾಳಿ
ಬೆಂಗಳೂರು: ಸಿಐಡಿ ಸೈಬರ್ ಕಮಾಂಡ್ ವಿಭಾಗವು ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸೈಬರ್ ವಂಚನೆಗೆ ಬಳಸಲಾಗುತ್ತಿದ್ದ 42 ಸಾವಿರಕ್ಕೂ ಹೆಚ್ಚು ಮ್ಯೂಲ್ ಬ್ಯಾಂಕ್ ಖಾತೆಗಳ ದೊಡ್ಡ ಜಾಲವನ್ನು ಪತ್ತೆಹಚ್ಚಿದೆ. ಡಿಜಿಪಿ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 13 ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಡಿಜಿಪಿ ಪ್ರಣವ್ ಮೊಹಂತಿ, ಫೆಬ್ರವರಿ 5 ಮತ್ತು 6ರಂದು ಕರ್ನಾಟಕದ 29 ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಿದರು. ದಾಳಿಯ ವೇಳೆ 25 ಎಟಿಎಂ ಕಾರ್ಡ್‌ಗಳು, 13 ಚೆಕ್ ಬುಕ್‌ಗಳು ಹಾಗೂ 12 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳು ಸಾರ್ವಜನಿಕರಿಗೆ 10ರಿಂದ 20 ಸಾವಿರ ರೂ. ಹಣ ನೀಡಿ ಅವರ ವೈಯಕ್ತಿಕ ಗುರುತಿನ ದಾಖಲೆಗಳು ಹಾಗೂ ಬ್ಯಾಂಕ್ ವಿವರಗಳನ್ನು ಪಡೆದು ನಕಲಿ ಹಾಗೂ ಮ್ಯೂಲ್ ಖಾತೆಗಳನ್ನು ತೆರೆಯುತ್ತಿದ್ದರು. ಈ ಖಾತೆಗಳನ್ನು ಏಜೆಂಟರ ಮೂಲಕ ಸೈಬರ್ ಅಪರಾಧಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಆನ್‌ಲೈನ್ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ರೀತಿಯ ಅಪರಾಧಗಳಿಗೆ ಬಳಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಕಾರ್ಯಾಚರಣೆ ಕರ್ನಾಟಕದಲ್ಲಿ ಈ ಮಟ್ಟದಲ್ಲಿ ಮೊದಲ ಬಾರಿಗೆ ನಡೆಸಲಾಗಿದೆ ಎಂದು ಡಿಜಿಪಿ ತಿಳಿಸಿದರು. ಸೈಬರ್ ಕಮಾಂಡ್ ಸ್ಥಾಪನೆಯಾಗಿ ಕೇವಲ ಮೂರು ತಿಂಗಳಾಗಿದ್ದು, ಇಷ್ಟು ದೊಡ್ಡ ಜಾಲವನ್ನು ಪತ್ತೆಹಚ್ಚಿರುವುದು ಮಹತ್ವದ ಸಾಧನೆ ಎಂದರು. ಇದೇ ವೇಳೆ ಶಿವಮೊಗ್ಗದಲ್ಲಿ ಬಂಧಿತನಾದ ಒಬ್ಬ ಆರೋಪಿ ಒಬ್ಬನೇ 19 ಬ್ಯಾಂಕ್ ಖಾತೆಗಳನ್ನು ಹೊಂದಿದ್ದನು. ಈ ಖಾತೆಗಳ ಮೂಲಕ ಸುಮಾರು 11 ಕೋಟಿ ರೂ. ವಹಿವಾಟು ನಡೆದಿದ್ದು, ಈ ಸಂಬಂಧ 96 ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಮಾತ್ರವೇ 55 ಕೋಟಿ ರೂ. ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಮ್ಯೂಲ್ ಖಾತೆಗಳ ಮಾರಾಟದ ಹಿಂದಿರುವ ಮಾಸ್ಟರ್ ಮೈಂಡ್‌ಗಳನ್ನು ಪತ್ತೆಹಚ್ಚುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲೂ ತನಿಖೆ ಮುಂದುವರೆಯಲಿದೆ ಎಂದು ಡಿಜಿಪಿ ಪ್ರಣವ್ ಮೊಹಂತಿ ತಿಳಿಸಿದ್ದಾರೆ.
ತಕ್ಷಣ ನಿಮ್ಮ ಜಿಲ್ಲೆಯ ತಾಜಾ ಸುದ್ಧಿಗಳನ್ನು ಓದಲು ಮತ್ತು ವೀಕ್ಷಿಸಲು ಕೆಳಗಿನ👇🏻 ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್‌ಗಳನ್ನು ಬಳಸಿ.
ಶ್ರೀನಿವಾಸಪುರ
ಶ್ರೀನಿವಾಸಪುರದಲ್ಲಿ ಮಾನವೀಯತೆಯನ್ನೇ ಮರೆಸುವ ಪ್ರಕರಣ: ಹೆತ್ತ ಮಗುವನ್ನು ಮಾರಾಟ ಮಾಡಿದ್ದ ದಂಪತಿ-ಮಧ್ಯವರ್ತಿ ಬಂಧನ
ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಹೆತ್ತ ಮಗುವ... ಓದನ್ನು ಮುಂದುವರಿಸಿ
ಬಿಹಾರದ ರಾಜಗೀರ್‌ನಲ್ಲಿ ತುಮಕೂರಿನ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ: ಧರ್ಮಶಾಲೆ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವಗಳು ಪತ್ತೆ
ನಾಲಂದಾ: ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಒಂದೇ ಕುಟುಂಬದ ನ... ಓದನ್ನು ಮುಂದುವರಿಸಿ
ಕೆ ಆರ್ ಪುರುಂ: ಯುವತಿ ವಿಚಾರದಲ್ಲಿ ಚಾಕು ಚಾಕು ಇರಿದ ಕಾರಣ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು: ಕೆ ಆರ್ ಪುರುಂ ಪ್ರದೇಶದಲ್ಲಿ ಯುವತಿ ಸಂಬಂಧದ ವಿಚಾರದಲ... ಓದನ್ನು ಮುಂದುವರಿಸಿ
ಮಾಗಡಿ ರಸ್ತೆ ದಂಪತಿ ಹತ್ಯೆ ಪ್ರಕರಣ ಪಿಸ್ತೂಲ್ ಖರೀದಿಗೆ ನೆರವಾದ ಮತ್ತೊಬ್ಬ ಆರೋಪಿ ಬಂಧನ
ಬೆಂಗಳೂರು: ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೊಬ್... ಓದನ್ನು ಮುಂದುವರಿಸಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಭಯೋತ್ಪಾದಕ ಸಾವು ಅನಾರೋಗ್ಯದಿಂದ ಚಿಕಿತ್ಸೆಯಲ್ಲಿದ್ದ ಸಾಧಿಕ್ ಪಾಷಾ ಮೃತ
ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ... ಓದನ್ನು ಮುಂದುವರಿಸಿ
ಹೊಸಕೋಟೆ
ಹೊಸಕೋಟೆ–ಚಿಂತಾಮಣಿ ಹೆದ್ದಾರಿ ಅಪಘಾತ: ಮಾರುತಿ ಓಮ್‌ನಿ-ಬೈಕ್ ಡಿಕ್ಕಿ, 1 ಮೃತ, ಹಲವರಿಗೆ ಗಾಯ
ಬೆಂಗಳೂರು ಗ್ರಾಮಾಂತರ: ಹೊಸಕೋಟೆ – ಚಿಂತಾಮಣಿ ರಾಷ್ಟ್ರೀಯ ಹೆದ್ದಾ... ಓದನ್ನು ಮುಂದುವರಿಸಿ
ಮಾರಕಾಸ್ತ್ರ ಹಿಡಿದು ಹುಟ್ಟುಹಬ್ಬ ಕೇಕ್ ಕತ್ತರಿಸಿದ ಅರೆಸ್ಟ್
ಚಿತ್ರದುರ್ಗ: ಚಿತ್ರದುರ್ಗದ ಭೋವಿ ಕಾಲೋನಿಯಲ್ಲಿ ಮಾರಕಾಸ್ತ... ಓದನ್ನು ಮುಂದುವರಿಸಿ
ಹುಬ್ಬಳ್ಳಿ
ಸೈಬರ್ ವಂಚನೆ ಪ್ರಕರಣ: ಹುಬ್ಬಳ್ಳಿಯಲ್ಲಿ ಒಂದೇ ಖಾತೆಯಿಂದ ಕೋಟಿ ಕೋಟಿ ಹಣ ವರ್ಗಾವಣೆ
ಹುಬ್ಬಳ್ಳಿ : ಹುಬ್ಬಳ್ಳಿಯ ನಗರದಲ್ಲಿ ನಡೆದ ಭಾರೀ ಸೈಬರ್ ವಂಚನೆಯ... ಓದನ್ನು ಮುಂದುವರಿಸಿ
ರಾಜ್ಯದಲ್ಲಿ ಸೈಬರ್ ದಂಧೆ ಜಾಲ ಭೇದಿಸಿದ ಸಿಐಡಿ: ಮ್ಯೂಲ್ ಅಕೌಂಟ್ ಕೇಸ್‌ನಲ್ಲಿ 13 ವಂಚಕರು ಅರೆಸ್ಟ್
ಬೆಂಗಳೂರು: ಸಿಐಡಿ ಸೈಬರ್ ಕ್ರೈಂ ವಿಭಾಗವು ರಾಜ್ಯಾದ್ಯಂತ ಮೆಗಾ ಕಾ... ಓದನ್ನು ಮುಂದುವರಿಸಿ
ಬೆಂಗಳೂರು ಏರ್ ಪೋರ್ಟ್ʼನಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನ, ವಜ್ರ ಕಳ್ಳತನ!
ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗ... ಓದನ್ನು ಮುಂದುವರಿಸಿ